Back
Home » ಆರೋಗ್ಯ
ಮುಟ್ಟಿನ ದಿನಗಳಲ್ಲಿ ಮಹಿಳೆಯರ ದೇಹದ ತೂಕ ಏರುತ್ತದೆ! ಏಕೆಂದು ಗೊತ್ತೇ?
Boldsky | 12th Dec, 2018 05:00 PM
 • ನಿಮ್ಮ ದೇಹದ ಎಲ್ಲೆಡೆ ಹಲವಾರು ರಸದೂತಗಳು ತಮ್ಮ ಪ್ರಭಾವ ಬೀರುತ್ತಿರುತ್ತವೆ

  ಸಾಮಾನ್ಯವಾಗಿ ಮಾಸಿಕ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಸ್ತನಗಳ ಗಾತ್ರವೂ ಕೊಂಚ ಹೆಚ್ಚುತ್ತದೆ, ಇದು ಗರಿಷ್ಟ ಗಾತ್ರ ಪಡೆಯುವ ಸಮಯದಲ್ಲಿ ಮಾಸಿಕ ದಿನಗಳು ಪ್ರಾರಂಭಗೊಂಡು ಕೆಳಹೊಟ್ಟೆಯ ನೋವು, ಉಬ್ಬರಿಕೆ ಮತ್ತು ಸ್ರಾವ ಪ್ರಾರಂಭವಾಗುತ್ತದೆ.


 • ಒಂದೆರಡು ಕೇಜಿಗಳಷ್ಟು ತೂಕ ಹೆಚ್ಚಾಗುತ್ತದೆ

  ಈ ಕ್ರಿಯೆಗೆ ಪ್ರಮುಖವಾಗಿ ಈಸ್ಟ್ರೋಜೆನ್ ಎಂಬ ಸ್ತ್ರೀಯರಿಗೆ ಮಾತ್ರವೇ ಮೀಸಲಾದ ರಸದೂತವೊಂದು ಕಾರಣವಾಗಿದ್ದು ಮಾಸಿಕ ದಿನಗಳಲ್ಲಿ ಇದರ ಉತ್ಪಾದನೆಯ ಪ್ರಮಾಣ ಗರಿಷ್ಟ ಮಟ್ಟದಲ್ಲಿರುತ್ತದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ದೇಹ ಅತಿ ಹೆಚ್ಚು ದ್ರವವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇದೇ ದೇಹದ ಗಾತ್ರ ಹೆಚ್ಚುವುದಕ್ಕೂ ತೂಕ ಹೆಚ್ಚುವುದಕ್ಕೂ ಹೊಟ್ಟೆಯುಬ್ಬರಿಕೆಗೂ ಮೂಲ ಕಾರಣ. ಈ ಸಮಯದಲ್ಲಿ ತೂಕ ನೋಡಿಕೊಂಡಾಗ ಮಹಿಳೆಯ ದೇಹ ಪ್ರಕೃತಿಯನ್ನು ಅನುಸರಿಸಿ ಕೊಂಚ ತೂಕ ಏರಿರುತ್ತದೆ. ಸಾಮಾನ್ಯವಾಗಿ ಒಂದೆರಡು ಕೇಜಿಗಳಷ್ಟು ಹೆಚ್ಚುವ ಈ ತೂಕ ಮಾಸಿಕ ದಿನಗಳ ಪ್ರಭಾವ ಕಡಿಮೆಯಾದ ಬಳಿಕ ತನ್ನಿಂತಾನೇ ಇಳಿದು ಹಿಂದಿನ ತೂಕಕ್ಕೆ ಮರಳುತ್ತದೆ.


 • ಈ ಸಮಯದಲ್ಲಿ ಹೆಚ್ಚುವ ಹಸಿವನ್ನೂ ದೂರಬಹುದು

  ಈ ಸಮಯದಲ್ಲಿ ನಾಲಿಗೆ ಹುಳಿ, ಸಿಹಿ, ಉಪ್ಪು ಮೊದಲಾದ ಸ್ವಾದಗಳನ್ನು ತಿನ್ನಲು ಹೆಚ್ಚು ಬಯಸುತ್ತದೆ. ಅದರಲ್ಲೂ ಕಣ್ಣಿಗೆ ಸುಂದರವಾಗಿ ಕಾಣುವ ಯಾವುದೇ ಆಹಾರವನ್ನು ತಿನ್ನಲೇಬೇಕೆಂಬ ಅದಮ್ಯ ಬಯಕೆ ಮನದಲ್ಲಿ ಹುಟ್ಟುತ್ತದೆ. ಪರಿಣಾಮವಾಗಿ ಈ ಸಮಯದಲ್ಲಿ ಅನಗತ್ಯ ಆಹಾರದ ಸೇವನೆ ಸತತವಾಗುತ್ತದೆ. ಈ ಮೂಲಕ ದೇಹ ಸೇರುವ ಹೆಚ್ಚುವರಿ ಉಪ್ಪನ್ನು ನಿವಾರಿಸಲು ದೇಹ ಹೆಚ್ಚಿನ ನೀರನ್ನು ಬೇಡುತ್ತದೆ ಹಾಗೂ ಉಪ್ಪನ್ನು ಹೊರ ಹಾಕುವವರೆಗೂ ದೇಹದಲ್ಲಿ ಸಂಗ್ರಹಗೊಳ್ಳುತ್ತದೆ.

  Most Read: ಮುಟ್ಟಿನ ಅವಧಿಯಲ್ಲಿ ಕಾಡುವ ಸ್ತನ ನೋವಿಗೆ ಇಲ್ಲಿದೆ ಸರಳ ಮನೆಮದ್ದುಗಳು


 • ಈ ಸಮಯದಲ್ಲಿ ಹೆಚ್ಚುವ ಹಸಿವನ್ನೂ ದೂರಬಹುದು

  ಇದೂ ತೂಕದ ಹೆಚ್ಚಳಕ್ಕೆ ತನ್ನ ಪಾಲಿನ ಕೊಡುಗೆ ನೀಡುತ್ತದೆ. ಆದರೆ ಈ ಮೂಲಕ ಏರುವ ತೂಕ ಅಲ್ಪವಾಗಿರುತ್ತದೆ. ಕೆಲವು ನೂರು ಗ್ರಾಂ ಏರಬಹುದಷ್ಟೇ. ಆದರೆ ಒಂದು ಕೇಜಿಯಷ್ಟು ತೂಕದ ಕೊಬ್ಬನ್ನು ಪಡೆಯಬೇಕಾದರೆ ಭಾರೀ ಪ್ರಮಾಣದ ಸಿದ್ಧ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಅಷ್ಟಕ್ಕೆ ಮಾಸಿಕ ದಿನಗಳೇ ಮುಗಿದಿರುವುದರಿಂದ ಈ ಅವಧಿಯಲ್ಲಿ ಹೆಚ್ಚುವ ತೂಕ ಅಷ್ಟೊಂದು ಮುಖ್ಯವಲ್ಲ ಎಂದೇ ಹೇಳಬಹುದು. ವಿಶೇಷ ಟಿಪ್ಪಣಿ: ವೈದ್ಯರು ನೀಡುವ ಸಲಹೆಯಂತೆ ಆರೋಗ್ಯದ ದೃಷ್ಟಿಯಿಂದ ಈ ಬಯಕೆಯನ್ನು ಹತ್ತಿಕ್ಕಿ ಕೇವಲ ಆರೋಗ್ಯಕರ ಆಹಾರಗಳನ್ನು ಮಾತ್ರವೇ ಸೇವಿಸುವುದು ಅಗತ್ಯ.


 • ಈ ದಿನಗಳಲ್ಲಿ ವ್ಯಾಯಾಮಕ್ಕೂ ರಜೆ

  ಹಿಂದಿನ ಕಾಲದಲ್ಲಿ ಈ ಸಮಯದಲ್ಲಿ ಪೂರ್ಣ ಪ್ರಮಾಣದ ವಿಶ್ರಾಂತಿ ದೊರಕಲೆಂದೇ ಮನೆಯ ಹೊರಗೊಂದು ಕೋಣೆಯನ್ನು ಮೀಸಲಾಗಿಡಲಾಗುತ್ತಿತ್ತು. ಏಕೆಂದರೆ ಈ ದಿನಗಳಲ್ಲಿ ಹೊಟ್ಟೆ ಭಾರೀ ಪ್ರಮಾಣದಲ್ಲಿ ಊದಿಕೊಂಡು ನೋವು ಹೆಚ್ಚಿದ್ದಾಗ ಯಾವುದೇ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲ. ಅದರಲ್ಲೂ ವ್ಯಾಯಾಮವಂತೂ ದೂರದ ಮಾತು. ಅಲ್ಲದೇ ಈ ಸಮಯದಲ್ಲಿ ರಸದೂತಗಳ ಪ್ರಭಾವದಿಂದ ಏರುಪೇರಾಗುವ ಮನೋಭಾವವೂ ಆಲಸ್ಯವನ್ನು ತಂದಿಡುತ್ತದೆ. ಆದ್ದರಿಂದ ವ್ಯಾಯಾಮಕ್ಕೆ ಪೂರ್ಣ ರಜೆ ಲಭಿಸುತ್ತದೆ.


 • ಈ ದಿನಗಳಲ್ಲಿ ವ್ಯಾಯಾಮಕ್ಕೂ ರಜೆ

  ಹಾಗಾಗಿ ನಿಮ್ಮ ನಿತ್ಯದ ಹೊರಹರಿಯುವ ಬೆವರು ಮತ್ತು ಕರಗಲಿದ್ದ ಕೊಬ್ಬು ಕರಗದೇ ಹಾಗೇ ಉಳಿದು ಇಳಿಯಲಿದ್ದ ತೂಕವನ್ನು ನಿಲ್ಲಿಸಿ ಅಷ್ಟರ ಮಟ್ಟಿಗೆ ಇಳಿದಿದ್ದ ತೂಕವನ್ನು ಒಂದರ್ಧ ಕೇಜಿ ಹೆಚ್ಚಿಸುತ್ತದೆ. ಆದರೆ ವಾಸ್ತವವಾಗಿ ಈ ದಿನಗಳಲ್ಲಿಯೂ ಸುಲಭ ವ್ಯಾಯಾಮಗಳನ್ನು ಮಾಡುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ದ್ರವವನ್ನು ಹೊರಹಾಕಲು, ನೋವನ್ನು ಕಡಿಮೆ ಮಾಡಲು ಹಾಗೂ ಮಾಸಿಕ ದಿನಗಳ ವೇದನೆಯ ಅವಧಿಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ.


 • ನಿಮ್ಮ ಕೆಫೇನ್ ಸೇವನೆಯಲ್ಲಿ ನಿಯಂತ್ರಣ ಸಿಗುತ್ತಿಲ್ಲ

  ಸುಸ್ತು, ಆಯಾಸ ಎಂದು ಅನ್ನಿಸಿದಾಗೆಲ್ಲಾ ಕೊಂಚ ಕಾಫಿ ಕುಡಿದು ಪಡೆಯುತ್ತಿರುವ ಚೇತನದೊಂದಿಗೇ ಹೊಟ್ಟೆಯುಬ್ಬರಿಕೆಯೂ ಬಂದೇ ಬರುತ್ತದೆ ಎಂದು ನಿಮಗೆ ಗೊತ್ತಿತ್ತೇ? ಹೌದು, ತೂಕ ಏರದೇ ಇರಬೇಕೆಂದರೆ ನಿಮ್ಮ ಕೆಫೀನ್ ಸೇವನೆಯ ಪ್ರಮಾಣಕ್ಕೆ ಕೊಂಚ ಕಡಿವಾಣ ಹಾಕುವುದು ಅವಶ್ಯ. ಕೆಫೀನ್ ಪ್ರಮಾಣ ಅಲ್ಪವಿದ್ದಷ್ಟೂ ಅನಪೇಕ್ಷಿತ ಪರಿಣಾಮಗಳನ್ನು ಪಡೆಯುವುದೂ ಅತ್ಯಲ್ಪವಾಗಿರುತ್ತದೆ.

  Most Read:ಮಲಗುವಾಗ ರಾತ್ರಿಯಿಡೀ ಕಾಲು ನೋವು ಬರುತ್ತಿದೆಯೇ? ಹಾಗಾದರೆ ಇದೇ ಕಾರಣವಿರಬಹುದು!


 • ಕೆಫೇನ್ ಸೇವನೆಯಲ್ಲಿ ನಿಯಂತ್ರಣ

  ವಿಶೇಷ ಸೂಚನೆ: ಈ ವಾಸ್ತವ ಕೇವಲ ಕಾಫಿಗೆ ಮಾತ್ರವಲ್ಲ, ಎಲ್ಲಾ ಬಗೆಯ ಬುರುಗು ಪಾನೀಯ ಅಥವಾ ಲಘು ಪಾನೀಯಗಳಿಗೂ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಬುರುಗುಪಾನೀಯದ ಸೇವನೆಯಿಂದ ಹೊಟ್ಟೆಯ ಗುಡುಗುಡು ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಅಗತ್ಯ ನೀರು ಲಭಿಸುತ್ತದೆ ಎಂದು ಹೆಚ್ಚಿನ ಮಹಿಳೆಯರು ನಂಬಿದ್ದಾರೆ. ಆದರೆ ಇದೊಂದು ತಪ್ಪು ಕಲ್ಪನೆಯಾಗಿದ್ದು ನೀರಿನ ಅಗತ್ಯತೆಯನ್ನು ನೀರೇ ಪೂರೈಸಬೇಕೇ ವಿನಃ ಬೇರೆ ಯಾವ ಪಾನೀಯವೂ ಅಲ್ಲ.
ಮಾಸಿಕ ದಿನಗಳಲ್ಲಿ ನೀವು ಧರಿಸುವ ಜೀನ್ಸ್ ಇತರ ದಿನಗಳಿಗಿಂತಲೂ ಕೊಂಚ ಬಿಗಿಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಬೇಕಲ್ಲವೇ? ಅಲ್ಲದೇ ಆ ದಿನಗಳಲ್ಲಿ ಇತರ ದಿನಗಳಿಗಿಂತಲೂ ಕೊಂಚ ತೂಕ ಹೆಚ್ಚಿದಂತೆಯೂ ಅನ್ನಿಸಿತ್ತಲ್ಲಾ?

ಮಾಸಿಕ ದಿನಗಳಲ್ಲಿ ತೂಕ ಏರಿದಂತೆ ಅನ್ನಿಸುತ್ತದೆಯೇ ವಿನಃ ನಿಜವಾಗಿಯೂ ತೂಕವೇನೂ ಏರುವುದಿಲ್ಲ, ನಮಗೆ ಮಾತ್ರ ಹಾಗೆ ಅನ್ನಿಸುತ್ತದೆ ಎಂದು ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ ತೂಕ ಏರುವುದು ಮಾತ್ರ ವಾಸ್ತವ, ಇಷ್ಟವಾದರೂ ಆಗದಿದ್ದರೂ ನೀವು ನಂಬಲೇಬೇಕು. ಈ ಸಮಯದಲ್ಲಿ ನಿಜವಾಗಿಯೂ ಏನಾಗುತ್ತದೆ ಎಂದರೆ:

   
 
ಹೆಲ್ತ್