Back
Home » ಸುದ್ದಿ
ತೆಲಂಗಾಣ ಚುನಾವಣೆ: ದಾಖಲೆ ಮೊತ್ತದ ಅಕ್ರಮ ಹಣ ವಶ
Oneindia | 6th Dec, 2018 09:39 PM

ಹೈದರಾಬಾದ್, ಡಿಸೆಂಬರ್ 06: ತೆಲಂಗಾಣ ಚುನಾವಣೆ ಭಾರಿ ಜಿದ್ದಾಜಿದ್ದಿನ ಕಣವಾಗಿದ್ದು, ಮತದಾರರನ್ನು ಸೆಳೆಯಲು ಹಣ-ಹೆಂಡದ ಹೊಳೆಯೇ ಹರಿಯುತ್ತಿದೆ.

ಚುನಾವಣೆ ಘೋಷಣೆ ಆದಂದಿನಿಂದಲೂ ನಿನ್ನೆಯವರೆಗೆ ತೆಲಂಗಾಣದಲ್ಲಿ 120 ಕೋಟಿ ಹಣವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆಯಂತೆ.

ಮತ್ತೊಮ್ಮೆ ಕೆಸಿಆರ್ ಕೈ ಹಿಡಿಯುವರೇ ತೆಲಂಗಾಣ ಮತದಾರರು?

ತೆಲಂಗಾಣ ಚುನಾವಣಾ ಆಯುಕ್ತ ರಜತ್ ಕುಮಾರ್ ಅವರೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಭಾರಿ ಪ್ರಮಾಣದಲ್ಲಿ ಹಣ ಮತ್ತು ಹೆಂಡವನ್ನು ಮತದಾರರನ್ನು ಸೆಳೆಯಲು ಬಳಸುಲಾಗುತ್ತಿದೆ ಎಂದಿದ್ದಾರೆ.

230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 29 ಕೋಟಿ ವಶಪಡಿಸಿಕೊಳ್ಳಲಾಗಿದೆ. ಆದರೆ 119 ಕ್ಷೇತ್ರಗಳಿರುವ ಸಣ್ಣ ರಾಜ್ಯ ತೆಲಂಗಾಣದಲ್ಲಿ 120 ಕೋಟಿ ವಶಪಡಿಸಿಕೊಳ್ಳಲಾಗಿದೆ. ಇದು ಬಹು ದೊಡ್ಡ ಪ್ರಮಾಣದ ಹಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪಂಚ ರಾಜ್ಯಗಳ ವಿಧಾನಸಭಾ ಫಲಿತಾಂಶದ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಚುನಾವಣಾ ಆಯೋಗ ವಶಪಡಿಸಿಕೊಂಡಿದ್ದು 330 ಕೋಟಿ ಅದರಲ್ಲಿ ಆಂಧ್ರಪ್ರದೇಶದ್ದೆ 150 ಕೋಟಿ ಇತ್ತು. ಆದರೆ ಈಗ ವಿಧಾನಸಭೆ ಚುನಾವಣೆಗೆ 120 ಕೋಟಿ ವಶಪಡಿಸಿಕೊಳ್ಳಲಾಗಿದೆ.

ಇನ್ನು ಮದ್ಯ ಸಹ ಭಾರಿ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಅಂಕಿ-ಅಂಶಗಳು ಇನ್ನಷ್ಟೆ ಗೊತ್ತಾಗಬೇಕಿದೆ. ಈ ವರೆಗೆ 11 ಸಾವಿರ ಜಾಮೀನು ರಹಿತ ವಾರೆಂಟ್‌ಗಳನ್ನು ಸಹ ನೀಡಲಾಗಿದೆಯಂತೆ.

ತೆಲಂಗಾಣ, ರಾಜಸ್ಥಾನ ಚುನಾವಣೆ : ಪ್ರಚಾರ ಅಂತ್ಯ, ಡಿ.7ಕ್ಕೆ ಮತದಾನ

ತೆಲಂಗಾಣದ ರಾಜ್ಯದ ಚುನಾವಣೆ ನಾಳೆ ನಡೆಯಲಿದ್ದು, ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್ ಪಕ್ಷಕ್ಕೆ ಈ ಚುನಾವಣೆ ಭಾರಿ ಮಹತ್ವದ್ದಾಗಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಸ್ಪರ್ಧಿಸುತ್ತಿವೆ. ಬಿಜೆಪಿ ಸಹ ಉತ್ತಮವಾಗಿ ಪ್ರಚಾರ ಮಾಡಿದ್ದು, ಉತ್ತಮ ಫಸಲು ತೆಎಗೆಯುವ ನಿರೀಕ್ಷಣೆಯಲ್ಲಿದೆ.

   
 
ಹೆಲ್ತ್