Back
Home » ಇತ್ತೀಚಿನ
ಪ್ರವಾಸ ಪ್ರಿಯರಿಗೆ ಬೇಕೆ ಬೇಕು ಈ 8 ಅದ್ಬುತ ‘ಆಪ್’ಗಳು!..ಏಕೆ ಗೊತ್ತಾ?
Gizbot | 14th Dec, 2018 10:47 AM
 • ‘ಫ್ಲೈಟ್ ಟ್ರ್ಯಾಕರ್’

  ವಿಮಾನದ ವೇಳಾಪಟ್ಟಿಯನ್ನು ಕ್ಷಣ ಕ್ಷಣದ ಅಪ್‌ಡೇಟ್ ಮಾಹಿತಿ ನೀಡುವ ಅಪ್ಲಿಕೇಷನ್ ಇದಾಗಿದೆ. ವಿಮಾನ ಬರುವ ವೇಳೆ, ಹೊರಡುವ ಸಮಯದ ಜೊತೆಗೆ ಆ ವಿಮಾನ ಯಾವ ಗೇಟ್‌ಗೆ ಬಂದು ನಿಲ್ಲುತ್ತದೆ, ಸಮಯದಲ್ಲಿ ಏನಾದರೂ ವ್ಯತ್ಯಾಸವಾದರೆ, ಇಂಥ ಎಲ್ಲ ಮಾಹಿತಿಯನ್ನು ಅಪ್ಲಿಕೇಷನ್ ಮೂಲಕ ತಿಳಿಯಬಹುದು. ಅಲ್ಲದೆ, ನಿಮ್ಮ ಪ್ರಿತಿಪಾತ್ರರು ಹೊರಟಿರುವ ವಿಮಾನ ಯಾವುದು ಎನ್ನುವುದನ್ನೂ ಇದರಿಂದ ಪತ್ತೆ ಹಚ್ಚಬಹುದು.


 • ಕೌಚ್ ಸರ್ಫಿಂಗ್(CouchSurfing)!

  ಕೌಚ್ ಸರ್ಫಿಂಗ್ ಎಂಬ ಆಪ್‌ ಬಗ್ಗೆ ತಿಳಿದುಕೊಳ್ಳದಿದ್ದರೆ ಇಂದು ಈ ಆಪ್‌ ಬಗ್ಗೆ ನೀವು ತಿಳೀದುಕೊಳ್ಳಲೇಬೇಕು. ಉಚಿತವಾಗಿ ಊಟ, ವಾಸ್ತವ್ಯಕ್ಕೆ ನೆರವಾಗುತ್ತಾರೆ ಎಂದು ಹೇಳಿದೆನಲ್ಲ. ಅದಕ್ಕೆ ಇರುವ ಆಪ್ ಇದು. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಕೌಚ್ ಸರ್ಫಿಂಗ್ ಸಮೂಹದ ಸದಸ್ಯ ಸಿಗಬಹುದು. ನೋಂದಾಯಿಸಿಕೊಂಡಿರುವ 4 ಲಕ್ಷ ಮಂದಿ, 40 ಲಕ್ಷ ಮಂದಿ ಪಯಣಿಗರು ಈ ಸಮೂಹದಲ್ಲಿದ್ದಾರೆ.


 • ಆಡಿಯೊ ಕಾಂಪಾಸ್ (AudioCompass)

  ಭಾರತ ಪ್ರವಾಸೋದ್ಯಮ ಇಲಾಖೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 'ಆಡಿಯೊ ಕಾಂಪಾಸ್' ಆಪ್‌ ಅನ್ನು ಹೊರತಂದಿದೆ. ಈ ಆಪ್‌ನಿಂದ ಯಾವುದೇ ಮಾಹಿತಿ ಉಚಿತವಾಗಿಯೇ ಸಿಗುತ್ತಿದ್ದು, ಎಲ್ಲ ಜಾಗಗಳ ಆಡಿಯೊ ವಿವರಣೆ ಕೇಳಲು ಕೇವಲ 49ರೂ. ನೀಡಿ ನೋಂದಾಯಿಸಿಕೊಳ್ಳಬಹುದು ಗೈಡ್‌ನಂತೆ ದೇಶ, ವಿದೇಶಗಳ ಪ್ರಮುಖ ಸ್ಥಳಗಳ ಮಾಹಿತಿಯನ್ನು ಸ್ಪಷ್ಟವಾಗಿ ಪಡೆಯಬಹುದು.


 • ಗೂಗಲ್‌ ಟ್ರಿಪ್ಸ್(Google Trips)

  ಕಾಯ್ದಿರಿಸಿದ ಟಿಕೆಟ್, ಸಾಗುವ ಹಾದಿ, ಭೇಟಿ ನೀಡಲಿರುವ ಸ್ಥಳ, ಹೋಟೆಲ್ ಸೇರಿದಂತೆ ಎಲ್ಲ ಮಾಹಿತಿಯನ್ನು ನಿಮ್ಮ ಜಿಮೇಲ್‌ನಿಂದ ಪಡೆದು ಸಮಯ ಹಾಗೂ ದಿನಾಂಕದ ಅನ್ವಯ ಪಟ್ಟಿ ಸಿದ್ಧಪಡಿಸುವ ಗೂಗಲ್ ಟ್ರಿಪ್ಸ್ ಆಪ್ ಇಲ್ಲದೆ ಪ್ರವಾಸಕ್ಕೆ ಹೊರಡುವುದಾದರೂ ಹೇಗೆ? ಎಲ್ಲ ಹುಟುಕಾಟವನ್ನೂ ಗೂಗಲ್‌ನಲ್ಲಿಯೇ ನಡೆಸುವುದರಿಂದ ಗೂಗಲ್‌ ಟ್ರಿಪ್ಸ್ ನಮ್ಮ ಪ್ರವಾಸದಲ್ಲಿ ಸಮಯ ಯೋಜನೆಯಲ್ಲಿ ಸಹಕಾರಿಯಾಗಿದೆ. ಈ ಆಪ್ ಪ್ರಯಾಣಕ್ಕೂ ಹಿಂದಿನ ದಿನದಿಂದಲೇ ಸೂಚನೆ ನೀಡುತ್ತಿರುತ್ತದೆ.


 • ಟ್ರಾವೆಲ್ ಖಾನಾ(travelkhana)

  ರೈಲು ಪ್ರಯಾಣದ ವೇಳೆ ಬಿಸಿಯಾದ ಹಾಗೂ ರುಚಿಕರವಾದ ಊಟ ತಿಂಡಿ ತಿನ್ನಬೇಕು ಎಂದರೆ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ದಿನದ 24 ಗಂಟೆಯೂ ಕಾರ್ಯಾಚರಿಸುವ ಆಪ್ ಇದಾಗಿದ್ದು, ನಾವು ಪ್ರಯಾಣಿಸುತ್ತಿರುವ ಮಾರ್ಗದಲ್ಲಿಯೇ ಆಹಾರ ಪೂರೈಕೆ ಮಾಡುತ್ತಾರೆ. ಪಿಎನ್‌ಆರ್‌ ಸಂಖ್ಯೆ ಹಾಗೂ ರೈಲ್ವೆ ನಿಲ್ದಾಣದ ಮಾಹಿತಿ, ನಿಗದಿತ ಬೆಲೆ ನೀಡಿದರೆ ಗುಣಮಟ್ಟದ ಊಟ ನಿಮಗೆ ಸಿಗಲಿದೆ.


 • ಸ್ಪ್ಲಿಟ್‌ವೈಸ್ (Splitwise)

  ಈಗೆಲ್ಲಾ ಬೈಕುಗಳಲ್ಲಿ ಹತ್ತಾರು ಜನ ಒಟ್ಟಿಗೆ ಪ್ರವಾಸ ಹೋಗುವುದು ಕಾಮನ್. ಅಂತಹ ಸಮಯದಲ್ಲಿ ಹಣವನ್ನು ಗುಂಪಾಗಿ ಖರ್ಚು ಮಾಡಿದರೂ ಅದರ ಲೆಕ್ಕವನ್ನು ಪಕ್ಕವಾಗಿಡಲು ಈ ಆಪ್ ಸಹಾಯಕ. ಪ್ರಯಾಣದಲ್ಲಿರುವ ಎಲ್ಲರೂ ಈ ಆಪ್‌ ಹೊಂದಿರಬೇಕು ಹಾಗೂ ಮಾಡುವ ಖರ್ಚಿನ ಲೆಕ್ಕವನ್ನು ನಮೂದಿಸುತ್ತ ಹೋದರೆ ಸಾಕು. ಅಂತಿಮವಾಗಿ ಆಗಿರುವ ಒಟ್ಟು ಖರ್ಚು, ತಲಾ ಖರ್ಚಿನ ಮೊತ್ತ ಹಾಗೂ ಪ್ರತ್ಯೇಕವಾಗಿ ಬಾಕಿಯಿರುವ ಹಣ ಎಲ್ಲವೂ ಕ್ಷಣದಲ್ಲಿ ಲೆಕ್ಕ ಮಾಡಿ ತೋರಿಸುತ್ತದೆ.


 • ಭಾಷೆಯ ತೊಡಕಿಗೆ ‘ಸ್ನ್ಯಾಪ್’

  ಬೇರೆಬೇರೆ ದೇಶಗಳಿಗೆ ಹೋದಾಗ ಸಾಮಾನ್ಯವಾಗಿ ಭಾಷೆಯ ಸಮಸ್ಯೆ ಎದುರಾಗುತ್ತದೆ. ಆದರೆ, ಈಗ ಬಂದಿರುವ 'ಸ್ನ್ಯಾಪ್' ಸೌಲಭ್ಯದ ಮೂಲಕ ನೀವು ಇದನ್ನು ನಿವಾರಿಸಿಕೊಳ್ಳಬಹುದು. ಅಂದರೆ, ನೀವು ಇದರ ಮೂಲಕ ಹೇಳಿದ್ದನ್ನು ಗೂಗಲ್ ಟ್ರಾನ್ಸ್‌ಲೇಟ್‌ ಪ್ರಪಂಚದ 103 ಭಾಷೆಗಳಿಗೆ ತಪ್ಪಿಲ್ಲದಂತೆ ಅನುವಾದಿಸುತ್ತದೆ. ನೀವು ಆಫ್‌ಲೈನ್‌ ಮೋಡ್‌ನಲ್ಲಿದ್ದಾಗ ಕೂಡ 59 ಭಾಷೆಗಳಲ್ಲಿ ಈ ಸೇವೆ ದೊರೆಯುತ್ತದೆ.


 • ಕರೆನ್ಸಿ ಕನ್ವರ್ಟರ್

  ವಿದೇಶಗಳಲ್ಲಿ ಸುತ್ತಾಡುತ್ತಿರುವಾಗ ಆಯಾ ದೇಶದ ಕರೆನ್ಸಿಗಳ ಸ್ವರೂಪ ಮತ್ತು ಮೌಲ್ಯವೇ ಬೇರೆಬೇರೆ ಆಗಿರುತ್ತವೆ. ಅದರಲ್ಲೂ ಶಾಪಿಂಗ್ ಮಾಡಲು ಹೋದಾಗ ಈ ಸಮಸ್ಯೆ ಹೆಚ್ಚು! ಹೀಗಾಗಿ ಕರೆನ್ಸಿ ಕನ್ವರ್ಟರ್ ಇದ್ದರೆ, ಅದು ಚಕಚಕನೆ ನಿಮಗೆ ಸರಿಯಾದ ಲೆಕ್ಕವನ್ನು ಕೊಡುತ್ತದೆ. ಇದರಿಂದ ನಿಮ್ಮ ಹಣಕ್ಕೆ ಅಲ್ಲಿನ ಬೆಲೆ ಏನು?, ಅಲ್ಲಿ ನೀವು ಎಷ್ಟು ಖರೀದಿ ಅಥವಾ ವೆಚ್ಚ ಮಾಡಬಹುದು ಎಂಬುದನ್ನು ನೀವು ಕ್ಷಣಮಾತ್ರದಲ್ಲಿ ತಿಳಿಯಬಹುದು.
ಪ್ರವಾಸ ಹೋಗುವುದು ಎಂದರೆ ಸುಮ್ಮನೇ ಅಲ್ಲ. ಅದಕ್ಕೆ ಹತ್ತು ಹಲವಾರು ಪೂರ್ವ ತಯಾರಿ ನಡೆಸಿಕೊಳ್ಳಬೇಕು. ಪ್ರಯಾಣಕ್ಕೆ ಮಾಡಿಕೊಳ್ಳಬೇಕಾದ ಸಿದ್ದತೆಗಳಿಂದ ಹಿಡಿದು, ನಾವು ಪ್ರಯಾಣಿಸುವ ಮಾರ್ಗ, ಪ್ರಯಾಣಿಸಬೇಕಾದ ವಾಹನ, ಪ್ರಯಾಣಿಸಬೇಕಾದ ಸ್ಥಳದಲ್ಲಿ ಸಿಗುವ ಸೌಲಭ್ಯಗಳು ಸೇರಿದಂತೆ ಪ್ರತಿಯೊಂದು ಚಿಕ್ಕ ಚಿಕ್ಕ ಮಾಹಿತಿಗಳು ಪ್ರಮುಖವಾಗುತ್ತವೆ.

ಈಗ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ನಮ್ಮ ಪ್ರವಾಸ ಮತ್ತಷ್ಟು ಸರಳವಾಗಿದೆ ಎನ್ನಬಹುದು. ಪ್ರಯಾಣಕ್ಕೆ ವಿಮಾನಯಾನದ ಮಾಹಿತಿ, ಟಿಕೆಟ್ ಕಾಯ್ದಿರಿಸುವಿಕೆ ಸೇರಿದಂತೆ, ಆ ಪ್ರವಾಸ ಸ್ಥಳದಲ್ಲಿ ಜನರಾಡುವ ಭಾಷೆ ಕಲಿಯಲು ಸಹ ಸಹಾಯ ಮಾಡುವ ಅಪ್ಲಿಕೇಷನ್‌ಗಳು ಲಭ್ಯವಿವೆ. ಆ ಸ್ಥಳದಲ್ಲಿ ಎಂಥೆಂಥ ಸೌಲಭ್ಯಗಳು ಇರಲಿವೆ ಎಂಬುದನ್ನು ಸಹ ತಿಳಿಸಲಿವೆ.

ಇಂದಿನ ದಿನಗಳಲ್ಲಿ ಪ್ರವಾಸಕ್ಕಾಗಿಯೇ ನೂರಾರರು ಆಪ್‌ಗಳು ಇದ್ದರೂ ಕೆಲವು ಮಾತ್ರ ಅತ್ಯಗತ್ಯ ಎಂದು ಹೇಳಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಪ್ರವಾಸ ಹೋಗುವವರಿಗೆ ಸಹಾಯಮಾಡಲು ಹುಟ್ಟಿಕೊಂಡಿರುವ ಕೆಲವು ಅತ್ಯುತ್ತಮ ಅಪ್ಲಿಕೇಷನ್‌ಗಳ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಈ ಎಲ್ಲಾ ಆಪ್‌ಗಳು ನಿಮ್ಮ ಪ್ರವಾಸವನ್ನು ಸುಗಮಗೊಳಿಸುತ್ತವೆ.

   
 
ಹೆಲ್ತ್