Back
Home » ಇತ್ತೀಚಿನ
ಕೃತಕ ಬುದ್ಧಿಮತ್ತೆಯ ಬಗ್ಗೆ ಎಚ್ಚರ ಅಗತ್ಯ ಎಂದರು ಮೈಕ್ರೋಸಾಫ್ಟ್‌ ಸಿಇಒ!..ಏಕೆ ಗೊತ್ತಾ?
Gizbot | 8th Dec, 2018 11:23 AM
 • ಏನಿದು ಕೃತಕ ಬುದ್ಧಿಮತ್ತೆ?

  ನೀವು ಸೂಪರ್‌ಸ್ಟಾರ್ ಉಪೇಂದ್ರ ಅವರ ಹಾಲಿವುಡ್ ಮತ್ತು ರಜಿನಿಕಂತ್ ಅವರ ರೋಬಾಟ್ ಸಿನಿಮಾ ನೋಡಿದ್ದರೆ ಕೃತಕ ಬುದ್ಧಿಮತ್ತೆ ಎಂದರೆ ಏನು ಎಂದು ತಿಳಿಯಬಹುದು. ಯಂತ್ರವು ತನ್ನ ಸ್ವಂತಿಕೆ ಬುದ್ದಿಯನ್ನು ಉಪಯೋಗಿಸಿ ಯೋಚನೆ ಜೊತೆಗೆ ತಾನೇ ಎಲ್ಲಾ ಕಾರ್ಯಗಳನ್ನು ಮಾಡುವಂತದನ್ನು ಸಾಮಾನ್ಯವಾಗಿ ಕೃತಕ ಬುದ್ಧಿಮತ್ತೆ ಎನ್ನುತ್ತಾರೆ.


 • ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು ಕೃತಕ ಬುದ್ದಿಮತ್ತೆ.

  ಕೃತಕ ಬುದ್ಧಿಮತ್ತೆ ಪರಿಕಲ್ಪನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಪಂಚದ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಟೆಕ್ ಪ್ರಪಂಚದ ದೈತ್ಯರಾದ ಎಲಾನ್ ಮಸ್ಕ್ , ಮಾರ್ಕ್ ಝುಕರ್‌ಬರ್ಗ್ ಮತ್ತು ಬಿಲ್‌ಗೇಟ್ಸ್ ಸೇರಿ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆ ಬಗ್ಗೆ ವಿಭನ್ನ ನಿಲುವನ್ನು ಹೊಂದಿದ್ದರು. ಈ ಬಗ್ಗೆ ಪರ ವಿರೋಧಗಳ ಮಾತುಗಳು ಸಹ ಇವರಿಂದ ಹೊರಬಿದ್ದಿದ್ದವು.


 • ನಮ್ಮನ್ನು ಮುಗಿಸಲಿದೆಯೇ ತಂತ್ರಜ್ಞಾನ?

  ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಭಿವೃದ್ದಿಯಾದರೆ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳನ್ನು ಎಲಾನ್ ಮಸ್ಕ್ ಭಯದಿಂದ ನೋಡುತ್ತಿದ್ದಾರೆ. ಯಂತ್ರಗಳು ತಾವೇ ಸ್ವತಹಃ ನಿರ್ಣಯ ಕೈಗೊಳ್ಳುವುದರಿಂದ ಭವಿಷ್ಯದಲ್ಲಿ ಮಾನವನನ್ನು ನಿರ್ಣಾಮ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.


 • ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ವಿರುದ್ದ ಯಾರಿದ್ದಾರೆ.

  ಎಲಾನ್ ಮಸ್ಕ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದರೆ, ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸಹ ಕೃತಕ ಬುದ್ಧಿಮತ್ತೆಯನ್ನು ಮನುಕುಲ ಕೊನೆಗೊಳಿಸಬಹುದಾದ ಪರಿಕಲ್ಪನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಾಳಜಿ ವಹಿಸಬೇಕಾದ ವಿಚಾರ ಎಂದಿದ್ದಾರೆ.


 • ಕೃತಕ ಬುದ್ಧಿಮತ್ತೆ ಪರ ಯಾರಿದ್ದಾರೆ?

  ಮಾರ್ಕ್ ಝುಕರ್‌ಬರ್ಗ್ ರೀತಿಯಲ್ಲಿಯೇ ಇತರ ಹೆಸರಾಂತ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದು, ಗೂಗಲ್ ಡೀಪ್ ಮೈಂಡ್‌ನ ಸಂಸ್ಥಾಪಕ ಡೆಮಿಸ್ ಹಸಾಬಿಸ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೊಂದು 'ಅಂತಿಮ ಪರಿಹಾರ' ಎಂದು ಹೇಳಿದ್ದಾರೆ. ಮೈಕ್ರೋಸಾಫ್ಟ್ ರೆಡ್ಮಂಡ್ ಲ್ಯಾಬ್ ನಿರ್ದೇಶಕ ಎರಿಕ್ ಹಾರ್ವಿಟ್ಜ್ ಅವರು ಸಹ ಮನುಷ್ಯನನ್ನು ಇನ್ನಿಲ್ಲದಷ್ಟು ಸಬಲನನ್ನಾಗಿ ಮಾಡಬಲ್ಲ ಸಾಧನ ಕೃತಕ ಬುದ್ಧಿಮತ್ತೆ ಎಂದಿದ್ದಾರೆ.


 • ಇದಕ್ಕಾಗಿ ಜಗಳವಾಡಿಕೊಂಡಿದ್ದರು ದೈತ್ಯರು

  ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹಾಗೂ ಸ್ಪೇಸ್‌ ಎಕ್ಸ್ ಮತ್ತು ಟೆಲ್ಸಾ ಮುಖ್ಯಸ್ಥ ಎಲಾನ್ ಮಸ್ಕ್ ತಂತ್ರಜ್ಞಾನ ಪ್ರಪಂಚದಲ್ಲಿ ಒಂದೇ ಸಮ ತೂಗುತ್ತಾರೆ. ಆದರೆ, ಎಲಾನ್ ಮಸ್ಕ್ ಅವರ ಈ ಅಭಿಪ್ರಾಯಕ್ಕೆ ಜುಕರ್‌ಬರ್ಗ್ 'ಇದೊಂದು ಬೇಜವಾಬ್ದಾರಿ ಹೇಳಿಕೆ, ನಾನು ಈ ಬಗ್ಗೆ ಆಶಾವಾದಿ ಎಂದಿದ್ದರು. ಇದಕ್ಕೆ ಎಲಾನ್ ಮಸ್ಕ್ ಜುಕರ್‌ಬರ್ಗ್‌ಗೆ ವಿಷಯ ಜ್ಞಾನವಿಲ್ಲ' ಎಂದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬಳಕೆಗಾಗಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದರ ಕುರಿತು ಚಿಂತಿಸಬೇಕಾದ ಸಮಯ ಬಂದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸುವಾಗ ಎಚ್ಚರಿಕೆ ಅಗತ್ಯ. ಈ ತಂತ್ರಜ್ಞಾನ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಅವರು ಹೇಳಿದ್ದಾರೆ.

ಸಿಲಿಕಾನ್‌ ವ್ಯಾಲಿ ಜೊತೆಗಿನ ಸಂಬಂಧ ಸುಧಾರಣೆಗಾಗಿ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಆಯೋಜಿಸಿದ್ದ ತಂತ್ರಜ್ಞಾನ ಶೃಂಗ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸತ್ಯ ಅವರು ಈ ರೀತಿ ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ. ಆದರೆ, 'ಫೇಷಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಬಳಕೆಯಿಂದ ಜನರಿಗೆ ಧನಾತ್ಮಕ ಪ್ರಯೋಜನಗಳು ಸಾಕಷ್ಟು ಲಭಿಸಲಿವೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಮೈಕ್ರೋಸಾಫ್ಟ್ ಕಂಪನಿಯೂ ಒಂದು' ಎಂದು ಹೇಳಿದ್ದಾರೆ.

ಇನ್ನು ಸಾಮೂಹಿಕ ಕಣ್ಗಾವಲಿಗಾಗಿ ಸರ್ಕಾರಗಳು ಫೇಷಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸುವಾಗ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಬರಬಹುದು' ಎಂದು ಮೈಕ್ರೋಸಾಫ್ಟ್‌ ಸಂಸ್ಥೆಯ ಅಧ್ಯಕ್ಷ ಬ್ರ್ಯಾಡ್ ಸ್ಮಿತ್‌ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಮತ್ತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪರ ಮತ್ತು ವಿರೋಧಗಳಿಗೆ ಚರ್ಚೆ ಪ್ರಾರಂಭವಾಗಿದೆ. ಹಾಗಾದರೆ, ಕೃತಕ ಬುದ್ಧಿಮತ್ತೆ ಎಂದರೇನು? ತಂತ್ರಜ್ಞಾನ ದೈತ್ಯರು ಈ ಬಗ್ಗೆ ವಿಭನ್ನ ದೃಷ್ಟಿಕೋನ ಹೊಂದಿರುವುದು ಏಕೆ?ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್