Back
Home » ಇತ್ತೀಚಿನ
35 ಲಕ್ಷದವರೆಗೂ ಬೆಲೆಬಾಳುವ ಪ್ರಪಂಚದ 15 ಅತ್ಯಂತ ದುಬಾರಿ ಹೆಡ್‌ಫೋನ್‌ಗಳಿವು!
Gizbot | 12th Dec, 2018 07:01 AM
 • ಸೆನ್ಹೇಯ್ಸರ್ HE 90: ರುಪಾಯಿ 35 ಲಕ್ಷ (ಅಂದಾಜು)

  ಈ ಹೆಡ್ ಫೋನ್ ಗೆ ಇಷ್ಟೊಂದು ಬೆಲೆ ಯಾಕೆ? ಇದು ಸುಮಾರು 6000 ಘಟಕಗಳಿಂದ ಜೋಡಿಸಲ್ಪಟ್ಟಿರುತ್ತದೆ. ಇದು ಅಮೃತ ಶಿಲೆಯಿಂದ ಮಾಡಲ್ಪಟ್ಟಿರುತ್ತದೆ ಮತ್ತು ದೊಡ್ಡ ಶಬ್ದ ಕೇಳಿಸುವಂತೆ ಮಾಡಲು ನೆರವಾಗುತ್ತದೆ. 35 ಲಕ್ಷಕ್ಕೆ ಇಂತಹದ್ದನ್ನು ಯಾರಾದರೂ ನಿರೀಕ್ಷಿಸುವುದಕ್ಕೆ ಸಾಧ್ಯವಿದೆಯೇ?


 • HIFIMAN ಸುಸ್ವಾರ: ರುಪಾಯಿ 12.84 ಲಕ್ಷ

  ಇದು ಕೇವಲ ಪ್ರೀ ಆರ್ಡರ್ ನಲ್ಲಿ ಮಾತ್ರವೇ ಲಭ್ಯವಾಗುತ್ತದೆ. ಇದು ವಿಶೇಷ ಆಂಪ್ಲಿಫೈಯರ್ ನಿಂದ ಕೂಡಿರುತ್ತದೆ. ಇದರ ಔಟ್ ಪುಟ್ 20W ನಷ್ಟಿದ್ದರೆ ಆಂಪ್ಲಿಫೈಯರ್ ಔಟ್ ಪುಟ್ 50W.


 • Abyss ಎಬಿ-1266 Phi ಸಿಸಿ: ರುಪಾಯಿ 3.54 ಲಕ್ಷ (approximately)

  ಇದೊಂದು ಅಂತ್ಯತ ಉತ್ತಮ ಗುಣಮಟ್ಟದ ಹೆಡ್ ಫೋನ್ ಆಗಿದೆ ಮತ್ತು AB-1266 ಈ ಬ್ರ್ಯಾಂಡ್ ನಲ್ಲಿ ಲಭ್ಯವಾಗುವ ಹೈ-ಎಂಡ್ ಪ್ರೊಡಕ್ಟ್ ಕೂಡ ಹೌದು. ಈ ಹೆಡ್ ಫೋನ್ ಗಳು ಓವನ್ ಕ್ಯೂರ್ಡ್ ಸಿರಾಮಿಕ್ ಕೋಟಿಂಗ್ ನ್ನು ಹೊಂದಿರುತ್ತದೆ ಮತ್ತು ಇಯರ್ ಪ್ಯಾಡ್ ಗಳು ಉತ್ತಮ ಗುಣಮಟ್ಟದ ಮೃದುವಾದ ಕುರಿಯ ಚರ್ಮದಿಂದ ತಯಾರಿಸಲ್ಪಟ್ಟಿರುತ್ತದೆ.


 • ಐಡೈಮಂಡ್ ಇಯರ್ ಬಡ್ಸ್ :ರುಪಾಯಿ 4.53 ಲಕ್ಷ

  ವಿಶ್ವದಲ್ಲಿಯೇ ಅತ್ಯಂತ ದುಬಾರಿ ಇಯರ್ ಬಡ್ಸ್ ಅಂದೆರ ಇದೇ ಆಗಿದೆ ಮತ್ತು ಇದನ್ನು 18ಕ್ಯಾರೆಟ್ ಗೋಲ್ಡ್ ಮತ್ತು 200 ಹೆಚ್ಚು ವಜ್ರದ ಹರಳುಗಳಿಂದ ತಯಾರಿಸಲ್ಪಡುತ್ತದೆ. ಇದು ನಾರ್ವೆನ್ ಆಭರಣಕಾರರಿಂದ ರಚಿಸ್ಪಟ್ಟಿದೆ. ಈಗಾಗಲೇ ಸುಮಾರು 1000 ಯುನಿಟ್ ಗಳನ್ನು ತಯಾರಿಸಿದ್ದು ಎಲ್ಲವೂ ಮಾರಾಟವಾಗಿದೆ.


 • Audeze LCDi4: ರುಪಾಯಿ 1,99,000

  ಯುಸ್ ಮೂಲದ Aueze ಹೆಡ್ ಫೋನ್ ಇದು. ಅಲ್ಟ್ರಾ ಥಿನ್ ಫಿಲ್ಮ್ ನಿಂದ ನಿರ್ಮಿಸಲ್ಪಟ್ಟಿರುವ ವಿಶೇಷ ನಿರ್ವಾತವನ್ನು ಬಳಸಿ ಇದನ್ನು ತಯಾರಿಸಲಾಗಿದೆ.ಇದು ಸಾಕಷ್ಟು ಸ್ಲಿಮ್, ಪೋರ್ಟೆಬಲ್ ಮತ್ತು ಉತ್ತಮ ಆಡಿಯೋ ಅನುಭವವನ್ನು ನೀಡುತ್ತದೆ.


 • ಸ್ಟ್ಯಾಕ್ಸ್ ಎಸ್ಆರ್ 009: ರುಪಾಯಿ 2.64 ಲಕ್ಷ

  ಅಲ್ಯೂಮಿನಿಯಂ ನಿಂದ ತಯಾರಿಸಲ್ಪಟ್ಟಿರುವ ಈ ಹೆಡ್ ಫೋನ್ ಗಳು ಹೈ-ಪ್ಯೂರಿಟಿ ಕಾಪರ್ ವಯರ್ ನ್ನು ಹೊಂದಿದ್ದು ಉತ್ತಮ ಆಡಿಯೋ ಗುಣಮಟ್ಟವನ್ನು ಹೊಂದಿರುತ್ತದೆ. ಇಯರ್ ಪ್ಯಾಡ್ ಗಳನ್ನು ಕುರಿಯ ಚರ್ಮದಿಂದ ತಯಾರಿಸ್ಪಡುತ್ತದೆ ಮತ್ತು ಸುತ್ತಲಿನ ಪ್ರದೇಶನ್ನು ಹೈ ಕ್ವಾಲಿಟಿ ಚರ್ಮದಿಂದ ತಯಾರಿಸಲಾಗುತ್ತದೆ.


 • oBravo EAMT-3: ರುಪಾಯಿ 1.86 ಲಕ್ಷ

  ಇದು ಏಕಾಕ್ಷ ರಚನೆಯನ್ನು ಹೊಂದಿರುತ್ತದೆ. ಹೈ-ಫೈ ಡ್ರೈವರ್ ತಂತ್ರಜ್ಞಾನವನ್ನು ಇದಕ್ಕೆ ಅಳವಡಿಸಲಾಗಿರುತ್ತದೆ ಅದನ್ನು ಏರ್ ಮೋಷನ್ ಟ್ರಾನ್ಸ್ ಫಾರ್ಮರ್ ಟ್ವೀಟರ್ (AMT) ಜೊತೆಗೆ ನಿಯೋಡೈಮಿಯಂ ಡೈನಾಮಿಕ್ ಡ್ರೈವರ್ ನ್ನು ಇದು ಹೊಂದಿದ್ದು ಉತ್ತಮ ಕ್ವಾಲಿಟಿಯ ಆಡಿಯೋ ಔಟ್ ಪುಟ್ ನ್ನು ನೀಡುತ್ತದೆ.


 • Shure KSE1500: ರುಪಾಯಿ 1.79 ಲಕ್ಷ

  ಇದು ಏಕೈಕ-ಡ್ರೈವರ್ ಎಲೆಕ್ಟ್ರೋಸ್ಟ್ಯಾಟಿಕ್ ಇಯರ್ ಫೋನ್ ಆಗಿದ್ದು ಯುಎಸ್ ಬಿ ಆಂಪ್ಲಿಫೈಯರ್ ನಿಂದ ರೀಚಾರ್ಜ್ ಮಾಡಬಹುದಾಗಿದೆ. ಜೊತೆಗೆ ಡಿಜಿಟಲ್ ಟು ಆಡಿಯೋ ಕನ್ವರ್ಟರ್ ಇದ್ದು ಐಯಾನ್(ಡಿಎಸಿ) ಮತ್ತು ಡಿಜಿಟಲ್, ಸ್ಟ್ರೀಮಿಂಗ್ ಮತ್ತು ಪ್ಯೂರ್ ಎನಲಾಗ್ ಆಡಿಯೋ ಸೋರ್ಸ್ ನ್ನು ಹೊಂದಿದೆ.


 • ಅಲ್ಟ್ರಾಸೋನ್ ಎಡಿಷನ್ 15: ರುಪಾಯಿ 2.14 ಲಕ್ಷ

  ಅಲ್ಟ್ರಾಸೋನ್ ಎಡಿಷನ್ 15 ನಲ್ಲಿ ಗೋಲ್ಡ್ ಟೈಟಾನಿಂಯ ಕಂಪೌಂಡ್ ಜಿಟಿಸಿ ಡ್ರೈವರ್ ತಂತ್ರಜ್ಞಾನವಿದೆ. ಇದರ ಮೆಂಬ್ರೇನ್ ಚಿನ್ನದ ಫಾಯಿಲ್ ಮತ್ತು ಟೈಟಾನಿಯಂ ನ ಗುಮ್ಮಟವನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಕೇಳುವಿಕೆಗೆ ನೆರವಾಗುತ್ತದೆ. ಇಯರ್ ಕಪ್ ಗಳು ಅಮೇರಿಕಾದ ಚೆರ್ರೀ ಮರಗಳಿಂದ ತಯಾರಿಸಲ್ಪಟ್ಟಿವೆ.


 • ಸೆನ್ಹೇಯ್ಸರ್ HD800 S: ರುಪಾಯಿ 1.28 ಲಕ್ಷ

  ಉತ್ತಮ ವಸ್ತುಗಳು ಮತ್ತು ಕಾಂಪೋನೆಂಟ್ಸ್ ಗಳನ್ನು ಬಳಸಿ ಹೆಚ್ ಡಿ 800 ನ್ನು ಜರ್ಮನಿಯಲ್ಲಿ ತಯಾರು ಮಾಡಲಾಗಿದೆ. ಸೆನ್ಹೇಯ್ಸರ್ ಹೆಚ್ಚು ಅಡ್ವಾನ್ಸ್ ಆಗಿರುವ ವಸ್ತುಗಳನ್ನು ಬಳಸಿ ಏರೋಸ್ಪೇಸ್ ಇಂಡಸ್ಟ್ರಿಯವರು ಇದನ್ನು ಡೆವಲಪ್ ಮಾಡಿದ್ದು ಕಡಿಮೆ ತೂಕದಲ್ಲಿ ಹೆಚ್ಚಿನ ಬಲವನ್ನು ಇದು ಹೊಂದಿದೆ.


 • Audeze LCD-4z: ರುಪಾಯಿ 2.86 ಲಕ್ಷ

  ಮತ್ತೊಂದು ಅತ್ಯಂತ ದುಬಾರಿ ಹೆಡ್ ಫೋನ್ ಎಂದರೆ Audeze LCD-4z. ಇದನ್ನು ಉತ್ತಮ ವಸ್ತುಗಳು ಮತ್ತು ಪ್ಲಾನಾರ್ ಮ್ಯಾಗ್ನೆಟಿಕ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ.


 • ಸೋನಿ MDR-Z1R ಪ್ರೀಮಿಯಂ: ರುಪಾಯಿ 1.65 ಲಕ್ಷ

  ವಿಶೇಷವಾದ ಅಕೋಸ್ಟಿಕ್ ಫಿಲ್ಟರ್ ಕಂಟ್ರೋಲ್ ನ್ನು ಇದು ಹೊಂದಿದ್ದು ಏರ್ ರೆಸಿಸ್ಟೆನ್ಸ್ ಮತ್ತು ಡ್ರೈವರ್ ಮೂಮೆಂಟ್ ನಿಂದ ಉಂಟಾಗುವ ಯಾವುದೇ ಪ್ರತಿಧ್ವನಿಯನ್ನು ನಿಯಂತ್ರಿಸುವ ಸಾಮರ್ಥ್ಯ ಇದಕ್ಕಿದೆ. ಹಾಗಾಗಿ ಉತ್ತಮ ಸೌಂಡ್ ಕ್ವಾಲಿಟಿ ಸಿಗುತ್ತದೆ. ವ್ಯಾಪಕವಾಗಿರುವ ಫ್ರೀಕ್ವೆನ್ಸಿ ರೇಂಜ್ ನ್ನು ಇದು ಹೊಂದಿದೆ ಮತ್ತು ಸೂಪರ್ ಕಡಿಮೆ ಮತ್ತು ಸೂಪರ್ ಹೈ ಫ್ರೀಕ್ವೆನ್ಸಿ ಅಂದರೆ 120 kHz ವರೆಗೂ ಇದು ನೀಡುತ್ತದೆ.


 • ಫೋಕಲ್ ಯುಟೋಪಿಯಾ: ರುಪಾಯಿ 2.86 ಲಕ್ಷ

  ವಿಶ್ವದಲ್ಲೇ ಲೌಡ್ ಸ್ಪೀಕರ್ ಡಿಸೈನ್ ನ್ನು ಹೆಡ್ ಪೋನ್ ನಲ್ಲಿ ಅಳವಡಿಸಿರುವ ಏಕೈಕ ಹೆಡ್ ಫೋನ್ ಇದಾಗಿದೆ. ಶುದ್ಧ ಬೆರ್ರೀಲಿಯಂ ನಿಂದ ಎಂ ಆಕಾರದಲ್ಲಿ ಗುಮ್ಮಟದ ರೀತಿಯಲ್ಲಿ ಇದನ್ನು ಡಿಸೈನ್ ಮಾಡಲಾಗಿದ್ದು ಫ್ರೀಕ್ವೆನ್ಸಿ ರೆಸ್ಪಾನ್ಸ್ 5Hz ನಿಂದ 50kHz ಇದೆ.


 • Abyss Diana PHI: ರುಪಾಯಿ 2.8 ಲಕ್ಷ

  2018 ರಲ್ಲಿ ಈ ಹೆಡ್ ಫೋನ್ ಗಳು ಬಿಡುಗಡೆಗೊಂಡು ಐಶಾರಾಮಿಯಾಗಿರುವ ವಿಶ್ವದ ತೆಳುವಾದ ಹೆಡ್ ಫೋನ್ ಗಳು ಎಂದು ಪ್ರಖ್ಯಾತಿ ಗಳಿಸಿದವು. ಕಾಂಪ್ಯಾಕ್ಟ್ ಪೋರ್ಟೇಬಲ್ ಪ್ಯಾಕೇಜ್ ನಿಂದ ವರ್ಡ್ ಕ್ಲಾಸ್ ಸೌಂಡ್ ನ್ನು ಇದು ನೀಡುತ್ತದೆ.


 • ಆಡಿಯೋ ಟೆಕ್ನಿಕಾ ATH-ADX5000: ರುಪಾಯಿ 1.43 ಲಕ್ಷ

  ATH-ADX5000 ಹೆಡ್ ಫೋನ್ ಗಲು ಡಿಟ್ಯಾಚೇಬಲ್ 3.0ಎಂ ಕೇಬಲ್ ಜೊತೆಗೆ A2DC (ಆಡಿಯೋ ಡಿಸೈನ್ಡ್ ಡಿಟ್ಯಾಚೇಬಲ್ ಕಾಕ್ಸಿಯಾಲ್) ಇದೆ. 6.3 mm (1/4") ಗೋಲ್ಡ್ ಪ್ಲೇಟೆಡ್ ಪ್ಲಗ್ ಗಳು ಡಿವೈಸ್ ನ್ನು ಕನೆಕ್ಟ್ ಮಾಡಲು ಬಳಸಲಾಗುತ್ತದೆ. ಹೆಡ್ ಫೋನ್ ನ ಪ್ರತಿಯೊಂದು ಜೋಡಿಯೂ ಕೂಡ ಲೇಸರ್ ನಿಂದ ಗುರುತಿಸಲ್ಪಡುತ್ತದೆ ಮತ್ತು ಸಿರಿಯಲ್ ನಂಬರ್ ಮತ್ತು ವಿಶೇಷವಾಗಿ ಡಿಸೈನ್ ಮಾಡಲಾಗಿರುವ ಹಾರ್ಡ್ ಕ್ಯಾರಿಯಿಂಗ್ ಕೇಸ್ ನ್ನು ಹೊಂದಿರುತ್ತದೆ.
ಒಂದು ಅತ್ಯಂತ ಒಳ್ಳೆಯ ಹೆಡ್ ಫೋನ್ ನ ಬೆಲೆ ಎಷ್ಟಿರಬಹುದು? ಇದಕ್ಕೆ ಉತ್ತರ ನೀವು ಎಷ್ಟು ಸಂಗೀತ ಪ್ರಿಯರು ಮತ್ತು ನೀವು ಎಷ್ಟು ಆಡಿಯೋ ಫೈಲ್ ಗಳನ್ನು ಕೇಳಲು ಇಚ್ಛಿಸುತ್ತೀರಿ ಎಂಬುದನ್ನು ಆಧರಿಸಿದೆ. ಹೌದು ಒಂದು ವೇಳೆ ಯಾರಾದರೂ ಒಂದು ಜೊತೆ ಹೆಡ್ ಫೋನ್ ಗೆ 35 ಲಕ್ಷ ಬೆಲೆ ಇದೆ ಎಂದು ಹೇಳಿದರೆ ನೀವು ನಂಬುತ್ತೀರಾ? ನಂಬಲೇಬೇಕು. ಖಂಡಿತ ಕೆಲವು ಹೆಡ್ ಫೋನ್ ಗಳಿವೆ ಅವು ಬಹಳ ದುಬಾರಿ ಬೆಲೆಯದ್ದು ಮತ್ತು ಕೆಲವು ವಿಭಿನ್ನ ಫೀಚರ್ ಗಳು ಕೂಡ ಅದರಲ್ಲಿದೆ. ಹಾಗಾದ್ರೆ ವಿಶ್ವದ ದುಬಾರಿ ಹೆಡ್ ಫೋನ್ ಗಳ ಪಟ್ಟಿಯನ್ನು ಇಲ್ಲಿ ನೋಡೋಣ ಬನ್ನಿ.

   
 
ಹೆಲ್ತ್