Back
Home » ಇತ್ತೀಚಿನ
ರೊಚ್ಚಿಗೆದ್ದ ಸೋನಾಕ್ಷಿ!..ಭಾರತದಲ್ಲಿ 'ಅಮೆಜಾನ್' ಬೆಲೆ ಮೂರು ಕಾಸಿಗೆ ಹರಾಜು!!
Gizbot | 14th Dec, 2018 04:38 PM
  • ಏನಿದು ಮೋಸದ ಘಟನೆ?

    ಸೋನಾಕ್ಷಿ ಅವರು ಆನ್‌ಲೈನಿನಲ್ಲಿ ಬಂದ ವಸ್ತುವಿನ ಫೋಟೋ ತೆಗೆದು ಅದನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, 'ನಾನು ಅಮೆಜಾನ್‍ನಲ್ಲಿ ಹೆಡ್‌ಫೋನ್ ಬುಕ್ ಮಾಡಿದೆ. ಆದರೆ ಹೆಡ್‌ಫೋನ್ ಬದಲು ನನಗೆ ಈ ವಸ್ತು (ಕಬ್ಬಿಣದ ತುಂಡುಗಳು) ಸಿಕ್ಕಿದೆ. ಈ ಪ್ಯಾಕೇಟ್ ಅಸಲಿ ಎಂದು ಕಾಣಿಸುತ್ತದೆ. ಆದರೆ ಅದು ಹೊರಗಿನಿಂದ ಮಾತ್ರ. ಎಂದು ಹೇಳಿದ್ದಾರೆ. ಹೀಗೆ ಹೇಳಿ ಅಮೆಜಾನ್‌ನಿಂದ ಆಗಿರುವ ಮೋಸವನ್ನು ಸಾರ್ವಜನಿಕವಾಗಿ ಬಯಲಿಗೆಳದಿದ್ದಾರೆ.


  • ಸಹಾಯ ಮಾಡಲು ಮುಂದಾಗುತ್ತಿಲ್ಲ!

    ಈ ಬಗ್ಗೆ ಟ್ವೀಟರ್ ನಲ್ಲಿ ಹಂಚಿಕೊಂಡ ನಟಿ, "ಹೇ @ ಅಮೆಜಾನ್! ನೋಡಿ ಇಲ್ಲಿ ನಾನು ಮಾಡಿದೆ ಆರ್ಡರ್ ಮಾಡಿದ ಬೋಸ್ ಹೆಡ್ ಫೋನ್ ಸಿಗುವುದಕ್ಕಿಂತ ಏನು ಬಂದಿದೆ ಎಂದು.! ಸರಿಯಾಗಿ ಪ್ಯಾಕ್ ಮಾಡಲಾಗಿದೆ ಮತ್ತು ತೆರೆದ ಬಾಕ್ಸ್ ಕೂಡ ಇದೆ. ಇಲ್ಲಿಂದ ನಿಮ್ಮ ಗ್ರಾಹಕ ಸೇವೆಯ ಕೇಂದ್ರವೂ ಕೂಡ ಸರಿಯಾಗಿ ಸಹಾಯ ಮಾಡುವುದಿಲ್ಲ, ಅದು ನನಗೆ ಮತ್ತಷ್ಟು ಕೆಟ್ಟದಾದ ಅನುಭವಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.


  • ಸೋನಾಕ್ಷಿ ಟ್ವೀಟ್ಗೆ ಭಾರಿ ಪ್ರತಿಕ್ರಿಯೆ

    ಯಾವಾಗ ಸೋನಾಕ್ಷಿ ಟ್ವೀಟರ್ ನಲ್ಲಿ ಫೋಟೋ ಸಹಿತ ಈ ವಿಷಯ ಹಂಚಿಕೊಂಡಿದ್ದಾರೋ ಆ ನಂತರ. ಟ್ವೀಟಿಗರು ಈ ಬಗ್ಗೆ ಭರ್ಜರಿ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಹೆಚ್ಚಿನವರು ಅಮೆಜಾನ್ ಮೇಲಿನ ಕೆಟ್ಟ ಗ್ರಾಹಕ ಸೇವೆ ಬಗ್ಗೆ ತಕರಾರು ಮಾಡಿದ್ದಾರೆ ಮತ್ತು ವೆಬ್‌ಸೈಟ್ ಬಗ್ಗೆ ಹಾಸ್ಯ ಮಾಡಿದ್ದಾರೆ. ಸರಿಯಾಗಿ ಪ್ರತ್ಯುತ್ತರ ಕೊಡುವಂತೆ ಅಮೆಜಾನ್ ಸಂಸ್ಥೆಗೆ ಸಾಮಾಜಿಕ ಜಾಲತಾಣಿಗರು ಆಗ್ರಹಿಸಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ನಂಬಿಕಸ್ಥ ಇ ಕಾಮರ್ಸ್ ತಾಣ ಎಂದೇ ಜನರಿಂದ ಕರೆಸಿಕೊಳ್ಳುವ ಅಮೆಜಾನ್ ಸಂಸ್ಥೆಯ ಬೆಲೆ ಭಾರತದಲ್ಲಿ ಮೂರು ಕಾಸಿಗೆ ಹರಾಜಾಗಿದೆ. ಜನಪ್ರಿಯ ಇ ಕಾಮರ್ಸ್ ಜಾಲತಾಣ ಅಮೆಜಾನ್ ಸಂಸ್ಥೆಯಿಂದ ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ ಅವರು ಮೋಸಹೋಗಿದ್ದಾರೆ. ಗುಣಮಟ್ಟದ ಬೋಸ್ ಕಂಪನಿಯ ಹೆಡ್‌ಫೋನ್ ಬುಕ್ ಮಾಡಿ ಕಬ್ಬಿಣದ ವಸ್ತುವನ್ನು ಪಡೆದುಕೊಂಡಿರುವ ನಟಿ ಸೋನಾಕ್ಷಿ ಸಿನ್ಹಾ ಅವರು ಅಮೆಜಾನ್ ಸಂಸ್ಥೆಯ ಮೆಲೇ ಈಗ ಕೆಂಡಕಾರುತ್ತಿದ್ದಾರೆ.

ಹೌದು, ಆನ್‌ಲೈನ್ ಶಾಪಿಂಗ್ ನಲ್ಲಿ ನಾವು ಯಾವಾಗಲೂ ಕೇಳುವ ಬಗ್ಗೆ ಮೋಸವಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಆದರೆ ಒಬ್ಬ ಪ್ರಸಿದ್ಧ ನಟಿಗೂ ಸಹ ಹೀಗೆಂದರೆ ಆಶ್ಚರ್ಯವಾಗಿದ್ದು, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಆನ್‌ಲೈನ್ ಶಾಪಿಂಗ್‌ನಲ್ಲಿ ಅತ್ಯಂತ ಕೆಟ್ಟ ಅನುಭವವನ್ನು ಪಡೆದಿದ್ದಾರೆ. ಅಮೆಜಾನ್ ಸಂಸ್ಥೆಯ ಮೂಲಕ ಹೆಡ್ ಫೋನ್ ಒಂದನ್ನು ಬುಕ್ ಮಾಡಿದ್ದ ಅವರಿಗೆ, ಹೆಡ್ ಫೋನ್ ಬದಲಿಗೆ ಕೊರಿಯರ್ ನಲ್ಲಿ ತುಕ್ಕು ಹಿಡಿದ ಕಬ್ಬಿಣದ ತುಂಡುಗಳು ಪ್ಯಾಕ್ ಆಗಿ ಬಂದಿವೆ. ಇದನ್ನು ನೋಡಿ ಸೋನಾಕ್ಷಿ ಗಾಬರಿಯಾಗಿದ್ದಾರೆ.

ತನಗಾದ ಈ ಕೆಟ್ಟ ಅನುಭವವನ್ನು ಸೋನಾಕ್ಷಿ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ತಾವು ಅಮೆಜಾನ್ ನಲ್ಲಿ ಹೆಡ್ ಫೋನ್ ಬುಕ್ ಮಾಡಿದ ನಂತರ ಅವರಿಗೆ ತುಕ್ಕು ಹಿಡಿದ ಕಬ್ಬಿಣದ ತುಂಡುಗಳ ಕೊರಿಯರ್ ನಲ್ಲಿ ಬಂದ ಬಗ್ಗೆ ಅವಳು ಬೇಸರ ವ್ಯಕ್ತಪಡಿಸಿ ಟ್ವಿಟ್ ಮಾಡುವ ಮೂಲಕ ಕೆಂಡಕಾರಿದ್ದಾರೆ. ಇದಕ್ಕೆ ಅಮೆಜಾನ್ ಕೂಡ ಪ್ರತಿಕ್ರಿಯಿಸಿ ಕ್ಷಮೆ ಕೋರಿರುವುದು ವೈರಲ್ ಆಗಿದೆ. ಹಾಗಾದರೆ, ಭಾರತದಲ್ಲಿ 'ಅಮೆಜಾನ್' ಬೆಲೆ ಮೂರು ಕಾಸಿಗೆ ಹರಾಜಾಗಿದ್ದು ಹೇಗೆ ಎಂಬುದನ್ನು ಮುಂದೆ ಓದಿರಿ.

   
 
ಹೆಲ್ತ್