ಜೋಧ್ ಪುರದ ತಾಜ್ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆ ನಡೆಯಲಿದೆ. ವಿವಾಹ ಮಹೋತ್ಸವಕ್ಕಾಗಿ ಅರಮನೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಪ್ರಿಯಾಂಕಾ-ನಿಕ್ ಮದುವೆ: ವಿಶೇಷ ಕಾರ್ಯಕ್ರಮಗಳ ದಿನ ಮತ್ತು ಸ್ಥಳ ನಿಗದಿ
ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಗೆ ಸಾಕ್ಷಿ ಆಗಲಿರುವ ಅತಿಥಿಗಳಿಗೆ ಉಡುಗೊರೆ ನೀಡುವ ಮೂಲಕ ಅರಮನೆ ಒಳಗೆ ಸ್ವಾಗತ ಕೋರಲಾಗಿದೆ.
'ಬ್ರೈಡಲ್ ಶವರ್'ನಲ್ಲಿ ಕುಣಿದು ಕುಪ್ಪಳಿಸಿದ ಮದುಮಗಳು ಪ್ರಿಯಾಂಕಾ ಛೋಪ್ರಾ
ಜೋಧ್ ಪುರದ ಅರಮನೆಗೆ ನಿನ್ನೆಯಷ್ಟೇ ವಧು ಪ್ರಿಯಾಂಕಾ ಛೋಪ್ರಾ ಮತ್ತು ವರ ನಿಕ್ ಜೋನಸ್ ಆಗಮಿಸಿದರು. ಬಳಿ ಬಣ್ಣದ ಅನಾರ್ಕಲಿ ಸ್ಟೈಲ್ ಸೂಟ್ ನಲ್ಲಿ ಪ್ರಿಯಾಂಕಾ ಕಂಗೊಳಿಸಿದರೆ, ಸಿಂಪಲ್ ಲುಕ್ ನಲ್ಲಿ ನಿಕ್ ಜೋನಸ್ ಮಿಂಚಿದರು.
ಬ್ರೈಡಲ್ ಶವರ್: ಪ್ರಿಯಾಂಕಾ ಛೋಪ್ರಾ ತೊಟ್ಟಿದ್ದ ಆಭರಣಗಳ ಬೆಲೆ ಎಷ್ಟು ಗೊತ್ತಾ.?
ವರದಿಗಳ ಪ್ರಕಾರ, ನಿನ್ನೆ ಸಂಜೆ ಮೆಹಂದಿ ಸಮಾರಂಭ ನೆರವೇರಿದೆ. ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಮೆಹಂದಿ ಫಂಕ್ಷನ್ ನಲ್ಲಿ ಪಾಲ್ಗೊಂಡಿದ್ದು, ಅತಿಥಿಗಳಿಗೆ ರಾಜಸ್ಥಾನಿ ಔತಣಕೂಟ ಏರ್ಪಡಿಸಲಾಗಿತ್ತು. ಡಿಸೆಂಬರ್ 1 ರಂದು ಹಿಂದು ಸಂಪ್ರದಾಯದಂತೆ ಮದುವೆ ನಡೆದರೆ, ಡಿಸೆಂಬರ್ 2 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಪ್ರಿಯಾಂಕಾ-ನಿಕ್ ವಿವಾಹ ನಡೆಯಲಿದೆ.
ನವೆಂಬರ್ 14-15 ರಂದು ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಮತ್ತು ಅಮೇರಿಕಾದ ನಟ-ಗಾಯಕ ನಿಕ್ ಜೋನಸ್ ಸಜ್ಜಾಗಿದ್ದಾರೆ.
ಡಿಸೆಂಬರ್ 2-3 ರಂದು ಜೋಧ್ ಪುರದ ಐತಿಹಾಸಿಕ ಅರಮನೆಯಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ವಿವಾಹ ಮಹೋತ್ಸವ ನಡೆಯಲಿದೆ. ಸದ್ಯ ವಿವಾಹ ಪೂರ್ವ ಶಾಸ್ತ್ರಗಳಿಗೆ ಚಾಲನೆ ನೀಡಲಾಗಿದ್ದು, ಜೋಧ್ ಪುರದ ಅರಮನೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಈಗಾಗಲೇ ಜೋಧ್ ಪುರದ ಅರಮನೆಗೆ ವಧು-ವರರ ಕುಟುಂಬ ಆಗಮಿಸಿದೆ. ವರದಿಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ ಮೆಹಂದಿ ಸಮಾರಂಭ ಕೂಡ ಮುಕ್ತಾಯಗೊಂಡಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...