ಮೈಸೂರು, ಡಿಸೆಂಬರ್ 6 : ಕಳೆದ ವರ್ಷವಷ್ಟೇ ಈ ದಿನ ಮೈಸೂರಿನ ರಾಜವಂಶಸ್ಥರಿಗೆ ಮುದ್ದಾದ ಮಗುವೊಂದು ಜನಿಸಿತ್ತು. ಯದುವೀರ್ ಹಾಗೂ ತ್ರಿಷಿಕಾ ಒಡೆಯರ್ ಗೆ ಜನಿಸಿದ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಇಂದು ವರ್ಷದ ಜನ್ಮ ದಿನದ ಸಂಭ್ರಮ.
ಮೈಸೂರು ಅರಮನೆಗೆ ಆದ್ಯವೀರ್ ಒಡೆಯರ್ ಆಗಮನ
ಆದ್ಯವೀರ್ ಜನ್ಮದಿನದ ಅಂಗವಾಗಿ ಅರಮನೆಯಲ್ಲಿ ಗುರುವಾರ ಸಂತಸ ಮನೆಮಾಡಿದೆ. 65 ವರ್ಷಗಳ ನಂತರ ಅರಮನೆಯಲ್ಲಿ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯುತ್ತಿದೆ. ಅರಮನೆಯಲ್ಲಿ ಮೂಲ ಗಣಪತಿ, ಕೋಡಿ ಸೋಮೇಶ್ವರ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಆದ್ಯವೀರ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೈಸೂರು ಯುವರಾಜನಿಗೆ ಆದ್ಯವೀರ್ ಎಂದು ನಾಮಕರಣ
ಶ್ರೀಕಂಠದತ್ತ ಚಾಮರಾಜ ಒಡೆಯರ್ 1953ರಲ್ಲಿ ಜನಿಸಿದಾಗ, ಮೊದಲ ವರ್ಷ ಅವರ ಹುಟ್ಟಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಇದಾದ ಬಳಿಕ ಹುಟ್ಟುಹಬ್ಬದ ಸಂಭ್ರಮವೇ ಕಂಡಿರಲಿಲ್ಲ. ಮತ್ತೆ ಅರಮನೆಯಲ್ಲಿ ಹುಟ್ಟುಹಬ್ಬ ಸಂಭ್ರಮ ಮನೆ ಮಾಡಿದೆ.
ಅಲ್ಲದೇ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ತನ್ನ ಮೊದಲ ದಸರಾ ವೈಭವವನ್ನು ಕಣ್ತುಂಬಿಕೊಂಡು ಫೋಟೋಗೆ ಪೋಸ್ ಸಹ ನೀಡಿದ್ದರು. ಪುಟ್ಟ ಯುವರಾಜನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಅರಮನೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.