Back
Home » ಆರೋಗ್ಯ
ದಂಪತಿಗಳಲ್ಲಿ ಮಕ್ಕಳಾಗದಿರುವುದಕ್ಕೆ ಡಯಾಬಿಟಿಸ್ ರೋಗ ಕೂಡ ಕಾರಣವಾಗಬಹುದು!
Boldsky | 5th Dec, 2018 10:27 AM
 • American Diabetes Association ಪ್ರಕಾರ

  ಅಮೇರಿಕಾದ ಮಧುಮೇಹ ಸಂಸ್ಥೆ (American Diabetes Association)ಯ ಪ್ರಕಾರ, ಪ್ರತಿವರ್ಷ ಎರಡು ಲಕ್ಷಕ್ಕೂ ಹೊಸ ಟೈಪ್ 2 ಮಧುಮೇಹಿಗಳ ಸಂಖ್ಯೆ ಈಗಿರುವ ಸಂಖ್ಯೆಗೆ ಸೇರ್ಪಡೆಯಾಗುತ್ತಿದೆ ಹಾಗೂ 2.4% ಗರ್ಭ ಧರಿಸುವ ಅರ್ಹತೆಯುಳ್ಳ, ಆದರೆ ಮಧುಮೇಹವಿರುವ ಬಗ್ಗೆ ಅರಿವಿಲ್ಲದಿರುವ ಮಹಿಳೆಯರ ಸಂಖ್ಯೆ ಒಟ್ಟಾರೆ ಸಂಖ್ಯೆಗೆ ಸೇರ್ಪಡೆಯಾಗುತ್ತಿದೆ.


 • ಮಧುಮೇಹಕ್ಕೂ ಸಂತಾನಫಲಕ್ಕೂ ಏನು ಸಂಬಂಧ?

  ನಿಜವಾಗಿ ಹೇಳಬೇಕೆಂದರೆ ನೇರವಾದ ಯಾವ ಸಂಬಂಧವೂ ಇಲ್ಲ! ಒಂದು ವೇಳೆ ಚಯಾಪಚಯ ಕ್ರಿಯೆಯ ತೊಂದರೆ (metabolic syndrome) ಹಾಗೂ ಪಿಕೋಸ್ (polycystic ovarian syndrome (PCOS)) ಎಂಬ ಗುರುತರದ ಕಾರಣಗಳಿದ್ದರೆ ಈ ಸಂಬಂಧವನ್ನು ಖಚಿತಪಡಿಸಬಹುದು. ಅದರಲ್ಲೂ ಹಲವು ಸಂದರ್ಭಗಳಲ್ಲಿ, ವಿಶೇಷವಾಗಿ ಮಹಿಳೆ ಇನ್ನೂ ಕಿರಿಯ ವಯಸ್ಸಿನಲ್ಲಿದ್ದರೆ ಮಧುಮೇಹ ಇದ್ದ ಬಳಿಕವೂ ಗರ್ಭಧರಿಸಿದ ಉದಾಹರಣೆಗಳಿವೆ. ಆದರೆ ಒಂದು ವೇಳೆ ಇವರ ರಕ್ತದಲ್ಲಿರುವ ಸಕ್ಕರೆಯ ನಿಯಂತ್ರಣ ಕಷ್ಟಸಾಧ್ಯವಾಗಿದ್ದರೆ ಹಾಗೂ ಮಧುಮೇಹ ದೀರ್ಘಾವಧಿಯಿಂದ ಇದ್ದರೆ ಗರ್ಭ ಧರಿಸುವ ಅರ್ಹತೆಯಿದ್ದರೂ ವೈದ್ಯರೇ ಇದಕ್ಕೆ ಅನುಮತಿ ನಿರಾಕರಿಸುತ್ತಾರೆ. ಫಲವಂತಿಕೆ ತಜ್ಞರ ಪ್ರಕಾರ "ಮಹಿಳೆಯ ರಕ್ತದಲ್ಲಿ ಆರೋಗ್ಯಕರ ಮಟ್ಟದ ಗ್ಲುಕೋಸ್ ಇದ್ದರೆ ಪ್ರತಿ ತಿಂಗಳೂ ಗರ್ಭ ಧರಿಸುವ ಅರ್ಹತೆ ಪಡೆದಿರುತ್ತಾಳೆ.

  Most Read: ಬಂಗುಡೆ ಮೀನು ಕೇವಲ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು


 • ಮಧುಮೇಹಕ್ಕೂ ಸಂತಾನಫಲಕ್ಕೂ ಏನು ಸಂಬಂಧ?

  ಆದರೆ ಮಧುಮೇಹ ಮಿಲನಗೊಂಡ ಅಂಡಾಣುವನ್ನು ಗರ್ಭಾಶಯದಲ್ಲಿ ಸ್ಥಾಪಿಸಲು ಪ್ರಮುಖ ಅಡ್ಡಿಯಾಗಿದೆ (ಸೂಚನೆ: ಅಂಡಾಣು ಮತ್ತು ವೀರ್ಯಾಣು ಗರ್ಭನಾಳದಲ್ಲಿ ಮಿಲನಗೊಳ್ಳುತ್ತವೆ ಹಾಗೂ ಫಲಿತಗೊಂಡ ಅಂಡಾಣು ಗರ್ಭಕೋಶವನ್ನು ಪ್ರವೇಶಿಸಿದ ಬಳಿಕವೆ ಬೆಳವಣಿಗೆ ಪ್ರಾರಂಭವಾಗುತ್ತದೆ). ಆದ್ದರಿಂದ ಅಂಡಾಣು ಫಲಿತಗೊಂಡಿದ್ದರೂ ಇದನ್ನು ಸ್ಥಾಪಿಸಿಕೊಳ್ಳಲು ಗರ್ಭನಾಳದಲ್ಲಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಇದು ವಿಸರ್ಜನೆಗೊಂಡು ತಾನು ಗರ್ಭಿಣಿಯಾಗಿದ್ದೆ ಎಂಬ ಅಂಶ ಆಕೆಯ ಗಮನಕ್ಕೆ ಬರುವ ಮುನ್ನವೇ ಗರ್ಭಪಾತವಾಗುತ್ತದೆ" ಈ ಸಂದರ್ಭಗಳಲ್ಲಿ ಮಧುಮೇಹ ಗರ್ಭಾಂಕುರಕ್ಕೆ ಅಡ್ಡಿಯುಂಟಾಗುವುದಿಲ್ಲ, ಬದಲಿಗೆ ಗರ್ಭಾಂಕುರವಾದ ಮುಂದಿನ ಹಂತಕ್ಕೆ ಅಡ್ಡಗಾಲು ಹಾಕುತ್ತದೆ. ಒಂದು ವೇಳೆ ಮಹಿಳೆಯ ರಕ್ತದಲ್ಲಿ ಅಧಿಕ ಗ್ಲುಕೋಸ್ ಕಂಡುಬಂದರೆ ಇವರಲ್ಲಿ ಗರ್ಭಪಾತವಾಗುವ ಸಾಧ್ಯತೆ ಇತರರಿಗಿಂತ 30-60% ಹೆಚ್ಚು ಎಂದು ಅಮೇರಿಕಾದ ಮಧುಮೇಹ ಸಂಸ್ಥೆ ಅಂಕಿಅಂಶಗಳ ಸಾಕ್ಷಿ ಸಹಿತ ವರದಿ ಮಾಡಿದೆ.


 • ಮಧುಮೇಹಕ್ಕೂ ಸಂತಾನಫಲಕ್ಕೂ ಏನು ಸಂಬಂಧ?

  ಒಂದು ವೇಳೆ ಗರ್ಭಾಂಕುರವಾದ ಬಳಿಕ ಅಂಡಾಣು ಗರ್ಭಾಶಯವನ್ನು ಸೇರುವ ಸಾಧ್ಯತೆ ಇದ್ದರೂ, ಕೆಲವು ವೈಪರೀತ್ಯಗಳ ಸಾಧ್ಯತೆಯನ್ನು ಪರಿಗಣಿಸಲೇಬೇಕಾಗುತ್ತದೆ, ಅವೆಂದರೆ:

  * ವಿರೂಪಗೊಂಡ ಶಿಶುವಿನ ಜನನವಾಗುವ ಸಾಧ್ಯತೆಯ ಹೆಚ್ಚಳ, ಗರ್ಭಾಶಯದಲ್ಲಿ ಸಾಂಗವಾಗಿ ನಡೆಯಬೇಕಾಗಿದ್ದ ಬೆಳವಣಿಗೆಯ ಹಂತಗಳು ತಡೆತಡೆದು, ತುಂಡು ತುಂಡಾಗಿ ನಡೆದಿರುವುದೇ ಇದಕ್ಕೆ ಕಾರಣ, ಇದಕ್ಕೆ ರಕ್ತದಲ್ಲಿ ಗ್ಲುಕೋಸ್ ಅಧಿಕ ಪ್ರಮಾಣದಲ್ಲಿರುವುದೇ ಮೂಲ ಕಾರಣವಾಗಿದೆ.
  * ಮಗುವಿನ ದೇಹದ ಗಾತ್ರ ವಿಪರೀತ ದೊಡ್ಡದಾಗಿದ್ದು ಸಹಜ ಹೆರಿಗೆಗೆ ಅವಕಾಶವೇ ಇಲ್ಲವಾಗಿ ಸಿಸರೇನಿಯನ್ ಹೆರಿಗೆ ಅನಿವಾರ್ಯವಾಗುವುದು. ಇದು ತಾಯಿಯಲ್ಲಿ ಸೋಂಕು ಹರಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
  * ಗರ್ಭಾವಸ್ಥೆಯಲ್ಲಿ ಎದುರಾಗುವ ತಾತ್ಕಾಲಿಕ ಮಧುಮೇಹ (gestational diabetes) ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ತನ್ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಬಾಧಿಸುವ ಹಲವಾರು ಅಂಶಗಳು ಎದುರಾಗುವ ಸಾಧ್ಯತೆಗಳೆಲ್ಲವೂ ತೆರೆದುಕೊಳ್ಳುತ್ತವೆ.

  Most Read: ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಕೆಟ್ಟ ಅಭ್ಯಾಸದಿಂದಲೇ ಬಡತನ ಕಾಡುವುದಂತೆ!


 • ಒಂದು ವೇಳೆ ಗ್ಲುಕೋಸ್ ಮಟ್ಟ ಅತಿ ಹೆಚ್ಚಾಗಿದ್ದರೆ?

  ರಕ್ತದಲ್ಲಿ ಗ್ಲೂಕೋಸ್ ಹೆಚ್ಚಿದ್ದರೆ ಇದು ಅಂಡಾಣು ಗರ್ಭಾಶಯಕ್ಕೆ ಸೇರುವ ಸಾಧ್ಯತೆಯನ್ನು ತಗ್ಗಿಸುವ ಜೊತೆಗೇ ದೇಹದಲ್ಲಿ ಕೆಲವಾರು ರಸದೂತಗಳ ಅಸಮತೋಲನವನ್ನುಂಟುಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಮಹಿಳೆಯರ ದೇಹಕ್ಕೆ ಮೀಸಲಾಗಿರುವ ಈಸ್ಟ್ರೋಜೆನ್, ಪ್ರೊಜೆಸ್ಟೆರಾನ್ ಹಾಗೂ ಟೆಸ್ಟಾಸ್ಟೆರಾನ್ ರಸದೂತಗಳ ಮಟ್ಟ ಗರ್ಭಾಂಕುರಗೊಳ್ಳಲು ಅಗತ್ಯವಾದ ಪ್ರಮಾಣಕ್ಕೂ ಮೀರಿ ಏರುಪೇರುಗೊಳ್ಳುತ್ತವೆ. ಹಾಗಾಗಿ ಗರ್ಭ ಧರಿಸಲು ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಆರೋಗ್ಯಕರ ಮಟ್ಟದಲ್ಲಿರುವುದು ತೀರಾ ಅಗತ್ಯ.


 • ಮಧುಮೇಹದ ವಿಧಗಳು

  ಟೈಪ್ 1 ಅಥವಾ ದೇಹ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ಅಸಮರ್ಥವಾಗುವುದು ಎಷ್ಟು ಅಪಾಯಕಾರಿ ಎಂದು ಹೆಚ್ಚಿನವರಿಗೆ ಗೊತ್ತಿದೆ. ಮೇದೋಜೀರಕ ಗ್ರಂಥಿಯ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು ಶಾಶ್ವತವಾಗಿ ನಷ್ಟಗೊಳ್ಳುವುದೇ ಇದಕ್ಕೆ ಕಾರಣ. ಈ ತೊಂದರೆ ಇರುವ ರೋಗಿಗಳು ನಿತ್ಯವೂ ಚುಚ್ಚುಮದ್ದಿನ ಮೂಲಕ ಇನ್ಸುಲಿನ್ ಅನ್ನು ರಕ್ತಕ್ಕೆ ಪಡೆದುಕೊಳ್ಳಬೇಕಾಗುತ್ತದೆ. ಗರ್ಭಾವಸ್ಥೆಯನ್ನು ಪರಿಗಣಿಸಿದರೆ ಮಗು ಮತ್ತು ತಾಯಿಯ ಆರೋಗ್ಯಕ್ಕೆ ಈ ವಿಧದ ಮಧುಮೇಹ ಅತಿ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ.


 • ಟೈಪ್ 2 ಮಧುಮೇಹ

  ಟೈಪ್ 2 ಮಧುಮೇಹದಲ್ಲಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ದೇಹ ಅಸಮರ್ಥವಾಗಿದ್ದು ಗ್ಲುಕೋಸ್ ರಕ್ತದಲ್ಲಿ ಏರುತ್ತದೆ. ಇಂದು ಅಮೇರಿಕಾದಲ್ಲಿ ಈ ವಿಧದ ಮಧುಮೇಹವೇ ಅತಿ ಹೆಚ್ಚಾಗಿ ಕಾಣಬರುತ್ತಿದೆ. ಇದನ್ನು ನಿಯಂತ್ರಿಸಲು ಆಹಾರಕ್ರಮದಲ್ಲಿ ಸೂಕ್ತ ಬದಲಾವಣೆ, ವ್ಯಾಯಾಮದಲ್ಲಿ ಹೆಚ್ಚಳ ಮೊದಲಾದವುಗಳನ್ನು ಅನುಸರಿಸುವುದು ಅನಿವಾರ್ಯ. ಆದರೆ ಗರ್ಭಾಂಕುರಗೊಳ್ಳುವ ಸಾಧ್ಯತೆಯನ್ನು ಪರಿಗಣಿಸಿದರೆ ಈ ವಿಧದ ಮಧುಮೇಹ ಸುಲಭವಾಗಿ ನಿಯಂತ್ರಿಸಬಹುದಾಗಿದ್ದು ಗರ್ಭಾಂಕುರದ ಸಾಧ್ಯತೆಯನ್ನು ಹೆಚ್ಚಿಸಿ ಸುರಕ್ಷಿತ ಗರ್ಭಾವಸ್ಥೆಯನ್ನು ಸಾಗಿಸಲು ಸಾಧ್ಯ ಎಂದು ಹೇಳಬಹುದು.


 • ಮಧುಮೇಹವನ್ನು ನಿಯಂತ್ರಿಸುವ ಕ್ರಮಗಳು

  ಗರ್ಭಾವಸ್ಥೆಯನ್ನು ಸುರಕ್ಷಿತವಾಗಿಸಲು ಕೆಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು ವಿಶೇಷವಾಗಿ ಮಧುಮೇಹಿ ಮಹಿಳೆಯರು ಈ ಕೆಳಗಿನವುಗಳನ್ನುತಕ್ಷಣದಿಂದಲೇ ಅನುಸರಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ.

  * ನಿಮ್ಮ ತೂಕವನ್ನು ನಿಮ್ಮ ಎತ್ತರಕ್ಕೆ ತಕ್ಕ ಮಟ್ಟಕ್ಕೆ ಇಳಿಸುವುದು. (ನೀವು ಸ್ಥೂಲದೇಹಿಗಳಾಗಿದ್ದಷ್ಟೂ ನಿಮ್ಮ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವುದು ಕಷ್ಟ ಹಾಗೂ ನಿಮ್ಮ ದೇಹದಲ್ಲಿ ಈಸ್ಟ್ರೋಜೆನ್ ರಸದೂತದ ಮಟ್ಟವೂ ಅಧಿಕವೇ ಇರುವ ಕಾರಣ ಇದು ಗರ್ಭಾವಸ್ಥೆಯನ್ನು ಬಾಧೆಗೊಳಗಾಗಿಸಬಹುದು). ಇದಕ್ಕೆ ಕರಣವೇನೆಂದರೆ ನಿಮ್ಮ ದೇಹದಲ್ಲಿರುವ ಆಂಡ್ರೋಜೆನ್ ಎಂಬ ಇನ್ನೊಂದು ಅವಶ್ಯಕ ರಸದೂತವನ್ನು ಗ್ಲುಕೋಸ್ ಈಸ್ಟ್ರೋಜೆ ಆಗಿ ಪರಿವರ್ತಿಸುವ ಮೂಲಕ ಆಂಡ್ರೋಜೆನ್ ಪ್ರಮಾಣ ಕಡಿಮೆ ಮತ್ತು ಈಸ್ಟ್ರೋಜೆನ್ ಪ್ರಮಾಣ ಹೆಚ್ಚಾಗಿಸುತ್ತದೆ)
  * ನಿಮ್ಮ ದೇಹದ A1C ಮಟ್ಟವನ್ನು ಗರ್ಭ ಧರಿಸುವ ಪ್ರಯತ್ನಕ್ಕೂ ಮುನ್ನ 6.5 ಕ್ಕೂ ಕಡಿಮೆ ಇರುವಂತೆ ನೋಡಿಕೊಳ್ಳಿ. (A1C = ನಿಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳ ಪೈಕಿ ಗ್ಲುಕೋಸ್ ಅಣುವನ್ನು ಅಂಟಿಸಿಕೊಂಡಿರುವ ಕಣಗಳ ಪ್ರಮಾಣ)
  * ಮುಂದಿನ ಮೂರರಿಂದ ಆರು ತಿಂಗಳು (ಇದಕ್ಕೂ ಹೆಚ್ಚಾದಷ್ಟೂ ಉತ್ತಮ) ಸಕ್ಕರೆ ಸೇವನೆಯನ್ನು ಸಾಧ್ಯವಾದಷ್ಟೂ ಮಿತಗೊಳಿಸಿ. ಇದರಿಂದ ನಿಮ್ಮ ದೇಹವನ್ನು ಗರ್ಭಧರಿಸಲು ಸೂಕ್ತವಾಗಿ ಸಿದ್ಧವಾಗಿಸಲು ಸಾಧ್ಯವಾಗುತ್ತದೆ.


 • ಪುರುಷರಲ್ಲಿ ಮಧುಮೇಹ

  ರಕ್ತದಲ್ಲಿ ಅಧಿಕ ಪ್ರಮಾಣದ ಗ್ಲುಕೋಸ್ ಇರುವ ಪುರುಷರೂ ಫಲವತ್ತತೆಯನ್ನು ಹೊಂದಲು ವಿಫಲರಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಿಮ್ಮುಖ ಸ್ಖಲನ (retrograde ejaculation) ವಾಗುವ ಸಾಧ್ಯತೆಯಿದ್ದು ಇವರಲ್ಲಿ ವೀರ್ಯಾಣುಗಳು ದೇಹದಿಂದ ಹೊರಹರಿಯದೇ ಮೂತ್ರಕೋಶದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಪರಿಸ್ಥಿತಿಯಲಿ ಇವರ ವೀರ್ಯಾಣುಗಳು ಮಹಿಳೆಯ ಗರ್ಭಕಂಠವನ್ನು ತಲುಪಲು ಸಾಧ್ಯವೇ ಇಲ್ಲ. ಮಧುಮೇಹದ ಕಾರಣ ಅಥವಾ ಬೇರೆ ಔಷಧಿಗಳ ಅಡ್ಡಪರಿಣಾಮದಿಂದ ಎದುರಾಗುವ ನಿಮಿರು ದೌರ್ಬಲ್ಯವೂ ಫಲವತ್ತತೆ ಪಡೆಯಲು ಅಡ್ಡಿಯುಂಟುಮಾಡಬಹುದು.

  Most Read: ಮಧುಮೇಹ ನಿಯಂತ್ರಣ ಮತ್ತು ತೂಕ ಇಳಿಕೆಗೆ-ಹಾಗಲಕಾಯಿ ಜ್ಯೂಸ್ ಕುಡಿಯಿರಿ


 • ಪುರುಷರಲ್ಲಿ ಮಧುಮೇಹ

  ಅಲ್ಲದೇ, ಮಧುಮೇಹದಿಂದ ಎದುರಾಗುವ ಇನ್ನೊಂದು ಘೋರವಾದ ಅಪಾಯವಿದೆ, ಅದೇ ಡಿಎನ್ ಎ ವಿರೂಪಗೊಳ್ಳುವಿಕೆ ( DNA damage). ಬೆಲ್ಫಾಸ್ಟ್ ನಗರದಲ್ಲಿರುವ ಕ್ವೀನ್ಸ್ ವಿಶ್ವವಿದ್ಯಾಲಯದ 'ಸಂತಾನೋತ್ಪತ್ತಿ ಸಂಶೋಧನಾ ವಿಭಾಗ'ದ ಡಾ. ಇಶೋಲಾ ಅಗ್ಬಾಜೆ ಯವರ ಸಂಶೋಧನೆಯ ಪ್ರಕಾರ ಮಧುಮೇಹದಿಂದ ಪುರುಷರ ವೀರ್ಯಾಣುಗಳ ಡಿಎನ್ ಎ ವಿರೂಪಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಇದು ಗರ್ಭಧರಿಸಲು ಸಾಧ್ಯವಾಗದೇ ಹೋಗುವುದನ್ನು ಅಥವಾ ಆರೋಗ್ಯಕರ ಶಿಶುವಿನ ಜನನವಾಗುವುದನ್ನೂ ತಡೆಯಬಹುದು. ಈ ಸಂಶೋಧನೆಯಲ್ಲಿ ಕಂಡುಬಂದ ಇತರ ಅಂಶಗಳೆಂದರೆ:
  * ಮಧುಮೇಹಿ ಪುರುಷರಲ್ಲಿ ಅತಿ ಕಡಿಮೆ ಮಟ್ಟದ ವೀರ್ಯಾಣುಗಳಿರುತ್ತವೆ (ಆರೋಗ್ಯವಂತರಲ್ಲಿ 3.3 ಮಿಲೀ ಇದ್ದರೆ ಮಧುಮೇಹಿಗಳಲ್ಲಿ 2.6 ಮಿ.ಲೀ ಇರುತ್ತದೆ)
  * ಈ ವೀರ್ಯಾಣುಗಳಲ್ಲಿ nuclear DNA ಮಟ್ಟ ಹೆಚ್ಚಿರುತ್ತದೆ (ಆರೋಗ್ಯವಂತರಲ್ಲಿ 52 ಶೇಖಡಾ ಇದ್ದರೆ ಮಧುಮೇಹಿಗಳಲ್ಲಿ 32 ಶೇ. ಇರುತ್ತದೆ)
  * ಮಧುಮೇಹಿಗಳ ವೀರ್ಯಾಣುಗಳಲ್ಲಿ mitochondrial DNA ಅಂಬ ಭಾಗ ಇಲ್ಲದಿರುವ ಅಂಶ ಆರೋಗ್ಯವಂತರಿಗಿಂತಲೂ ತುಂಬಾ ಕಡಿಮೆ ಇರುತ್ತದೆ.
  * mitochondrial DNA ಎಂಬ ಭಾಗ ಇಲ್ಲದಿರುವ ಅಂಶ ಆರೋಗ್ಯ್ರವಂತದಲ್ಲಿ 1 ರಿಂದ 4 (ಸರಾಸರಿ 3) ಇದ್ದರೆ ಮಧುಮೇಹಿಗಳಲ್ಲಿ 3 ರಿಂದ 6 (ಸರಾಸರಿ 4) ಇರುತ್ತದೆ.
  ಈ ಅಂಶಗಳೆಲ್ಲಾ ಏನೆನ್ನುತ್ತವೆ? ಸರಳವಾಗಿ ಹೇಳಬೇಕೆಂದರೆ ತಮ್ಮ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಣ ಸಾಧಿಸದ ಪುರುಷರು ತಮ್ಮ ಸಂಗಾತಿಯಲ್ಲಿ ಗರ್ಭಾಂಕುರಗೊಳಿಸುವ ಕ್ಷಮತೆಯನ್ನು ಕಳೆದುಕೊಂಡಿರುತ್ತಾರೆ. ಒಂದು ವೇಳೆ ಇದು ಸಾಧ್ಯವಾಗಿದ್ದರೂ ಗರ್ಭಪಾತವಾಗುವ ಸಾಧ್ಯತೆ ಹೆಚ್ಚುತ್ತದೆ ಮತ್ತು ವಿರೂಪಗೊಂಡ ಶಿಶುವಿನ ಜನನದ ಸಾಧ್ಯತೆಯೂ ಹೆಚ್ಚುತ್ತದೆ.


 • ಹಾಗೆಂದರೆ ಮಧುಮೇಹಿ ದಂಪತಿಗಳು ಸಂತಾನಕ್ಕೆ ಪ್ರಯತ್ನಿಸಲೇಬಾರದೇ?

  ಮಧುಮೇಹ ಫಲವಂತಿಕೆಯ ಮೇಲೆ ಬೀರುವ ಪ್ರಭಾವವನ್ನು ಅರಿತ ಬಳಿಕ ಈ ತೊಂದರೆ ಇರುವ ದಂಪತಿಗಳು ತಮಗೆಂದೂ ಸಂತಾನಫಲ ದೊರಕುವುದೇ ಇಲ್ಲವೇ ಎಂಬ ದುಗುಡಕ್ಕೆ ಒಳಗಾಗುತ್ತಾರೆ. ಗ್ಲುಕೋಸ್ ಮಟ್ಟ ಹೆಚ್ಚಿದ್ದಷ್ಟೂ ಸಂತಾನಫಲದ ಮೇಲೆ ಬೀರುವ ಪರಿಣಾಮಗಳು ಹೆಚ್ಚುತ್ತವೆ. ಹಾಗಾಗಿ ಸಕ್ಕರೆಯನ್ನು ತಗ್ಗಿಸಿ (ಹಾಗೂ ಇದೇ ಮಟ್ಟದಲ್ಲಿ ಉಳಿಸಿಕೊಂಡು ಬರುವ ಮೂಲಕ) ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯವನ್ನು ಕಾಪಾಡಿಕೊಂಡರೆ ಈ ಪರಿಣಾಮಗಳು ಎದುರಾಗುವ ಸಾಧ್ಯತೆಯನ್ನು ತಗ್ಗಿಸಬಹುದು. ಈ ಮೂಲಕ ಸುರಕ್ಷಿತ ಗರ್ಭಾವಸ್ಥೆ ಮತ್ತು ಆರೋಗ್ಯವಂತ ಮಗುವನ್ನು ಪಡೆಯಲೂ ಸಾಧ್ಯ. ಆದರೆ ಇದಕ್ಕೆ ನಿಮ್ಮ ಅಂತಃಸ್ರಾವಶಾಸ್ತ್ರಜ್ಞ (endocrinologist) ಮತ್ತು ಪ್ರಸೂತಿಶಾಸ್ತ್ರಜ್ಞ (obstetrician) ರ ಸಂಪೂರ್ಣ ಸಲಹೆ ಮತ್ತು ನಿಗಾ ಅವಶ್ಯವಾಗಿದ್ದು ನಿಯಮಿತವಾಗಿ ತಪಾಸಣೆಗೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಮುಖ್ಯವಾಗಿ ಮಧುಮೇಹವನ್ನು ನಿಯಂತ್ರಣದಿಂದ ತಪ್ಪಿಹೋಗಲು ಬಿಡದೇ ಇರುವುದು ಅವಶ್ಯವಾಗಿದೆ. ಇದಕ್ಕಾಗಿ ಸೂಕ್ತ ಯೋಜನೆ, ಸಮರ್ಪಣಾ ಭಾವನೆ ಮತ್ತು ಆಹಾರಕ್ರಮದಲ್ಲಿ ಕಟ್ಟುನಿಟ್ಟು ಪಾಲಿಸುವುದು ಅಗತ್ಯವಾಗಿದೆ ಹಾಗೂ ಈ ಮೂಲಕ ಆರೋಗ್ಯವಂತ ಮಗುವನ್ನು ಪಡೆಯುವ ಸಾದ್ಯತೆಗಳು ಮಧುಮೇಹ ಇಬ್ಬರಲ್ಲೊಬ್ಬರಲ್ಲಿರುವ ದಂಪತಿಗಳಿಗೂ ಸಾಧ್ಯವಾಗುತ್ತದೆ.
ಸಂತಾನವನ್ನು ಹೊಂದುವುದು ಪ್ರತಿಯೊಬ್ಬರ ಪ್ರಮುಖ ಆಶಯವಾಗಿದ್ದು ನೀವು ಗರ್ಭಧರಿಸಲು ನಡೆಸಿದ ಇದುವರೆಗಿನ ಪ್ರಯತ್ನಗಳೆಲ್ಲಾ ವಿಫಲವಾಗಿದ್ದು ಇದಕ್ಕೆ ಕಾರಣವೇನೆಂದು ನಿಮಗೆ ತಿಳಿದಿರಲಿಕ್ಕಿಲ್ಲ. ಇದಕ್ಕಾಗಿ ನೀವು ದೇವರಲ್ಲಿ ಬೇಡಿಕೊಳ್ಳುವುದರ ಹೊರತಾಗಿ ಗರ್ಭಾಶಯದ ಸ್ವಚ್ಛಗೊಳಿಸುವಿಕೆ (fertility cleanse),ಗರ್ಭಧರಿಸಲು ಹೆಚ್ಚಿನ ಪ್ರಯೋಜನ ನೀಡುವ ಆಹಾರಗಳ ಸೇವನೆ, ಹೆಚ್ಚುವರಿ ಆಹಾರಗಳು, ವಿವಿಧ ಗಿಡಮೂಲಿಕೆಗಳ ಸೇವನೆ ಮೊದಲಾದವುಗಳನ್ನೆಲ್ಲಾ ಇದುವರೆಗೆ ಪ್ರಯತ್ನಿಸಿದ್ದರಬಹುದು. ಒಂದು ವೇಳೆ ಈ ಪ್ರಯತ್ನಗಳಿಗೂ ಫಲವಿಲ್ಲವೆಂದರೆ ಒಂದು ಸರಳ ರಕ್ತಪರೀಕ್ಷೆಯಿಂದ ಇದಕ್ಕೆ ಕಾರಣವನ್ನು ಕಂಡುಕೊಳ್ಳಬಹುದು. ಒಂದು ವೇಳೆ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಿದ್ದರೆ, ಗರ್ಭ ಧರಿಸುವ ಸಾಧ್ಯತೆ ಮಸುಕಾಗಿದೆ ಎಂದೇ ಹೇಳಬಹುದು.

ಅಮೇರಿಕಾದಲ್ಲಿ ಇಂದು ಟೈಪ್=2 ಮಧುಮೇಹದ ಪ್ರಮಾಣ ಏರುಗತಿಯಲ್ಲಿ ಹೆಚ್ಚತೊಡಗಿದೆ ಹಾಗೂ ಇದಕ್ಕೆ ಕಾರಣವನ್ನು ಕಂಡುಕೊಳ್ಳಲು ತಜ್ಞರು ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಗರ್ಭ ಧರಿಸದೇ ಇರಲು ಗುರುತರ ಕಾರಣವಿಲ್ಲದ ಹೊರತಾಗಿ ಈ ಅಂಶವೇನಾದರೂ ಪ್ರಮುಖ ಪಾತ್ರ ವಹಿಸುತ್ತಿದೆಯೇ ಎಂಬ ಬಗ್ಗೆ ಇಂದು ಗಂಭೀರವಾದ ಸಂಶೋಧನೆಗಳು ನಡೆಯುತ್ತಿವೆ.

   
 
ಹೆಲ್ತ್