Back
Home » ಆರೋಗ್ಯ
ನಿಯಮಿತವಾಗಿ ಹಸ್ತಮೈಥುನ ಮಾಡಿಕೊಂಡರೆ ತೂಕ ಇಳಿಸಿಕೊಳ್ಳಬಹುದೇ? ಅಥವಾ ಇದು ಸುಳ್ಳೇ?
Boldsky | 5th Dec, 2018 08:05 PM
 • ಹಸ್ತಮೈಥುನದ ಬಗ್ಗೆ ವೈದ್ಯರ ಅಭಿಪ್ರಾಯ

  ಈ ಬಗ್ಗೆ ಜಗತ್ತಿನ ಎಲ್ಲಾ ವೈದ್ಯರು ಮತ್ತು ಆರೋಗ್ಯ ತಜ್ಞರ ಸಮಾನ ಅಭಿಪ್ರಾಯವೆಂದರೆ ಈ ಕ್ರಿಯೆ ಆರೋಗ್ಯಕರ ಆದರೆ ಅಗತ್ಯತೆಯ ಮಿತಿಯಲ್ಲಿಯೇ ನಡೆಸಿಕೊಂಡು ಬಂದರೆ ಮಾತ್ರ! ಆದರೆ ಈ ಮಿತಿ ಮೀರಿದರೆ ಮಾತ್ರ ಇದೊಂದು ವ್ಯಸನವಾಗಿ ಮಾರ್ಪಡುತ್ತದೆ ಹಾಗೂ ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅತಿಯಾದರೆ ಅಮೃತವೂ ವಿಷವಂತೆ, ಈ ವಿಷಯದಲ್ಲಿಯೂ ಈ ಗಾದೆಮಾತು ಸಮರ್ಪಕವಾಗಿ ಅನ್ವಯಿಸುತ್ತದೆ.


 • ಹಸ್ತಮೈಥುನ ಮತ್ತು ತೂಕ ಇಳಿಸಿಕೊಳ್ಳುವುದು

  ಹಸ್ತಮೈಥುನದಿಂದಾಗಿ ತೂಕ ಕಡಿಮೆಯಾಗುವುದಿಲ್ಲ. ಇಷ್ಟು ಮಾತ್ರವಲ್ಲದೆ ಇದರಿಂದ ನಿಮ್ಮ ಜನನಾಂಗ ಅಥವಾ ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರದು. ಹಿಂದಿನಿಂದಲೂ ನಂಬಿಕೊಂಡು ಬಂದಿರುವಂತಹ ಕೆಲವೊಂದು ನಂಬಿಕೆಗಳ ಪ್ರಕಾರ ಹಸ್ತಮೈಥುನದಿಂದ ಬುದ್ಧಿಭ್ರಮಣೆ, ಬಂಜೆತನ, ಅಂಗೈಯಲ್ಲಿ ಕೂದಲು ಮತ್ತು ಅಂಧತ್ವ ಕಾಡುವುದು. ಆದರೆ ಇವುಗಳಲ್ಲಿ ಯಾವುದೇ ನಂಬಿಕೆಗಳು ನಿಜವಲ್ಲ.

  Most Read: ಮೂತ್ರನಾಳದ ಸೋಂಕು : ಗುಣವಾಗುವವರೆಗೂ ಸೆಕ್ಸ್‌ನ್ನು ಮುಂದೂಡಬೇಕೇ?


 • ನೀವು ತೂಕ ಕಳೆದುಕೊಳ್ಳುತ್ತಿದ್ದೀರಾ?

  ನೀವು ಯಾವುದೇ ವ್ಯಾಯಾಮ ಮತ್ತು ಆಹಾರ ಪಥ್ಯ ಕ್ರಮಗಳು ಇಲ್ಲದೆ ತೂಕ ಕಳೆದುಕೊಳ್ಳುತ್ತಲಿದ್ದರೆ ಆಗ ಸಮಸ್ಯೆಯು ಬೇರೆ ಕಡೆಯಲ್ಲಿ ಇರಬಹುದು. ಅದಾಗ್ಯೂ, ಹಸ್ತುಮೈಥುನ ಮಾಡಿಕೊಂಡ ಬಳಿಕ ನಿಮಗೆ ಸ್ವಲ್ಪ ಮಟ್ಟಿಗೆ ನಿಶ್ಯಕ್ತಿ ಕಾಡಬಹುದು. ಇದು ಕೂಡ ನೀವು ದಿನದಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚು ಸಲ ಮಾಡಿದರೆ ಮಾತ್ರ.


 • ಹಸ್ತಮೈಥುನವು ಆರೋಗ್ಯಕಾರಿಯೇ?

  ಮೇಲೆ ಹೇಳಿರುವಂತೆ ಹಸ್ತಮೈಥುನವು ಕೆಟ್ಟದಲ್ಲ. ಇದು ನಿಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮಗೆ ಮಾನಸಿಕ ಹಾಗೂ ದೈಹಿಕವಾಗಿ ಆರಾಮ ನೀಡುವುದು. ಒತ್ತಡ ನಿವಾರಣೆ ಮಾಡಲು ಇದು ನಿಮಗೆ ಒಳ್ಳೆಯ ರೀತಿಯಿಂದ ನೆರವಾಗುವುದು. ನೀವು ಪರಾಕಾಷ್ಠೆ ತಲುಪಿದಾಗ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುವುದು. ಈ ಹಾರ್ಮೋನ್ ನ್ನು ಎಂಡ್ರೋಫಿನ್ಸ್ ಎಂದು ಕರೆಯಲಾಗುತ್ತಿದೆ.


 • ವೈದ್ಯರನ್ನು ಭೇಟಿಯಾಗಬೇಕೇ?

  ಹಸ್ತಮೈಥುನ ಮಾಡಿಕೊಂಡ ಬಳಿಕ ದೇಹದಲ್ಲಿ ಹೆಚ್ಚಿನ ಜಡತೆ ಕಾಣಿಸಿಕೊಂಡರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಲಿತು. ದೇಹದ ತೂಕವು ಹಠಾತ್ ಆಗಿ ಇಳಿಕೆಯಾಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಯಾಕೆಂದರೆ ಇದು ಬೇರೆ ಯಾವುದೇ ರೀತಿಯ ಅನಾರೋಗ್ಯದ ಸೂಚನೆಯಾಗಿರಬಹುದು.


 • ಸ್ವಮೈಥುನದ ಪ್ರಮಾಣ ಹೆಚ್ಚಾದರೆ

  ಪುರುಷರಲ್ಲಿ ಸ್ವಮೈಥುನದ ಪ್ರಮಾಣ ಹೆಚ್ಚಾದರೆ ಎದುರಾಗುವ ಅಡ್ಡಪರಿಣಾಮಗಳಲ್ಲಿ ಇದು ಅತ್ಯಂತ ಘೋರವಾಗಿದೆ. ಮೊದಲ ನಿಮಿರುವಿಕೆಯಲ್ಲಿ ಪುರುಷರಿಗೆ ಅತಿ ಹೆಚ್ಚಿನ ದೃಢತೆ ಸಿಗುತ್ತದೆ. ತದನಂತದರ ನಿಮಿರುವಿಕೆಯಲ್ಲಿ ಹಿಂದಿನಷ್ಟು ದೃಢತೆ ಇರುವುದಿಲ್ಲ ಹಾಗೂ ಕ್ರಮೇಣ ಇದು ಇನ್ನಷ್ಟು ಕಡಿಮೆಯಾಗುತ್ತಾ ಸೌಮ್ಯವಾದ ಸ್ಪಂಜಿನಂತಾಗುತ್ತದೆ. ಆದರೆ ಎಷ್ಟು ಸ್ಖಲನಗಳ ಬಳಿಕ ಹೀಗಾಗುತ್ತದೆ ಎಂಬುದಕ್ಕೆ ಯಾವುದೇ ಖಚಿತ ವಿವರಣೆಯಿಲ್ಲ. ಪ್ರತಿ ಪುರುಷರಿಗೂ ಇದು ಭಿನ್ನವಾಗಿರುತ್ತದೆ. ಅಲ್ಲದೇ ಸತತ ಘರ್ಷಣೆಯಿಂದ ಸೂಕ್ಷ್ಮ ಗೀರುಗಳು, ಚರ್ಮ ಸುಲಿಯುವುದು ಹಾಗೂ ಬಾವು ಕಾಣಿಸಿಕೊಳ್ಳಬಹುದು.

  Most Read: ಶೀಘ್ರಸ್ಖಲನದ ಬಗ್ಗೆ ನಿಮಗೆ ಗೊತ್ತೇ ಇರದ ಆಸಕ್ತಿಕರ ಸಂಗತಿಗಳು


 • ನಿದ್ದೆಯ ಮಂಪರಿಗೂ ಇದು ಕಾರಣವಾಬಹುದು!

  ನೀವು ಅಧಿಕ ಪ್ರಮಾಣದಲ್ಲಿ ಹಸ್ತ ಮೈಥುನದಲ್ಲಿ ತೊಡಗಿಸಿಕೊಂಡರೆ, ಅದು ನಿಮ್ಮನ್ನು ನಿದ್ದೆಯ ಮಂಪರಿನಲ್ಲಿರುವಂತೆ ಮಾಡುತ್ತದೆ. ಏಕೆಂದರೆ ಹಸ್ತ ಮೈಥುನವು ಅಧಿಕವಾದಷ್ಟು ಮೆದುಳಿನಲ್ಲಿ ಅಧಿಕ ಪ್ರಮಾಣದ ಡೋಪಮೈನ್ ಬಿಡುಗಡೆಯಾಗುತ್ತದೆ. ಇದರಿಂದ ಮಂಪರು ಆವರಿಸುತ್ತದೆ.


 • ನೆನಪಿಡಿ

  ಯಾವುದೇ ಅಂಗವನ್ನು ಅದರ ಕ್ಷಮತೆಗೂ ಮೀರಿ ಬಳಸಿದರೆ ಏನಾಗುತ್ತದೆ? ಇದು ತನ್ನ ಕ್ಷಮತೆಯನ್ನೇ ಕಳೆದುಕೊಳ್ಳುತ್ತದೆ. ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳಾದ ಗುಪ್ತಾಂಗಗಳೂ ಅಷ್ಟೇ. ಇದರ ಕ್ಷಮತೆ ಮೀರಿ ಈ ಕ್ರಿಯೆ ನಡೆಸುವ ಮೂಲಕ ನಿಮಿರು ದೌರ್ಬಲ್ಯ, ಪೂರ್ಣ ನಿಮಿರುತನ ಪಡೆಯಲು ಅಸಮರ್ಥತೆ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳುವ ಸಮಯದಲ್ಲಿ ಎದುರಾಗುವ ವೈಫಲ್ಯ ಮೊದಲಾದ ತೊಂದರೆಗಳು ಎದುರಾಗುತ್ತವೆ. ವ್ಯಸನದ ಪರಿಣಾಮವಾಗಿ ತೊಡೆಸಂಧುಗಳ ಸ್ನಾಯುಗಳು ಶಿಥಿಲಗೊಳ್ಳುತ್ತವೆ ಹಾಗೂ ಲೈಂಗಿಕ ಕ್ರಿಯೆಗೆ ಅಗತ್ಯವಾದ ಶಕ್ತಿಯನ್ನು ಹೊಂದಲು ಸಾಧ್ಯವಾಗದೇ ಲೈಂಗಿಕ ಚಟುವಟಿಕೆಯೇ ಸಾಧ್ಯವಾಗದೇ ಹೋಗಬಹುದು. ಕೆಲವು ಸಂದರ್ಭಗಳಲ್ಲಿ ಈ ವ್ಯಕ್ತಿಗಳು ಸಂಗಾತಿಯೊಂದಿಗಿನ ಮಿಲನಕ್ಕಿಂತಲೂ ಹಸ್ತಮೈಥುನದಲ್ಲಿಯೇ ತಮ್ಮ ಮನಸ್ಸಿಗೆ ಹೆಚ್ಚಿನ ತೃಪ್ತಿಯನ್ನು ಕಂಡುಕೊಂಡಿದ್ದು ಇದು ದಾಂಪತ್ಯ ಜೀವನವೇ ಬಾಧೆಗೊಳಗಾಗಬಹುದು.
ಲೈಂಗಿಕ ಚಟುವಟಿಕೆಗಳಲ್ಲಿ ಹಲವಾರು ವಿಧಗಳು ಇವೆ. ಇದರಲ್ಲಿ ಕೆಲವೊಂದು ಸಂಗಾತಿಗಳ ಮಧ್ಯೆ ನಡೆಯುವಂತಹ ಲೈಂಗಿಕ ಕ್ರಿಯೆಯಾಗಿದೆ. ಇದು ಇಬ್ಬರ ಸಮ್ಮತಿ ಮೇಲೆ ನಡೆಯುವಂತಹ ಕ್ರಿಯೆಯಾಗಿದೆ. ಇನ್ನೊಂದು ಕ್ರಿಯೆಯೆಂದರೆ ಅದು ಬ್ರಹ್ಮಚಾರಿಗಳು ಮತ್ತು ಸಂಗಾತಿಗಳು ಇಲ್ಲದೆ ಇರುವವರು ಮಾಡುವಂತಹ ಸುರಕ್ಷಿತವಾದ ಸೆಕ್ಸ್. ಇದು ಯಾವುದೇ ಲೈಂಗಿಕ ರೋಗಗಳನ್ನು ತಂದೊಕೊಳ್ಳದ ತುಂಬಾ ಸುರಕ್ಷಿತವಾದ ವಿಧಾನ.

ಲೈಂಗಿಕ ಒತ್ತಡ ನಿವಾರಣೆ ಮಾಡುವ ಜತೆಗೆ ಒತ್ತಡ ನಿವಾರಣೆ ಮಾಡುವುದರಿಂದ ಇದು ತುಂಬಾ ಆರೋಗ್ಯಕಾರಿಯೆಂದು ಪರಿಗಣಿಸಲಾಗಿದೆ. ಹದಿಹರೆಯದವರು ವಾರದಲ್ಲಿ 3-4 ಸಲ ಹಸ್ತಮೈಥುನ ಮಾಡಿಕೊಳ್ಳುವುದು ಸಾಮಾನ್ಯವೆಂದು ಹೇಳಲಾಗುತ್ತದೆ. 30-40ರ ಹರೆಯದವರು ವಾರದಲ್ಲಿ 1-2 ಸಲ ಹಸ್ತಮೈಥುನ ಮಾಡಿಕೊಳ್ಳಬಹುದು. ಆದರೆ ಈ ಲೇಖನದಲ್ಲಿ ಹೇಳಲು ಹೊರಟಿರುವುದು ಹಸ್ತಮೈಥುನದಿಂದ ತೂಕ ಇಳಿಸಿಕೊಳ್ಳಬಹುದೇ ಎಂದು. ಇದನ್ನು ತಿಳಿಯಲು ನೀವು ಓದುತ್ತಾ ಸಾಗಿ...

   
 
ಹೆಲ್ತ್