Back
Home » Car News
ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!
DriveSpark | 6th Dec, 2018 07:16 PM
 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಈ ಹಿನ್ನೆಲೆ ನಿಸ್ಸಾಸ್ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಹೊಂದಿರುವ ಲೀಫ್ ಎಲೆಕ್ಟ್ರಿಕ್ ಹ್ಯಾ‌ಚ್‌ಬ್ಯಾಕ್ ಕಾರು ಆವೃತ್ತಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ಯೋಜನೆ ರೂಪಿಸುತ್ತಿದೆ. ಇದೀಗ ಕೆರಳಾದಲ್ಲಿನ ಒಂದು ಪಾರ್ಕಿಂಗ್ ಲಾಟ್‍ನಲ್ಲಿ ಕಾಣಿಸಿಕೊಂಡಿದ್ದು, ಈ ಕಾರು ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಹಲವು ಐಷಾರಾಮಿ ಕಾರುಗಳನ್ನು ಹಿಂದಿಕ್ಕಿ ಹೊಸ ದಾಖಲೆ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಪ್ರಿಮಿಯಂ ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ನಿಸ್ಸಾನ್ ಲೀಫ್ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ನಮೂನೆಯ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆಯು ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಲೀಫ್ ಕಾರ್‌ನ್ನು ಅಭಿವೃದ್ಧಿ ಮಾಡಿರುವ ನಿಸ್ಸಾನ್ ಸಂಸ್ಥೆಯು, ಇದುವರೆಗೆ ಯಾವುದೇ ಆಟೋ ಉತ್ಪಾದನಾ ಸಂಸ್ಥೆಗಳು ಬಳಸ ಸುಧಾರಿತ ಮಾದರಿಯ ಎಲೆಕ್ಟ್ಕಿಕ್ ಎಂಜಿನ್ ಅಳವಡಿಸಿರುವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಇದೇ ಕಾರಣಕ್ಕೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಬರೋಬ್ಬರಿ 378 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಿಕೊಂಡಿರುವ ನಿಸ್ಸಾನ್ ಸಂಸ್ಥೆಯು, 380 ಕಿಮಿ ಮೈಲೇಜ್ ರೇಂಜ್ ಹೊಂದಿರುವ ಟೆಸ್ಲಾ ಮಾಡೆಲ್ 3 ಕಾರಿಗಿಂತಲೂ ಅತ್ಯತ್ತಮ ಎಲೆಕ್ಟ್ರಿಕ್ ಕಾರು ಮಾದರಿ ಇದಾಗಿದೆ ಎಂದಿದೆ.

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಹೀಗಾಗಿ ಹೊಸ ಕಾರುಗಳ ಮೈಲೇಜ್ ವಿಚಾರವಾಗಿ ಇಡೀ ಆಟೋ ಉದ್ಯಮ ವಲಯವನ್ನೇ ಸೆಳೆದಿರುವ ನಿಸ್ಸಾನ್, ಲೀಫ್ ಎಲೆಕ್ಟ್ರಿಕ್ ಕಾರುಗಳ ಆವೃತ್ತಿ ಮೂಲಕ ಹೊಸ ಯುಗಾರಂಭ ಮಾಡುವುದು ಬಹುತೇಕ ಖಚಿತವಾಗಿದೆ.

  MOST READ: ಹಳೆಯ ಕೇಸ್‍ಗಳನ್ನು ಕ್ಲೋಸ್ ಮಾಡಲು ಟ್ರಾಫಿಕ್ ಪೊಲೀಸರಿಂದ ಭರ್ಜರಿ ಆಫರ್.!

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಇದಲ್ಲದೇ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಕುರಿತು ಪ್ರಚಾರಕ್ಕಾಗಿ ಎರಡು ಲೀಫ್ ಎಲೆಕ್ಟ್ರಿಕ್ ಕಾರುಗಳನ್ನು ಸಹ ಭಾರತದಲ್ಲಿ ಆಮದು ಮಾಡಿಕೊಳ್ಳಲಾಗಿದ್ದು, ಆಸಕ್ತ ಗ್ರಾಹಕರು ಟೆಸ್ಟ್ ಡ್ರೈವ್ ಮೂಲಕ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಅನುಭವ ಪಡೆದುಕೊಳ್ಳಬಹುದಾಗಿದೆ.

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಕಾರು ಬಿಡುಗಡೆಯ ಅವಧಿ
  ಎಕಾನಮಿಕ್ಸ್ ಟೈಮ್ಸ್ ವರದಿ ಪ್ರಕಾರ ಹೊಚ್ಚ ಹೊಸ ಲೀಫ್ ಕಾರುಗಳು 2019ರಲ್ಲಿ ಆರ್ಥಿಕ ವರ್ಷದ ಅವದಿಯಲ್ಲಿ ಬಿಡುಗಡೆಯಾಗಲಿರುವ ಈ ಕಾರು ಈಗಾಗಲೆ ಎಲೆಕ್ಟ್ರಿಕ್ ವಾಹನ ಪ್ರಿಯರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಕಾರಿನ ಬೆಲೆಗಳು(ಅಂದಾಜು)
  ಅತಿಹೆಚ್ಚು ಮೈಲೇಜ್ ರೇಂಜ್ ಹೊಂದಿರುವ ಲೀಫ್ ಕಾರುಗಳು ಐಷಾರಾಮಿ ಕಾರುಗಳ ಪಟ್ಟಿ ಸ್ಥಾನ ಪಡೆದಿದ್ದು, ಕಾರಿನ ಬೆಲೆಯು ರೂ.35 ಲಕ್ಷದಿಂದ ರೂ.40 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಆದ್ರೆ ಭಾರತದಲ್ಲೇ ಹೊಸ ಕಾರುಗಳು ನಿರ್ಮಾಣವಾದಲ್ಲಿ ಕಾರಿನ ಬೆಲೆಗಳು ಗಣನೀಯವಾಗಿ ತಗ್ಗಬಹುದು.

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಇನ್ನು ಲೀಫ್ ಕಾರುಗಳಲ್ಲಿ ಒದಗಿಸಲಾಗಿರುವ ವಿಶ್ವದರ್ಜೆ ಸೌಲಭ್ಯಗಳು ಕಾರಿನ ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಿದ್ದು, ಕಾರಿನ ಹೊರ ಮತ್ತು ಒಳ ವಿನ್ಯಾಸಗಳು ಸಾಕಷ್ಟು ಆಕರ್ಷಣೆಯಿಂದ ಕೂಡಿರುವುದಲ್ಲದೇ ಸ್ಪೋರ್ಟಿ ಲುಕ್ ಸಹ ಪಡೆದುಕೊಂಡಿವೆ.

  MOST READ: ಆರ್‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

 • ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

  ಒಟ್ಟಿನಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗುತ್ತಿರುವ ಲೀಫ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲೂ ಬಿಡುಗಡೆಯಾಗುವುದು ಖಚಿತವಾಗಿದ್ದು, ಲೀಫ್ ಬಿಡುಗಡೆಯ ನಂತರ ಹಲವು ಮಾದರಿಯ ಐಷಾರಾಮಿ ಕಾರುಗಳು ಉತ್ಪಾದನೆಯಿಂದ ಹಿಂದೆ ಸರಿಯಬಹುದಾದ ಸಾಧ್ಯತೆಗಳು ಕೂಡಾ ಇವೆ.

  Source: Team bhp
ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಸ್ಟ್ ಎಲೆಕ್ಟ್ರಿಕ್ ಕಾರುಗಳ ಮಾರಾಟ ಸಂಸ್ಥೆಯೆಂದೇ ಜನಪ್ರಿಯವಾಗುತ್ತಿರುವ ನಿಸ್ಸಾನ್ ಸಂಸ್ಥೆಯು ಸದ್ಯ ಭಾರತದಲ್ಲೂ ತನ್ನ ಯಶಸ್ವಿ ಲೀಫ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು, ಹತ್ತು ಹಲವು ಹೊಸ ಸೌಲಭ್ಯವನ್ನು ಈ ಕಾರು ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಲ್ತ್