Back
Home » ಸಿನಿ ಸಮಾಚಾರ
ಈ ಶುಕ್ರವಾರ ದೊಡ್ಡವರ ಜೊತೆಗೆ ಸಣ್ಣವರ ಕಾಳಗ
Oneindia | 6th Dec, 2018 05:42 PM
 • ಭೈರವಗೀತಾ

  ಡಾಲಿಯ ನಂತರ ಧನಂಜಯ್ ಭೈರವನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಭೈರವಗೀತಾ' ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ನಾಳೆ ಕನ್ನಡದಲ್ಲಿ ತೆರೆಗೆ ಬರುತ್ತಿದೆ. ರಾಮ್ ಗೋಪಾಲ್ ವರ್ಮ ಶಿಷ್ಯ ಸಿದ್ದಾರ್ಥ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇರಾ ಈ ಚಿತ್ರದ ನಾಯಕಿ.


 • ಆರೆಂಜ್

  ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಗಣೇಶ್ ಮತ್ತು 'ಆರೆಂಜ್' ಮೂಲಕ ಒಂದಾಗಿದ್ದಾರೆ. ಈ ಸಿನಿಮಾ ಈ ಶುಕ್ರವಾರ ರಿಲೀಸ್ ಆಗುತ್ತಿದೆ. 'ರಾಜಕುಮಾರ' ಬಳಿಕ ಪ್ರಿಯಾ ಆನಂದ್ ಮತ್ತೆ ಇಲ್ಲಿ ಕಾಣಿಸಿಕೊಂಡಿದ್ದಾರೆ. ಮನರಂಜನೆಯ ಅಂಶಗಳನ್ನು ಈ ಸಿನಿಮಾ ಹೊಂದಿದೆ. ತ್ರಿವೇಣಿ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ ಚಿತ್ರ ಬಿಡುಗಡೆಯಾಗುತ್ತಿದೆ.


 • ಮುಂದಿನ ಬದಲಾವಣೆ

  ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ 'ಮುಂದಿನ ಬದಲಾವಣೆ' ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರಕ್ಕೆ ಕೋಟಿಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ, ರಮೇಶ್ ಕುಮಾರ್ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ, ಚಿತ್ರಕಥೆ ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಪ್ರವೀಣ್ ಭೂಷಣ್ ಹೊತ್ತಿದ್ದಾರೆ. ತಾರಾಗಣದಲ್ಲಿ ಪ್ರವೀಣ್ ಭೂಷಣ್, ಸಂಗೀತ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್ ಗೌಡ ಮುಂತಾದವರಿದ್ದಾರೆ.


 • ಚರಂತಿ

  ರಾವಲ್ ಸಿನಿ ಫೋಕಸ್ ಲಾಂಛನದಲ್ಲಿ ಪರಶುರಾಮ್ ರಾವಲ್ ನಿರ್ಮಾಣದ 'ಚರಂತಿ' ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ. ತಾರಾಗಣದಲ್ಲಿ ಮಹೇಶ್ ರಾವಲ್, ಸಚಿನ್ ಪುರೋಹಿತ್, ಪ್ರೇಮಾಚೆರಿ, ಆರ್ ಮಾಸ್, ರೇಖಾದಾಸ್, ಎಂ.ಎನ್. ಸುರೇಶ್, ವಿಜಯ್, ಸದಾನಂದ ಕಾಳೆ, ರಾಜಪ್ಪ ದಳವಾಯಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಕಥೆ ನಿರ್ದೇಶನವನ್ನು ಮಹೇಶ್ ರಾವಲ್ ಮಾಡಿದ್ದಾರೆ.
ಈ ಶುಕ್ರವಾರ ನಾಲ್ಕು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. 'ಕೆಜಿಎಫ್' ಈ ತಿಂಗಳ ಕೊನೆಗೆ ಬರುತ್ತಿದ್ದು, ಅದಕ್ಕೂ ಮುಂಚೆ ಈ ಸಿನಿಮಾಗಳು ಚಿತ್ರಮಂದಿರಕ್ಕೆ ಆಗಮಿಸುತ್ತಿವೆ.

ನಟ ಧನಂಜಯ್ ಅವರ ನಿರೀಕ್ಷಿತ ಸಿನಿಮಾ 'ಭೈರವಗೀತಾ', ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಆರೆಂಜ್' ನಾಳೆ ರಿಲೀಸ್ ಆಗುತ್ತಿರುವ ಸಿನಿಮಾಗಳಾಗಿವೆ. ಈ ಎರಡು ಸಿನಿಮಾಗಳ ಎದುರು ಹೊಸಬರ 'ಚರಂತಿ' ಹಾಗೂ 'ಮುಂದಿನ ಬದಲಾವಣೆ' ಎಂಬ ಎರಡು ಹೊಸ ಚಿತ್ರತಂಡದ ಚಿತ್ರಗಳು ಬಿಡುಗಡೆಯಾಗುತ್ತಿವೆ.

ರಾಮ್ ಗೋಪಾಲ್ ವರ್ಮಾಗೆ ಡಿಸ್ಟರ್ಬ್ ಮಾಡಿದ ನಟಿ: ಈಕೆ ಯಾರು.?

ಅಂದಹಾಗೆ, ಈ ವಾರ ರಿಲೀಸ್ ಆಗುತ್ತಿರುವ ನಾಲ್ಕು ಕನ್ನಡ ಸಿನಿಮಾಗಳ ವಿವರ ಮುಂದಿದೆ ಓದಿ..

   
 
ಹೆಲ್ತ್