Back
Home » ಇತ್ತೀಚಿನ
ಭಾರತದಲ್ಲಿ 'ನೋಕಿಯಾ 8.1' ಲಾಂಚ್!..ವಿಶ್ವಕ್ಕಿಂತ ದೇಶದಲ್ಲಿ ಕಡಿಮೆ ಬೆಲೆ!!
Gizbot | 11th Dec, 2018 10:57 AM
 • 'ನೋಕಿಯಾ 8.1' ಡಿಸ್‌ಪ್ಲೇ!

  'ನೋಕಿಯಾ 8.1' ಸ್ಮಾರ್ಟ್‌ಫೋನ್ 18.7:9 ಆಕಾರ ಅನುಪಾತದಲ್ಲಿ 6.18-ಇಂಚಿನ ಪೂರ್ಣ ಹೆಚ್‌ಡಿ + (1080x2244 ಪಿಕ್ಸೆಲ್ಗಳು) ಡಿಸ್‌ಪ್ಲೇನನ್ನು ಹೊಂದಿದ್ದು, ಶೇ. 81.5 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, ಹೆಚ್‌ಡಿಆರ್ 10 ಬೆಂಬಲ, 500 ಎನ್ಟಿಟಿಗಳ ಗರಿಷ್ಟ ಹೊಳಪು ಮತ್ತು 96 ಪ್ರತಿಶತ ಬಣ್ಣದ ಗ್ಯಾಮಟ್ ಸಾಮರ್ಥ್ಯವನ್ನು ಹೊಂದಿರುವಂತಹ ಅದ್ಬುತ ಡಿಸ್‌ಪ್ಲೇ ಇದಾಗಿದೆ.


 • 'ನೋಕಿಯಾ 8.1' ಪ್ರೊಸೆಸರ್!

  ನೋಕಿಯಾ 8.1 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ 2.2GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 soc ಪ್ರೊಸೆಸರ್ ಅನ್ನು ಹೊಂದಿದೆ. ಇದು 4GB LPDDR4x RAM ಮತ್ತು 64GB ಅಂತರ್ಗತ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವುದನ್ನು ನೋಡಬಹುದಾಗಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ 400 ಜಿಬಿ ವರೆಗಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಲಭ್ಯವಿದೆ.


 • 'ನೋಕಿಯಾ 8.1' ಕ್ಯಾಮೆರಾ!

  Zeiss ಆಪ್ಟಿಕ್ಸ್, 1.4-ಮೈಕ್ರಾನ್ ಪಿಕ್ಸೆಲ್ಸ್, ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಒಳಗೊಂಡ 12-ಮೆಗಾಪಿಕ್ಸೆಲ್ ಮತ್ತು ಡೆಪ್ತ್ ಚಿತ್ರಗಳಿಗಾಗಿ ಮಾಧ್ಯಮಿಕ 13-ಮೆಗಾಪಿಕ್ಸೆಲ್ ಸ್ಥಿರ-ಫೋಕಸ್ ಲೆನ್ಸ್ ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇನ್ನು 0.9-ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವಿದ್ದು, ಕ್ಯಾಮೆರಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ.


 • ಬ್ಯಾಟರಿ ಮತ್ತು ಇತರೆ ಫೀಚರ್ಸ್?

  ನೋಕಿಯಾ 8.1 ಸ್ಮಾರ್ಟ್‌ಪೋನ್ 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ 3,500mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಜೊತೆಗೆ ಆಂಡ್ರಾಯ್ಡ್ ಪೈ, 4G ವೋಲ್ಟ್, Wi-Fi 802.11ac, VoWiFi, ಬ್ಲೂಟೂತ್ v5.0, GPS/ A-GPS, 3.5mm ಹೆಡ್‌ಫೋನ್ ಜ್ಯಾಕ್, USB Type-C ಪೋರ್ಟ್‌ನಂತರ ಇತ್ತೀಚಿನ ಫೀಚರ್ಸ್‌ಗಳನ್ನು ಹೊಂದಿದ್ದು, ಒಟ್ಟು 178 ಗ್ರಾಂ ಭಾರವಿದೆ.


 • 'ನೋಕಿಯಾ 8.1' ಬೆಲೆ ಎಷ್ಟು?

  ವಿಶ್ವದಾಧ್ಯಂತ ಅಂದಾಜು 31,900 ರೂಪಾಯಿಗಳ ಆಸುಪಾಸಿನಲ್ಲಿ ಬಿಡುಗಡೆಯಾಗಿದ್ದ 'ನೋಕಿಯಾ 8.1', ಭಾರತದಲ್ಲಿ ಮಾತ್ರ ಕೇವಲ 26,999 ರೂಪಾಯಿಗಳಿಗೆ ಬಿಡುಗಡೆಯಾಗಿ ಅಚ್ಚರಿಮೂಡಿಸಿದೆ. ಅಮೆಜಾನ್.ಕಾಮ್, ನೋಕಿಯಾ.ಕಾಮ್ ಆನ್‌ಲೈನ್ ಜಾಲತಾಣಗಳಲ್ಲಿ ಸೇರಿದಂತೆ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ
ನೋಕಿಯಾ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ನೋಕಿಯಾ 8.1' ಭಾರತದ ಮೊಬೈಲ್ ಮಾರುಕಟ್ಟೆಗೆ ನೆನ್ನೆಯಷ್ಟೇ ಕಾಲಿಟ್ಟಿದೆ. ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ ನೋಕಿಯಾ ಎಕ್ಸ್7 ರೂಪಾಂತರದ ಫೋನ್ ಇದಾಗಿದ್ದು, ದೇಶದಲ್ಲಿ ಎಕ್ಸ್‌ಪೆಕ್ಟ್ ಮೋರ್ ಎಂಬ ಇವೆಂಟ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿ ಮಾರುಕಟ್ಟೆಯ ಗಮನಸೆಳೆದಿದೆ.

ನೋಕಿಯಾ 7 ಪ್ಲಸ್‌ ಉತ್ತರಾಧಿಕಾರಿಯಾಗಿ ಎಚ್ಎಂಡಿ ಗ್ಲೋಬಲ್ ಅನಾವರಣಗೊಳಿಸಿರುವ 'ನೋಕಿಯಾ 8.1' ಸ್ಮಾರ್ಟ್‌ಫೋನ್ HDR10 ಬೆಂಬಲದೊಂದಿಗೆ 6.18-ಇಂಚಿನ ಪ್ಯೂರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಒನ್ ಪ್ರೋಗ್ರಾಂ, ಸ್ನ್ಯಾಮ್‌ಪ್ಡ್ರಾಗನ್ 710 ಪ್ರೊಸೆಸರ್, ಆಂಡ್ರಾಯ್ಡ್ 9 ಪೈ ನಂತರ ಹಲವು ನೂತನ ವಿಶೇಷತೆಗಳನ್ನು ಹೊತ್ತು ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಬ್ಲೂ, ಸಿಲ್ವರ್, ಸ್ಟೀಲ್, ಕಾಪರ್, ಐಯಾನ್ ಸ್ಟೀಲ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ನೋಕಿಯಾ 8.1' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಹಾಗಾದರೆ, ನೆನ್ನೆಯಷ್ಟೇ ಬಿಡುಗಡೆ ಕಂಡಿರುವ ನೋಕಿಯಾ 8.1' ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನಿನ ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್