Back
Home » ಇತ್ತೀಚಿನ
2018 ರಲ್ಲಿ ಜನರು ಯಾರನ್ನು ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ್ದಾರೆ ಗೊತ್ತಾ?
Gizbot | 14th Dec, 2018 05:41 PM
 • ಪ್ರಿಯಾ ಪ್ರಕಾಶ ವಾರಿಯರ್

  ಕೇವಲ ಎರಡೇ ದಿನದಲ್ಲಿ ಒಂದೇ ಒಂದು ಕಣ್ಣಮಿಂಚಿನಲ್ಲಿ ಅಂತರ್ಜಾಲವನ್ನೇ ಅಪ್ಪಿಕೊಂಡವಳು ಈ ದಕ್ಷಿಣ ಭಾರತದ ಹುಡುಗಿ. ಹೌದು, ಅದೆಷ್ಟೋ ಸಾವಿರ ಮಂದಿ ಪ್ರಿಯಾ ಪ್ರಕಾಶ್ ವಾರಿಯರ್ ನ್ನು ಈ ವರ್ಷ ಇಂಟರ್ನೆಟ್ ನಲ್ಲಿ ಹುಡುಕಿದ್ದಾರೆ. ಈಕೆಗೆ ದಿನಬೆಳಗಾಗುವುದರಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು. 18 ವರ್ಷದ ಈ ಭಾರತೀಯ ನಟಿ ಹತ್ತೇ ಸೆಕೆಂಡ್ ನ ಕಣ್ಣೋಟವೊಂದು ಅದೆಷ್ಟೋ ಜನರನ್ನು ಸೆಳೆದುಬಿಡ್ತು. ಅದೇ ಕಾರಣಕ್ಕೆ ಆಕೆ ಇಂದು 2018 ರಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ನಟಿಯಾಗಿ ಗುರುತಿಸಿಕೊಂಡಿರಲು ಕಾರಣವಾಗಿದೆ.


 • ನಿಕ್ ಜಾನ್ಸ್

  ನಿಕ್ ಜಾನ್ಸ್ ಮತ್ತು ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಜೋಧಪುರದ ಉಮಾಯಿದ್ ಭವನದ ಗ್ರ್ಯಾಂಡ್ ಪ್ಯಾಲೇಸ್ ನಲ್ಲಿ ಮದುವೆಯಾದರು. ಅವರು ಮುಂಬೈ ನಲ್ಲಿ ಎಂಗೇಜ್ ಆದಾಗಿನಿಂದ ಅವರ ಬಗೆಗಿನ ಜನರ ಕುತೂಹಲ ಅಧಿಕಗೊಂಡಿತ್ತು. ಅದೇ ಕಾರಣಕ್ಕೆ ಬಹುಶ್ಯಃ ಇಂದು ನಿಕ್ ಜಾನ್ಸ್ 2018 ರಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.


 • ಸ್ವಪ್ನ ಚೌಧರಿ

  ಸ್ವಪ್ನ ಚೌಧರಿ ಒಬ್ಬ ಪ್ರಸಿದ್ಧ ಡ್ಯಾನ್ಸರ್, ಹಾಡುಗಾರ್ತಿ ಮತ್ತು ಹರಿಯಾಣದ ಪ್ರಸಿದ್ಧ ವೇದಿಕೆ ಪ್ರದರ್ಶನಗಾರ್ತಿಯಾಗಿದ್ದಾರೆ. ದೆಹಲಿಯಲ್ಲಿ ಬೆಳೆದ ಆಕೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಡ್ಯಾನ್ಸಿಂಗ್ ಕರಿಯರ್ ನ್ನು ಆರಂಭಿಸಿ ಆರ್ಥಿಕವಾಗಿ ತನ್ನ ಕುಟುಂಬಕ್ಕೆ ಆಸರೆಯಾಗುತ್ತಾರೆ. ಆಕೆಯ ಅತ್ಯುದ್ಭುತವಾಗಿರುವ ಪ್ರತಿಭೆ ಆಕೆಯನ್ನು ಪ್ರಸಿದ್ಧತೆಯ ಉತ್ತುಂಗಕ್ಕೆ ಕರೆದುಕೊಂಡು ಸಾಗಿದೆ. ಆಕೆಯ ಡ್ಯಾನ್ಸ್ ಮತ್ತು ಹಾಡುಗಳ ವೀಡಿಯೋ ವೈರಲ್ ಆಗಿತ್ತು ಮತ್ತು 2017 ರಲ್ಲಿ ಆಕೆ ಬಿಗ್ ಬಾಸ್ ನ ಸ್ಪರ್ಧಿ ಕೂಡ ಆಗಿರುತ್ತಾರೆ. 2018 ರಲ್ಲಿ ಆಕೆ ಕೆಲವು ಬಾಲಿವುಡ್ ನ ಐಟಂ ನಂಬರ್ ಗಳಲ್ಲಿ ಕೂಡ ಅಭಿನಯಿಸಿದ್ದಾರೆ.


 • ಪ್ರಿಯಾಂಕ ಚೋಪ್ರಾ

  2018 ಬಹುಶ್ಯಃ ಪ್ರಿಯಾಂಕ ಚೋಪ್ರಾಗೆ ಪ್ರಮುಖ ವರ್ಷವಾಗಿರುವ ಸಾಧ್ಯತೆ ಇದೆ. ಈ ವರ್ಷದ ಆರಂಭದಿಂದಲೂ ಆಕೆ ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಲೇ ಇದ್ದಳು. ಅದರಲ್ಲೂ ನಿಕ್ ಜಾನ್ಸ್ ಜೊತೆಗೆ ಎಂಗೇಜ್ ಆಗಿದ್ದಾಗಿನಿಂದಲೂ ಆಕೆಯ ಮೊನ್ನೆ ಮೊನ್ನೆ ಮದುವೆಯ ತನಕ ಇದು ಅಂತರ್ಜಾಲದ ಗಾಸಿಪ್ ಕಾಲಂ ಆಗಿತ್ತು. ಚಲನಚಿತ್ರಗಳಿಂದ ಅಲ್ಲದಿದ್ದರೂ ವಯಕ್ತಿಕ ಬದುಕಿನ ಕಾರಣದಿಂದ ಆಕೆ ಜನರಿಂದ ಹೆಚ್ಚು ಗೂಗಲ್ ನಲ್ಲಿ ಹುಡುಕಲ್ಪಟ್ಟಿದ್ದಾಳೆ


 • ಆನಂದ್ ಅಹುಜಾ

  ಆನಂದ್ ಅಹುಜಾ, ಪ್ರಸಿದ್ಧ ಸ್ನೀಕರ್ ಬ್ರ್ಯಾಂಡ್ ಬಾನೆಯ ಸಿಇಓ. 2018 ರಲ್ಲಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮದುವೆಯಾಗಿದ್ದಾರೆ. ಇವರ ವಿವಾಹದ ಸಂದರ್ಬದಲ್ಲಿ ಅತೀ ಹೆಚ್ಚು ಹುಡುಕಾಟ ನಡೆದಿತ್ತು ಹಾಗಾಗಿ ಈ ವರ್ಷದ ಈ ಪಟ್ಟಿಯಲ್ಲಿ ಇವರಿಗೂ ಸ್ಥಾನವಿದೆ.


 • ಸಾರಾ ಅಲಿ ಖಾನ್

  ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ರ ಪುತ್ರಿ ಸಾರಾ ಅಲಿ ಖಾನ್. ಕಳೆದ ವಾರವಷ್ಟೇ ಅಂದರೆ ಡಿಸೆಂಬರ್ 7 ರಂದು ಬಿಡುಗಡೆಗೊಂಡ ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಪದಾರ್ಪಣೆ ಮಾಡಿದ್ದಾರೆ.ಶುಶಾಂತ್ ಸಿಂಗ್ ರಜಪೂತ್ ಜೊತೆ ಈ ಆಕ್ಟಿಂಗ್ ಆರಂಭಿಸಿದ್ದಾಳೆ. ಕೇದಾರನಾಥ ಹೊರತುಪಡಿಸಿದರೆ ಸಾರಾ ಅಲಿ ಖಾನ್ ರೋಹಿತ್ ಶೆಟ್ಟಿಯ ಚಿತ್ರವೊಂದರಲ್ಲಿ ರಣವೀರ್ ಸಿಂಗ್ ಜೊತೆಗೆ ಕಾಣಿಸಿಕೊಳ್ಳಲಿದ್ದಾಳೆ. ಆದರೆ ಆಕೆಯ ಮೂವಿ ಬಿಡುಗಡೆಗೊಳ್ಳುವುದಕ್ಕೂ ಮುನ್ನವೇ ಕಾಫಿ ವಿತ್ ಕರಣ್ ಸೀಸನ್ 6 ರಲ್ಲಿ ಆಕೆ ತನ್ನ ತಂದೆಯ ಜೊತೆ ಕಾಣಿಸಿಕೊಂಡಿದ್ದಳು. ಬಹುಶ್ಯಃ ಈ ಎಲ್ಲಾ ಕಾರಣಕ್ಕೆ ಆಕೆ 2018 ರ ಸೆಲೆಬ್ರಿಟಿಯ ಗೂಗಲ್ ಹುಡುಕಾಟದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.


 • ಸಲ್ಮಾನ್ ಖಾನ್

  ಫೋರ್ಬ್ಸ್ ನ ವಾರ್ಷಿಕ ಪಟ್ಟಿಯ ಅನುಸಾರ ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ. ಈ ಸ್ಥಾನವನ್ನು ಸತತ 3ನೇ ಬಾರಿಗೆ ಸಲ್ಮಾನ್ ಖಾನ್ ಪಡೆದುಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ಎರಡು ಚಲನಚಿತ್ರಗಳು ಈ ವರ್ಷ ಬಿಡುಗಡೆಗೊಂಡಿದೆ. ರೇಸ್ 3 ಮತ್ತು ಲವ್ ಯಾತ್ರಿ.


 • ಮೇಘನ್ ಮಾರ್ಕ್ಲೆ

  ಪ್ರಿನ್ಸ್ ಹ್ಯಾರಿಯನ್ನು ಮೇ 2018 ರಲ್ಲಿ ಮದುವೆಯಾದ ಕಾರಣಕ್ಕೆ ಮೇಘನ್ ಮಾರ್ಕ್ಲೆ ಅಧಿಕೃತವಾಗಿ ರಾಯಲ್ ಫ್ಯಾಮಿಲಿಯ ಸದಸ್ಯೆಯಾಗಿದ್ದಾಳೆ. ಈ ರಾಯಲ್ ವೆಡ್ಡಿಂಗ್ ನಲ್ಲಿ ಪ್ರಿಯಾಂಕ ಚೋಪ್ರಾ, ಜಾರ್ಜ್ ಕ್ಲೂನಿ,ಡೇವಿಡ್ ಬೆಕ್ಯ್ಹಾಮ್ ಭಾಗವಹಿಸಿದ್ದರು.

  ಕಾನೂನುಬದ್ಧ ನಾಟಕ ಸರಣಿಯ ಸೂಟ್ನಲ್ಲಿ ರಾಚೆಲ್ ಜೇನ್ ಪಾತ್ರಕ್ಕಾಗಿ ಜನಪ್ರಿಯವಾಗಿ ಗುರುತಿಸಲ್ಪಟ್ಟಿದ್ದ ಮಾಜಿ ಅಮೇರಿಕನ್ ನಟಿ, ಈ ವರ್ಷ ಅತಿ ಹೆಚ್ಚು ಗೂಗಲ್ ನಲ್ಲಿ ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಒಬ್ಬಳಾಗಿದ್ದಾಳೆ .


 • ಅನೂಪ್ ಜಲೋಟಾ

  ಭಾರತೀಯ ಸಂಗೀತಗಾರ್ತಿ ಮತ್ತು ಮ್ಯೂಸೀಷಿಯನ್ ಆಗಿರುವ ಅನೂಪ್ ಜಲೋಟಾ ಹಿಂದೂ ಭಕ್ತಿ ಸಂಗೀತ ಮತ್ತು ಭಜನೆ, ಉರ್ದು ಹಾಡುಗಳು, ಘಝಲ್ ಗಾಗಿ ಪ್ರಸಿದ್ಧಿಯಾಗಿದ್ದಾರೆ. ಕಳೆದ ವರ್ಷದ ಬಿಗ್ ಬಾಸ್ ಸದಸ್ಯರೂ ಕೂಡ ಹೌದು. 2018 ರ ಹೆಚ್ಚು ಗೂಗಲ್ ನಿಂದ ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಇವರು ಪಡೆದಿದ್ದಾರೆ.


 • ಬೋನಿ ಕಪೂರ್

  ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ಪ್ರಸಿದ್ಧ ದಿವಂಗತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಈ ವರ್ಷ ಅತೀ ಹೆಚ್ಚು ಜನರಿಂದ ಗೂಗಲ್ ನಲ್ಲಿ ಹುಡುಕಲ್ಪಟ್ಟ ಪ್ರಖ್ಯಾತ ವ್ಯಕ್ತಿಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಮಿಸ್ಟರ್ ಇಂಡಿಯಾ, ನೋ ಎಂಟ್ರಿ ಮತ್ತು ಜುದಾಯಿಯಂತಹ ಅತ್ಯುದ್ಬುತ ಚಲನಚಿತ್ರಗಳ ನಿರ್ಮಾಪಕ ಇವರು.. ಫೆಬ್ರವರಿ 2018 ರಲ್ಲಿ ಅನಿರೀಕ್ಷಿತವಾಗಿ ಶ್ರೀದೇವಿ ಮೃತಪಟ್ಟಾಗ ಬೋನಿಕಪೂರ್ ಮತ್ತು ಅವರ ಮಕ್ಕಳಾದ ಜಾನ್ಹವಿ ಕಪೂರ್ ಮತ್ತು ಖುಷಿ ಕಪೂರ್ ಮಾಧ್ಯಮಗಳಲ್ಲಿ ಹೆಡ್ ಲೈನ್ ಸುದ್ದಿಯಾಗಿದ್ದರು. ಬಹುಶ್ಯಃ ಅದೇ ಕಾರಣಕ್ಕೆ ಜನ ಅತೀ ಹೆಚ್ಚು ಹುಡಾಕಟ ನಡೆಸಿರುವ ಸಾಧ್ಯತೆ ಇದೆ.
2018 ಇನ್ನೇನು ಕೆಲವೇ ದಿನಗಳು ಮಾತ್ರವೇ ಉಳಿದಿದೆ. ಈ ವರ್ಷವಿಡೀ ಅಂತರ್ಜಾಲದಲ್ಲಿ ಸಾಕಷ್ಟು ವಿಚಾರಗಳು ಹರಿದಾಡಿದೆ ಮತ್ತು ಅದು ನಿಮ್ಮ ಗಮನವನ್ನು ಹೆಚ್ಚು ಸೆಳೆದಿರುವ ಅಂಶವೂ ಆಗಿರಬಹುದು. ಅದು ಫೇಸ್ ಬುಕ್ ಮೂಲಕವೂ ಆಗಿರಬಹುದು/ನೀವು ಹಂಚಿಕೊಂಡ ಫೋಟೋಗಳು ಇತ್ಯಾದಿಗಳಿಂದಲೂ ಆಗಿರಬಹುದು. ಒಟ್ಟಾರೆ ಅಂತರ್ಜಾಲವು ನಿಮ್ಮನ್ನ ತನ್ನಡೆಗೆ ಅನೇಕ ವಿಚಾರಗಳಿಂದ ಸೆಳೆದಿರುವುದಂತೂ ಸುಳ್ಳಲ್ಲ.

ಇಲ್ಲಿ ನಮಗೊಂದು ಪಟ್ಟಿ ಸಿಕ್ಕಿದೆ. ಇದು ಗೂಗಲ್ ನೀಡಿರುವ ಕುತೂಹಲಕಾರಿಯಾಗಿರುವ ಅಂಶ.2018 ರಲ್ಲಿ ಯಾವೆಲ್ಲ ಪ್ರಸಿದ್ಧ ವ್ಯಕ್ತಿಗಳನ್ನು ಜನ ಅಂತರ್ಜಾಲದಲ್ಲಿ ಅತೀ ಹೆಚ್ಚು ಹುಡುಕಾಡಿದ್ದಾರೆ ಎಂಬ ಪಟ್ಟಿ ಇದು. ಹಾಗಂತ ಈ ವ್ಯಕ್ತಿಗಳೆಲ್ಲವೂ ಪ್ರಸಿದ್ಧರು ಅನ್ನುವುದಕ್ಕಿಂತ ಯಾವುದೋ ಒಂದು ಕಾರಣಕ್ಕೆ ಜನರಿಗೆ ಹತ್ತಿರವಾದರು ಅಥವಾ ಜನರಿಂದ ಹುಡುಕಲ್ಪಟ್ಟರು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಹಾಗಾದ್ರೆ ಗೂಗಲ್ ನಲ್ಲಿ ಅತೀ ಹೆಚ್ಚು ಜನರಿಂದ ಹುಡುಕಲ್ಪಟ್ಟ ಆ ಪ್ರಸಿದ್ಧ ವ್ಯಕ್ತಿಗಳು ಯಾರು?

   
 
ಹೆಲ್ತ್