Back
Home » ಆರೋಗ್ಯ
ವಯಸ್ಸು 50ರ ಬಳಿಕವೂ ಸೆಕ್ಸ್ ಜೀವನದಲ್ಲಿ ಭಾಗಿಯಾಗಿ, ಆರೋಗ್ಯವಾಗಿ ಇರುವಿರಿ
Boldsky | 13th Dec, 2018 07:05 PM
 • ಯೋನಿ ಒಣಗುವಿಕೆ

  ಋತುಬಂಧದ ಸಾಮಾನ್ಯವಾದ ಸಮಸ್ಯೆಯೇನೆಂದರೆ ಅದು ಯೋನಿ ಒಣಗುವಿಕೆ ಮತ್ತು ಬಿಸಿ ಹವೆ ಬರುವುದು. ಈಸ್ಟ್ರೋಜನ್ ಉತ್ಪತ್ತಿಯನ್ನು ದೇಹವು ನಿಲ್ಲಿಸಿದಾಗ ಅಥವಾ ಅತೀ ಕಡಿಮೆ ಉತ್ಪತ್ತಿ ಮಾಡಿದಾಗ ಯೋನಿಯ ಒಣಗುವಿಕೆ ಸಮಸ್ಯೆಯು ಕಾಡುವುದು. ಈಸ್ಟ್ರೋಜನ್ ನಿಂದಾಗಿ ಯೋನಿಯು ಯಾವಾಗಲೂ ಲ್ಯೂಬ್ರಿಕೇಟ್ ಆಗಿರುವುದು. ಯೋನಿಯ ಒಣಗುವಿಕೆಯಿಂದಾಗಿ ಲೈಂಗಿಕ ಕ್ರಿಯೆ ವೇಳೆ ಹೆಚ್ಚು ನೋವು ಉಂಟಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು.


 • ಇದನ್ನು ನಿಭಾಯಿಸುವುದು ಹೇಗೆ?

  ಇದನ್ನು ನಿಭಾಯಿಸುವಂತಹ ಅತ್ಯುತ್ತಮ ವಿಧಾನವೆಂದರೆ ಸೆಕ್ಸ್ ನಲ್ಲಿ ಭಾಗಿಯಾಗುವುದು. ಈಸ್ಟ್ರೋಜನ್ ಕೊರತೆಯಿಂದಾಗಿ ಶ್ರೋಣಿಯ ರಕ್ತಸಂಚಾರದ ಮೇಲೆ ಪರಿಣಾಮ ಬೀರುವುದು ಮತ್ತು ಸೆಕ್ಸ್ ನಡೆಸುವ ಕಾರಣದಿಂದಾಗಿ ಇದು ಉತ್ತೇಜಿಸಲ್ಪಡುವುದು. ಇದರಿಂದ ಕೋಶಗಳು ಪುನರ್ಶ್ಚೇತನಗೊಳ್ಳುವುದು. ಈ ಭಾಗದಲ್ಲಿ ಮಾಯಿಶ್ಚರೈಸ್ ಆಗುವುದು. ನೀವು ಲ್ಯುಬ್ರಿಕೆಂಟ್ ಮತ್ತು ಯೋನಿಯ ಮೊಶ್ಚಿರೈಸರ್ ಬಳಸಿಕೊಳ್ಳಬಹುದು.

  Most Read: ಪುರುಷರಲ್ಲಿ ವೀರ್ಯ ಆರೋಗ್ಯವಾಗಿದೆ, ಎಂದು ಸೂಚಿಸುವ ಲಕ್ಷಣಗಳು


 • ಕಾಮಾಸಕ್ತಿ ಬದಲಾವಣೆ

  ಇದು ಯಾವಾಗಲೂ ಕೆಟ್ಟದಾಗಿರುವುದಿಲ್ಲ. ಯಾಕೆಂದರೆ ಕೆಲವು ಮಹಿಳೆಯರಲ್ಲಿ 50ರ ಹರೆಯದಲ್ಲಿ ಕಾಮಾಸಕ್ತಿಯು ಹೆಚ್ಚಾಗುವುದು. ಮಹಿಳೆಯರಲ್ಲಿ ಋತುಬಂಧಕ್ಕೆ ಮೊದಲು ಟೆಸ್ಟೊಸ್ಟೆರಾನ್ ಮಟ್ಟವು ಉನ್ನತ ಮಟ್ಟದಲ್ಲಿರುವುದು. ಇದರ ಪರಿಣಾಮವಾಗಿ ಕಾಮಾಸಕ್ತಿಯು ಹೆಚ್ಚಾಗಿರುವುದು. ಆದರೆ ಕೆಲವು ಮಹಿಳೆಯರು ಇದಕ್ಕೆ ವಿರುದ್ಧವಾಗಿ ಅನುಭವ ಪಡೆದರೂ ಅದು ಸಾಮಾನ್ಯವಾಗಿರುವುದು. ನೀವು ಎರಡನೇ ಗುಂಪಿನಲ್ಲಿ ಇದ್ದರೆ ಆಗ ನೀವು ಈ ಸಮಸ್ಯೆಯನ್ನು ಅದರ ಲಕ್ಷಣಗಳಿಂದ ನಿವಾರಣೆ ಮಾಡಿಕೊಳ್ಳಿ.


 • ಯೋನಿಯ ಒಣಗುವಿಕೆ

  ಯೋನಿಯ ಒಣಗುವಿಕೆಯಿಂದಾಗಿ ಕಾಮಾಸಕ್ತಿ ಕಡಿಮೆಯಾಗುವುದು ಮತ್ತು ಇದನ್ನು ಹೇಗೆ ನಿಭಾಯಿಸುವುದು ಹೇಗೆ ಎಂದು ತಿಳಿಯಿರಿ....ನೀವು ಕಾಮಾಸಕ್ತಿ ಹೆಚ್ಚಾಗುವಂತೆ ಮಾಡಲು ಸಂಗಾತಿಯೊಂದಿಗೆ ವಿವಿಧ ರೀತಿಯ ಹೊಸ ಶೈಲಿ ಕಂಡುಕೊಳ್ಳಬಹುದು. ನೀವು ಮತ್ತು ಸಂಗಾತಿಯು 30-40 ವರ್ಷದಿಂದ ಒಂದೇ ರೀತಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರೆ ಇದು ತುಂಬಾ ಬೇಸರ ಮೂಡಿಸುವುದು.


 • ಯಾವುದೇ ತಡೆಯಿಲ್ಲ

  ಋತುಚಕ್ರ ನಿಂತಿರುವ ಕಾರಣದಿಂದಾಗಿ ನೀವು ಮತ್ತೆ ಗರ್ಭಧರಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಹೆಚ್ಚಿನ ಮಹಿಳೆಯರಿಗೆ ಆರಾಮದಾಯವೆಂದು ಅನಿಸುವುದಿಲ್ಲ. 50ರ ಹರೆಯದಲ್ಲಿ ಜೀವನವು ಒಂದು ಹಂತಕ್ಕೆ ಬಂದಿರುವುದು. ಈ ವೇಳೆ ನೀವು ಮಕ್ಕಳ ಬಗ್ಗೆ ಚಿಂತಿಸಬೇಕಿಲ್ಲ ಮತ್ತು ಋತುಚಕ್ರದ ಸೆಳೆತವು ಇಲ್ಲದೆ ಇರುವುದು ಕೂಡ ನಿಮಗೆ ದೊಡ್ಡ ಮಟ್ಟದ ಲಾಭ.

  Most Read: ಸೆಕ್ಸ್ ಬಳಿಕ ದೇಹಲ್ಲಿ ಎದುರಾಗುವ ಕೆಲವೊಂದು ವಿಚಿತ್ರ ಸಂಗತಿಗಳು


 • ನೀವು ಮತ್ತಷ್ಟು ಪ್ರಯೋಗ ಮಾಡಬಹುದು

  ನಿಮ್ಮ ಹಾಗೂ ಸಂಗಾತಿ ನಡುವಿನ ಅನ್ಯೋನ್ಯತೆಯು ಹೆಚ್ಚಾಗಿರುವ ಕಾರಣದಿಂದ ನೀವು ಯಾವುದೇ ಹೊಸ ವಿಚಾರಗಳನ್ನು ಪ್ರಯೋಗಿಸುವ ಬಗ್ಗೆ ಚಿಂತೆ ಮಾಡಬೇಕೆಂದಿಲ್ಲ. ದೀರ್ಘಕಾಲದ ತನಕ ಒಬ್ಬ ವ್ಯಕ್ತಿಯ ಜತೆಗೆ ಒಂದೇ ರೀತಿಯಲ್ಲಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದರಿಂದ ಬೇಸರ ಮೂಡಿಸುವುದು ನಿಜವಾದ ಸಂಗತಿ. ಆದರೆ ಹೊಸತನ ಪ್ರಯೋಗಿಸುವ ಮೂಲಕವಾಗಿ ನೀವು ಪ್ರೇರಣೆ ಪಡೆದುಕೊಳ್ಳಬಹುದು.


 • ದೇಹದ ಬಗ್ಗೆಯೂ ನಿಮಗೆ ಭಿನ್ನ ಭಾವನೆ ಮೂಡಬಹುದು

  ಋತುಬಂಧದ ಬಳಿಕ ಮಹಿಳೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವುದು. ಇದರಿಂದ ನಿಮಗೆ ತುಂಬಾ ಸೆಕ್ಸಿಯಾಗಿ ಅಥವಾ ಇತರ ಭಾವನೆ ಮೂಡಬಹುದು. ಎರಡನೇ ಗುಂಪಿನಲ್ಲಿ ಇದ್ದರೆ ಆಗ ಮಹಿಳೆಯು ತನ್ನ ಆತ್ಮವಿಶ್ವಾಸ ಕಳೆದುಕೊಳ್ಳವಳು.


 • ಸರಿಯಾದ ಆಹಾರ ಸೇವನೆ ಮಾಡಿ

  ಆದರೆ ಇದು ಅದರ ಪರಿಣಾಮವಾಗಿರಲಿಕ್ಕಿಲ್ಲ. ಯಾಕೆಂದರೆ ನಿಮ್ಮ ಸಂಗಾತಿಗೆ ಕೂಡ ನಿಮ್ಮೊಂದಿಗೆ ವಯಸ್ಸಾಗುತ್ತಾ ಇದೆ. ನೀವು ಪರಸ್ಪರರನ್ನು ತುಂಬಾ ಪ್ರೀತಿಸುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ನಿಮ್ಮ ಆಕರ್ಷಣೆ ಕುಸಿದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ, ಸರಿಯಾದ ಆಹಾರ ಸೇವನೆ ಮಾಡಿ ಮತ್ತು ದೈಹಿಕವಾಗಿಯೂ ಚಟುವಟಿಕೆಯಿಂದ ಇದ್ದರೆ ಆಗ ನೀವು ಇಬ್ಬರು ಜೀವನವನ್ನು ಆನಂದಿಸಬಹುದು.
ಜೀವನದಲ್ಲಿ ಲೈಂಗಿಕ ಜೀವನ ಕೂಡ ಮುಖ್ಯವಾಗಿರುವಂತದ್ದಾಗಿದೆ. ಯಾಕೆಂದರೆ ಲೈಂಗಿಕವಾಗಿ ಸುಖವಾಗಿದ್ದರೆ ಆಗ ಜೀವನವು ಸುಖಮಯವಾಗಿರುವುದು ಎಂದು ಹೇಳಲಾಗುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಋತುಬಂಧದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟುಬಿಡುವರು. ಮಹಿಳೆಯರು 50ರ ಬಳಿಕ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಕಡಿಮೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಸೆಕ್ಸ್ ನಲ್ಲಿ ತೊಡಗಿಕೊಳ್ಳಲು ತುಂಬಾ ಭಿನ್ನಅನುಭವವಾಗಿರುವುದು.

ನೀವು 50ರ ಆಸುಪಾಸಿನಲ್ಲಿ ಇದ್ದರೆ ಅಥವಾ ಈಗಾಗಲೇ ಋತುಬಂಧಕ್ಕೆ ಒಳಗಾಗಿದ್ದರೆ ಆಗ ನೀವು ಲೈಂಗಿಕ ಜೀವನವನ್ನು ಬಿಟ್ಟು ಬಿಡಬೇಕೆಂದಿಲ್ಲ. ಈ ಲೇಖನದಲ್ಲಿ 50ರ ಬಳಿಕ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದರಿಂದ ಯಾವೆಲ್ಲಾ ಲಾಭಗಳು ಆಗಲಿದೆ ಮತ್ತು ಇದನ್ನು ಉತ್ತಮಪಡಿಸಲು ಏನೆಲ್ಲಾ ಮಾಡಬೇಕು ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

   
 
ಹೆಲ್ತ್