Back
Home » ಸುದ್ದಿ
ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರೋಧಿಗಳಿಗೆ ಮತ್ತೆ ಹಿನ್ನಡೆ
Oneindia | 6th Dec, 2018 10:05 PM

ಬೆಂಗಳೂರು, ಡಿ 6: ರಾಘವೇಶ್ವರ ಶ್ರೀಗಳ ವಿರುದ್ದದ ಆರೋಪಗಳಲ್ಲಿ ಹುರುಳಿಲ್ಲ ಎನ್ನುವ ವಾದಕ್ಕೆ ಪುಷ್ಟಿ ನೀಡುವಂತೆ, ರಾಜ್ಯ ಉಚ್ಚ ನ್ಯಾಯಾಲಯ ಶ್ರೀಗಳ ವಿರುದ್ದದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.

ಮಹಾಬಲೇಶ್ವರ ದೇವಾಲಯವನ್ನು ಮಠಕ್ಕೆ ತಕ್ಷಣ ಹಸ್ತಾಂತರಿಸಿ: ಸರ್ವೋಚ್ಛ ನ್ಯಾಯಾಲಯ

ಪುತ್ತೂರಿನ ಶ್ಯಾಮಶಾಸ್ತ್ರಿ ಅವರ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲಿನ ಆರೋಪಗಳ ವಿಚಾರಣೆಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಗೋಕರ್ಣ ದೇವಾಲಯ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ

ಶಾಸ್ತ್ರಿಯವರ ಅಸಹಜ ಸಾವು/ಆತ್ಮಹತ್ಯೆ ಪ್ರಕರಣದಲ್ಲಿ ವಿನಾಕಾರಣವಾಗಿ ರಾಘವೇಶ್ವರ ಶ್ರೀಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದು, ಯಾವುದೇ ದಾಖಲೆಗಳು ಇಲ್ಲದಿದ್ದರೂ, ಹುರುಳಿಲ್ಲದ ಆರೋಪಗಳನ್ನು ಆಧರಿಸಿ ಆರೋಪಿಯನ್ನಾಗಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ದಾಖಲಿಸಲಾಗಿತ್ತು.

ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಪೀಠ ಈ ಕುರಿತಾಗಿ ಶ್ರೀಗಳ ಮುಂದಿನ ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಿ ಆದೇಶ ಹೊರಡಿಸಿದೆ.

ದೇವಾಲಯ ವಶಪಡಿಸಿಕೊಳ್ಳುವುದು, ನ್ಯಾಯಾಂಗಕ್ಕೆ ಸರಕಾರ ಮಾಡಿದ ಅಪಚಾರ

ಶ್ರೀಗಳು ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಾನ್ಯ ಮಾಡಬಾರದು ಹಾಗೂ ವಿಚಾರಣಾ ಪ್ರಕ್ರಿಯೆಗಳಿಗೆ ತಡೆ ನೀಡಬಾರದು ಎಂಬ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅವರ ತೀವ್ರವಾದ ಪ್ರತಿವಾದವನ್ನು ಆಲಿಸಿದ ನಂತರವೂ, ನ್ಯಾಯಪೀಠ ತಡೆಯಾಜ್ಞೆ ನೀಡಿದ್ದು, ಶ್ರೀಮಠದ ವಾದವನ್ನು ಮಾನ್ಯಮಾಡಿದೆ.

ನ್ಯಾಯಾಲಯದ ಈ ಆದೇಶದಿಂದಾಗಿ ಶ್ರೀಗಳ ಮೇಲಿನ ಆರೋಪಗಳಲ್ಲಿ ಹುರುಳಿಲ್ಲ ಎಂಬ ವಾದಕ್ಕೆ ಪುಷ್ಟಿ ಸಿಕ್ಕಿದೆ ಎಂದು ರಾಮಚಂದ್ರಾಪುರ ಮಠದ ಅಧಿಕಾರಿಗಳು ತಿಳಿಸಿದ್ದಾರೆ.

   
 
ಹೆಲ್ತ್