Back
Home » Business
ಗುಡ್ ನ್ಯೂಸ್! ಜಿಎಸ್ಟಿ ರಿಟರ್ನ್ಸ್ ಫಾರ್ಮ್ ಸಲ್ಲಿಕೆ ಇನ್ನಷ್ಟು ಸರಳೀಕರಣ
Good Returns | 5th Dec, 2018 01:31 PM

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ಸ್ ಫಾರ್ಮ್ ಅನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದ್ದು, 2019 ರ ಏಪ್ರಿಲ್ 1 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

ಇಎಸ್ಟಿ ಸಂಗ್ರಹಣೆಯ ಗುರಿ ಮುಟ್ಟುವ ವಿಶ್ವಾಸವಿದ್ದು, ತೆರಿಗೆಯನ್ನು ಯಾರೂ ವಂಚಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜಿಎಸ್ಟಿ ಜಾರಿಯಾದ ಮೊದಲ ಎಂಟು ತಿಂಗಳು ಅವಧಿಯಲ್ಲಿ (ಏಪ್ರಿಲ್ ನಿಂದ ನವೆಂಬರ್ ) ರೂ. 7.76 ಲಕ್ಷ ಕೋಟಿಗಿಂತ ಅಧಿಕ ಜಿಎಸ್ಟಿ ಸಂಗ್ರಹವಾಗಿದೆ. 2018-19 ನೇ ಸಾಲಿನಲ್ಲಿ ರೂ. 13.48 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹಿಸುವ ಗುರಿ ಇಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದರೆ ಪ್ರತಿ ತಿಂಗಳಿಗೆ ರೂ. 1.12 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

   
 
ಹೆಲ್ತ್