Back
Home » ಇತ್ತೀಚಿನ
ದುಬಾರಿ ಬೆಲೆಯಲ್ಲಿ ಒನ್‌ಪ್ಲಸ್ 5ಜಿ!..ಆದರೆ ನೀವಂದುಕೊಳ್ಳುವಷ್ಟು 5ಜಿ ವೇಗ ಇಲ್ಲ!!
Gizbot | 8th Dec, 2018 04:10 PM
 • ಯಶಸ್ಸಿನ ಮಂತ್ರ ಫಲಿಸುತ್ತಿಲ್ಲ!

  ಇದು ಹಣಕ್ಕೆ ತಕ್ಕ ಪೋನ್ ನೀಡುತ್ತದೆ ಎಂದು ನಂಬಲಾಗಿರುವ ಬ್ರ್ಯಾಂಡ್ ನ ಅಭಿಮಾನಿಗಳಿಗೆ ಬಹಳ ಖುಷಿಯ ವಿಚಾರವಾಗಿತ್ತು. ಅವರು ಒನ್ ಪ್ಲಸ್ ಕಂಪೆನಿಯ ಈ ಪ್ರಕಟಣೆಯನ್ನು ಸ್ವಾಗತಿಸಿದ್ದರು. ಆದರೆ ಅವರ ಮುಂದಿನ ಸಂದರ್ಶನದಲ್ಲಿ ಹೇಳಲಾಗಿರುವ ಪ್ರಕಾರ ತಾವು ಅಂದುಕೊಂಡಿದ್ದ 5ಜಿ ಪ್ರೊಜೆಕ್ಟ್ ನ್ನು ಸಾಧಿಸುವುದರಲ್ಲಿ ಕಂಪೆನಿಯು ವಾಣಿಜ್ಯವಾಗಿ ಹಿನ್ನಡೆ ಅನುಭವಿಸುತ್ತಿದೆ ಎಂದು ತಿಳಿಯಲಾಗಿದೆ. ಹೌದು 5ಜಿ ಫೋನ್ ಬಿಡುಗಡೆಯ ಯಶಸ್ಸಿನ ಮಂತ್ರ ಒನ್ ಪ್ಲಸ್ ಗೆ ಅಂದುಕೊಂಡಷ್ಟು ಸುಲಭದಲ್ಲಿ ಇಲ್ಲ.


 • ಬಹಳ ದುಬಾರಿ 5ಜಿ ಫೋನ್:

  ಸಿಎನ್ಇಟಿ ಗೆ ಒನ್ ಪ್ಲಸ್ ಸಿಇಓ ಪಿಟ್ ಲೌ ನೀಡಿರುವ ಸಂದರ್ಶನದಲ್ಲಿ 2019 ರ ಪ್ರಾರಂಭದಲ್ಲಿ ಖಂಡಿತ 5ಜಿ ಸ್ಮಾರ್ಟ್ ಫೋನ್ ಬಿಡುಗಡೆಯಾಗುತ್ತದೆ. ಆದರೆ ಸದ್ಯದ ಒನ್ ಪ್ಲಸ್ ಸಂಸ್ಥೆಯ ಫೋನಿಗಿರುವ ಬೆಲೆಯನ್ನು ಇದು ಹೊಂದಿರುವುದಿಲ್ಲ ಬದಲಾಗಿ ಸ್ವಲ್ಪ ದುಬಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.


 • ಬೆಲೆ ಎಷ್ಟಿರಬಹುದು?

  ಪಿಟ್ ಹೇಳುವ ಪ್ರಕಾರ 5ಜಿ ಸ್ಮಾರ್ಟ್ ಫೋನ್ ಸದ್ಯ ಒನ್ ಪ್ಲಸ್ 6ಟಿ ಮಾರಾಟವಾಗುತ್ತಿರುವ ಬೆಲೆಗಿಂತ 200-300 ಡಾಲರ್ ನಷ್ಟು ಅಧಿಕವಾಗಿರುವ ಸಾಧ್ಯತೆ ಇದೆ.ಇದು ಒನ್ ಪ್ಲಸ್ ನ ವಿಭಿನ್ನ ಹೆಜ್ಜೆಯಾಗಿರಲಿದೆ. ಇದುವರೆಗೆ ಇತರೆ ಬ್ರ್ಯಾಂಡ್ ಗಳಿಗೆ ಹೋಲಿಸಿದರೆ ಒನ್ ಪ್ಲಸ್ ತನ್ನ ಸ್ಮಾರ್ಟ್ ಫೋನ್ ಗಳಿಗೆ ಕೈಗೆಟುಕುವ ಬೆಲೆಯನ್ನು ನೀಡುತ್ತಿತ್ತು ಮತ್ತು ಇತರೆ ಬ್ರ್ಯಾಂಡ್ ನ ಫೋನ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು.


 • ದುಬಾರಿ ಬೆಲೆಗೆ ಕಾರಣವೇನು?

  ಈ ರೀತಿ ಬೆಲೆಯಲ್ಲಿ ವ್ಯತ್ಯಾಸವಾಗುವುದಕ್ಕೆ ಕಾರಣವೇನು ಎಂಬುದನ್ನು ಕೂಡ ಲೀ ಸ್ಪಷ್ಟಪಡಿಸಿದ್ದಾರೆ. ತಂತ್ರಜ್ಞಾನ ಮತ್ತು ಆರ್&ಡಿ ಮೊತ್ತ ಮತ್ತು ಹೊಸ ಡಿವೈಸ್ ನ ಅಭಿವೃದ್ಧಿಗಾಗಿ ತಗುಲುವ ಒಟ್ಟು ವೆಚ್ಚವು 5ಜಿ ಫೋನ್ ದುಬಾರಿಯಾಗುವಂತೆ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಾಗಾಗಿ ಈ ಫೋನ್ ಮುಂದಿನ ದಿನಗಳಲ್ಲಿ ಈಗಾಗಲೇ ಇರುವ ಸ್ಯಾಮ್ ಸಂಗ್, ಆಪಲ್ ಮತ್ತು ಗೂಗಲ್ ನ ದುಬಾರಿ ಫ್ಲ್ಯಾಗ್ ಶಿಪ್ ಫೋನ್ ಗಳಿಗೆ ಸ್ಪರ್ಧೆಯೊಡ್ಡಲೂ ಬಹುದು.


 • ಆರಂಭಿಕವಾಗಿ ಅತ್ಯುತ್ತಮ ತಂತ್ರಜ್ಞಾನವಿಲ್ಲ!

  ಅಷ್ಟೇ ಅಲ್ಲ ಈ ಹೊಸ ತಂತ್ರಗಾರಿಕೆಯನ್ನು ಅತ್ಯಂತ ವೇಗವಾಗಿ ಮತ್ತು ಹೆಚ್ಚು ಪ್ರಮಾಣೀಕರಿಸದೇ ಅಳವಡಿಕೆ ಮಾಡುವುದರ ಪರಿಣಾಮವಾಗಿ ಒನ್ ಪ್ಲಸ್ ಪ್ರಾರಂಭಿಕವಾಗಿ ಅತ್ಯುತ್ತಮ ತಂತ್ರಜ್ಞಾನವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.


 • 5ಜಿ ಫೋನ್ ನಲ್ಲಿ ಏನಿರಲಿದೆ?

  ಮೊದಲ 5ಜಿ ಫೋನ್ ನಲ್ಲಿ ಎರಡು ಮಾಡೆಮ್ ಗಳಿರಲಿದೆ- 4ಜಿ ಮಾಡೆಮ್ ಮತ್ತು 5ಜಿ ಮಾಡೆಮ್. ಕ್ವಾಲ್ಕಂ ನ X50 5G ಮಾಡೆಮ್ ಮಿಲಿಮೀಟರ್ ವೇವ್ ಬ್ಯಾಂಡ್ ನ್ನು ಕೂಡ ಬೆಂಬಲಿಸುತ್ತದೆ ಆದರೆ ಡಿವೈಸ್ ಸ್ವಲ್ಪ ದಪ್ಪವಾಗುವಂತೆ ಮಾಡುತ್ತದೆ. ಇದನ್ನು ಒನ್ ಪ್ಲಸ್ ಬಯಸುವುದಿಲ್ಲ ಹಾಗಾಗಿ ಈ 5ಜಿ ಹ್ಯಾಂಡ್ ಸೆಟ್ ನಲ್ಲಿ 4ಜಿ ಮತ್ತು 5ಜಿ ಎರಡೂ ಮಾಡೆಮ್ ಗಳನ್ನು ಸೇರಿಸುವುದಕ್ಕಾಗಿ ವಿಭಿನ್ನ ಜೋಡಣೆಯನ್ನು ಮಾಡಲಾಗುತ್ತದೆ.


 • ಡೌನ್ ಲೋಡ್ ಸ್ಪೀಡ್ ಹೇಗಿರುತ್ತದೆ?

  ಒನ್ ಪ್ಲಸ್ ಆಯ್ಕೆ ಮಾಡಿರುವ ಮಾಡೆಮ್ ಗಳಿಂದಾಗಿ ಮಿಲಿಮೀಟರ್ ವೇವ್ ತಂತ್ರಗಾರಿಕೆಯನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ ಆದರೆ ಸಬ್-6GHz ಬ್ಯಾಂಡ್ ವಿಡ್ತ್ ನ್ನು ಇದು ಬೆಂಬಲಿಸುತ್ತದೆ. ಅದರೆ ಒನ್ ಪ್ಲಸ್ 5ಜಿ ಫೋನ್ 500 Mbps ವರೆಗಿನ ಡೌನ್ ಲೋಡ್ ಸ್ಪೀಡ್ ನ್ನು ತಲುಪಲು ಸಾಧ್ಯವಾಗುತ್ತದೆ. ಇದು 5Gbps ಮಿಲಿಮೀಟರ್ ವೇವ್ ಸ್ಪೆಕ್ಟ್ರಮ್ ಗಿಂತ ಇದು ಬಹಳ ಕಡಿಮೆಯಾಗಿರುತ್ತದೆ.


 • ಭವಿಷ್ಯದಲ್ಲಿ ಅಭಿವೃದ್ಧಿ ಖಚಿತ:

  ಆದರೆ ಒನ್ ಪ್ಲಸ್ ನಂಬಿಕೆ ಏನೆಂದರೆ ಆಂಟೆನಾ ತಂತ್ರಜ್ಞಾನವನ್ನು 2019 ರ ದ್ವಿತಿಯಾರ್ಧದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಮತ್ತು 5ಜಿ ಸಾಧನಗಳು ಮುಂದಿನ ದಿನಗಳಲ್ಲಿ ಕಂಪೆನಿಯ ಸಾಮಾನ್ಯ ಡಿಸೈನ್ ಗಳಾಗಿ ಪರಿವರ್ತಿತವಾಗಲಿದೆ.


 • ಕಲಿಕೆಗೆ ಅವಕಾಶ:

  ನಿಜಕ್ಕೂ ಹೇಳಬೇಕೆಂದರೆ ಒನ್ ಪ್ಲಸ್ ಬಿಡುಗಡೆಗೊಳಿಸುವ 5ಜಿ ಸ್ಮಾರ್ಟ್ ಫೋನ್ ಕಂಪೆನಿಯ ಕಲ್ಪನೆಯಂತೆ ಮೂಡಿಬರುವುದಿಲ್ಲ. ಆದರೆ ಇದು ಅಲ್ಲಿನ ಇಂಜಿನಿಯರ್ ಗಳಿಗೆ ಭವಿಷ್ಯದ ತಂತ್ರಜ್ಞಾನವನ್ನು ಕಲಿಯುವುದಕ್ಕೆ ಮತ್ತು ಅದನ್ನು ಅಭಿವೃದ್ಧಿಪಡಿಸುವುದಕ್ಕೆ ಒಂದು ಉತ್ತಮ ವೇದಿಕೆಯಾಗಿ ಮಾರ್ಪಡಲಿದೆ. ಆ ಮೂಲಕ ಮುಂದಿನ ದಿನಗಳಲ್ಲಿ 5ಜಿ ಫೋನ್ ಗಳು ಹೊಸ ಸ್ಮಾರ್ಟ್ ಫೋನ್ ಶಕೆಯನ್ನು ಆರಂಭಿಸುತ್ತದೆ ಎಂಬುದು ಮಾತ್ರ ನಿಜ.
ಈ ಬಾರಿಯ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಶೃಂಗಸಭೆಯಲ್ಲಿ 5ಜಿ ಒಂದು ದೊಡ್ಡ ಚರ್ಚೆಗೆ ಒಳಪಟ್ಟ ವಿಚಾರವಾಗಿತ್ತು. ಮುಂದಿನ ಜನರೇಷನ್ನಿನ ಸ್ನ್ಯಾಪ್ ಡ್ರ್ಯಾಗನ್ 855 ಚಿಪ್ ಜೊತೆಗೆ 5ಜಿ ನೆಟ್ ವರ್ಕ್ ಗೆ ಬೆಂಬಲವಾಗುತ್ತದೆ ಎಂಬ ವಿಚಾರವು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಒನ್ ಪ್ಲಸ್ ಕೂಡ ಈ ಸರದಿಯಲ್ಲಿ ಸಾಗುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ ಮತ್ತು ವಿಶ್ವದ ಮೊದಲ 5ಜಿ ಯನ್ನು ಬೆಂಬಲಿಸುವ ಸ್ಮಾರ್ಟ್ ಫೋನ್ ನ್ನು 2019 ರಲ್ಲಿ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿತ್ತು.

   
 
ಹೆಲ್ತ್