Back
Home » ಇತ್ತೀಚಿನ
ಕರೆಗಳನ್ನು ಸ್ವೀಕರಿಸುವ ಮತ್ತು ಮಾಡುವ ವಿಶೇಷ ಸೌಲಭ್ಯದ ಕನ್ನಡಕ ಮಾರುಕಟ್ಟೆಗೆ!
Gizbot | 8th Dec, 2018 06:01 PM
 • ಮೈಕ್ರೋಫೋನ್,ಸ್ಪೀಕರ್ ಇರುವ ಕನ್ನಡಕ:

  ಇದೀಗ ಬೋಸ್ ನ ಸರದಿ. ಮೈಕ್ರೋಫೋನ್ ಮತ್ತು ಸ್ಪೀಕರ್ ಗಳನ್ನು ಒಳಗೊಂಡಿರುವ ಒಂದು ಸೆಟ್ ಸನ್ ಗ್ಲಾಸ್ ಇದು. ಎಆರ್-ಆಧಾರಿತ ಸನ್ ಗ್ಲಾಸ್ ಗಳಿಗೆ ಈಗಾಗಲೇ ಯುಎಸ್ ನಲ್ಲಿ ಪ್ರೀಆರ್ಡರ್ ಶುರುವಾಗಿದೆ ಮತ್ತು ಇದರ ಬೆಲೆ 199 ಯುಸ್ ಡಾಲರ್. ಅಂದಾಜು ಭಾರತೀಯ ಬೆಲೆಯಲ್ಲಿ 15,000 ರುಪಾಯಿಗಳು.


 • ಏನೇನು ಕೆಲಸ ಮಾಡುತ್ತೆ?

  ಹಾಗಾದ್ರೆ ಈ ಸನ್ ಗ್ಲಾಸ್ ಗಳು ಅದ್ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆ ಈಗ ನಿಮ್ಮನ್ನ ಕಾಡಲು ಶುರುವಾಗಿರಬಹುದು. ಸಿಎನ್ಇಟಿ ವರದಿಯು ಹೇಳುವಂತೆ ಬೋಸ್ ಫ್ರೇಮ್ಸ್(ಕನ್ನಡಕಗಳು) ಮ್ಯೂಸಿಕ್ ಅನ್ನು ಸ್ಟ್ರೀಮ್ ಮಾಡುತ್ತದೆ, ಕರೆಗಳನ್ನು ಸ್ವೀಕರಿಸಲು ಮತ್ತು ಮಾಡಲು ನೆರವಾಗುತ್ತದೆ ಮತ್ತು ಅಲೆಕ್ಸಾ,ಸಿರಿ, ಗೂಗಲ್ ಅಸಿಸ್ಟೆಂಟ್ ನಂತಹ ವರ್ಚುವಲ್ ಅಸಿಸ್ಟೆಂಟ್ ಜೊತೆಗೆ ಕಾರ್ಯ ನಿರ್ವಹಿಸುತ್ತದೆ.


 • ನೋಡೊಕೆ ಹೇಗಿರುತ್ತೆ ಗೊತ್ತಾ?

  ಈ ಕನ್ನಡಕಗಳು ಸಾಮಾನ್ಯ ಕನ್ನಡಕಗಳಂತೆಯೇ ಇದೆ ಮತ್ತು ಇದರ ತೂಕ 45 ಗ್ರಾಮ್ ಗಳು. ಎರಡು ವಿಭಿನ್ನ ಶೇಪ್ ನಲ್ಲಿ ಇದು ಲಭ್ಯವಾಗುತ್ತದೆ. ಒಂದು ವೇಫೇರರ್ ಮತ್ತೊಂದು ಸ್ವಲ್ಪ ದುಂಡಗಿನ ಫ್ರೇಮ್ ಆಗಿರುತ್ತದೆ. ಈ ಗ್ಲಾಸ್ ಗಳ ಚೌಕಟ್ಟುಗಳು ಯುವಿ-ಗಳನ್ನು ತಡೆಗಟ್ಟುವಂತಹ ಬಣ್ಣದ ಛಾಯೆಯನ್ನು ಹೊಂದಿರುತ್ತದೆ ಮತ್ತು ಇದರ ಬ್ಯಾಟರಿ ಸಾಮರ್ಥ್ಯ 12 ಘಂಟೆಗಳ ಸ್ಟ್ಯಾಂಡ್ ಬೈ ಜೀವಿತಾವಧಿಯನ್ನು ಹೊಂದಿರುತ್ತದೆ.


 • 2019 ರಿಂದ ಗ್ರಾಹಕರ ಕೈಗೆ:

  ಈ ವರ್ಷದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಬೋಸ್ ಇಂತಹ ಕನ್ನಡಕ ತಯಾರಿಕೆಯ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ವರದಿಯ ಪ್ರಕಾರ 2019 ಕ್ಕೆ ಇದನ್ನು ಬಿಡುಗಡೆಗೊಳಿಸಲು ಬೋಸ್ ಚಿಂತಿಸುತ್ತಿದೆ ಎಂದು ಕೂಡ ತಿಳಿದಿತ್ತು. ಇದೀಗ ಈ ಬೋಸ್ ಕನ್ನಡಕಗಳು ಜನವರಿ 2019 ರಿಂದ ಗ್ರಾಹಕರ ಕೈಗೆ ತಲುಪಲಿದೆ.


 • ಮೊದಲ ಆಡಿಯೋ ಕನ್ನಡಕ ಅಲ್ಲ!

  ಹಾಗಂತ ಇದೇನು ಮೊದಲ ಬಾರಿಗೆ ಬಿಲ್ಟ್-ಇನ್ ಆಡಿಯೋ ಫೀಚರ್ ಇರುವ ಕನ್ನಡಕವನ್ನು ಬಿಡುಗಡೆಗೊಳಿಸುತ್ತಿರುವುದಲ್ಲ. ಪ್ರಸಿದ್ಧ ಬ್ರ್ಯಾಂಡ್ ಆಗಿರುವ ಓಕ್ಲೇ 2016 ರಲ್ಲಿ ಇಂತಹ ಕನ್ನಡ ಬಿಡುಗಡೆಗೊಳಿಸಿತ್ತು ಆದರೆ ಅದು ಮಾರುಕಟ್ಟೆ ಪ್ರವೇಶಿಸದೇ ಫ್ಲಾಪ್ ಆಯ್ತು. ಆದರೆ ಬೋಸ್ ಬ್ರ್ಯಾಂಡ್ ಹೆಸರೇ ಒಂದು ಮಾರುಕಟ್ಟೆಯ ಟ್ರಿಕ್ಸ್ ಆಗುವ ಸಾಧ್ಯತೆ ಇದೆ.


 • ನಿದ್ದೆಗಾಗಿ ಇಯರ್ ಫೋನ್:

  2018 ರಲ್ಲಿ ಬೋಸ್ ಆಫ್ ಬೀಟ್ ಬಿಡುಗಡೆಯ ಆನಂದವನ್ನು ಹೊಂದಿದೆ. ವರ್ಷದ ಆರಂಭದಲ್ಲಿ ಸ್ಲೀಪ್ ಬಡ್ಸ್ ಗಳನ್ನು ಅಂದರೆ ನಿದ್ದೆ ಉತ್ತಮ ನಿದ್ದೆಗಾಗಿ ತಯಾರಿಸಿರುವ ಇಯರ್ ಫೋನ್ ಗಳನ್ನು ಬಿಡುಗಡೆಗೊಳಿಸಿತು.ಅದರ ಬೆಲೆ 22,900 ರುಪಾಯಿಗಳಾಗಿತ್ತು. ಸೆಪ್ಟೆಂಬರ್ ನಲ್ಲಿ ಅದು ಬಿಡುಗಡೆಗೊಂಡಿತ್ತು. ಆಶ್ಚರ್ಯದ ಸಂಗತಿ ಅಂದರೆ ಅದರಿಂದ ಮ್ಯೂಸಿಕ್ ನ್ನು ಪ್ಲೇ ಮಾಡುವುದಕ್ಕಾಗಲೀ ಅಥವಾ ಸ್ಟ್ರೀಮ್ ಮಾಡುವುದಕ್ಕಾಗಲೀ ಸಾಧ್ಯವಿಲ್ಲ. ಹೆಸರೇ ಸೂಚಿಸುವಂತೆ ಸ್ಲೀಪ್ ಬಡ್ಸ್ ಗಳು ಮನುಷ್ಯನ ನಿದ್ರಾಹೀನತೆಯನ್ನು ತಪ್ಪಿಸಿ ಉತ್ತಮ ನಿದ್ದೆ ಬರುವಂತೆ ಮಾಡಲು ಡಿಸೈನ್ ಮಾಡಿದ ಡಿವೈಸ್ ಅಷ್ಟೇ.

  ಇನ್ನು ಕನ್ನಡಕದ ವಿಚಾರಕ್ಕೆ ಬಂದರೆ ಗೂಗಲ್ ಗ್ಲಾಸ್ ಗೆ ಸಿಗದ ಮನ್ನಣೆ ಇದಕ್ಕೆ ಸಿಗುತ್ತಾ ಕಾದುನೋಡಬೇಕು. ಗ್ರಾಹಕರು ಈ ಕನ್ನಡಕಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ನಿಜಕ್ಕೂ ಕುತೂಹಲಕಾರಿಯಾಗಿರುವ ಸಂಗತಿ.
ಕನ್ನಡಕ ತಯಾರಿಕೆಯಲ್ಲಿ ನಡೆದ ತಂತ್ರಜ್ಞಾನದ ಸಂಶೋಧನೆಗಳಿಗೆ ಧನಾತ್ಮಕ ಪ್ರತಿಕ್ರಿಯೆಗಳು ಬಂದಿರುವುದು ಇದುವರೆಗೂ ಬಹಳ ಕಡಿಮೆ. ಉದಾಹರಣೆ ಗೂಗಲ್ ಗ್ಲಾಸ್ ಗಳು ಬಿಡುಗಡೆಗೊಂಡಿರುವುದನ್ನೇ ನೀವು ನೆನಪಿಸಿಕೊಳ್ಳಬಹುದು. ಆದರೂ ಕನ್ನಡಕ ತಯಾರಿಕಾ ಸಂಸ್ಥೆಗಳು ಹೊಸತನ್ನು ಕಂಡುಹಿಡಿಯುವುದರಲ್ಲಿ ಬ್ಯುಸಿಯಾಗಿದೆ. ಒಂದಲ್ಲ ಒಂದು ವಿಭಿನ್ನತೆಯನ್ನು ಸಂಶೋಧಿಸುವುದರಲ್ಲಿ ಮಗ್ನವಾಗೇ ಇರುತ್ತದೆ.

   
 
ಹೆಲ್ತ್