Back
Home » ಆರೋಗ್ಯ
ಸಲಿಂಗಿ ಪುರುಷರಲ್ಲಿ ಹೆಚ್ಚಾಗಿ ಕಂಡುಬರುವ ಈ 'ಸಿಫಿಲಿಸ್' ಕಾಯಿಲೆ, ಈಗ ಮಹಿಳೆಯರಿಗೂ ಕಾಡತೊಡಗಿದೆ!
Boldsky | 10th Dec, 2018 03:56 PM
 • ಮೊದಲ ಎರಡು ಹಂತಗಳಲ್ಲಿ

  ಮೊದಲ ಎರಡು ಹಂತಗಳಲ್ಲಿ, ಈ ರೋಗ ಇರುವಿಕೆ ಖಚಿತವಾದರೆ, ಇದಕ್ಕೆ ತಕ್ಷಣವೇ ಸೂಕ್ತ ಚಿಕಿತ್ಸೆಗಳು ಹಾಗೂ ಪ್ರತಿಜೀವಕ ಔಷಧಿ ಮತ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮೊದಲಿನ ಆರೋಗ್ಯ ಪಡೆಯಲು ಸಾಧ್ಯ. ಆದರೆ ತೊಂದರೆ ಇರುವುದೇ ಇಲ್ಲಿ, ಅಂದರೆ ಸೋಂಕು ಪ್ರಾರಂಭವಾದ ಒಂದು ವರ್ಷದವರೆಗೂ ಇದರ ಇರುವಿಕೆಯೇ ಗೊತ್ತಾಗದಿರುವ ಕಾರಣ ಸದ್ದಿಲ್ಲದೇ ಈ ಎರಡೂ ಹಂತಗಳು ದಾಟಿ ಹೋಗುತ್ತವೆ. ಈ ಬ್ಯಾಕ್ಟೀರಿಯಾಗಳು ದೇಹದಡಿಯಲ್ಲಿಯೇ ನಿಧಾನವಾಗಿ ಬೆಳೆಯುತ್ತಾ ರೋಗ ಇರುವ ಲಕ್ಷಣಗಳನ್ನು ತೋರದೇ ವೃದ್ದಿಗೊಳ್ಳುತ್ತಾ ಹೋಗುತ್ತವೆ. ಸಾಮಾನ್ಯವಾಗಿ ಒಂದು ವರ್ಷದ ಬಳಿಕವೇ ಇದರ ಲಕ್ಷಣಗಳು ತೋರಲು ಪ್ರಾರಂಭವಾದರೂ ಕೆಲವರಲ್ಲಿ, ಇದು ಕೆಲವಾರು ವರ್ಷಗಳ ಬಳಿಕವೇ ಪ್ರಕಟಗೊಳ್ಳಲುತೊಡಗಬಹುದು. ಇದಕ್ಕೆ ದೇಹದ ರೋಗ ನಿರೋಧಕ ವ್ಯವಸ್ಥೆ ಅತ್ಯುತ್ತಮವಾಗಿ ಪ್ರತಿರೋಧ ಒಡ್ಡುವುದೇ ಕಾರಣ.


 • ಮೊದಲ ಎರಡು ಹಂತಗಳಲ್ಲಿ

  ಕೆಲವು ಸಂದರ್ಭಗಳಲ್ಲಿ, ಹತ್ತರಿಂದ ಮೂವತ್ತು ವರ್ಷಗಳ ಬಳಿಕವೂ ಈ ಲಕ್ಷಣಗಳು ಕಾಣಬರಬಹುದು. ಆದರೆ ಯಾವಾಗ ಮೊದಲ ಎರಡು ಹಂತಗಳು ದಾಟಿ ಮೂರನೆಯ ಹಂತ ಪ್ರಾರಂಭವಾಯಿಯೋ, ಆಗ ಈ ಬ್ಯಾಕ್ಟೀರಿಯಾಗಳು ಒಮ್ಮೆಲೇ ಇಡಿಯ ದೇಹದ ಮೇಲೆ ಏಕಾ ಏಕಿ ಧಾಳಿಯಿಟ್ಟು ಮೆದುಳು, ನರವ್ಯವಸ್ಥೆ, ಕಣ್ಣುಗಳು, ಹೃದಯ ಮೊದಲಾದ ಪ್ರಮುಖ ಅಂಗಗಳ ಕ್ಷಮತೆಯನ್ನು ಕುಸಿಯುವಂತೆ ಮಾಡುತ್ತವೆ. ಪರಿಣಾಮವಾಗಿ ಅಂಧತ್ವ, ಪಾರ್ಶ್ವವಾಯು ಹಾಗೂ ಪ್ರಮುಖ ಅಂಗವೊಂದರ ವೈಫಲ್ಯದಿಂದ ಸಾವು ಸಹಾ ಸಂಭವಿಸಬಹುದು.ವೈದ್ಯರ ಪ್ರಕಾರ ಈ ರೋಗದ ಇರುವಿಕೆಯನ್ನು ಆದಷ್ಟೂ ಬೇಗನೇ ಕಂಡುಕೊಳ್ಳುವುದು ಅಗತ್ಯವಾಗಿದೆ, ಒಂದು ವೇಳೆ ಇದು ಮೂರನೆಯ ಹಂತಕ್ಕೆ ದಾಟಿಬಿಟ್ಟರೆ, ಆಮೇಲೆ ಮೆದುಳಿನ ಮೇಲೆ ಈ ರೋಗದ ಪರಿಣಾಮದಿಂದ ಒಟ್ಟಾರೆ ಆರೋಗ್ಯವೇ ಬಾಧೆಗೊಳಗಾಗುವುದು ಮಾತ್ರವಲ್ಲ, ಗರ್ಭಾವಸ್ಥೆಯಲ್ಲಿದ್ದಾಗ ಕಂಡು ಬಂದರೆ ಇದು ಗರ್ಭದಲ್ಲಿರುವ ಮಗುವಿಗೂ ಆವರಿಸಬಹುದು"


 • ಮೊದಲ ಎರಡು ಹಂತಗಳಲ್ಲಿ

  ಈ ರೋಗ ಮೊದಲ ಮತ್ತು ಎರಡನೆಯ ಹಂತದಲ್ಲಿದ್ದಾಗ ಕೆಲವು ಸೂಕ್ಷ್ಮ ಲಕ್ಷಣಗಳನ್ನು ಪ್ರಕಟಿಸುತ್ತದೆ ಹಾಗೂ ಇವುಗಳನ್ನು ಕೆಲವರು ಮಾತ್ರವೇ ಗಂಭೀರವಾಗಿ ಪರಿಗಣಿಸುತ್ತಾರೆ. ಉಳಿದಂತೆ ಹೆಚ್ಚಿನವರು ಇದು ನಿತ್ಯ ಕಾಡುವ ತೊಂದರೆಗಳೇ ಇರಬಹುದು ಎಂದು ಅಲಕ್ಷಿಸಿಬಿಡುತ್ತಾರೆ ಎಂದು ಅವರು ತಿಳಿಸುತ್ತಾರೆ. ಮಹಿಳೆಯರಲ್ಲಿ ಈ ರೋಗ ಆವರಿಸಿಕೊಂಡಿರುವುದನ್ನು ಕೆಳಗೆ ವಿವರಿಸಿರುವ ಲಕ್ಷಣಗಳು ಸ್ಪಷ್ಟಪಡಿಸುತ್ತವೆ, ಹಾಗೂ ಪ್ರತಿ ಮಹಿಳೆಯೂ ಈ ಬಗ್ಗೆ ಅರಿತುಕೊಂಡಿರುವುದು ಅವಶ್ಯವಾಗಿದೆ.

  Most Read: ನೆನಪಿಡಿ, ಕೆಲವು ಹಣ್ಣುಗಳನ್ನು ಅಪ್ಪಿತಪ್ಪಿಯೂ ಜತೆಯಾಗಿ ಸೇವಿಸಲೇಬೇಡಿ!


 • ಚಿಕ್ಕ, ಗಟ್ಟಿಯಾದ, ವೃತ್ತಾಕಾರದ ಆದರೆ ನೋವಿಲ್ಲದ ಗಂಟುಗಳು

  ಅಮೇರಿಕಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವ ಕೇಂದ್ರ (US Centers for Disease Control and Prevention (CDC)) ವಿವರಿಸುವ ಪ್ರಕಾರ ಸಿಫಿಲಿಸ್ ನ ಮೊದಲ ಹಂತ ಸುಮಾರು ಆರು ವಾರಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವಾರು ಸೋಂಕುಪೀಡಿದ ಗಂಟುಗಳು ಕಣ್ಣಿಗೆ ಗೋಚರವಾಗುತ್ತವೆ. ಇವು ನೋವಿಲ್ಲದೇ, ಗಟ್ಟಿಯಾಗಿದ್ದು ಒಳಭಾಗದಲ್ಲಿ ಸ್ನಿಗ್ಧ ದ್ರವರೂಪದ ಗಡ್ಡೆಯಿರುವಂತೆ ತೋರುತ್ತದೆ. ಮುಖದ ಮೇಲೆ ಮೂಡುವ ಮೊಡವೆಗಳಿಗಿಂತ ಇವು ಕೊಂಚವೇ ದೊಡ್ಡದಾಗಿದ್ದು ಸುಮಾರು ಅರ್ಧ ಸೆಂಟಿಮೀಟರ್ ನಷ್ಟು ವ್ಯಾಸವನ್ನು ಒಂದಿರುತ್ತವೆ. ನೋವಿಲ್ಲದೇ ಇರುವ ಕಾರಣ ಹೆಚ್ಚಿನವರು ಇವನ್ನು ಅಲಕ್ಷಿಸುತ್ತಾರೆ ಹಾಗೂ ಕಾಲಕ್ರಮೇಣ ಇವು ತಾವಾಗಿಯೇ ಮಾಯವಾಗುವ ಕಾರಣ ಮತ್ತೊಮ್ಮೆ ವೈದ್ಯರ ಬಳಿ ಹೋಗುವ ಅಗತ್ಯವನ್ನೂ ಬಹುತೇಕ ಎಲ್ಲರೂ ಕಡೆಗಣಿಸಿಬಿಡುತ್ತಾರೆ. ಆದರೆ ಇದು ಇದು ಸೋಂಕುಕಾರಕ ಬ್ಯಾಕ್ಟೀರಿಯಾಗಳು ವೃದ್ದಿಸುವ ಎರಡನೆಯ ಹಂತವಾಗಿದ್ದು ಈಗ ಸಿಫಿಲಿಸ್ ಎರಡನೆಯ ಹಂತಕ್ಕೆ, ವ್ಯಕ್ತಿಯ ಅರಿವಿಗೇ ಬಾರದೆ ಎರಡನೆಯ ಹಂತಕ್ಕೆ ಪ್ರವೇಶಿಸುತ್ತದೆ.


 • ಜ್ವರ ಹಾಗೂ ಊದಿಕೊಂಡ ದುಗ್ಧ ಗ್ರಂಥಿಗಳು

  ಸಿಫಿಲಿಸ್ ನ ಇನ್ನೊಂದು ಲಕ್ಷಣವಾದ ಸಣ್ಣಗೆ ಆವರಿಸುವ ಜ್ವರ, ಅಂದರೆ 38 ರಿಂದ 38.1 ಡಿಗ್ರಿ ಸೆಲ್ಸಿಯಸ್ ವರೆಗೆ ಏರುವ ತಾಪಮಾನ ಹಾಗೂ ಇದು ಸಿಫಿಲಿಸ್ ನ ಎಲ್ಲಾ ಹಂತಗಳಲ್ಲಿ ಕಾಣಿಸಿಕೊಳ್ಲುತ್ತದೆ. ಆದರೆ ಈ ಜ್ವರ ಸಾಮಾನ್ಯವಾಗಿ ಹೆಚ್ಚು ದಿನ ಇರುವುದಿಲ್ಲ, ಕೆಲವು ದಿನಗಳಲ್ಲಿಯೇ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ. ಸಾಮಾನ್ಯವಾಗಿ ಜ್ವರ ಎಂದರೆ ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ರಕ್ಷಣಾ ವ್ಯವಸ್ಥೆಯಾಗಿದ್ದು ಇದಕ್ಕೆ ಹಲವಾರು ಬಗೆಯ ಬ್ಯಾಕ್ಟೀರಿಯಾಗಳ ಧಾಳಿ ಕಾರಣವಾಗಿರಬಹುದು. ಹಾಗಾಗಿ ಒಂದು ವೇಳೆ ಸಿಫಿಲಿಸ್ ನ ಇತರ ಲಕ್ಷಣಗಳಿಲ್ಲದೇ ಹೋದರೆ ಈ ಜ್ವರದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೂ, ಜ್ವರ ಇರುವ ಬಗ್ಗೆ ನಿಮ್ಮ ವೈದ್ಯರಿಂದ ಸಲಹೆ ಪಡೆದುಕೊಳ್ಳುವುದೇ ಜಾಣತನ.

  Most Read: ದಂಪತಿಗಳಲ್ಲಿ ಮಕ್ಕಳಾಗದಿರುವುದಕ್ಕೆ ಡಯಾಬಿಟಿಸ್ ರೋಗ ಕೂಡ ಕಾರಣವಾಗಬಹುದು!


 • ಚರ್ಮದಲ್ಲಿ ಕೆಂಪಗಿನ ಗೀರುಗಳು

  ದೇಹದ ಯಾವುದೇ ಭಾಗದಲ್ಲಿ ಚರ್ಮ ಕೆಂಪಗಾಗಿದ್ದು ಸೂಕ್ಷ್ಮ ಗೆರೆಗಳು ಮೂಡಿದಂತೆ ಕಾಣುತ್ತಿವೆಯೇ? ತಕ್ಷಣವೇ ವೈದ್ಯರಲ್ಲಿ ತಪಾಸಣೆಗೊಳಗಾಗುವುದು ಅಗತ್ಯ. ಇದು ಸಿಫಿಲಿಸ್ ಎರಡನೆಯ ಹಂತಕ್ಕೆ ದಾಟಿರುವ ಖಚಿತ ಲಕ್ಷಣವಾಗಿದೆ. ಈ ಲಕ್ಷಣಗಳು ದೇಹದ ಯಾವುದೇ ಭಾಗದಲ್ಲಿ ಕಾಣಬರಬಹುದು."ಈ ಭಾಗದಲ್ಲಿ ಚಿಕ್ಕ ಚಿಕ್ಕ, ದೊರಗಾದ ಕೆಂಪು ಚಿಕ್ಕ ಚಿಕ್ಕ ಉಬ್ಬಿದಂತಹ ಚರ್ಮ ಕಾಣಿಸಿಕೊಳ್ಳುತ್ತದೆ.


 • ಹಸ್ತ ಮತ್ತು ಪಾದಗಳಲ್ಲಿ

  ಸಾಮಾನ್ಯವಾಗಿ ಈ ಲಕ್ಷಣಗಳು ಹಸ್ತ ಮತ್ತು ಪಾದಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ದೇಹದ ಯಾವುದೇ ಭಾಗದಲ್ಲಿ ಇವು ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಬ್ಯಾಕ್ಟೀರಿಯಾಗಳು ನಮ್ಮ ರಕ್ತದ ಜೊತೆಗೇ ದೇಹದ ಇತರ ಭಾಗಗಳಿಗೆ ಹರಡಿ ಒಂದು ನೆಲೆಯನ್ನು ಕಂಡುಕೊಂಡು ವೃದ್ದಿಗೊಳ್ಳುವುದರಿಂದಲೇ ಈ ಚಿಕ್ಕ ಚಿಕ್ಕ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ನಿಧಾನವಾಗಿ ಈ ಲಕ್ಷಣ ದೇಹದ ಬೇರೆ ಭಾಗಗಳಲ್ಲಿ, ಸಾಮಾನ್ಯವಾಗಿ ಮೊದಲು ಹರಡಿದ ಸ್ಥಳಕ್ಕಿಂತಲೂ ದೂರವಾದ ಬೇರಾವುದೋ ಭಾಗದಲ್ಲಿ, ಯಾವುದೇ ಲೆಕ್ಕಾಚಾರ ಅಥವಾ ಸಂಬಂಧವೇ ಇಲ್ಲದಂತೆ ಕಾಣಿಸಿಕೊಳ್ಳಬಹುದು.


 • ಬಾಯಿ, ಗುದದ್ವಾರ ಹಾಗೂ ಯೋನಿಯಲ್ಲಿ ಹುಣ್ಣುಗಳು

  ಎರಡನೆಯ ಹಂತ ಮುಂದುವರೆಯುತ್ತಾ ಹೋದಂತೆ ಸುಮಾರು ಒಂದರಿಂದ ಮೂರು ಸೆಂಟಿಮೀಟರ್ ನಷ್ಟು ದೊಡ್ಡದಾದ ಬಿಳಿಯ ಅಥವಾ ಬೂದು ಬಣ್ಣದ ಗುಳ್ಳೆಗಳು ಮಹಿಳೆಯರ ಈ ತೇವಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಕಂಕುಳು ಮತ್ತು ತೊಡೆಸಂಧಿನ ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು. "ಈ ಹುಣ್ಣುಗಳು ಕೊಂಚ ಗಟ್ಟಿಯಾಗಿದ್ದು ನೋವಿಲ್ಲದೇ ಇರುವ ಕಾರಣ ಇದೇ ಲಕ್ಷಣಗಳನ್ನು ತೋರುವ ಗುಪ್ತಾಂಗಗಳ ಗುಳ್ಳೆ (genital warts)ಇರಬಹುದೆಂದು ಪ್ರಾಥಮಿಕ ಪರೀಕ್ಷೆಗಳಲ್ಲಿ ಪರಿಗಣಿಸಲ್ಪಡಬಹುದು.

  Most Read: ತುಟಿಗಳ ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಆಹಾರಗಳು


 • ತಲೆಯ ಒಂದು ಭಾಗದಲ್ಲಿ ಮಾತ್ರವೇ ಕೂದಲು ಉದುರುವುದು

  ಸಿಫಿಲಿಸ್ ಎರಡನೆಯ ಹಂತದಲ್ಲಿ ಮುಂದುವರೆಯುತ್ತಿದ್ದಂತೆ ನೆತ್ತಿಯ ಯಾವುದೋ ಒಂದು ಭಾಗದಲ್ಲಿ ಮಾತ್ರವೇ ಕೂದಲು ಭಾರೀ ಪ್ರಮಾಣದಲ್ಲಿ ಉದುರಿ ಈ ಭಾಗದ ಚರ್ಮ ಪ್ರಕಟಗೊಳ್ಳುತ್ತದೆ ಈ ಸ್ಥಿತಿಗೆ syphilitic alopecia ಎಂದು ಕರೆಯುತ್ತಾರೆ. "ಇದೊಂದು ಪ್ರಮುಖವಾದ ಹಾಗೂ ಸಾಮಾನ್ಯವಾಗಿ ಇತರ ರೋಗಗಳ ಮೂಲಕ ಪ್ರಕಟವಾಗದ ಲಕ್ಷಣವಾಗಿದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ತಲೆಗೂದಲು ಉದುರಲು ಹಲವಾರು ಕಾರಣಗಳಿವೆ, ಇವುಗಳಲ್ಲಿ ಪ್ರಮುಖವಾಗಿ ರಸದೂತಗಳ ಬದಲಾವಣೆ, ಔಷಧಿಗಳ ಪರಿಣಾಮ ಹಾಗೂ ಆರೋಗ್ಯದ ಇತರ ತೊಂದರೆಗಳು ಕಾರಣವಾಗಿರಬಹುದು. "ಒಂದು ವೇಳೆ ಕೂದಲು ಉದುರಿ ಪ್ರಕಟಕೊಂಡ ಚರ್ಮದಭಾಗದಲ್ಲಿ ಸಿಫಿಲಿಸ್ ನ ಇತರ ಲಕ್ಷಣಳಾದ ಕೆಂಪು ಗೀರುಗಳು ಕಂಡುಬಂದರೆ ಇವು ಕಾಯಿಲೆಯ ಇರುವಿಕೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ. ಸಾಮಾನ್ಯವಾಗಿ ಈ ರೋಗದ ಇರುವಿಕೆಯನ್ನು ಈ ಲಕ್ಷಣ ಖಚಿತಪಡಿಸಿ ತಕ್ಷಣವೇ ಚಿಕಿತ್ಸೆ ಆರಂಭಿಸಿದರೆ ರೋಗ ಗುಣವಾಗುತ್ತಾ ಬಂದಂತೆ ಈ ಭಾಗದಲ್ಲಿ ಮತ್ತೆ ಹೊಸ ಕೂದಲುಗಳು ಹುಟ್ಟುತ್ತವೆ.


 • ತೂಕದಲ್ಲಿ ಇಳಿಕೆ

  ಎರಡನೆಯ ಹಂತ ದಾಟಿರುವ ಕೆಲವು ಮಹಿಳೆಯರಲ್ಲಿ ತೂಕ ಇಳಿಕೆಯನ್ನು ಗಮನಿಸಬಹುದು. ಆದರೆ ಈ ಇಳಿಕೆ ಭಾರೀ ವೇಗದಲ್ಲೇನೂ ಇಳಿದಿರದ ಕಾರಣ ಹೆಚ್ಚಿನವರು ಈ ಬಗ್ಗೆ ಗಾಬರಿಗೊಳ್ಳುವುದಿಲ್ಲ. ಒಂದು ವೇಳೆ ಈ ರೋಗದ ಲಕ್ಷಣಗಳನ್ನು ಪರಿಶೀಲಿಸುವ ಸಮಯದಲ್ಲಿ ಈ ಪ್ರಶ್ನೆಯನ್ನೂ ಕೇಳಲಾಗುತ್ತದೆ ಹಾಗೂ ತೂಕದ ಇಳಿಕೆಯ ಜೊತೆಗೇ ಇತರ ಲಕ್ಷಣಗಳೂ ಸ್ಪಷ್ಟವಾದರೆ ಮಾತ್ರವೇ ಈ ಇಳಿಕೆ ಸಿಫಿಲಿಸ್ ನಿಂದಾಗಿಯೇ ಆಗಿದೆ ಎಂದು ಕಂಡುಕೊಳ್ಳಬಹುದೇ ವಿನಃ ಇದೊಂದೇ ಲಕ್ಷಣ ಸಾಕಾಗದು. ಎರಡನೆಯ ಹಂತದಲ್ಲಿ ಶೀತದ ಲಕ್ಷಣಗಳಾದ ತಲೆನೋವು, ಸ್ನಾಯುಗಳ ನೋವು, ಗಂಟಲ ಕೆರೆತ, ಸುಸ್ತು ಮೊದಲಾದವೂ ಕಾಣಿಸಿಕೊಳ್ಳುತ್ತವೆ ಹಾಗೂ ಇದಕ್ಕೆ ಚಿಕಿತ್ಸೆ ಪಡೆಯದೇ ಇದ್ದರೂ ಕೆಲವೇ ದಿನಗಳಲ್ಲಿ ಈ ಲಕ್ಷಣಗಳು ಇಲ್ಲವಾಗುತ್ತವೆ ಎಂದು ಸಿಡಿಸಿ ವರದಿ ಮಾಡಿದೆ.


 • ಸಂವೇದನೆಯ ಶಿಥಿಲತೆ ಮತ್ತು ಒರಟು ಮನೋಭಾವ

  ಯಾವಾಗ ಎರಡನೆಯ ಹಂತ ಮುಂದುವರೆಯುತ್ತಾ ಅಂತಿಮ ಹಂತ ತಲುಪುವತ್ತ ಧಾವಿಸುತ್ತದೆಯೋ ಆಗ ಬ್ಯಾಕ್ಟೀರಿಯಾಗಳು ಮೆದುಳಿನ ಮೇಲೆ ಧಾಳಿಯಿಡುತ್ತವೆ, ಎಂದು ಡಾ. ಶೆಫರ್ಡ್ ವಿವರಿಸುತ್ತಾರೆ. ಸಿಡಿಸಿ ಪ್ರಕಾರ ಈ ಸ್ಥಿತಿಗೆ neurosyphilis ಎಂದು ಕರೆಯುತ್ತಾರೆ. ಸಿಫಿಲಿಸ್ ಗೆ ಯಾವುದೇ ಚಿಕಿತ್ಸೆಯನ್ನು ಪಡೆಯದ ರೋಗಿಗಳಲ್ಲಿ ಶೇಖಡ ಹತ್ತರಷ್ಟು ರೋಗಿಗಳಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ಮೆದುಳುಬಳ್ಳಿ ಮತ್ತು ಮೆದುಳಿನಲ್ಲಿ ಸೋಂಕು ಉಂಟಾಗುತ್ತದೆ (meningitis) ಹಾಗೂ ಇದು ದೇಹದ ಯಾವುದೇ ಬಗೆಯ ಸಂವೇದನೆಯನ್ನು ಶಿಥಿಲಗೊಳಿಸುವಷ್ಟು ಪ್ರಬಲವಾಗಿರುತ್ತದೆ.


 • ಮಂದವಾಗುವ ದೃಷ್ಟಿ

  ಚಿಕಿತ್ಸೆ ಪಡೆಯದ ಸಿಫಿಲಿಸ್ ನ ಎರಡನೆಯ ಹಂತದ ತೀವ್ರತೆಯಿಂದ ಬಾಧೆಗೊಳಗಾಗುವ ಇನ್ನೊಂದು ಪ್ರಮುಖ ಅಂಗವೆಂದರೆ ಕಣ್ಣು. ಇದರಿಂದ ಕಣ್ಣಿನ ಮುಖ್ಯ ದೃಷ್ಟಿ ನರದ ಮೇಲೇ ಬ್ಯಾಕ್ಟೀರಿಯಾಗಳು ಧಾಳಿಯಿಡುತ್ತವೆ ಎಂದು ಸಿಡಿಸಿ ವರದಿ ಮಾಡಿದೆ. ಈ ತೊಂದರೆ ಆವರಿಸಿದ ವ್ಯಕ್ತಿಗಳು ಮಂದವಾದ ದೃಷ್ಟಿಯನ್ನು ಅಥವಾ ಶಾಶ್ವತ ಅಂಧತ್ವವನ್ನು ಪಡೆಯಬಹುದು. "ಸಿಫಿಲಿಸ್ ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ದೇಹದ ಹಲವಾರು ಅಂಗಗಳಿಗೆ ವ್ಯಾಪಿಸಬಹುದಾಗಿದ್ದು ಹಾಗೂ ಇವುಗಳು ಆ ಅಂಗಗಳಿಗೆ ಕ್ಷಿಪ್ರವಾಗಿ ತಲುಪಬಹುದು.

  Most Read: ಹೊಟ್ಟೆಯ ಎಡಭಾಗದಲ್ಲಿ ನೋವು ಬರುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತೇ?


 • ಮಂದವಾಗುವ ದೃಷ್ಟಿ

  ಹಾಗಾಗಿ ಸಿಫಿಲಿಸ್ ನ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣವೇ ಈ ಲಕ್ಷಣಗಳಿಗೆ ಏನು ಕಾರಣವೆಂದು ಕಂಡುಕೊಳ್ಳಲು ವೈದ್ಯರಲ್ಲಿ ಧಾವಿಸುವುದು ಅವಶ್ಯ, ಈ ಲಕ್ಷಣಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಖಚಿತಪಡಿಸಿ ಚಿಕಿತ್ಸೆಯನ್ನು ಎಷ್ಟು ಬೇಗ ಪ್ರಾರಂಭಿಸಲು ಸಾಧ್ಯವೋ ಅಷ್ಟೂ ಬೇಗನೇ ಇದನ್ನು ಉಲ್ಬಣಗೊಳ್ಳುವುದರಿಂದ ತಡೆಯಬಹುದು ಹಾಗೂ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಳ್ಳಲೂ ಸಾಧ್ಯ.
ಸಿಫಿಲಿಸ್ ಎಂದರೆ ಒಂದು ಘೋರವಾದ ಮೇಹರೋಗವಾಗಿದ್ದು ಸಾಮಾನ್ಯವಾಗಿ ಸಲಿಂಗಿ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಮಹಿಳೆಯರಲ್ಲಿ ಇದುವರೆಗೆ ಅಪರೂಪವಾಗಿದ್ದ ಈ ರೋಗ ಇತ್ತೀಚೆಗೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ.

ಈ ರೋಗ ಬ್ಯಾಕ್ಟೀರಿಯಾದ ಸೋಂಕಿನಿಂದ ಒಬ್ಬರಿಂದೊಬ್ಬರಿಗೆ ಹರಡುವ ರೋಗವಾಗಿದ್ದು ಪ್ರಮುಖವಾಗಿ ಜನನಾಂಗ, ಗುದ ಅಥವಾ ಮುಖಮೈಥುನ ರತಿಗಳ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಸೋಂಕು ಆವರಿಸಿದ ಬಳಿಕ ಇದು ಮೂರು ಹಂತಗಳಲ್ಲಿ ವಿಸ್ತರಿಸುತ್ತದೆ ಹಾಗೂ ಇವುಗಳ ಲಕ್ಷಣಗಳು ಗಾಬರಿ ಹುಟ್ಟಿಸುವುದರಿಂದ ತೊಡಗೆ ನೋಡಲೂ ಭಯಾನಕವಾದಷ್ಟಿರುತ್ತವೆ.

ಮೊದಲ ಎರಡು ಹಂತಗಳಲ್ಲಿ, ಈ ರೋಗ ಇರುವಿಕೆ ಖಚಿತವಾದರೆ, ಇದಕ್ಕೆ ತಕ್ಷಣವೇ ಸೂಕ್ತ ಚಿಕಿತ್ಸೆಗಳು ಹಾಗೂ ಪ್ರತಿಜೀವಕ ಔಷಧಿ ಮತ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮೊದಲಿನ ಆರೋಗ್ಯ ಪಡೆಯಲು ಸಾಧ್ಯ. ಆದರೆ ತೊಂದರೆ ಇರುವುದೇ ಇಲ್ಲಿ, ಅಂದರೆ ಸೋಂಕು ಪ್ರಾರಂಭವಾದ ಒಂದು ವರ್ಷದವರೆಗೂ ಇದರ ಇರುವಿಕೆಯೇ ಗೊತ್ತಾಗದಿರುವ ಕಾರಣ ಸದ್ದಿಲ್ಲದೇ ಈ ಎರಡೂ ಹಂತಗಳು ದಾಟಿ ಹೋಗುತ್ತವೆ.

ಈ ಬ್ಯಾಕ್ಟೀರಿಯಾಗಳು ದೇಹದಡಿಯಲ್ಲಿಯೇ ನಿಧಾನವಾಗಿ ಬೆಳೆಯುತ್ತಾ ರೋಗ ಇರುವ ಲಕ್ಷಣಗಳನ್ನು ತೋರದೇ ವೃದ್ದಿಗೊಳ್ಳುತ್ತಾ ಹೋಗುತ್ತವೆ. ಸಾಮಾನ್ಯವಾಗಿ ಒಂದು ವರ್ಷದ ಬಳಿಕವೇ ಇದರ ಲಕ್ಷಣಗಳು ತೋರಲು ಪ್ರಾರಂಭವಾದರೂ ಕೆಲವರಲ್ಲಿ, ಇದು ಕೆಲವಾರು ವರ್ಷಗಳ ಬಳಿಕವೇ ಪ್ರಕಟಗೊಳ್ಳಲುತೊಡಗಬಹುದು. ಇದಕ್ಕೆ ದೇಹದ ರೋಗ ನಿರೋಧಕ ವ್ಯವಸ್ಥೆ ಅತ್ಯುತ್ತಮವಾಗಿ ಪ್ರತಿರೋಧ ಒಡ್ಡುವುದೇ ಕಾರಣ.

   
 
ಹೆಲ್ತ್