Back
Home » ಇತ್ತೀಚಿನ
ಫೇಸ್​ಬುಕ್ ಸಂಸ್ಥೆಗೆ 81 ಕೋಟಿ ರೂ.ದಂಡ!
Gizbot | 13th Dec, 2018 09:15 AM

ವಿಶ್ವದಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ರಸಿದ್ದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಇಟಲಿ ಸರ್ಕಾರ ಭಾರೀ ದಂಡ ವಿಧಿಸಿದೆ. ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್ ತನ್ನ ಬಳಕೆದಾರರ ಡೇಟಾವನ್ನು ದುರ್ಬಳಕೆ ಮಾಡಿಕೊಂಡು ಅವರ ದಾರಿತಪ್ಪಿಸಿದೆ ಎಂದು ಇಟಾಲಿಯನ್ ಅಧಿಕಾರಿಗಳು ಫೇಸ್​ಬುಕ್ ಸಂಸ್ಥೆಗೆ 81 ಕೋಟಿ ರೂ. ದಂಡ ದಂಡವಿಧಿಸಿದ್ದಾರೆ.

ದೇಶದ ಫೇಸ್​ಬುಕ್​ ಬಳಕೆದಾರರರು ನೀಡಿರುವ ವೈಯಕ್ತಿಕ ಮಾಹಿತಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಫೇಸ್‌ಬುಕ್ ಬಳಸಿಕೊಂಡಿದೆ. ಜೊತೆಗೆ ಈ ಮಾಹಿತಿಯನ್ನು ದೇಶದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ಸಹ ಫೇಸ್​ಬುಕ್​ ತಂದಿರಲಿಲ್ಲ. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸುಮಾರು 81 ಕೋಟಿ ರೂ. ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಟಲಿ ತಿಳಿಸಿದೆ.

ಫೇಸ್‌ಬುಕ್ ತನ್ನ ಬಳಕೆದಾರರ ಮಾಹಿತಿಗಳನ್ನು ಇತರರೊಂದಿಗೆ​ ಹಂಚಿಕೊಳ್ಳುತ್ತಿದ್ದು, ಈ ಮೂಲಕ ವೆಬ್​ಸೈಟ್​ಗಳಿಂದ ಮತ್ತು ಇತರೆ ಕೆಲ ಅಪ್ಲಿಕೇಶನ್​ಗಳ ಮೂಲಕ ಅನುಚಿತ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿದೆ. ಈ ಮೂಲಕ ಬಳಕೆದಾರರ ದತ್ತಾಂಶಗಳನ್ನು ಬಳಸಿ ಫೇಸ್​ಬುಕ್ ಲಾಭ ಮಾಡಿಕೊಳ್ಳುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಯೋರ್ವರು ಹೇಳಿರುವುದು ದಾಖಲಾಗಿದೆ.

ದೇಶದ ಗ್ರಾಹಕ ಕೋಡ್‌ನ 21, 22, 24 ಮತ್ತು 25 ಲೇಖನಗಳನ್ನು ಫೇಸ್‌ಬುಕ್ ಸಂಸ್ಥೆ ಉಲ್ಲಂಘಿಸಿದೆ ಎಂದು ಇಟಾಲಿಯನ್ ನಿಯಂತ್ರಕ ಮಂಡಳಿ ಹೇಳಿದ್ದು, ಈ ನಿಟ್ಟಿನಲ್ಲಿ ಅಧಿಕೃತ ವೆಬ್​ಸೈಟ್​ನಲ್ಲಿ ಮತ್ತು ಆಪ್​ನಲ್ಲಿ ಕ್ಷಮಾಪಣೆ ಪ್ರಕಟಿಸುವಂತೆ ಫೇಸ್​ಬುಕ್​ಗೆ ಎಸಿಜಿಎಂ ಪ್ರಾಧಿಕಾರ ಸೂಚಿಸಿದೆ. ಆದರೆ, ಫೇಸ್‌ಬುಕ್ ಕ್ಷಮಾಪಣೆ ಪ್ರಕಟಿದೆಯೇ ಎಂಬುದು ಮಾತ್ರ ತಿಳಿದುಬಂದಿಲ್ಲ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್​ಬುಕ್ ಸಂಸ್ಥೆಯ ವಕ್ತಾರರು, ನಾವು ನಮ್ಮ ಬಳಕೆದಾರರ ಮಾಹಿತಿ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿದ್ದೇವೆ. ನಾವು ಡೇಟಾವನ್ನು ಯಾವ ರೀತಿಯಾಗಿ ಬಳಸಿಕೊಳ್ಳುತ್ತೇವೆ, ನಮ್ಮ ವ್ಯವಹಾರಗಳು ಹೇಗೆ ನಡೆಯುತ್ತಿದೆ ಮತ್ತು ಸಂಸ್ಥೆಯ ನೀತಿ ನಿಯಮಗಳು ಯಾವುವು ಎಂಬುದನ್ನು ಅರ್ಥ ಮಾಡಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಓದಿರಿ: ಗೂಗಲ್‌ನಿಂದ ಈ 22 ಕಳ್ಳ ಆಪ್‌ಗಳು ಬ್ಯಾನ್!..ನಿಮ್ಮ ಫೋನನ್ನು ಈಗಲೇ ಚೆಕ್ ಮಾಡಿ!

   
 
ಹೆಲ್ತ್