Back
Home » ಆರೋಗ್ಯ
ಸಪಾಟಾದ ಹೊಟ್ಟೆ ಪಡೆಯಲು ಕೇವಲ 14 ದಿನ ಎಳೆನೀರು ಸೇವಿಸಿ ಸಾಕು!
Boldsky | 1st Dec, 2018 11:24 AM
 • ತೂಕ ಇಳಿಗೆ ಹಾಗೂ ಹೊಟ್ಟೆಯ ಬೊಜ್ಜು ಕರಗಿಸಲು ಇನ್ನಷ್ಟು ಶೀಘ್ರ ಮತ್ತು ಸುಲಭವಾಗುತ್ತದೆ

  ತೂಕ ಇಳಿಸುವುದು ಕಷ್ಟಕರ ಕೆಲಸವಾಗಿದೆ, ಆದರೆ ಎಳನೀರು ಈ ಕೆಲಸವನ್ನು ಸುಲಭವಾಗಿ ನಿರ್ವಹಿಸುತ್ತದೆ. ಅಲ್ಲದೇ ನಿಮ್ಮ ಶರೀರದ ಎತ್ತರಕ್ಕೆ ತಕ್ಕ ತೂಕವನ್ನು ಕಾಯ್ದುಕೊಳ್ಳಲೂ ಎಳನೀರು ಅದ್ಭುತವಾದ ನೆರವು ನೀಡುತ್ತದೆ. ಇದಕ್ಕಾಗಿ ನಿಮ್ಮ ನಿತ್ಯದ ಲಘುಪಾನೀಯಗಳು, ಬುರುಗು ಬರುವ ಪೇಯಗಳು ಹಾಗೂ ಇತರ ಸಕ್ಕರೆ ಭರಿತ ದ್ರವಾಹಾರಗಳ ಬದಲಿಗೆ ಎಳನೀರು ಸೇವಿಸಿದರೆ ಸಾಕು.


 • ಎಳನೀರು

  ಎಳನೀರು ನೈಸರ್ಗಿಕವಾದ ಅದ್ಭುತ ದ್ರವವಾಗಿದ್ದು ಕಡಿಮೆ ಕ್ಯಾಲೋರಿಗಳಿವೆ ಹಾಗೂ ಸೇವನೆಯ ಬಳಿಕ ಹೆಚ್ಚು ಹೊತ್ತು ಹಸಿವಾಗದಂತೆ ತಡೆಯುತ್ತದೆ. ಪ್ರತಿ ಹೊತ್ತಿನ ಅಹಾರ ಸೇವನೆಗೂ ಅರ್ಧ ಘಂಟೆ ಮುನ್ನ ಒಂದು ಲೋಟ ಎಳನೀರನ್ನು ಸೇವಿಸುವ ಮೂಲಕ ಊಟದಲ್ಲಿ ಹೆಚ್ಚಿನ ಪ್ರಮಾಣ ಸೇವಿಸದಿರಲು ಸಾಧ್ಯವಾಗುತ್ತದೆ,


 • ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ

  ದೇಹದಲ್ಲಿ ನೀರಿನ ಕೊರತೆಯುಂಟಾಗಿ ನಿರ್ಜಲೀಕರಣದ ಅಪಾಯವಿದ್ದರೆ ಈ ಕೊರತೆಯನ್ನು ಎಳನೀರಿನಷ್ಟು ಸಮರ್ಥವಾಗಿ ತುಂಬಬಲ್ಲ ದ್ರವಾಹಾರ ಈ ಜಗತ್ತಿನಲ್ಲಿಲ್ಲ. ನೀರಿನ ಕೊರತೆಯಿಂದ ಎದುರಾಗಿದ್ದ ನಿಃಶಕ್ತಿಯನ್ನು ತಕ್ಷಣವೇ ಮರುದುಂಬಿಸಿ ಚೈತನ್ಯ ನೀಡುತ್ತದೆ ಹಾಗೂ ದೇಹದಲ್ಲಿ ಅಗತ್ಯ ಪ್ರಮಾಣದ ದ್ರವದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಪ್ರತಿಬಾರಿಯ ವ್ಯಾಯಾಮಕ್ಕೂ ಮೊದಲು, ನಡುವೆ ಮತ್ತು ಬಳಿಕ ಸೇವಿಸಲು ಎಳನೀರು ಅತ್ಯುತ್ತಮ ದ್ರವಾಹಾರವೆನ್ನಲು ಈ ಒಂದೇ ಕಾರಣ ಸಾಕಾಗುತ್ತದೆ.

  Most Read: ಖಾಲಿ ಹೊಟ್ಟೆಯಲ್ಲಿ ಎಳೆನೀರು ಕುಡಿದರೆ ಒಂದಲ್ಲಾ, ಎರಡಲ್ಲಾ 10 ಲಾಭಗಳಿವೆ!


 • ಜೀರ್ಣಕ್ರಿಯೆಗಳ ತೊಂದರೆ ಎದುರಾಗದಂತೆ ಪಡೆಯುತ್ತದೆ

  ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಾದ ಅತಿಸಾರ, ಹೊಟ್ಟೆಯಲ್ಲಿ ಉರಿ, ಅಜೀರ್ಣತೆ ಮೊದಲಾದವುಗಳನ್ನು ತಡೆಗಟ್ಟಲು ಎಳನೀರು ಅಧ್ಬುತ ಔಷಧಿಯಾಗಿದೆ.


 • ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿ ಕಾಯ್ದಿರಿಸುತ್ತದೆ

  ರಕ್ತದೊತ್ತಡದ ಸಂಕೋಚನ ಮಾಪನ (systolic blood pressure) ಅಥವಾ ದೊಡ್ಡ ಅಂಕೆ (120/80 ಯಲ್ಲಿ 120) ಹೆಚ್ಚು ಏರುತ್ತದೆ ಹಾಗೂ ಇದನ್ನು ಇಳಿಸುವುದು ಬಲುಕಷ್ಟ. ಆದರೆ ಎಳನೀರಿನ ಸೇವನೆಯಿಂದ ಈ ಒತ್ತಡವನ್ನು 71%ರಷ್ಟು ಮತ್ತು ವ್ಯಾಕೋಚನ (diastolic) ಒತ್ತಡವನ್ನು 29% ರಷ್ಟು ತಗ್ಗಿಸಬಹುದು.


 • ತ್ವಚೆಯ ಕಾಂತಿ ಮತ್ತು ಬೆಡಗು ಹೆಚ್ಚುತ್ತದೆ

  ಎಳನೀರು ಆಂಟಿ ಆಕ್ಸಿಡೆಂಟುಗಳ ಆಗರವಾಗಿದೆ ಹಾಗೂ ದೇಹದಿಂದ ವಿಷಕಾರಿ ಕಲ್ಮಶಗಳನ್ನು ನಿವಾರಿಸಿ ಸ್ವಚ್ಛಗೊಳಿಸಲು ನೆರವಾಗುತ್ತದೆ ಹಾಗೂ ಅಗತ್ಯ ಪೋಷಕಾಂಶಗಳನ್ನೂ ಒದಗಿಸುತ್ತದೆ. ಎಳನೀರನ್ನು ಕುಡಿಯುವುದರ ಜೊತೆಗೇ ನಿತ್ಯವೂ ಕೊಂಚ ಪ್ರಮಾಣವನ್ನು ಮುಖ, ಕುತ್ತಿಗೆ, ಹಸ್ತಗಳಿಗೂ ಹಚ್ಚಿಕೊಂಡರೆ ಇದರಿಂದ ತ್ವಚೆಯಲ್ಲಿರುವ ಕಲ್ಮಶಗಳನ್ನು ಬುಡಸಹಿತ ನಿವಾರಿಸಲು ನೆರವಾಗುತ್ತದೆ. ಈ ಮೂಲಕ ತ್ವಚೆಯ ಆರೋಗ್ಯ ಇನ್ನಷ್ಟು ವೃದ್ದಿಸುತ್ತದೆ ಮತ್ತು ಸೆಳೆತವೂ ಹೆಚ್ಚುವ ಮೂಲಕ ಕಾಂತಿಯೂ ಹೆಚ್ಚುತ್ತದೆ.


 • ಮಾನಸಿಕ ಒತ್ತಡ ನಿವಾರಿಸಿ ಮನೋಭಾವವನ್ನು ಉತ್ತಮಗೊಳಿಸುತ್ತದೆ

  ನಿಮತೆ ಸತತವಾದ ಮಾನಸಿಕ ಒತ್ತಡ ಕಾಡುತ್ತಿದೆಯೇ? ಎಳನೀರಿನಲ್ಲಿ ಈ ಒತ್ತಡವನ್ನು ಕಡಿಮೆಗೊಳಿಸುವ ಗುಣವಿರುವ ಹಲವಾರು ವಿಟಮಿನ್ನುಗಳಿವೆ. ಇದರಲ್ಲಿ ಪ್ರಮುಖವದುದು ವಿಟಮಿನ್ ಬಿ ಗುಂಪು. ಇವುಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನೋಭಾವದ ಏರಿಳಿತಗಳಿಂದ ರಕ್ಷಿಸುವ ಮೂಲಕ ನಿರಾಳತೆಯನ್ನು ಒದಗಿಸುತ್ತವೆ. ಇದರೊಂದಿಗೇ, ಎಳನೀರಿನಲ್ಲಿರುವ ಮೆಗ್ನೇಶಿಯಂ ದೇಹದಲ್ಲಿ ಸೆರೋಟೋನಿನ್ ಎಂಬ ರಸದೂತದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಮೆಗ್ನಿಶಿಯಂ ಕೊರತೆಯುಂಟಾದರೆ ಖಿನ್ನತೆ ಎದುರಾಗುತ್ತದೆ. ಹಾಗಾಗಿ ಎಳನೀರಿನ ಸೇವನೆ ಖಿನ್ನತೆಯಿಂದ ದೂರವಾಗಲೂ ಸಹಾಯಕರ

  Most Read: ಎಳನೀರು + ಜೇನುತುಪ್ಪ = 8 ಆರೋಗ್ಯ ಲಾಭಗಳು


 • ಪಾನಪ್ರಭಾವದ ಓಲಾಟ ಸರಿಪಡಿಸುತ್ತದೆ

  ಔತಣಕೂಟದಲ್ಲಿ ಸೇವಿಸಿದ ಮದ್ಯದ ಪರಿಣಾಮವಾಗಿ ಮರುದಿನ ಬೆಳಿಗ್ಗೆದ್ದಾಗ ಎದುರಾಗುವ ಮೈಭಾರ ಹಾಗೂ ಓಲಾಟವನ್ನು ಸರಿಪಡಿಸಲು ಎಳನೀರು ಅತ್ಯುತ್ತಮವಾಗಿದೆ. ಇದಲ್ಲಿರುವ ಪ್ರಮುಖ ಪೋಷಕಾಂಶಗಳು ಮತ್ತಿನ ಸಮಯದಲ್ಲಿ ದೇಹ ಕಳೆದುಕೊಂಡಿದ್ದ ವಿಟಮಿನ್ನುಗಳು ಹಾಗೂ ದ್ರವಗಳನ್ನು ಮರುದುಂಬಿಸಲು ನೆರವಾಗುತ್ತದೆ.


 • ದೇಹಕ್ಕೆ ಹೆಚ್ಚಿನ ಆರ್ದ್ರತೆ ಒದಗಿಸುತ್ತದೆ

  ಎಳನೀರಿನಲ್ಲಿ 95% ಅಪ್ಪಟ ನೀರು ಇದೆ ಹಾಗೂ 5% ಉಳಿದ ಪೋಷಕಾಂಶಗಳಿವೆ. ಈ ಅನುಪಾತ ದೇಹದಲ್ಲಿ ಆರ್ದ್ರತೆಯನ್ನು ಸಮತೋಲನದಲ್ಲಿರಿಸಲು ಅತಿ ಸೂಕ್ತವಾಗಿದ್ದು ಆರ್ದ್ರತೆಯನ್ನು ಒದಗಿಸಲು ನೀರಿಗಿಂತಲೂ ಎಳನೀರೇ ಉತ್ತಮವಾಗಿದೆ.


 • ವೃದ್ಧಾಪ್ಯದ ಚಿಹ್ನೆಗಳ ವಿರುದ್ದ ಹೋರಾಡುತ್ತದೆ

  ಎಳನೀರು ಸೈಟೋಕೈನಿನ್ಸ್ ಎಂಬ್ ಪೋಷಕಾಂಶಗಳ ನೈಸರ್ಗಿಕ ಆಗರವಾಗಿದೆ. ಇವು ಸಸ್ಯಜನ್ಯ ರಸದೂತಗಳಾಗಿದ್ದು ಆರೋಗ್ಯಕ್ಕೆ ಬಹಳವೇ ಪೂರಕವಾಗಿವೆ. ವಿಶೇಷವಾಗಿ ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ವಿಭಜಿಸುವುದು ಹಾಗೂ ವಯಸ್ಸಾದಂತೆ ತೋರುವ ಲಕ್ಷಣಗಳನ್ನು ನಿಧಾನಿಸಿ ವೃದ್ದಾಪ್ಯವನ್ನು ಮುಂದೂಡುತ್ತವೆ.
  ಜೊತೆಗೇ ಕ್ಯಾನ್ಸರ್ ಹಾಗೂ ರಕ್ತ ಹೆಪ್ಪುಗಟ್ಟುವ ಕಾಯಿಲೆಯಾದ (thrombosis) ಮೊದಲದ ಗಂಭೀರ ಕಾಯಿಲೆಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.


 • ಎಳನೀರನ್ನು ತಾಜಾರೂಪದಲ್ಲಿ ಸೇವಿಸುವುದು ಅತ್ಯುತ್ತಮ

  ಹೌದು, ಎಳನೀರನ್ನು ತಾಜಾರೂಪದಲ್ಲಿ ಸೇವಿಸುವುದು ಅತ್ಯುತ್ತಮ. ಆದರೆ ಎಲ್ಲಾ ಸಮಯದಲ್ಲಿ ಎಳನೀರು ಲಭ್ಯವಿರದ ಕಾರಣ ಈ ನೀರಿಗೆ ಅತಿ ಸಮೀಪವಾದ ದ್ರವಾಹಾರವನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ:
  ಅಗತ್ಯವಿರುವ ಸಮಾಗ್ರಿಗಳು:
  * ನಾಲ್ಕು ಕಪ್ (ಒಂದು ಲೀ) ನೀರು
  * ಎರಡು ಕಪ್ (ಸುಮಾರು ಇನ್ನೂರು ಗ್ರಾಮ್) ಈಗ ತಾನೇ ತುರಿದ ಕಾಯಿತುರಿ (ಸಕ್ಕರೆ ಬೆರೆಸಬಾರದು)
  * ಎರಡು ದೊಡ್ಡ ಚಮಚ ಕಂದು ಸಕ್ಕರೆ ಅಥವಾ ಕಪ್ಪು ಬೆಲ್ಲದ ಪುಡಿ

  Most Read: ಎಳನೀರು, ಗರ್ಭಿಣಿಯರ ಪಾಲಿಗಂತೂ ಪನ್ನೀರು


 • ತಯಾರಿಕಾ ವಿಧಾನ

  * ಕಾಯಿತುರಿಯನ್ನು ನೀರಿನಲ್ಲಿ ಹಾಕಿ ಅರ್ಧ ಘಂಟೆ ನೆನೆಯಲು ಬಿಡಿ
  * ಬಳಿಕ ಈ ನೀರನ್ನು ಒಂದು ಬಾಟಲಿಯಲ್ಲಿ ಹಾಕಿ ಕಂದು ಸಕ್ಕರೆಯನ್ನು ಬೆರೆಸಿ
  * ಬಾಟಲಿಯನ್ನು ಚೆನ್ನಾಗಿ ಕಲಕಿ ಸಕ್ಕರೆ ಕರಗುವಂತೆ ಮಾಡಿ.
  * ಬಳಿಕ ಈ ನೀರನ್ನು ಸೋಸಿ ಇನ್ನೊಂದು ಬಾಟಲಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿ ಶೇಖರಿಸಿಡಿ. ಅಗತ್ಯ ಪ್ರಮಾಣದಲ್ಲಿ ಬಳಿಕ ಸೇವಿಸಿ.
ನಮ್ಮ ಜೀರ್ಣಕ್ರಿಯೆಯ ಕಾಳಜಿಯನ್ನು ಅತ್ಯುತ್ತಮವಾಗಿ ವಹಿಸುವ ಜೊತೆಗೇ ಸೊಂಟದ ಕೊಬ್ಬನ್ನು ಕರಗಿಸಿ ಹೊಟ್ಟೆಯ ಗಾತ್ರವನ್ನು ಇಳಿಸಲು ಎಳನೀರು ಅತ್ಯದ್ಭುತವಾದ ದ್ರವಾಹಾರವಾಗಿದೆ. ಎಳನೀರು ಅತ್ಯುತ್ತಮ ಮೂತ್ರವರ್ಧಕವಾರಿಗುವ ಜೊತೆಗೇ ಸ್ವಾದಿಷ್ಟವೂ ಆಗಿದ್ದು ಹೆಚ್ಚುವರಿ ಕೊಬ್ಬನ್ನು ಕರಗಿಸಲು ನೆರವಾಗುವ ಮೂಲಕ ಸೊಂಟದ ಸುತ್ತಳತೆಯನ್ನು ಹೆಚ್ಚಿಸಿದ್ದ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ.

ಎಳನೀರನ್ನು ಸತತವಾಗಿ ಕುಡಿಯುವ ಮೂಲಕ ಹಲವಾರು ಪ್ರಯೋಜನಗಳಿವೆ ಹಾಗೂ ತೂಕ ಇಳಿಕೆ ಇದರಲ್ಲೊಂದಾಗಿದೆ. ಬನ್ನಿ, ಎಳನೀರಿನ ಗುಣಗಳು ಹೇಗೆ ತೂಕ ಇಳಿಕೆಗೆ ನೆರವಾಗುತ್ತವೆ ಎಂದು ನೋಡೋಣ:

   
 
ಹೆಲ್ತ್