Back
Home » ಬಾಲಿವುಡ್
ಹಿಂದೂ ಸಂಪ್ರದಾಯದಂತೆ ನಡೆದ ಪ್ರಿಯಾಂಕ ಚೋಪ್ರಾ - ನಿಕ್ ವಿವಾಹ
Oneindia | 2nd Dec, 2018 05:40 PM
 • ಹಿಂದೂ ಸಂಪ್ರದಾಯದಂತೆ ವಿವಾಹ

  ನಟಿ ಪ್ರಿಯಾಂಕ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ಕಲ್ಯಾಣೋತ್ಸವ ಮಾಡಲು ತೀರ್ಮಾನ ಮಾಡಲಾಗಿತ್ತು. ಅದೇ ರೀತಿ ನಿನ್ನೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಜರುಗಿದ್ದು, ಇಂದು ಹಿಂದೂ ಶಾಸ್ತ್ರದ ರೀತಿ ಮದುವೆ ನಡೆಯಿತು.


 • ಮೆಹಂದಿ ಫೋಟೋಗಳು

  ಸದ್ಯ, ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಪ್ರಿಯಾಂಕ ಚೋಪ್ರಾ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ಪ್ರಿಯಾಂಕಾ ಚೋಪ್ರಾ ರಾಲ್ಪ್ ಲಾರೆನ್ ಗೌನ್ ಧರಿಸಿದ್ದರು. ಮದುವೆಗೆ ಸಾಕ್ಷಿ ಆಗಿದ್ದ ಅತಿಥಿಗಳಿಗೆ ಉಡುಗೊರೆ ನೀಡುವ ಮೂಲಕ ಅರಮನೆ ಒಳಗೆ ಸ್ವಾಗತ ಕೋರಲಾಗಿದೆ.


 • ಪರಿಣೀತಿ ಚೋಪ್ರಾ ಫುಲ್ ಹ್ಯಾಪಿ

  ಪ್ರಿಯಾಂಕ ವಿವಾಹ ಸಮಾರಂಭದಲ್ಲಿ ನಟಿ ಹಾಗೂ ಪ್ರಿಯಾಂಕ ಸಹೋದರಿ ಪರಿಣೀತಿ ಚೋಪ್ರಾ ಸಿಕ್ಕಾಪಟ್ಟೆ ಖುಷಿಯಾಗಿ ಇದ್ದರು. ಉಳಿದಂತೆ, ಮಧು ಚೋಪ್ರಾ, ಅಂಬಾನಿ ಕುಟುಂಬಸ್ಥರು, ಸೋಫಿ ಟರ್ನರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಅವರಿಗೆ ಶುಭಾಶಯ ಕೋರುತ್ತಿದ್ದಾರೆ.


 • ಇನ್ನೊಂದು ಕಡೆ ಅಸಮಾಧಾನ

  ಮತ್ತೊಂದು ಕಡೆ ಮದುವೆ ವೇಳೆ ಪಟಾಕಿ ಸಿಡಿಸಿದ್ದಕ್ಕೆ ಪ್ರಿಯಾಂಕ ಮೇಲೆ ಕೆಲವರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ವಿರುದ್ಧ ಪ್ರಿಯಾಂಕ ಜಾಗೃತಿ ಮೂಡಿಸಿದ್ದು, ಹೀಗೆ ಮಾಡುವುದು ಸರೀಯೇ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೇರಿಕಾದ ಗಾಯಕ ನಿಕ್ ಜೋನಸ್ ವಿವಾಹ ಇಂದು ನಡೆದಿದೆ. ನಿನ್ನೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ಜರುಗಿದ್ದು, ಇಂದು ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ನೆರವೇರಿದೆ.

ಜೋಧ್ ಪುರದ ಭವ್ಯ ಅರಮನೆಯಲ್ಲಿ ಈ ತಾರ ಜೋಡಿಯ ವಿವಾಹ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಮದುವೆ ಸಂಭ್ರಮ ಪ್ರಾರಂಭವಾಗಿದೆ. ಜೊತೆಗೆ ತಮ್ಮ ಮದುವೆಯ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡೂ ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ.

ಪ್ರಿಯಾಂಕಾ-ನಿಕ್ ಮದುವೆ: ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಜೋಧ್ ಪುರ ಅರಮನೆ

ಈ ಹೊಸ ದಂಪತಿಗಳಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರು ಶುಭ ಹಾರೈಸಿದ್ದಾರೆ. ಮುಂದೆ ಓದಿ....

   
 
ಹೆಲ್ತ್