Back
Home » ಇತ್ತೀಚಿನ
₹20,58,56,500 ಕೋಟಿಗೆ ಹರಾಜಾಯ್ತು 'ಐನ್‌ಸ್ಟೀನ್' ಅವರು ಬರೆದಿದ್ದ ಪತ್ರ!!
Gizbot | 8th Dec, 2018 02:01 PM
  • ಆ ಪತ್ರ ಪ್ರಾಮುಖ್ಯತೆ ಪಡೆದಿದೆ

    ಜರ್ಮನ್​ ತತ್ವಜ್ಞಾನಿ ಎರಿಕ್​​ ಗಟ್​​ಕೈಂಡ್​ ಅವರ ಕೃತಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಐನ್​​​ಸ್ಟೀನ್​ ಈ ಪತ್ರವನ್ನು ಬರೆದಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆದಿದೆ. ಐನ್​​ಸ್ಟೀನ್​​ ಅವರ ನಿಧನಕ್ಕೆ ಒಂದು ವರ್ಷ ಮುಂಚೆ ಈ ಪತ್ರವನ್ನು ಬರೆದಿದ್ದರು. ತಮ್ಮದೇ ಹ್ಯಾಂಡ್​​ರೈಟಿಂಗ್​​ನಲ್ಲಿ ಜರ್ಮನ್​ ಭಾಷೆಯಲ್ಲಿ ಪತ್ರ ಬರೆದಿದ್ದ ಐನ್​​ಸ್ಟೀನ್​, ದೇವರ ನಂಬಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.


  • ಮೂಢನಂಬಿಕೆಗಳ ಮತ್ತೊಂದು ಅವತಾರ

    ನನಗೆ ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ. ಬೈಬಲ್​​ ಅನ್ನೋದು ಪುರಾತನ ದಂತಕಥೆಗಳ ಸಂಗ್ರಹ. ಈ ಬಗ್ಗೆ ಯಾವುದೇ ವ್ಯಾಖ್ಯಾನ ಬಂದರೂ, ಅದು ಎಷ್ಟು ಸೂಕ್ಷ್ಮವಾಗಿದ್ದರೂ ಕೂಡ ನನ್ನ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆದಿದ್ದರು. ತನ್ನ ಯಹೂದಿ ಧರ್ಮದ ಬಗ್ಗೆ ಮಾತನಾಡಿದ್ದ ಐನ್​​​ಸ್ಟೀನ್​, ಅದೂ ಕೂಡ ಎಲ್ಲಾ ಧರ್ಮಗಳಂತೆಯೇ ಪುರಾತನ ಮೂಢನಂಬಿಕೆಗಳ ಮತ್ತೊಂದು ಅವತಾರ ಎಂದಿದ್ದರು.


  • 'ಗಾಡ್​​ ಲೆಟರ್'​ ಎಂದು ಕರೆದದ್ದು ಏಕೆ?

    ಎರಿಕ್​​ ಗಟ್​​ಕೈಂಡ್ ಅವರು 'ಚೂಸ್ ಲೈವ್: ದಿ ಬಿಬ್ಲಿಕಲ್ ಕಾಲ್ ಟು ರಿವೋಲ್ಟ್' ಪುಸ್ತಕದ ಪ್ರತಿಯನ್ನು ಐನ್‌ಸ್ಟೀನ್‌ಗೆ ಕಳಿಸಿದ್ದರು. ಇದಕ್ಕೆ ಪತ್ರದ ಮೂಲಕ ಐನ್‌ಸ್ಟೀನ್ ಪ್ರತಿಕ್ರಿಯಿಸಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆಯುತ್ತಿತ್ತು. ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ ಎಂದು ಐನ್‌ಸ್ಟೀನ್ ಅಭಿಪ್ರಾಯಪಟ್ಟಿದ್ದನ್ನು ಗಾಡ್ ಲೆಟರ್ ಎಂದು ಕರೆಯಲಾಗಿದೆ.


  • ಹರಾಜು ಆಗುತ್ತಿರುವುದು ಇದೇ ಮೊದಲೇನಲ್ಲ

    ಐನ್​​ಸ್ಟೀನ್​ ಅವರ ಪತ್ರಗಳನ್ನ ಹರಾಜು ಹಾಕುತ್ತಿರುವುದು ಇದೇ ಮೊದಲೇನಲ್ಲ. ತನ್ನನ್ನು ಭೇಟಿಯಾಗಲು ನಿರಾಕರಿಸಿದ್ದ ಇಟಲಿಯ ಕೆಮಿಸ್ಟ್ರಿ ವಿದ್ಯಾರ್ಥಿಯೊಬ್ಬನಿಗೆ ಐನ್​ಸ್ಟೀನ್​ ಬರೆದಿದ್ದ ಪತ್ರ ಕಳೆದ ವರ್ಷ 6,100 ಡಾಲರ್​( ಸುಮಾರು ₹4 ಲಕ್ಷ)ಕ್ಕೆ ಮಾರಾಟವಾಗಿತ್ತು. ಹಾಗೇಯೇ, 1928ರಲ್ಲಿ ಐನ್​​ಸ್ಟೀನ್,​​​ ಥಿಯರಿ ಆಫ್​ ರಿಲೇಟಿವಿಟಿಯ ಮೂರನೇ ಹಂತದ ಬಗ್ಗೆ ಬರೆದಿದ್ದ ಟಿಪ್ಪಣಿಯೊಂದು 103,000 ಡಾಲರ್​ (ಸುಮಾರು ₹73 ಲಕ್ಷ) ಕ್ಕೆ ಸೇಲ್ ಆಗಿತ್ತು.


  • 11 ಕೋಟಿ ಸುಖೀ ಜೀವನದ ನೋಟ್ ಮಾರಾಟವಾಗಿತ್ತು!

    ಅಲ್ಲದೆ ಕಳೆದ ವರ್ಷ, ಸುಖೀ ಜೀವನದ ಬಗ್ಗೆ ಐನ್​​ಸ್ಟೀನ್​ ನೀಡಿದ್ದ ಸಲಹೆಯ ನೋಟ್​ವೊಂದು 1.56 ಮಿಲಿಯನ್​ ಡಾಲರ್​(ಸುಮಾರು ₹11 ಕೋಟಿ) ಗೆ ಹರಾಜಾಗಿತ್ತು. ಈ ನೋಟ್​​ನಲ್ಲಿ ಐನ್​ಸ್ಟೀನ್​​ ಒಂದೇ ವಾಖ್ಯದಲ್ಲಿ ಸುಖೀ ಜೀವನದ ಸೂತ್ರವನ್ನ ಹೇಳಿದ್ದರು. ಯಶಸ್ಸಿನ ಹಂಬಲ ಹಾಗೂ ಅದರ ಜೊತೆ ಬರುವ ಚಡಪಡಿಕೆಗಿಂತ, ಶಾಂತಿಯುತವಾದ ಹಾಗೂ ವಿನಮ್ರವಾದ ಜೀವನ ಹೆಚ್ಚು ಸಂತೋಷ ತರುತ್ತದೆ ಎಂದು ಐನ್​ಸ್ಟೀನ್​​ ಅವರು ಬರೆದಿದ್ದರು.




ವಿಶ್ವ ವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರು ಬರೆದ ಪತ್ರವೊಂದು ಬರೋಬ್ಬರಿ 2.9 ಮಿಲಿಯನ್​ ಡಾಲರ್​(₹20,58,56,500 ಕೋಟಿ)ಗೆ ಹರಾಜಾಗಿ ಆಶ್ಚರ್ಯ ಮೂಡಿಸಿದೆ. ದೇವರು ಹಾಗೂ ಧರ್ಮದ ಕುರಿತು​​ ಐನ್​​ಸ್ಟೀನ್ ಅವರುವ ಬರೆದ ಈ ಪತ್ರ 'ಗಾಡ್​​ ಲೆಟರ್'​ ಎಂದೇ ಕರೆಯಲಾಗುತ್ತಿದ್ದು, ಇದೀಗ ನಿರೀಕ್ಷೆಗೂ ಮೀರಿ ಭಾರೀ ಬೆಲೆಗೆ ಹರಾಜಿನಲ್ಲಿ ಮಾರಾಟವಾಗಿದೆ.

ನೊಬೆಲ್​​​ ಪ್ರಶಸ್ತಿ ಪುರಸ್ಕೃತ ಐನ್​​ಸ್ಟೀನ್ ಅವರು ತಮ್ಮ ಜೀವನದ ಕೊನೆಯ ಭಾಗದಲ್ಲಿ ಅಂದರೆ, ಐನ್‌ಸ್ಟೀನ್ ಮೃತರಾಗುವುದಕ್ಕಿಂತ ಒಂದು ವರ್ಷ ಮೊದಲು ಈ ಪತ್ರವನ್ನು ಬರೆದಿದ್ದರು. ಧಾರ್ಮಿಕ ನಂಬಿಕೆ ಹಾಗೂ ತತ್ವಜ್ಞಾನ ಕುರಿ ತಂತೆ ಅವರು ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಈ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ' ಎಂದು ಪತ್ರ ಹರಾಜು ಹಾಕಿರುವ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜ.3, 1954 ಎಂದು ದಿನಾಂಕ ನಮೂದಾಗಿರುವ ಎರಡು ಪುಟಗಳ ಪತ್ರವನ್ನು ಜರ್ಮನಿಯ ತತ್ವಜ್ಞಾನಿ ಎರಿಕ್ ಗುಟ್ಕಿಂಡ್ ಅವರಿಗೆ ಐನ್‌ಸ್ಟೀನ್ ಅವರು ಬರೆದಿದ್ದರು ಎಂದು ಸಂಸ್ಥೆಯು ತಿಳಿಸಿದೆ. ಹಾಗಾದರೆ, ​​ಐನ್​​ಸ್ಟೀನ್ ಅವರು ಬರೆದಿದ್ದ ಪತ್ರದಲ್ಲಿ ಏನನ್ನು ಬರೆಯಲಾಗಿತ್ತು? ಅದನ್ನು 'ಗಾಡ್​​ ಲೆಟರ್'​ ಎಂದು ಕರೆದದ್ದು ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

   
 
ಹೆಲ್ತ್