Back
Home » ಸಿನಿ ಸಮಾಚಾರ
'ಬೆಲ್ ಬಾಟಂ' ಚಿತ್ರಕ್ಕೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ
Oneindia | 6th Dec, 2018 05:50 PM

'ಕಿರಿಕ್ ಪಾರ್ಟಿ', 'ರಿಕ್ಕಿ', 'ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೂಡು' ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಚೊಚ್ಚಲ ಭಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ 'ಬೆಲ್ ಬಾಟಂ'.

ಸದ್ಯ, ಪೋಸ್ಟರ್ ಮತ್ತು ಮೇಕಿಂಗ್ ಮೂಲಕ ಸದ್ದು ಮಾಡ್ತಿರುವ 'ಬೆಲ್ ಬಾಟಂ' ಸಿನಿಮಾ ಈಗ ಟೀಸರ್ ಬಿಡುಗಡೆ ಮಾಡ್ತಿದೆ. ಡಿಸೆಂಬರ್ 7 ರಂದು ಬೆಳಿಗ್ಗೆ 10 ಗಂಟೆಗೆ 'ಬೆಲ್ ಬಾಟಂ' ಟೀಸರ್ ರಿಲೀಸ್ ಆಗ್ತಿದ್ದು, ನಟ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ.

ಗುಡ್ ನ್ಯೂಸ್ ಕೊಟ್ಟ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ

ರಿಷಬ್ ಈ ಚಿತ್ರದಲ್ಲಿ ಡಿಟೆಕ್ಟಿವ್ ದಿವಾಕರ್ ಪಾತ್ರ ನಿರ್ವಹಿಸಿದ್ದು, ಜಯತೀರ್ಥ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.

ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ತೀನಿ ಎಂದ ರಾಕಿಂಗ್ ಸ್ಟಾರ್

ಈಗಾಗಲೇ ಜೇಮ್ಸ್ ಬಾಂಡ್ ಶೈಲಿಯಲ್ಲಿ ಟೀಸರ್ ಪರಿಚಯಿಸುವ ಪೂರ್ವ ಟೀಸರ್ ಒಂದು ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿತ್ತು.

'ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೂಡು' ಚಿತ್ರದ ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ, ಬಾಲಿವುಡ್ ಕಥೆಯೊಂದು ಸಿದ್ಧಪಡಿಸುತ್ತಿದ್ದಾರೆ. ಅಂದ್ಹಾಗೆ, ರಕ್ಷಿತ್ ಶೆಟ್ಟಿ ಸ್ನೇಹಿತರಾಗಿ ರಿಷಬ್, ಆರಂಭದಿಂದಲೂ ಜೊತೆಯಲ್ಲಿದ್ದಾರೆ. ಇಷ್ಟು ದಿನ ರಕ್ಷಿತ್ ಸಿನಿಮಾಗೆ ರಿಷಬ್ ಸಾಥ್ ನೀಡಿದ್ದು, ಈಗ ರಿಷಬ್ ಸಿನಿಮಾಗೆ ರಕ್ಷಿತ್ ಸಾಥ್ ಕೊಡ್ತಿದ್ದಾರೆ.

   
 
ಹೆಲ್ತ್