Back
Home » ಸುದ್ದಿ
ಪ್ರತಿನಿತ್ಯವೂ ಬೆದರಿಕೆ ಕರೆಗಳು ಬರುತ್ತಿವೆ: ನಿಜಗುಣಾನಂದಸ್ವಾಮಿ
Oneindia | 6th Dec, 2018 09:11 PM

ಬೆಳಗಾವಿ, ಡಿಸೆಂಬರ್ 06: ಪ್ರತಿನಿತ್ಯವೂ ನನಗೆ ಬೆದರಿಕೆ ಕರೆಗಳು ಬರುತ್ತಿವೆ, ಪ್ರತಿನಿತ್ಯವೂ ಆತಂಕದಲ್ಲಿಯೇ ಬದುಕುವ ಪರಿಸ್ಥಿತಿ ಇದೆ ಎಂದು ನಿಜಗುಣಾನಂದ ಸ್ವಾಮೀಜಿ ಅವರು ಆತಂಕ ವ್ಯಕ್ತಪಡಿಸಿದರು.

ನಿಖಿಲ್ ಮದುವೆ, ಪ್ರತ್ಯಂಗಿರ ಯಾಗ: ಏಕಾಗಿ ಎಚ್ ಡಿಕೆ ಶೃಂಗೇರಿ ಭೇಟಿ?

ಬೆಳಗಾವಿಯಲ್ಲಿ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಗತಿಪರ ಗುಂಪಿನಲ್ಲಿ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಗುರಿ ಆಗಿರುವ ಸ್ವಾಮೀಜಿ ನಾನು, ನನ್ನನ್ನು ಅವರು ಗುರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ರೈತರಿಂದ ಸಿಎಂಗೆ ಕ್ಲಾಸ್‌, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿ

ನನ್ನ ವಿರುದ್ಧ ಕೆಲವು ಸ್ವಾಮೀಜಿಗಳೇ ಷಡ್ಯಂತ್ರ ನಡೆಸಿದ್ದಾರೆ. ನಮ್ಮ ವಿಚಾರಗಳನ್ನು ಅವರಿಗೆ ಸಹಿಸಲಾಗುತ್ತಿಲ್ಲ, ಸಂಪ್ರದಾಯವಾದಿಗಳ ಅಟ್ಟಹಾಸ ಹಿಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಭಾಷಣ ಕೇಳಿದ ನೀವು ಆರಾಮವಾಗಿ ಮನೆಗೆ ಹೋಗಿಬಿಡುತ್ತೀರಿ, ಆದರೆ ಭಾಷಣ ಮಾಡಿದವರು

ನಾವು ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇವೆ. ನನ್ನ ಭಾಷಣವನ್ನು ರೆಕಾರ್ಡ್‌ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ನಿಜಗುಣಾನಂದರು ಹೇಳಿದರು.

ಬೆಳಗಾವಿ: ಸ್ಮಶಾನದಲ್ಲಿ ಮದುವೆ, ಸತೀಶ್ ಜಾರಕಿಹೊಳಿ ಪೌರೋಹಿತ್ಯ

ಶಂಕರಾಚಾರ್ಯರು, ಮದ್ವಾಚಾರ್ಯರಿಂದ ನಮಗೆ ನ್ಯಾಯ ಸಿಗಲಿಲ್ಲ, ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ನಮಗೆ ನ್ಯಾಯ ಸಿಕ್ಕಿತು ಎಂದು ಅವರು ಪ್ರತಿಪಾದಿಸಿದರು.

   
 
ಹೆಲ್ತ್