Back
Home » ಸಿನಿ ಸಮಾಚಾರ
ತಮನ್ನಾಗೆ ಕೋಕ್, ಹೊಸ ನಟಿ ಜೊತೆ ಮತ್ತೆ 'ಕೆಜಿಎಫ್' ಸಾಂಗ್ ಶೂಟಿಂಗ್.!
Oneindia | 6th Dec, 2018 02:09 PM
 • ಮತ್ತೆ ಕೆಜಿಎಫ್ ಸಾಂಗ್ ಶೂಟಿಂಗ್

  ಕೆಜಿಎಫ್ ಚಿತ್ರದಲ್ಲಿ ತಮನ್ನಾ ಡ್ಯಾನ್ಸ್ ಮಾಡಿದ್ದ ಹಾಡಿಗೆ ಬಾಲಿವುಡ್ ಮಂದಿ ಬ್ರೇಕ್ ಹಾಕಿದ್ದಾರೆ. ಚಿತ್ರದಿಂದ ಈ ಹಾಡನ್ನ ಕೈಬಿಟ್ಟಿರುವ ಹಿಂದಿ ವಿತರಕರು ಹೊಸ ಹಾಡನ್ನ ಮತ್ತು ಹೊಸ ನಟಿಯೊಂದಿಗೆ ಶೂಟ್ ಮಾಡಲು ನಿರ್ಧರಿಸಿದ್ದಾರೆ.

  ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!


 • ಹಿಂದಿಯಲ್ಲಿ ಇರಲ್ಲ 'ಜೋಕೆ ನಾನು ಬಳ್ಳಿಯ ಮಿಂಚು'

  1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಪರೋಪಕಾರಿ' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡನ್ನ 'ಕೆ.ಜಿ.ಎಫ್' ಸಿನಿಮಾದಲ್ಲಿ ಬಳಸಲಾಗಿತ್ತು. ಈ ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದರು. ಐದು ಭಾಷೆಯಲ್ಲಿ ಈ ಸಿನಿಮಾ ಬರ್ತಿದ್ದ ಕಾರಣ ಬಹುಶಃ ಅದೇ ಹಾಡನ್ನ ಉಳಿಸಿಕೊಂಡಿದ್ದರು. ಬಟ್, ಇದೀಗ, ಹಿಂದಿಯಲ್ಲಿ ಈ ಹಾಡನ್ನ ಬದಲಾಯಿಸಿದ್ದಾರೆ.

  ಕೆ.ಜಿ.ಎಫ್ ಹಾಡಿನಲ್ಲಿ ಸೊಂಟ ಬಳುಕಿಸಲು ತಮನ್ನಾ ಪಡೆದ ಸಂಭಾವನೆ ಇಷ್ಟೇನಾ.?


 • 'ತ್ರಿದೇವ್' ಚಿತ್ರದ ಹಾಡು ಬಳಕೆ

  'ಜೋಕೆ ನಾನು ಬಳ್ಳಿಯ ಮಿಂಚು' ಹಾಡಿನ ಬದಲು 1989ರಲ್ಲಿ ತೆರೆಕಂಡಿದ್ದ ತ್ರಿದೇವ್ ಚಿತ್ರದ 'ಗಲಿ ಗಲಿ ಮೇ...' ಹಾಡನ್ನ ರಿ-ಕ್ರಿಯೇಟ್ ಮಾಡುತ್ತಿದ್ದಾರಂತೆ. ಜಾಕಿ ಶ್ರಾಫ್ ಹಾಗೂ ಸಂಗೀತಾ ಬಿಜಲಾನಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆ ಕಾಲಕ್ಕೆ ಇದು ಸೂಪರ್ ಹಿಟ್ ಆಗಿದ್ದ ಹಾಡು, ಹಾಗಾಗಿ, ಹಿಂದಿ ಅವತರಣಿಕೆಯಲ್ಲಿ ಈ ಹಾಡು ಬಳಸಲು ಮುಂದಾಗಿದ್ದಾರೆ.


 • ತಮನ್ನಾ ಬದಲು ಮೌನಿ ರಾಯ್

  ಅಂದ್ಹಾಗೆ, ಕನ್ನಡ ವರ್ಷನ್ ನಲ್ಲಿ ತಮನ್ನಾ ಕುಣಿದಿದ್ದ ಹಾಡು ಇದಾಗಿದ್ದು, ಇಲ್ಲಿ ತಮನ್ನಾ ಬದಲು ಬಾಲಿವುಡ್ ಖ್ಯಾತ ನಟಿ ಮೌನಿ ರಾಯ್ ಡ್ಯಾನ್ಸ್ ಮಾಡಲಿದ್ದಾರೆ. ಯಶ್ ಮತ್ತು ಮೌನಿ ರಾಯ್ ಜೋಡಿಯ ಹಾಡನ್ನ ಮತ್ತೆ ರೀ-ಶೂಟ್ ಮಾಡಲಾಗ್ತಿದೆ.


 • ಡಿಸೆಂಬರ್ 7 ರಂದು ಶೂಟಿಂಗ್

  ಸದ್ಯ, ಕೆಜಿಎಫ್ ಚಿತ್ರದ ಪ್ರಚಾರಕ್ಕಾಗಿ ಮುಂಬೈನಲ್ಲಿರುವ ಯಶ್, ಅಲ್ಲಿಯೇ ಸಾಂಗ್ ಶೂಟಿಂಗ್ ಮುಗಿಸಲಿದ್ದಾರಂತೆ. ಡಿಸೆಂಬರ್ 7 ಮತ್ತು 8 ಎರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಡಿಸೆಂಬರ್ 9 ರಂದು ಹೈದರಬಾದ್ ನಲ್ಲಿ ನಡೆಯಲಿರುವ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಯಶ್ ಆಗಮಿಸಲಿದ್ದಾರೆ.


 • ಡಿಸೆಂಬರ್ 21ಕ್ಕೆ ಬಿಡುಗಡೆ?

  ಇಷ್ಟು ಕಡಿಮೆ ಸಮಯದಲ್ಲಿ ಮತ್ತೆ ಸಾಂಗ್ ಶೂಟಿಂಗ್ ಗೆ ಹೋಗುತ್ತಿರುವುದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಆದ್ರೆ, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಘೋಷಿಸಿರುವಂತೆ ಡಿಸೆಂಬರ್ 21ಕ್ಕೆ ಕೆಜಿಎಫ್ ಎಲ್ಲಾ ಭಾಷೆಯಲ್ಲೂ ಬರಲಿದೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಹಾಗ್ನೋಡಿದ್ರೆ, ಇನ್ನು 15 ದಿನಗಳು ಮಾತ್ರ ಬಾಕಿ ಇದೆ.

ಈಗಾಗಲೇ ಎರಡು ಟ್ರೈಲರ್, ಒಂದು ಹಾಡು ರಿಲೀಸ್ ಮಾಡಿರುವ ಕೆಜಿಎಫ್, ಪ್ರಚಾರ ಕೆಲಸಗಳನ್ನ ತೊಡಗಿಕೊಂಡಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್ ಆಗ್ತಿರುವುದರಿಂದ ಚಿತ್ರತಂಡ ತುಂಬಾ ಬ್ಯುಸಿ ಇದೆ.

ತಮನ್ನಾಗೂ ಮುಂಚೆ 'ಕೆಜಿಎಫ್' ಹಾಡಿನಲ್ಲಿ ಈ ನಟಿ ಕುಣಿಯಬೇಕಿತ್ತು.?

ಥಿಯೇಟರ್ ಗಳನ್ನ ಅಂತಿಮ ಮಾಡ್ತಿರುವ ಈ ಸಮಯದಲ್ಲಿ ಬಹುದೊಡ್ಡ ಬದಲಾವಣೆಯೊಂದಕ್ಕೆ ಕೆಜಿಎಫ್ ತಂಡ ಕೈಹಾಕಿದೆ. ಹೌದು, ಕೆಜಿಎಫ್ ಹಾಡನ್ನ ಮತ್ತೊಮ್ಮೆ ಶೂಟ್ ಮಾಡಲು ನಿರ್ಧರಿಸಿದ್ದು, ಸ್ಟಾರ್ ನಟಿಯೊಬ್ಬರನ್ನ ಕರೆತಂದಿದ್ದಾರೆ. ಏನಿದು ಅಂತಿಮ ಕ್ಷಣದಲ್ಲಿ ಟ್ವಿಸ್ಟ್? ಮುಂದೆ ಓದಿ....

   
 
ಹೆಲ್ತ್