Back
Home » ಬಾಲಿವುಡ್
ಆರತಕ್ಷತೆಯಲ್ಲಿ ನವ ದಂಪತಿ ಪ್ರಿಯಾಂಕಾ-ನಿಕ್ ಗೆ ಪ್ರಧಾನಿ ಮೋದಿ ಕೊಟ್ಟ ಉಡುಗೊರೆ ಏನು.?
Oneindia | 5th Dec, 2018 02:28 PM
 • ಮಿಸ್ಟರ್ ಅಂಡ್ ಮಿಸಸ್ ಜೋನಸ್

  ಆರತಕ್ಷತೆಗಾಗಿ ನಟಿ ಪ್ರಿಯಾಂಕಾ ಛೋಪ್ರಾ ಬಿಳಿ ಬಣ್ಣದ ಲೆಹಂಗಾ ಧರಿಸಿದ್ದರು. ಇನ್ನೂ ನಿಕ್ ಜೋನಸ್ ನೀಲಿ ಬಣ್ಣದ ವೆಲ್ವೆಟ್ ಪ್ಯಾಂಟ್ ಸೂಟ್ ನಲ್ಲಿ ಮಿಂಚಿದರು.

  ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ


 • ಮೋದಿ ಕೊಟ್ಟ ಉಡುಗೊರೆ ಏನು.?

  ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ನವ ದಂಪತಿಗಳಿಗೆ ಗುಲಾಬಿಯ ಹೂವನ್ನು ಉಡುಗೊರೆಯಾಗಿ ನೀಡಿದರು. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಆರತಕ್ಷತೆಯಲ್ಲೂ ಪ್ರಧಾನಿ ಮೋದಿ ಗುಲಾಬಿ ಹೂವು ನೀಡಿ ಶುಭ ಕೋರಿದ್ದರು.

  ಹಿಂದೂ ಸಂಪ್ರದಾಯದಂತೆ ನಡೆದ ಪ್ರಿಯಾಂಕ ಚೋಪ್ರಾ - ನಿಕ್ ವಿವಾಹ


 • ಫ್ಯಾಮಿಲಿ ಫೋಟೋ

  ಆರತಕ್ಷತೆ ಸಮಾರಂಭದಲ್ಲಿ ಕ್ಲಿಕ್ ಆಗಿರುವ ಫ್ಯಾಮಿಲಿ ಫೋಟೋ ಇದು. ಈ ಚಿತ್ರದಲ್ಲಿ ನಿಕ್ ಜೋನಸ್ ತಂದೆ, ತಾಯಿ, ಸಹೋದರ ಮತ್ತು ಪ್ರಿಯಾಂಕಾ ಕುಟುಂಬದವರನ್ನು ನೀವು ಕಾಣಬಹುದು.

  ಪ್ರಿಯಾಂಕಾ-ನಿಕ್ ಮದುವೆ: ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಜೋಧ್ ಪುರ ಅರಮನೆ


 • ಗಣ್ಯಾತಿಗಣ್ಯರ ದಂಡು

  ಗಣ್ಯಾತಿಗಣ್ಯರು, ಬಾಲಿವುಡ್ ನಟ-ನಟಿಯರು ಸೇರಿದಂತೆ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಗೆ ಒಟ್ಟು 225 ಅತಿಥಿಗಳು ಸಾಕ್ಷಿ ಆಗಿದ್ದರು. ಹಾಗೇ ರಿಸೆಪ್ಷನ್ ನಲ್ಲೂ ಪ್ರಧಾನಿ ಮೋದಿ ಸೇರಿದಂತೆ ಹಲವು ವಿ.ಐ.ಪಿಗಳು ಭಾಗವಹಿಸಿದ್ದರು.

  ಬ್ರೈಡಲ್ ಶವರ್: ಪ್ರಿಯಾಂಕಾ ಛೋಪ್ರಾ ತೊಟ್ಟಿದ್ದ ಆಭರಣಗಳ ಬೆಲೆ ಎಷ್ಟು ಗೊತ್ತಾ.?
ಜೋಧ್ ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರೈಸ್ತ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಸ್ ರವರ ಆರತಕ್ಷತೆ ದೆಹಲಿಯಲ್ಲಿ ನೆರವೇರಿತು.

ನವ ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ ನ ದರ್ಬಾರ್ ಹಾಲ್ ನಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ರಿಸೆಪ್ಷನ್ ಅದ್ಧೂರಿಯಾಗಿ ನಡೆಯಿತು.

ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದು ವಿಶೇಷ. ರಿಸೆಪ್ಷನ್ ನಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ನವ ದಂಪತಿಗೆ ಕೊಟ್ಟ ಉಡುಗೊರೆ ಏನ್ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

   
 
ಹೆಲ್ತ್