Back
Home » ಇತ್ತೀಚಿನ
ಲಾವಾ Z91 ಸ್ಮಾರ್ಟ್‌ಫೋನ್‌ ಈಗ ರೂ 7,999 ಕ್ಕೆ ಲಭ್ಯ..!
Gizbot | 14th Dec, 2018 09:05 PM

ದಿನಕ್ಕೊಂದು ಪ್ರತಿಷ್ಠಿತ ಕಂಪನಿಗಳ ಹೊಸ ಬಗೆಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಪರಿಚಯವಾಗುತ್ತಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ಆದರೆ ಬಿಡುಗಡೆಯಾದಗಳಲ್ಲಿ ಬೆರಳೆಣಿಕೆಯ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಮಾತ್ರ ಬೇಡಿಕೆ ಉಳಿಸಕೊಂಡಿವೆ. ಅಂತಹ ಬೇಡಿಕೆಯ ಸ್ಮಾರ್ಟ್‌ಫೋನ್‌ ಕಂಪನಿಗಳಲ್ಲಿ ಭಾರತ ಮೂಲದ ಲಾವಾ ಸ್ಮಾರ್ಟ್‌ಫೋನ್ ಕಂಪನಿಯು ಹೊಸ ವಿನ್ಯಾಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಮಾಡಿ ಸಕ್ಸಸ್ ಕಂಡಿದೆ ಅಂತಾ ಹೇಳಬಹುದು.

ಭಾರತೀಯ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯಾದ ಲಾವಾ ತನ್ನ ಬಜೆಟ್ ವಿಭಾಗದ ಸ್ಮಾರ್ಟ್‌ಫೋನ್‌ಗೆ ಶಾಶ್ವತ ಬೆಲೆ ಕಡಿತವನ್ನು ಘೋಷಿಸಿದೆ. ಹೌದು, ಕಂಪನಿಯು ಈ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ ಲಾವಾ Z91 ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟಗೆ ಪರಿಚಯಿಸಿತ್ತು. ಈ ಸ್ಮಾರ್ಟ್‌ಫೋನಿನ ಅಧಿಕೃತ ರೂ. 9,999 ಬೆಲೆ ಎಂದು ನಿಗದಿ ಮಾಡಲಾಗಿತ್ತು. ಈಗ ಮೂಲ ಬೆಲೆಯಲ್ಲಿ 2,000 ರೂ. ಕಡಿಮೆಯಾಗಿದೆ. ಅಂದರೆ ಈ ಸ್ಮಾರ್ಟ್‌ಫೋನ್ ಪ್ರಸ್ತೂತ ಬೆಲೆ ಕೇವಲ ರೂ. 7,999 ಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ.

ಲಾವಾ Z91 ಸ್ಮಾರ್ಟ್‌ಫೋನಿನ ಪ್ರಮುಖ ಫೀಚರ್ಸ್

5.7-ಇಂಚಿನ ಎತ್ತರದ HD + ಡಿಸ್‌ಪ್ಲೇ ಪ್ಯಾನಲ್

18:9 ಅನುಪಾತದಲ್ಲಿ 720 x 1440 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್

ಫುಲ್ ವ್ಯೂ ಡಿಸ್‌ಪ್ಲೇ ಪ್ಯಾನೆಲ್ ಮೇಲೆ 2.5 ಡಿ ಗಾಜಿನ ಕವರ್

13MP ಪ್ರೈಮರಿ ಕ್ಯಾಮೆರಾ

8MP ಫ್ರಂಟ್ ಸೆಲ್ಫಿ ಕ್ಯಾಮೆರಾ

ಮೀಡಿಯಾ ಟೆಕ್ MT6739 ಚಿಪ್ ಸೆಟ್ ಪ್ರೊಸೆಸರ್

3 ಜಿಬಿ RAM ಮತ್ತು 32 ಜಿಬಿ ಸ್ಟೊರೆಜ್

128GB ಇಂಟರ್ನೆಲ್ ಸ್ಟೊರೆಜ್

ಆಂಡ್ರಾಯ್ಡ್ 7.1 ನಾಗೌಟ್ ಔಟ್ ಆಫ್ ಬಾಕ್ಸ್

3,000 mAh ಲಿ-ಅಯಾನ್ ಬ್ಯಾಟರಿ ಘಟಕ

   
 
ಹೆಲ್ತ್