Back
Home » ಇತ್ತೀಚಿನ
32 ಕಿ.ಮೀ ದೂರದಲ್ಲೇ ಕುಳಿತು ಆಪರೇಷನ್ ಮಾಡಿದ ಭಾರತೀಯ ವೈದ್ಯ!!
Gizbot | 7th Dec, 2018 06:01 PM
 • ಸಂಪೂರ್ಣ ಲೈವ್​​ ಆಪರೇಷನ್

  ​​ಡಾ.ತೇಜಸ್​ ಪಟೇಲ್ ಅವರು ಈವರೆಗೆ 300 ರೋಬೋಟಿಕ್ ಸರ್ಜರಿಗಳನ್ನ ಮಾಡಿದ್ದಾರೆ. ಆದರೆ ಈ ಬಾರಿ ಸಂಪೂರ್ಣ ಲೈವ್​​ ಆಪರೇಷನ್​​​ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು 2 ವರ್ಷಗಳಿಂದ ತಯಾರಾಗಿದ್ದರು. ಈಗ 32 ಕಿ.ಮೀ ದೂರದ ದೂರದಲ್ಲೇ ಕುಳಿತುಕೊಂಡು ರೋಬೋಟಿಕ್​​ ಕೈಗಳನ್ನ ಅಪರೇಟ್​ ಮಾಡೋ ಮೂಲಕ ಮಹಿಳೆಗೆ ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ.


 • ರೋಬೊ​​ ಆಪರೇಷನ್ ಹೇಗಿತ್ತು?

  ಆಪರೇಷನ್​ ಥಿಯೇಟರ್​​ನ ಕ್ಯಾತ್​ ಲ್ಯಾಬ್​ನಲ್ಲಿ ಇಂಟರ್ನೆಟ್​​ ಚಾಲಿತ ರೋಬೋಟಿಕ್​​ ಕೈಗಳ ಸಹಾಯದಿಂದ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ.. ಡಾ. ಪಟೇಲ್​ ಅವರು ದೂರದಲ್ಲಿ ಕುಳಿತುಕೊಂಡೇ ಕಂಪ್ಯೂಟರ್ ಸಹಾಯದಿಂದ ರೋಬೋಟಿಕ್​​ ಕೈಗಳನ್ನ ಅಪರೇಟ್​ ಮಾಡುವ ಮೂಲಕ ಮಹಿಳೆಗೆ ಆಂಜಿಯೋಪ್ಲಾಸ್ಟಿ ಚಿಕಿತ್ಯೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.


 • ವೈದ್ಯರ ತಂಡ ಮಹಿಳೆಯ ಜೊತೆ ಇತ್ತು

  ಯಾವುದೇ ತಂತ್ರಜ್ಞಾನವಾದರೂ ಮೊದಲಿಗೆ ಕಾನ್ಸೆಪ್ಟ್​​ ರೂಪದಲ್ಲಿ ಪ್ರಾಣಿಗಳು ಅಥವಾ ಡಮ್ಮಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದನ್ನು ಯಶಸ್ವಿಯಾಗಿ ಮುಗಿಸಿದ ನಂತರ ನಮಗೆ ಇನ್​​​​-ಹ್ಯೂಮನ್​ ಟೆಲಿ-ರೋಬೋಟಿಕ್ಸ್​ ಪ್ರಕ್ರಿಯೆ ನಡೆಸಲು ಧೈರ್ಯ ಬಂತು. ಆದರೂ ಆಪರೇಷನ್​ ಥಿಯೇಟರ್​​ನಲ್ಲಿ ವೈದ್ಯರ ತಂಡ ಮಹಿಳೆಯ ಜೊತೆ ಇತ್ತು ಎಂದು ಪಟೇಲ್​ ಹೇಳಿದ್ದಾರೆ.


 • ತಂತ್ರಜ್ಞಾನ ಒದಗಿಸಿದ್ದು ಅಮೆರಿಕಾ ಸಂಸ್ಥೆ!

  ಇನ್ನು, ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನವನ್ನು ಅಮೆರಿಕಾ ಮೂಲದ ಕಾರಿಂಡಸ್​ ಸಂಸ್ಥೆ ಒದಗಿಸಿದೆ. ಆ ಸಂಸ್ಥೆಯ ಸಿಇಓ ಈ ಬಗ್ಗೆ ಮಾತನಾಡಿ, 2001ರಲ್ಲಿ ಮೊದಲ ಟೆಲಿರೋಬೋಟಿಕ್​ ಸರ್ಜರಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಅಟ್ಲಾಂಟಿಕ್​​ನಲ್ಲಿ ಈ ಪ್ರಕ್ರಿಯೆ ಬಳಸಿ ಲ್ಯಾಪ್ರೋಸ್ಕೋಪಿಕ್​ ಗಾಲ್​ ಬ್ಲಾಡರ್​ ಸರ್ಜರಿಯನ್ನು ಸಹ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.


 • ಜಗತ್ತಿನ ಎಲ್ಲಿಯಾದರೂ ರೋಗಿಗೆ ಆಪರೇಷನ್!

  ಈಗ ರೋಗಿಗೆ 32 ಕಿ.ಮೀ ದೂರದಿಂದ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ದೇಶದ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿರೋ ರೋಗಿಗೆ ಇದೇ ರೀತಿ ಆಪರೇಷನ್​ ಮಾಡಬಹುದು. ಕ್ಯಾತ್​​ ಲ್ಯಾಬ್, ರೋಬೋಟಿಕ್ ಆರ್ಮ್​​ ಹಾಗೂ ಇಂಟರ್ನೆಟ್​​ ಸೌಲಭ್ಯ ಇದ್ದರೆ ಸಾಕು ವೈದ್ಯಎಲ್ಲೇ ಇದ್ದರೂ ರೋಗಿಗೆ ಚಿಕಿತ್ಸೆ ನೀಡಬಹುದು ಎಂದು ಡಾ. ಪಟೇಲ್ ಹೇಳಿದ್ದಾರೆ.
ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆಯಾದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಮೈಲಿಗಲ್ಲುಗಳು ಸೃಷ್ಟಿಯಾಗುತ್ತಿವೆ. ಇತ್ತೀಚಿನ ತಂತ್ರಜ್ಞಾನದ ಸಹಾಯದಿಂದ ಭಾರತೀಯ ವೈದ್ಯರೊಬ್ಬರು 32 ಕಿ.ಮೀ ದೂರದಲ್ಲಿ ಕುಳಿತುಕೊಂಡೇ ರೋಗಿಗೆ ಆಂಜಿಯೋಪ್ಲಾಸ್ಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದು ವೈದ್ಯಕೀಯ ಕ್ಷೇತ್ರವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದೆ.

ಹಿರಿಯ ಕಾರ್ಡಿಯಾಲಾಜಿಸ್ಟ್ ಆಗಿರುವ​​ ಡಾ.ತೇಜಸ್​ ಪಟೇಲ್ ಅವರು ಗುಜರಾತ್​​ನ ಗಾಂಧಿನಗರದ ಆಕರ್ಷಧಾಮ್​​​ ಸ್ವಾಮಿನಾರಾಯಣ ಟೆಂಪಲ್​ನ ಲ್ಯಾಬ್​​ನಿಂದಲೇ ​​​32 ಕಿ.ಮೀ ದೂರದ ಆಸ್ಪತ್ರೆಯಲ್ಲಿದ್ದ ಮಹಿಳೆಗೆ ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ. ಇನ್​-ಹ್ಯೂಮನ್​ ಟೆಲಿರೋಬೋಟಿಕ್​ ಕೊರೋನರಿ ಇಂಟರ್​ವೆನ್ಷನ್​​​ ಮೂಲಕ ಈ ಸರ್ಜರಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಕ್ಯಾತ್​​ ಲ್ಯಾಬ್, ರೋಬೋಟಿಕ್ ಆರ್ಮ್​​ ಹಾಗೂ ಇಂಟರ್ನೆಟ್​​ ಸೌಲಭ್ಯ ಇದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿರೋ ರೋಗಿಗೆ ವೈದ್ಯ ಇದ್ದರೂ ರೋಗಿಗೆ ಚಿಕಿತ್ಸೆ ನೀಡಬಹುದು ಎಂದು ಡಾ.ಪಟೇಲ್ ಹೇಳಿದ್ದಾರೆ. ಹಾಗಾದರೆ, ದೇಶದಲ್ಲೇ ಇತಿಹಾಸ ಸೃಷ್ಟಿಸಿರುವ ರೋಬೋಟಿಕ್​​ ಆಪರೇಷನ್ ಹೇಗೆ ನಡೆಯಿತು ಎಂಬ ಕುತೋಹಲ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್