Back
Home » Car News
ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!
DriveSpark | 6th Dec, 2018 02:26 PM
 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  ಸದ್ಯ ಭಾರತದಲ್ಲಿ ಹಲವಾರು ವಾಹನ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಪ್ಯಾಸೆಂಜರ್ ವೆಹಿಕಲ್, ಕಮರ್ಷಿಲ್ ವೆಹಿಕಲ್ ಮತ್ತು ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಮಾರುತಿ ಸುಜುಕಿ ಮತ್ತೆ ಅಗ್ರಸ್ಥಾನವನ್ನು ತನ್ನದಾಸಿಕೊಂಡಿದೆ. ನಂತರದ ಸ್ಥಾನದಲ್ಲಿರುವ ಹ್ಯುಂಡೈ ಸಂಸ್ಥೆಯು ಈ ಬಾರಿ ಸ್ಯಾಂಟ್ರೋ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದೆ. ಹಾಗಾದ್ರೆ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಯಾವ ಕಾರು ಎಷ್ಟನೇ ಸ್ಥಾನದಲ್ಲಿದೆ ಎಂದು ತಿಳಿಯಲು ಮುಂದೆ ಓದಿ..

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  01. ಮಾರುತಿ ಸ್ವಿಫ್ಟ್
  ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೇವರಿಟ್ ಎಂದೇ ಜನಪ್ರಿಯವಾಗಿರುವ ಸ್ವಿಫ್ಟ್ ಕಾರುಗಳು ನವೆಂಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದ್ದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರೀ ಬೇಡಿಕೆ ದಾಖಲಿಸಿದೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  ನವೆಂಬರ್ ಅವಧಿಯಲ್ಲಿ ಬರೋಬ್ಬರಿ 22,191 ಸ್ವಿಫ್ಟ್ ಕಾರುಗಳು ಮಾರಾಟಗೊಂಡಿದ್ದು, ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ವಿಫ್ಟ್ ಕಾರುಗಳು 2018ರ ಎಕ್ಸ್‌ಪೋದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದವು.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  02. ಮಾರುತಿ ಡಿಜೈರ್
  ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಡಿಜೈರ್ ಕಾರುಗಳು ಕಳೆದ 8 ತಿಂಗಳಿನಿಂದ ಮಾರಾಟದಲ್ಲಿ ಅಗ್ರಸ್ಥಾನದಲ್ಲಿತ್ತು. ಆದ್ರೆ ಹೋಂಡಾ ನ್ಯೂ ಅಮೇಜ್ ಕಾರುಗಳು ಉತ್ತಮ ಪೈಪೋಟಿ ನೀಡುತ್ತಿದ್ದು, ಅದರ ಹೊರತಾಗಿಯೂ ನವೆಂಬರ್ ಅವಧಿಯಲ್ಲಿ ಹೊಸ ಡಿಜೈರ್ 21,037 ಕಾರುಗಳು ಮಾರಾಟಗೊಂಡಿವೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  03. ನೆಕ್ಸಾ ಬಲೆನೊ
  2016ರಲ್ಲಿ ಮೊದಲ ಬಾರಿಗೆ ಬಿಡುಗೊಂಡ ಬಲೆನೊ ಕಾರುಗಳು ಸಹ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ನವೆಂಬರ್ ಅವಧಿಯಲ್ಲಿ 18,649 ಕಾರುಗಳು ಮಾರಾಟಗೊಂಡಿವೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  04. ಮಾರುತಿ ಆಲ್ಟೋ
  ಬಿಡುಗಡೆಗೊಂಡ ನಂತರ ಹಲವು ವರ್ಷಗಳ ನಂತರವು ಒಂದೇ ರೀತಿಯಾದ ಬೇಡಿಕೆಯನ್ನು ಉಳಿಸಿಕೊಂಡ ಬಂದಿರುವ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಆಲ್ಟೋ ಕಾರು ಸರಣಿ ಸಹ ಒಂದು. ಆಲ್ಟೋ 800 ಮತ್ತು ಆಲ್ಟೋ ಕೆ10 ಎಂಬ ಮಾದರಿಯಲ್ಲಿ ಖರೀದಿಗೆ ಲಭ್ಯವಿರುವ ಆಲ್ಟೋ ನವೆಂಬರ್ ಅವಧಿಯಲ್ಲಿ 18,643 ಕಾರುಗಳು ಮಾರಾಟಗೊಂಡಿವೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  05. ಮಾರುತಿ ವಿಟಾರಾ ಬ್ರೆಝಾ
  ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಬ್ರೇಝಾ ಕಾರುಗಳು ಕಳೆದ ಮೇ ತಿಂಗಳಿನಲ್ಲಿ ಬಿಡುಗಡೆಯಾದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಿಂದಾಗಿ ಮಾರಾಟಕ್ಕೆ ಪೂರಕವಾಗಿದ್ದು, ನವೆಂಬರ್ ಅವಧಿಯಲ್ಲಿ 14,378 ಕಾರುಗಳು ಮಾರಾಟಗೊಂಡಿವೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  06. ಮಾರುತಿ ವ್ಯಾಗನ್ಆರ್
  ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಕಾರು ಸಹ ಪ್ರಮುಖ ಮಾದರಿಯಾಗಿದೆ. ಪ್ರಥಮ ಬಾರಿಗೆ ಬಿಡುಗಡೆಯಾದ ನಂತರ ಕಳೆದ ತಿಂಗಳ ಹಿಂದಷ್ಟೇ 20 ಲಕ್ಷ ಕಾರು ಮಾರಾಟ ಗುರಿತಲುಪಿರುವ ವ್ಯಾಗನ್ ಆರ್ ಕಾರುಗಳು ನವೆಂಬರ್ ಅವಧಿಯಲ್ಲಿ 11,311 ಕಾರುಗಳು ಮಾರಾಟವಾಗಿವೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  07. ಹ್ಯುಂಡೈ ಐ20
  ಮಾರುತಿ ಸುಜುಕಿ ನಂತರ ಭಾರತದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ಸಂಸ್ಥೆಯಾಗಿರುವ ಹ್ಯುಂಡೈ ಸಂಸ್ಥೆಯು ಕೂಡಾ ಟಾಪ್ 10 ಕಾರು ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಅಕ್ಟೋಬರ್ ಅವಧಿಯಲ್ಲಿ 10,555 ಐ20 ಕಾರುಗಳನ್ನು ಮಾರಾಟಮಾಡಿದೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  08. ಹ್ಯುಂಡೈ ಕ್ರೆಟಾ
  ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಆವೃತ್ತಿಯು ಬಿಡುಗಡೆಯ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮಾರುತಿ ಸುಜುಕಿ ಬ್ರೆಝಾ ಕಾರಿಗೆ ತೀವ್ರ ಪೈಪೋಟಿಯೊಂದಿಗೆ ನವೆಂಬರ್ ಅವಧಿಯಲ್ಲಿ 9,677 ಕ್ರೆಟಾ ಕಾರುಗಳು ಮಾರಾಟಗೊಂಡಿವೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  09. ಹ್ಯುಂಡೈ ಗ್ರಾಂಡ್ ಐ10
  ಹೊಸ ತಲೆಮಾರಿನ ಸ್ವಿಫ್ಟ್ ಕಾರುಗಳನ್ನು ಬಿಡುಗಡೆ ನಂತರ ಐ10 ಕಾರುಗಳ ಮಾರಾಟಕ್ಕೆ ಹೊಡೆದ ಬಿದ್ದಿದ್ದು, ನವೆಂಬರ್ ಅವಧಿಯಲ್ಲಿ 9252 ಕಾರುಗಳ ಮಾರಾಟದೊಂದಿಗೆ ಟಾಪ್ 10ರ ಲಿಸ್ಟ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿತ ಕಂಡಿದೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  10. ಹ್ಯುಂಡೈ 2018 ಸ್ಯಾಂಟ್ರೋ
  ಹ್ಯುಂಡೈ ಸಂಸ್ಥೆಯ ಬಹುನೀರಿಕ್ಷಿತ ಹೊಸ ಸ್ಯಾಂಟ್ರೋ ಕಾರು ಅಕ್ಟೋಬರ್ ಕೊನೆಯಲ್ಲಿ ಬಿಡುಗಡೆಯಾಗಿದ್ದು, ಇದುವರೆಗೆ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಕಾರು ಪೂರೈಕೆ ಮಾಡಲು ಪರದಾಡುತ್ತಿರುವ ಹ್ಯುಂಡೈ ಸದ್ಯ ಸ್ಯಾಂಟ್ರೋ ಬುಕ್ಕಿಂಗ್ ಪ್ರಕ್ರಿಯೆಗೆ ಬ್ರೇಕ್ ಹಾಕಿದೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  ಬಿಡುಗಡೆಯ ನಂತರ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದರೂ ಸಹ ಕೇವಲ 9,009 ಕಾರುಗಳನ್ನು ಮಾತ್ರ ಮಾರಾಟ ಮಾಡಿರುವ ಹ್ಯುಂಡೈ ಸಂಸ್ಥೆಯು ಕಾರು ಮಾರಾಟದಲ್ಲಿ 10ಕ್ಕೆ ತೃಪ್ತಿಪಟ್ಟುಕೊಂಡಿದೆ.

 • ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

  ನೀರಿಕ್ಷೆಗೂ ಮೀರಿ ಬೇಡಿಕೆ ಇದ್ದರೂ ಸಹ ಸ್ಯಾಂಟ್ರೋ ಕಾರು ಉತ್ಪಾದನಾ ಪ್ರಮಾಣವು ಕಡಿಮೆಯಿರುವ ಹಿನ್ನೆಲೆಯಲ್ಲಿ ಕಾರು ಪೂರೈಕೆಯು ದೊಡ್ಡ ಸವಾಲಾಗಿದ್ದು, ಇದರಿಂದ ಡಿಸೆಂಬರ್ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸ್ಯಾಂಟ್ರೋ ಉತ್ಪಾದನೆ ಮಾಡಿ ಮಾರಾಟ ಮಾಡುವ ಯೋಜನೆಗೆ ಹ್ಯುಂಡೈ ಚಾಲನೆ ನೀಡಿದೆ.
ದೇಶಿಯ ಮಾರುಕಟ್ಟೆಯಲ್ಲಿ ವಾಹನಗಳ ಬೆಲೆ ಹೆಚ್ಚಳದ ಬಿಸಿ, ತೈಲ ಬೆಲೆ ಏರಿಕೆ ಮತ್ತು ಬೀಡಿಭಾಗಗಳ ಬೆಲೆಯಲ್ಲಿ ಭಾರೀ ಏರಿಕೆಯ ಹೊರತಾಗಿಯು ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, ನವೆಂಬರ್ ಅವಧಿಯಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಕಾರು ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿವೆ.

ಹೆಲ್ತ್