Back
Home » ಇತ್ತೀಚಿನ
ಇನ್ನು ಮುಂದೆ ಆನ್ ಲೈನ್ ನಲ್ಲಿ ಔಷಧಿ ಮಾರುವಂತಿಲ್ಲ
Gizbot | 14th Dec, 2018 08:30 AM
 • ಯಾರು ನೀಡಿದ ತೀರ್ಪು?

  ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಮತ್ತು ನ್ಯಾಯಮೂರ್ತಿ ವಿಕೆ ರಾವ್ ಅವರಿದ್ದ ದ್ವಿಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ. ದೆಹಲಿ ಮೂಲದ ಚರ್ಮರೋಗ ತಜ್ಞರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠವು ಈ ಮಹತ್ವದ ತೀರ್ಪನ್ನು ನೀಡಿ ಆದೇಶ ಹೊರಡಿಸಿದೆ.


 • ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಏನಿತ್ತು?

  ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆನ್ ಲೈನ್ ನಲ್ಲಿ ಪ್ರತಿದಿನ ಲಕ್ಷಗಟ್ಟಲೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇ-ಔಷಧಾಲಯಗಳಿಂದ ಅನಿಯಂತ್ರಿತ ಮಾರಾಟ ನಡೆಯುತ್ತಿದ್ದು ಇದು ರೋಗಿಗಳ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇದು ವೈದ್ಯಲೋಕಕ್ಕೆ ಮತ್ತು ರೋಗಿಗಳಿಗೆ ಇಬ್ಬರಿಗೂ ತೊಂದರೆದಾಯಕವಾಗಿರುತ್ತದೆ ಎಂದು ಅರ್ಜಿ ಸಲ್ಲಿಸಲಾಗಿತ್ತು.


 • ಕಾಯಿದೆಗಳಿಗೆ ವಿರುದ್ಧವಾಗಿದೆ:

  ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆಕ್ಟ್1940, ಫಾರ್ಮಸಿ ಆಕ್ಟ್ 1948 ನ ಅನುಸಾರ ಈ ಆನ್ ಲೈನ್ ಔಷಧ ಮಾರಾಟವು ನಿಷಿದ್ಧವಾಗಿದೆ. ಸಾಮಾನ್ಯ ವಸ್ತುಗಳಿಗಿಂತ ಭಿನ್ನವಾಗಿರುವ ಈ ವಸ್ತುಗಳು ಹೆಚ್ಚು ಪ್ರಬಲವಾಗಿರುತ್ತದೆ ಮತ್ತು ದುರುಪಯೋಗದಿಂದಾಗಿ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತದೆ ಎಂಬುದನ್ನು ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು.

  ಈ ವರ್ಷದ ಸೆಪ್ಟೆಂಬರ್ ನಲ್ಲಿ ಆರೋಗ್ಯ ಸಚಿವಾಲಯವು ಸುಮಾರು 328 ಸ್ಥಿರ ಡೋಸ್ ಸಂಯೋಜನೆಯ ಕೆಲವು ಔಷಧಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿತ್ತು.


 • ಸರ್ಕಾರದ ಕರಡು ಪ್ರತಿ:

  ಆನ್ ಲೈನ್ ಔಷಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲವು ಕರಡು ನಿಯಮಗಳನ್ನು ಹೊರತಂದಿದೆ.ಇ-ಫಾರ್ಮಸಿ ಪೋರ್ಟಲ್ ಮೂಲಕ ಯಾವುದೇ ವ್ಯಕ್ತಿ ಅಧಿಕೃತವಾಗಿ ನೊಂದಾವಣೆ ಮಾಡಿಕೊಳ್ಳದೇ ಇದ್ದಲ್ಲಿ ಔಷಧವನ್ನು ವಿತರಿಸಲು ಮಾರಾಟ ಮಾಡಲು, ಸ್ಟಾಕ್ ಮಾಡಲು, ಅಥವಾ ಆಪರ್ ಮಾಡಲು ಹಕ್ಕಿರುವುದಿಲ್ಲ.
ದೇಶದಾದ್ಯಂತ ಇನ್ನು ಮುಂದೆ ಯಾವುದೇ ಆನ್ ಲೈನ್ ಸ್ಟೋರ್ ಗಳು ಕೂಡ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ಮತ್ತು ದೆಹಲಿಯಲ್ಲಿರುವ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಈ ಆದೇಶವನ್ನು ಕೂಡಲೇ ಪಾಲಿಸುವಂತೆ ಖಡಕ್ ಸೂಚನೆಯನ್ನು ದೆಹಲಿ ಹೈಕೋರ್ಟ್ ನೀಡಿದೆ.

   
 
ಹೆಲ್ತ್