Back
Home » ಸಿನಿ ಸಮಾಚಾರ
ಹೌದು ಸ್ವಾಮಿ ! ಈ ಹುಡುಗನೇ ಕೆಜಿಎಫ್ ನ ಸದ್ಯದ ಸೆನ್ಸೇಷನ್
Oneindia | 6th Dec, 2018 06:02 PM
 • ರಿತ್ವಿಕ್ ಗೌಡ

  'ಕೆಜಿಎಫ್' ಸಿನಿಮಾದ ಸಣ್ಣ ಡೈಲಾಗ್ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಹುಡುಗನ ಹೆಸರು ರಿತ್ವಿಕ್ ಗೌಡ. ಹೆಣ್ಣೂರು ನಿವಾಸಿಗಳಾದ ಶ್ರುತಿ ಹಾಗೂ ಸುನೀಲ್ ಕುಮಾರ್ ದಂಪತಿಯ ಪುತ್ರ. ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಈ ಹುಡುಗ 4ನೇ ತರಗತಿ ಓದುತ್ತಿದ್ದಾನೆ. 'ಕೆಜಿಎಫ್' ಈತನ ಮೊದಲ ಸಿನಿಮಾವಾಗಿದೆ.

  ತಮನ್ನಾಗೆ ಕೋಕ್, ಹೊಸ ನಟಿ ಜೊತೆ ಮತ್ತೆ 'ಕೆಜಿಎಫ್' ಸಾಂಗ್ ಶೂಟಿಂಗ್.!


 • ಶಿವಣ್ಣನ ಅಪ್ಪಟ್ಟ ಅಭಿಮಾನಿ

  ರಿತ್ವಿಕ್ ಗೌಡ ನಟ ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಂತೆ. 'ಜೋಗಿ' ಹಾಗೂ 'ಜೋಗಯ್ಯ' ಸಿನಿಮಾಗಳನ್ನು ಅದೆಷ್ಟೋ ಬಾರಿ ನೋಡಿದ್ದಾನಂತೆ. ಶಿವರಾಜ್ ಕುಮಾರ್ ರೀತಿಯೇ ಡ್ಯಾನ್ಸ್ ಮಾಡುವ ಈ ಹುಡುಗ ಅವರ ಹುಟ್ಟುಹಬ್ಬಕ್ಕೆ ಒಂದು ಆಲ್ಬಂ ಹಾಡನ್ನು ಮಾಡಿದ್ದ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ರಿತ್ವಿಕ್ ಗೆ ಶಿವಣ್ಣನೇ ಸ್ಫೂರ್ತಿ.


 • 'ಕೆಜಿಎಫ್' ಅವಕಾಶ ಸಿಕ್ಕಿದ್ದು ಹೇಗೆ ?

  ರಿತ್ವಿಕ್ ಮಾಡಲಿಂಗ್ ಕ್ಲಾಸ್ ಗೆ ಹೊಗುತ್ತಿದ್ದರಂತೆ. ಅಲ್ಲಿಂದ 'ಕೆಜಿಎಫ್' ಸಿನಿಮಾಗೆ ಆಡಿಷನ್ ಇರುವ ವಿಷಯ ತಿಳಿದಿದೆ. ಆಡಿಷನ್ ನಲ್ಲಿ 600 ಮಕ್ಕಳು ಭಾಗಿಯಾಗಿದ್ದು, ಅದರಲ್ಲಿ ರಿತ್ವಿಕ್ ಕೂಡ ಒಬ್ಬರಾಗಿದ್ದರು. 600 ಮಕ್ಕಳಲ್ಲಿ ರಿತ್ವಕ್ ಸೇರಿದಂತೆ 20 ಮಕ್ಕಳ ಮಾತ್ರ ಚಿತ್ರಕ್ಕೆ ಆಯ್ಕೆ ಆದರು. ಅದರಲ್ಲಿ ರಿತ್ವಿಕ್ ಹಾಗೂ ಇನ್ನೊಬ್ಬ ಹುಡುಗನಿಗೆ ಮಾತ್ರ ಡೈಲಾಗ್ ಇರುವ ಪಾತ್ರ ಸಿಕ್ಕಿದೆ.


 • 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ನಟನೆ

  ರವಿಚಂದ್ರನ್ ಅವರ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿಯೂ ರಿತ್ವಿಕ್ ಅವರು ಕಾಣಿಸಿಕೊಂಡಿದ್ದಾರೆ. ಎರಡು ವರ್ಷ ಇರುವಾಗಿನಿಂದ ಶಿವಣ್ಣ ಸಿನಿಮಾ ನೋಡಿ ಈ ಹುಡುಗ ಬೆಳೆದಿದ್ದಾನೆ. ಮನೆಯಲ್ಲಿ ತುಂಬ ಸೈಲೆಂಟ್ ಇರುವ ಈ ಹುಡುಗ, ಓದುವುದರಲ್ಲಿ ಟಾಪರ್ ಅಂತೆ. ಆಕ್ಟಿಂಗ್ ಗಿಂತ ಡ್ಯಾನ್ಸ್ ತುಂಬ ಇಷ್ಟ ಪಡುತ್ತಾನಂತೆ.


 • ಹೊಂಬಾಳೆ ಫಿಲ್ಮ್ಸ್ ಗೆ ಧನ್ಯವಾದ

  ಚಿತ್ರದಲ್ಲಿ ಮಗನಿಗೆ ಅವಕಾಶ ನೀಡಿದ ಹೊಂಬಾಳೆ ಫಿಲ್ಮ್ಸ್ ಗೆ ರಿತ್ವಿಕ್ ತಾಯಿ ಧನ್ಯವಾದ ಹೇಳಿದ್ದಾರೆ. ತುಂಬ ಒಳ್ಳೆಯ ಪಾತ್ರವನ್ನು ಪ್ರಶಾಂತ್ ನೀಲ್ ನೀಡಿದ್ದಾರೆ. ಡೈಲಾಗ್, ಕಾಸ್ಟೂಮ್ ಹೀಗೆ ಎಲ್ಲ ಹೇಳಿ ಕೊಟ್ಟ ಪುನೀತ್ ಸೇರಿದಂತೆ ಪ್ರತಿಯೊಬ್ಬರಿಗೆ ಥ್ಯಾಂಕ್ಯು ಹೇಳಿದ್ದಾರೆ. ಸಣ್ಣ ಹುಡುಗನಾದರೂ ಶೂಟಿಂಗ್ ನಲ್ಲಿ ಪ್ರತಿಯೊಂದು ಸೌಲಭ್ಯ ನೀಡಿದ್ದನ್ನ ಅವರು ಮತ್ತೆ ನೆನಪು ಮಾಡಿಕೊಂಡರು.
'ಕೆಜಿಎಫ್' ಟ್ರೇಲರ್ ನೋಡಿದವರಲ್ಲಿ ಎಲ್ಲರಿಗೂ ಯಶ್ ಇಷ್ಟ ಆಗಿದ್ದಾರೆ. ಆದರೆ, ಯಶ್ ರೀತಿಯೇ ಟ್ರೇಲರ್ ನಲ್ಲಿ ಇನ್ನೊಬ್ಬ ಹುಡುಗ ಗಮನ ಸೆಳೆದಿದ್ದಾನೆ. ಒಂದೇ ಒಂದು ಡೈಲಾಗ್ ಇದ್ದರೂ ಆ ಹುಡುಗ ಹೇಳಿರುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ.

''ಎಲ್ಲ ಸಿನಿಮಾಗಳಲ್ಲಿಯೂ ಒಬ್ಬ ಇರ್ತಾನಂತಲ್ಲ ನಿನ್ನುನ್ನ ನೋಡಿದ್ರೆ ಹಾಗೆ ಅನ್ಸುತ್ತೆ.. ಯಾರು ನೀನು ಹೀರೋ ನಾ ? ಎಂದಾಗ ಈ ಹುಡುಗ ''ಅಲ್ಲ ವಿಲನ್..'' ಎನ್ನುತ್ತಾನೆ.

ಈ ಡೈಲಾಗ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಬಗ್ಗೆ ಟ್ರೋಲ್ ಆಗುತ್ತಿದೆ. ಇದ್ದಕ್ಕಿದ್ದ ಹಾಗೆ ಈ ಹುಡುಗ ದೊಡ್ಡ ಜನಪ್ರಿಯತೆ ಪಡೆದಿದ್ದಾನೆ. ಈ ರೀತಿ 'ಕೆಜಿಎಫ್' ಟ್ರೇಲರ್ ನಲ್ಲಿ ಗಮನ ಸೆಳೆದಿರುವ ರಿತ್ವಿಕ್ ಬಗ್ಗೆ ಅವರ ತಾಯಿ ಶ್ರುತಿ ಸಂತಸ ಹಂಚಿಕೊಂಡಿದ್ದಾರೆ.

'ಕೆಜಿಎಫ್' ಡೈಲಾಗ್ ಗಳ ಪಟ್ಟಿ : ಗಾಯಗೊಂಡಿರೋ ಸಿಂಹದ ಸಂಭಾಷಣೆಗಳಿವು

ಅಂದಹಾಗೆ, ಸದ್ಯ ತಮ್ಮ ಒಂದೇ ಒಂದು ಡೈಲಾಗ್ ಮೂಲಕ ಜನರ ಪ್ರೀತಿ ಪಡೆದಿರುವ ಈ ರಿತ್ವಿಕ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಮುಂದಿದೆ ಓದಿ..

   
 
ಹೆಲ್ತ್