Back
Home » ಸಿನಿ ಸಮಾಚಾರ
'ಜಾನಕಿ'ಯ ತಂದೆಗೆ ಜನ್ಮದಿನ, ಎಪ್ಪತ್ತರ ಸಂಭ್ರಮದಲ್ಲಿ ಟಿಎನ್ ಸೀತಾರಾಮ್
Oneindia | 7th Dec, 2018 09:44 AM
 • ಬರಹಗಾರ-ನಟ-ಲಾಯರ್

  ''ಅವರ ಪತ್ರಿಕೆ ಅಂದಿನ ರಂಗಭೂಮಿಯ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಧಾನ ಪಾತ್ರವಹಿಸಿದ್ದು ಕೂಡ ನಿಜ. ಅದರ ಬಳಿಕ ಅವರು ಲಾಯರ್ ಆದರು. ಆದರೆ ಲಾಯರ್ ಗಿರಿಗಿಂತ ತಮ್ಮ ಧಾರಾವಾಹಿಗಳಲ್ಲಿ ಲೀಗಲ್ ಆಸ್ಪೆಕ್ಟ್ಸ್ ನ ತುಂಬ ಚೆನ್ನಾಗಿ ಕವರ್ ಮಾಡಲು ಶುರುಮಾಡಿದರು. ಅವರು ಲಂಕೇಶ್ ಜೊತೆಗೆ ಸೇರಿಕೊಂಡು ಪತ್ರಿಕೆಯಲ್ಲಿ ಬರೆಯುವುದರ ಜೊತೆಗೆ ಅವರ 'ಅನುರೂಪ' ಸಿನಿಮಾದಲ್ಲಿ ನಾಯಕರಾಗಿಯೇ ನಟಿಸಿದರು. ಒಳ್ಳೆಯ ಹೆಸರು ಪಡೆದರು. ಆದರೆ ಯಾಕೋ‌ ಸಿನಿಮಾದಲ್ಲಿ ನಟನೆಯನ್ನು ಅವರು ಮುಂದುವರಿಸಲಿಲ್ಲ. ಬಹುಶಃ ಅವರಿಗೆ ಬರವಣಿಗೆಯಲ್ಲಿ ಇರುವ ಪ್ರೀತಿಯೇ ಇದಕ್ಕೆ ಕಾರಣ ಇರಬಹುದು''


 • ವಿಚಿತ್ರವಾದ ಕೈ ಬರಹ

  ಟಿ ಎನ್ನೆಸ್ ಒಳ್ಳೆಯ ಬರಹಗಾರರೇನೋ ಹೌದು. ಆದರೆ ಅವರ ಕೈ ಬರಹ ತುಂಬ ಕೆಟ್ಟದಾಗಿರುತ್ತವೆ. ಎಷ್ಟರಮಟ್ಟಿಗೆ ಎಂದರೆ ತಾವೇ ಬರೆದಿದ್ದರನ್ನು ಗಂಟೆಗಳ ಬಳಿಕ ಕಂಡರೆ ಅವರಿಗೇ ಓದಲು ಸಾಧ್ಯವಾಗುವುದಿಲ್ಲ.! ತುಂಬ ಯೋಚನೆ ಮಾಡಿ ಒಳ್ಳೆಯ ಸಂಭಾಷಣೆಗಳನ್ನು ತಯಾರಿ ಮಾಡಿರುತ್ತಾರೆ. ಆದರೆ ಬರಹಕ್ಕೆ ಇಳಿಸುವುದು ಮಾತ್ರ ಕೊನೆಯ ಘಳಿಗೆಯಲ್ಲಿ. ಇದು ಅವರ ವೈಶಿಷ್ಟ್ಯ ಎಂದೇ ಹೇಳಬಹುದು.


 • ನಾವು ಒಂದೇ ಕಾಲಘಟ್ಟದಲ್ಲಿ ಇದ್ದೇವೆ ಎನ್ನುವುದೇ ಹೆಮ್ಮೆ

  ''ಇಂದಿಗೂ ಸೀತಾರಾಮ್ ಧಾರಾವಾಹಿಗಳಿಗೆ ಅದರದ್ದೇ ಆದ ಮಹತ್ವವಿದೆ. ನನ್ನಲ್ಲಿ ಕೂಡ ಅವರ ಧಾರಾವಾಹಿಗಳಲ್ಲೇಕೆ ನಟಿಸುತ್ತಿಲ್ಲ ಎಂದು ವಿಚಾರಿಸುವವರು ಇದ್ದಾರೆ. ಇಂಥ ಸೀತಾರಾಮ್ ಅವರಿಗೆ ಚಿತ್ರರಂಗದಲ್ಲಿ ಮಾತ್ರ ಅಂಥ ಯಶಸ್ಸು ದೊರಕಿಲ್ಲ. ‌ಆದರೆ ಮುಂದಿನ ದಿನಗಳಲ್ಲಿ ಅವರು ಸಿನಿಮಾಗಳಲ್ಲಿ ‌ಕೂಡ ದೊಡ್ಡ ಮಟ್ಟದ ಹೆಸರು ಮಾಡುವಂತಾಗಲಿ ಎಂದು ಈ ಸಂದರ್ಭದಲ್ಲಿ ನಾನು ಹಾರೈಸುತ್ತೇನೆ. ನಾವು ಒಂದೇ ಕಾಲಘಟ್ಟದಲ್ಲಿ ಇದ್ದೇವೆ ಎನ್ನುವುದೇ ಹೆಮ್ಮೆ'' ಎಂದು ದತ್ತಣ್ಣ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ


 • ಕಿರುತೆರೆಯ ರಾಜ್ ಕುಮಾರ್

  ''ಅವರಿಗೆ ಆಗಿರುವ ವಯಸ್ಸು ಅವರಲ್ಲೇ ಕಾಣಿಸಲ್ಲ.! ಅದಕ್ಕೆ ಕಾರಣ ಅವರು ತಮ್ಮ ಚಟುವಟಿಕೆಯ ಮೂಲಕ ಸಕ್ರಿಯರಾಗಿರುವುದು. "ಕನ್ನಡ ಚಿತ್ರರಂಗಕ್ಕೆ ರಾಜ್ ಕುಮಾರ್ ಹೇಗೆಯೋ ಕಿರುತೆರೆಯ ಪಾಲಿಗೆ ಸೀತಾರಾಮ್ ಹಾಗೆಯೇ". ಅದಕ್ಕೆ ಹಲವಾರು ಕಾರಣಗಳಿವೆ. ಕನ್ನಡ ಕಿರುತೆರೆ ಧಾರಾವಾಹಿಗಳಿಗೆ ಒಂದು ಭದ್ರವಾದ ಬುನಾದಿ ಮತ್ತು ಸಾಂಸ್ಕೃತಿಕ ಘನತೆಯನ್ನು ತಂದುಕೊಟ್ಟವರೆಂದು ಟಿಎನ್ ಸೀತಾರಾಮ್ ಅವರನ್ನು ಹೇಳಬಹುದು. ವೈಯಕ್ತಿಕವಾಗಿ ಮಾತ್ರವಲ್ಲ, ಇನ್ನೊಬ್ಬರ ಕಷ್ಟಕ್ಕೆ ಮರುಗುವ ವಿಚಾರದಲ್ಲಿ ಕೂಡ ಸೀತಾರಾಮ್ ಹೃದಯವಂತ ವ್ಯಕ್ತಿ. ಸಾಹಿತ್ಯ, ನಾಟಕ, ಕಿರುತೆರೆ, ಸಿನಿಮಾ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಅವರ ಸಾಧನೆ ಗುರುತಿಸುವಂಥದ್ದು'' - ಪಿ ಶೇಷಾದ್ರಿ, ಖ್ಯಾತ ಸಿನಿಮಾ ನಿರ್ದೇಶಕರು


 • ಸೀತಾರಾಮ್ ಬರವಣಿಗೆಯೇ ನಮಗೆ ಸ್ಫೂರ್ತಿ

  ''ಸೀತಾರಾಮ್ ಅವರು ಒಬ್ಬ ನ್ಯಾಚುರಲ್‌ ಜೀನಿಯಸ್. ನಮಗೆಲ್ಲ ಮೊದಲ ಪ್ರಭಾವ ಅವರ ಬರವಣಿಗೆ ಎಂದು ಧೈರ್ಯವಾಗಿ ಹೇಳಬಹುದು. ಅವರು ಬರೆಯಲು ಶುರು ಮಾಡಿದ ಬಳಿಕವೇ ಕಿರುತೆರೆಯಲ್ಲಿ ಗಟ್ಟಿ ಸಾಹಿತ್ಯದ ಪ್ರವೇಶ ಆಯಿತು ಎನ್ನಬಹುದು. ಅವರು ಬರೆಯಲು ಶುರು ಮಾಡಿದಾಗಲೇ ಬರಹದಲ್ಲಿ ಹೊಸತನ ಪ್ರವೇಶಿಸಿತು. ಹೇಳಿಕೊಳ್ಳಲಾಗದ ಭಾವನೆಗಳನ್ನು ಕೂಡ ಪದಗಳಲ್ಲಿ ಹಿಡಿದಿಡುವ ಕಲೆ ಅವರಿಗೆ ಕರಗತವಾಗಿತ್ತು. ಮಾಯಾಮೃಗ ಕಾಲದಲ್ಲೇ ಅವುಗಳು ನನ್ನ ಮೇಲೆ ಪ್ರಭಾವ ಬೀರಿತ್ತು. ಅವರಿಗೆ ಎಪ್ಪತ್ತಾದರೂ ಇಪ್ಪತ್ತು ಆಗಿರುವಂತೆ ಕಾಣಿಸುತ್ತಾರೆ. ಎವರ್ ಗ್ರೀನ್ ಯಂಗ್ ಅಂಡ್ ಎನರ್ಜೆಟಿಕ್ ಎಂಬ ಪದ ಪ್ರಯೋಗವನ್ನು ಕಿರುತೆರೆಯಲ್ಲಿ ಮಾಡೋದಾದರೆ ಅದು ಅವರಿಗೆ ಮೀಸಲು. ಅವರಿಗೆ ಜನ್ಮದಿನದ ಶುಭಾಶಯಗಳು'' ನಾಗೇಂದ್ರ ಶಾ, ನಟರು, ನಿರ್ದೇಶಕರು


 • ಅವರಿಗೆ ಇಂದಿಗೂ ಮೂವತ್ತು..!

  "ನಾನು ಸೀತಾರಾಮ್ ಅವರನ್ನು ರಾಜಿ ಎಂದು ಕರೆಯುತ್ತೇನೆ! ನಾವು ಮಾಯಾಮೃಗ ಧಾರಾವಾಹಿಯಲ್ಲಿ ಜೊತೆಗೆ ಕೆಲಸ ಮಾಡಿದ್ದೆವು. ನೋಡು ನೋಡುತ್ತಿದ್ದಂತೆ ಅವರಿಗೆ 70ವರ್ಷ ತುಂಬಿದೆ. ಆದರೆ ಪ್ರೀತಿ ತುಂಬಿದ ಅವರ ಮನಸ್ಸಿಗೆ ಮಾತ್ರ ಇಂದಿಗೂ 30 ವರ್ಷ ಮಾತ್ರ ಎಂದು ನನಗೆ ಗೊತ್ತು. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.. ಭಗವಂತ ಅವರಿಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಮತ್ತು ಮನಃಶಾಂತಿಯನ್ನು ಸದಾ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ. ಅವರು ನಮ್ಮ ಕುಟುಂಬದಲ್ಲಿ ಒಬ್ಬರಂತೆ ಇರುವವರು. ಹಾಗಾಗಿ ನನ್ನ ಪತ್ನಿ ಚಿತ್ರಾ ಶೆಣೈ ಮತ್ತು ಮಗಳು ಖುಷಿಯ ಹಾರೈಕೆಯನ್ನು ಕೂಡ ಈ ಸಂದರ್ಭದಲ್ಲಿ ಖುಷಿಯಿಂದ ತಲುಪಿಸುತ್ತಿದ್ದೇನೆ. ವಂದನೆಗಳು.." ಗುರುದಾಸ್ ಶೆಣೈ ನಿರ್ಮಾಪಕ, ನಿರ್ದೇಶಕರು


 • ಟಿಎನ್ನೆಸ್ ಒಂದು ಜೀವಂತ ದಂತಕತೆ..!

  ''ಟಿಎನ್ನೆಸ್ ಅವರು ಹೆಚ್ಚಿನ ಎಲ್ಲರಂತೆ ನನಗೂ ಟಿ.ವಿಯ ಮೂಲಕವೇ ಪರಿಚಿತರಾದವರು. ಬಹುಶಃ ‌ಕರ್ನಾಟಕದಲ್ಲಿ ಎಷ್ಟೋ ಮಂದಿ ಮೇಲ್ ಆಡಿಯನ್ಸ್ ಗಳಿಗೆ ಧಾರಾವಾಹಿ ನೋಡುವ ಹುಚ್ಚು ಬೆಳೆಸಿದವರೇ ಟಿಎನ್ನೆಸ್ ಎನ್ನಬಹುದು. ಧಾರಾವಾಹಿ ಅಂದರೆ ಹೆಣ್ಣುಮಕ್ಕಳಿಗೆ ಮಾತ್ರ ಎಂಬ ನಿಯಮವನ್ನು ಮುರಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜರ್ನಿಯ ಬಗ್ಗೆ ನನ್ನಿಂದ ತಿಳಿಯುವ ಅಗತ್ಯ ಯಾರಿಗೂ ಇರಲ್ಲ. ಆದರೆ ಎಲ್ಲ ತಲೆಮಾರುಗಳ ನಡುವೆ ಒಂದು ಸೇತುವೆಯಾಗಿ ಉಳಿದುಕೊಂಡಿರುವ ಲೆಜೆಂಡ್ ಎಂದೇ ಅವರನ್ನು ಗುರುತಿಸಬಹುದು. ಪುಟ್ಟಣ್ಣ ಕಣಗಾಲ್ ಅಂಥವರಿಂದ ಹಿಡಿದು, ಇಂದಿನ ಯುವ ಟಿ.ವಿ ನಿರ್ದೇಶಕರ ತನಕ ಕೆಲಸ ಮಾಡಿರುವ ಅನುಭವ ಅವರದಾಗಿತ್ತು''


 • ಅವರದು ಮಿಡಿಯುವ ಹೆಂಗರುಳು

  ''ಅವರೊಂದಿಗೆ ನನ್ನ ಹತ್ತಿರದ ಒಡನಾಟ ಆಗಿದ್ದು ನಾನು ಸುವರ್ಣ ವಾಹಿನಿಯಿಂದ ಈ ಟಿವಿಗೆ ಕಾಲಿಟ್ಟಾಗ. ಆಗ ಅವರ ಮುಕ್ತ ಮುಕ್ತ ಧಾರಾವಾಹಿ ಮುಕ್ತಾಯವಾಗುತ್ತಿದ್ದ ಸಮಯ. ಆ ಸಮಯದಲ್ಲಿ ಒಂದು ಗೆಟ್ ಟುಗೆದರ್ ಇರಿಸಲಾಗಿತ್ತು. ಮೊದಲ ಬಾರಿ ನನ್ನ ಅವರ ಭೇಟಿಯಾಗಿದ್ದು ಅಲ್ಲಿ. ಆದರೆ ಅದಕ್ಕೂ ಬಹಳ ಹಿಂದೆ ಝೀ ಕನ್ನಡದಲ್ಲಿ 'ಡ್ಯಾಡಿ ನಂಬರ್ ಒನ್' ಎಂಬ ಶೋ ಮಾಡಿದ್ದೆ. ಆ ಸಮಯದಲ್ಲಿ ಇವರ ಮುಕ್ತ ಮುಕ್ತಕ್ಕಿಂತ ಹೆಚ್ಚು ಜನಪ್ರಿಯತೆ ನನ್ನ ಶೋ ಪಡೆದಿದೆ ಎಂದು ಅರಿತುಕೊಂಡ ಅವರು ನನಗೆ ಫೋನ್ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದರು! ಅಂದರೆ ಹೊಸ ಹುಡುಗನೊಬ್ಬ ಏನೋ ಶೋ ಮಾಡಿ ಒಳ್ಳೆಯ ರೇಟಿಂಗ್ ತರುತ್ತಿದ್ದಾನೆ ಅಂದರೆ ಅದನ್ನು ಪ್ರಶಂಸಿಸುವ ಮನಸ್ಥಿತಿ ಅವರಿಗಿತ್ತು''


 • ಮೃದು ಸ್ವಭಾವ ಹೊಂದಿದವರು

  ''ಇನ್ನು ಅವರೊಂದಿಗೆ ತುಂಬಾ ಆತ್ಮೀಯತೆ ಬೆಳೆದಿದ್ದು 'ಡ್ರಾಮ ಜ್ಯೂನಿಯರ್ಸ್'ನಲ್ಲಿ ಅವರನ್ನು ತೀರ್ಪುಗಾರರನ್ನಾಗಿ ತೆಗೆದುಕೊಂಡಾಗ. ಆರಂಭದಲ್ಲಿ ಅದಕ್ಕೆ ಬರಲು ಅವರು ಒಪ್ಪಿರಲಿಲ್ಲ. ನನಗೂ ಕೂಡ ಅವರಂಥ ಹಿರಿಯರು ಮಕ್ಕಳೊಂದಿಗೆ ಹೇಗೆ ಬೆರೆಯುತ್ತಾರೆ ಎನ್ನುವ ಆತಂಕ ಒಳಗೆಲ್ಲೋ ಇತ್ತು. ಆದರೆ ಅಭಿನಯ ಮತ್ತು ಎಕ್ಸ್‌ಪ್ರೆಶನ್ಗಳ ಬಗ್ಗೆ ಅವರಂತೆ ಅಲ್ಲಿ ಮಕ್ಕಳ ಜೊತೆಗೆ ಹಂಚಿಕೊಂಡವರು ನನಗೆ ತಿಳಿದ ಮಟ್ಟಿಗೆ ಬೇರೆ ಯಾರೂ ಇರಲಿಲ್ಲ. ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಅವರಿಗೆ ಅರ್ಥವಾಗುವಂತೆ ಜಡ್ಜ್ ಮೆಂಟ್ ಕೊಡುವು ಅವರ ರೀತಿ ಇದೆಯಲ್ವಾ? ಅದೊಂದು ದೊಡ್ಡ ಕಲೆಯೇ ಸರಿ! ಇನ್ನೊಂದು ವಿಚಾರ ಏನು ಅಂದರೆ ಅವರಷ್ಟು ಎಮೋಶನಲ್ ವ್ಯಕ್ತಿಯನ್ನು ನಾನು ನೋಡಿಲ್ಲ. ಸ್ಕಿಟ್ ಗಳಲ್ಲಿ ವಿಶೇಷವಾಗಿ ಏನಾದರೂ ತಂದೆ ಮಗಳ ದೃಶ್ಯಗಳಿದ್ದರೆ ಸಾಕು; ಕಣ್ಣೀರು ಸುರಿಸಿಯೇ ಬಿಡುವಂಥ ಹೆಂಗರುಳು ಅವರದಾಗಿತ್ತು. ಅವರದೇ ಸೃಷ್ಟಿಯ ಪಾತ್ರಗಳು ಪರದೆಯ ಮೇಲೆ ಬಹಳಷ್ಟು ಸ್ಟ್ರಾಂಗ್ ಆಗಿರುತ್ತದೆ. ಆದರೆ ಈ ಸೃಷ್ಟಿಕರ್ತ ಮಾತ್ರ ಒಳಗಡೆ ಅಷ್ಟೇ ಮೃದು ಸ್ವಭಾವ ಹೊಂದಿದವರು''


 • ಭಗವಂತ ಆರೋಗ್ಯ, ಆಯಸ್ಸು ನೀಡಲಿ

  ''ಇವೆಲ್ಲದರ ಜೊತೆಗೆ ಅವರ ಒಳಗೆ ಒಂದು ತುಂಟತನ ಕೂಡ ಇದೆ. ಇದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ತಿಳಿದಿರಲು ಸಾಧ್ಯ. ಬಿಹೈಂಡ್ ದ ಸ್ಕ್ರೀನ್ ಅಪರೂಪಕ್ಕೆ ಅವರ ಜೊತೆಗೆ ಮನಸು ಬಿಚ್ಚಿ 'ಒಂದೆಡೆ ಕುಳಿತು' ಮಾತನಾಡುವ ಸಂದರ್ಭ ಸಿಕ್ಕರೆ ಅವರು ತಮ್ಮ ಹಳೆಯ ಅನುಭವಗಳನ್ನು ಅತ್ಯಂತ ಸೊಗಸಾಗಿ ಹಂಚಿಕೊಳ್ಳುತ್ತಿದ್ದರು. ನಮ್ಮ ಡ್ರಾಮದ ಮುಂದಿನ ಸೀಸನ್ ಗಳಲ್ಲಿ ಕೆಲವು ಅನಿವಾರ್ಯ ಕಾರಣಗಳಿಂದ ಅವರು ಪಾಲ್ಗೊಳ್ಳಲಿಲ್ಲ. ಆದರೆ ನಮ್ಮ ಬೆಸ್ಟ್ ಮೆಮೊರಿಗಳೆಲ್ಲ ಆ ಮೊದಲ ಸೀಸನಲ್ಲೇ ಭದ್ರವಾಗಿವೆ. ಒಟ್ಟಿನಲ್ಲಿ ಜೀವಂತ ದಂತಕತೆಯಾಗಿರುವ ಅವರಿಗೆ ಭಗವಂತ ಆರೋಗ್ಯ, ಆಯಸ್ಸು ನೀಡಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ'' ರಾಘವೇಂದ್ರ ಹುಣಸೂರು, ಝೀ ಕನ್ನಡ ವಾಹಿನಿಯ ಮುಖ್ಯಸ್ಥರು.
ಕನ್ನಡ ಕಿರುತೆರೆ ವಾಹಿನಿಯ ಪ್ರೇಕ್ಷಕರಿಗೆ ಬಲುಮೆಚ್ಚಿನ ಹೆಸರು ಟಿ.ಎನ್ ಸೀತಾರಾಮ್. ಅವರ ನಿರ್ದೇಶನದ ಧಾರಾವಾಹಿಗಳು ಸಾರ್ವತ್ರಿಕ ದಾಖಲೆ ಮೂಡಿಸಿವೆ. ಪ್ರಸ್ತುತ 'ಮಗಳು ಜಾನಕಿ' ಧಾರಾವಾಹಿಯ ನಿರ್ದೇಶಕ, ನಿರ್ಮಾಪಕರಾಗಿ ಮತ್ತು ಜಾನಕಿಯ ತಂದೆಯ ಪಾತ್ರವಾಗಿ ಜನಮನ ಸೆಳೆಯುತ್ತಿದ್ದಾರೆ. ಇಂದು (ಡಿಸೆಂಬರ್ 6) ಅವರಿಗೆ ಎಪ್ಪತ್ತನೇ ವರ್ಷದ ಜನ್ಮದಿನದ ಸಂಭ್ರಮ. ಈ ವಿಶೇಷವಾಗಿ ಚಿತ್ರರಂಗ ಹಾಗೂ ರಂಗಭೂಮಿಯ ಕೆಲವು ಕಲಾವಿದರು ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

''ನನ್ನ ಸೀತಾರಾಮ್ ಸ್ನೇಹ ಸಂಬಂಧದ ಬಗ್ಗೆ ಮಾತನಾಡುವಾಗಲೆಲ್ಲ ಜನರು ಇದು 'ಮಾಯಾಮೃಗ' ಧಾರಾವಾಹಿಯಿಂದ ಬೆಳೆದು ಬಂದ ನಂಟು ಎಂದುಕೊಂಡಿದ್ದಾರೆ. ಆದರೆ ರಂಗಭೂಮಿಯಲ್ಲಿ ಬಿವಿ ಕಾರಂತ್ ಅವರು ಕ್ರಾಂತಿ ಸೃಷ್ಟಿಸುವ ಸಮಯದಲ್ಲೇ ಸೀತಾರಾಮ್ ಮತ್ತು ಅವರ ಸ್ನೇಹಿತರು ಸೇರಿಕೊಂಡು ಮುಕ್ತ ಎನ್ನುವ ಪತ್ರಿಕೆ ಶುರುಮಾಡಿದರು''

''ಪತ್ರಿಕೆ ತುಂಬ ಚೆನ್ನಾಗಿ ಬರುತ್ತಿತ್ತು. ಆದರೆ ಸ್ವಲ್ಪ ಕಾಂಟ್ರವರ್ಸಿಯನ್ನೂ ಪಡೆದುಕೊಂಡಿತ್ತು. ಆಗಲೇ ಇವರು ಒಬ್ಬ ಉತ್ತಮ ಬರಹಗಾರ ಎನ್ನುವ ಕಾರಣದಿಂದ ಅವರಿಗೆ ಹತ್ತಿರವಾದೆ. ಅವರ ಅಂದಿನ ಕಂಟೆಂಟ್ ನಾನು ಒಪ್ಪುತ್ತೇನೋ ಬಿಡುತ್ತೇನೋ ಎನ್ನುವುದು ಬೇರೆ ವಿಚಾರ. ಆದರೆ ಚೆನ್ನಾಗಿ ಬರೆಯುತ್ತಿದ್ದರು'' ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ದತ್ತಣ್ಣ ಕಥೆ ಅವರ ಬಗ್ಗೆ ಹೇಳಲು ಆರಂಭಿಸಿದರು. ಮುಂದೆ ಓದಿ.....

   
 
ಹೆಲ್ತ್