Back
Home » ಸುದ್ದಿ
500 ಕೋಟಿ ಆಸ್ತಿ ಒಡೆಯ ರೌಡಿ ಶೀಟರ್ ಮಿರ್ಲೆ ವರದರಾಜನ ಪೂರ್ಣ ಮಾಹಿತಿ
Oneindia | 6th Dec, 2018 08:04 PM
  • ರಾಜಕಾರಣಿಗಳ ಜೊತೆ ಫೊಟೊ

    ಯಾವ ರಾಜಕೀಯ ಪಕ್ಷಕ್ಕೂ ಸೇರದ ಮಿರ್ಲೆ, ಎಲ್ಲಾ ರಾಜಕಾರಣಿಗಳ ಜೊತೆ ಫೋಟೊಗಳನ್ನು ಫ್ಲೆಕ್ಸ್‌ಗಳಲ್ಲಿ ಹಾಕಿಸಿಕೊಳ್ಳುವ ಶೋಕಿ ಹೊಂದಿದ್ದ ಪೊಲೀಸರು ಹೇಳಿದ್ದಾರೆ. ಎಲ್ಲ ರಾಜಕೀಯ ಪಕ್ಷದ ಮುಖಂಡರನ್ನೂ ಭೇಟಿ ಮಾಡಿ ಫೊಟೊಗಳನ್ನು ಈತ ತೆಗೆಸಿಕೊಂಡಿದ್ದಾನಂತೆ.


  • 500 ಕೊಟಿಗೂ ಹೆಚ್ಚು ಆಸ್ತಿ

    ಮಿರ್ಲೆಯನ್ನು ಭೂಕಬಳಿಕೆ ಕಾಯ್ದೆ ಅಡಿ ಸಿಸಿಬಿ ಬಂಧಿಸಿದ್ದು, ಆತನ ಆಸ್ತಿ 500 ಕೋಟಿಗೂ ಹೆಚ್ಚು ಇದೆ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಈತನ ಬಳಿ ಐಶಾರಾಮಿ ಮರ್ಸಿಡೀಸ್ ಬೆಂಜ್ ಸೇರಿ ಹಲವು ಕಾರುಗಳು ಇದ್ದು ಅವುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

    ಪೊಲೀಸ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆರೋಪಿಗೆ ನ್ಯಾಯಾಂಗ ಬಂಧನ


  • ಮಿರ್ಲೆ ಮೇಲೆ 83 ಭೂ ವ್ಯಾಜ್ಯ

    ಮಿರ್ಲೆ ವರದರಾಜ್ ವಿರುದ್ಧ ಸಿಟಿ ಸಿವಿಲ್ ಕೊರ್ಟ್ ನಲ್ಲಿ 83 ಭೂ ವ್ಯಾಜ್ಯ ಕೇಸ್​ಗಳಿವೆ. ಸಾರ್ವಜನಿಕರು ಮಿರ್ಲೆ ವಿರುದ್ಧ 17 ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಮಿರ್ಲೆ ಪತ್ನಿ ಗಿರಿಜಾ ವಿರುದ್ಧವೂ 10 ಭೂ ವ್ಯಾಜ್ಯ ಕೇಸ್ ಗಳಿವೆ. ಅಲ್ಲದೇ, ಮಿರ್ಲೆ ವರದರಾಜ್ ಕೂಡಾ 16 ಮಂದಿ ವಿರುದ್ಧ ಕೊರ್ಟ್ ನಲ್ಲಿ‌ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾನೆ.




ಬೆಂಗಳೂರು, ಡಿಸೆಂಬರ್ 06: ಸಿಸಿಬಿ ಪೊಲೀಸರು ಇಂದು ಭಾರಿ ರೌಡಿ ಕುಳವನ್ನೊಮ್ಮೆ ಬಲೆಗೆ ಕೆಡವಿದ್ದು, ಆತನಿಂದ ಭಾರಿ ಮೊತ್ತದ ಹಣ ಮತ್ತು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂದು ಸಿಸಿಬಿಯಿಂದ ಬಂಧನಕ್ಕೊಳಗಾದ ರೌಡಿ ಶೀಟರ್ ಮಿರ್ಲೆ ವರದರಾಜ ಬಗ್ಗೆ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕೆಂಗೇರಿಯಲ್ಲಿದ್ದ ವಾಸವಿದ್ದ ಮಿರ್ಲೆ ವರದರಾಜ ರೌಡಿ ಶೀಟರ್‌ ಆಗಿದ್ದು, ಆತನ ಮನೆಯ ಮೇಳೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ಜಮೀನು ದಾಖಲೆಗಳನ್ನು ದೊಡ್ಡ ವಾಹನದಲ್ಲಿ ಹೇರಿಕೊಂಡು ಬರಬೇಕಾಯಿತಂತೆ.

ಮಿರ್ಲೆ ವರದರಾಜ್ ನಬೆ ಮೇಲೆ ಸಿಸಿಬಿ ರೇಡ್: ಲೋಡ್‌ಗಟ್ಟಲೆ ದಾಖಲೆ ಜಪ್ತಿ

ರೌಡಿಗಳ ನಿಕಟವರ್ತಿಯಾಗಿದ್ದ ಈತನ ಮೇಲೆ ಹಲವು ಭೂ-ಮಾಫಿಯಾ ಪ್ರಕರಣಗಳು ಇವೆ. ಹೆದರಿಸಿ ಬೆದರಿಸಿ, ರೌಡಿಗಳಿಗೆ ಹಣ ನೀಡಿ ಹಲವು ಜಮೀನನ್ನು ವಶಪಡಿಸಿಕೊಂಡಿದ್ದಾನೆ ಎಂಬ ಆರೋಪ ಮಿರ್ಲೆ ವರದರಾಜನ ಮೇಲೆ ಇದೆ.

   
 
ಹೆಲ್ತ್