Back
Home » ಇತ್ತೀಚಿನ
ನಿಮಗೂ ಬಂದಿದ್ಯಾ ತೆರಿಗೆ ಇಲಾಖೆಯ ಫೇಕ್ ಎಸ್ಎಂಎಸ್?
Gizbot | 15th Dec, 2018 11:15 AM
 • ತೆರಿಗೆ ಇಲಾಖೆ ಹೆಸರಿನಲ್ಲಿ ಬರುತ್ತಿದೆ ಎಸ್ಎಂಎಸ್:

  ತೆರಿಗೆ ಇಲಾಖೆಯು ಜನರಿಗೆ ಎಚ್ಚರಿಕೆಯನ್ನು ನೀಡಿದ್ದು ಸುಳ್ಳು ಎಸ್ಎಂಎಸ್ ಗಳಿಗೆ ಬಲಿಯಾಗದಂತೆ ಸೂಚನೆ ನೀಡಿದೆ. ತೆರಿಗೆ ಇಲಾಖೆಯ ಹೆಸರಿನಲ್ಲಿ ಕೆಲವು ಮಂದಿಗೆ ಇತ್ತೀಚೆಗೆ ತೆರಿಗೆ ಕಟ್ಟುವಂತೆ ಬಂದಿರುವ ಮೆಸೇಜ್ ಗಳು ಸಾರ್ವಜನಿಕರ ಹಣ ಪೀಕಲು ಮೋಸಗಾರರ ಗ್ಯಾಂಗ್ ಸೃಷ್ಟಿಸಿರುವ ಜಾಲವಾಗಿದೆ.


 • ಟ್ವೀಟರ್ ನಲ್ಲಿ ಹಂಚಿಕೊಂಡ ಗ್ರಾಹಕರು:

  ಕೆಲವು ಮಂದಿ ತಾವು ರಿಸೀವ್ ಮಾಡಿದ ಇಂತಹ ಮೆಸೇಜ್ ನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ತೆರಿಗೆ ಇಲಾಖೆಯಿಂದ ಬರುವ ಮೆಸೇಜ್ ನಂತೆಯೇ ರಚನೆ ಮಾಡಲಾಗಿರುವುದು ವಿಶೇಷ. ತೆರಿಗೆ ಇಲಾಖೆಯ ಇ-ಫಿಲ್ಲಿಂಗ್ ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗಳನ್ನು ಹ್ಯಾಕ್ ಮಾಡಿರುವ ಕಳ್ಳರು ಅದನ್ನು ಬಂಡವಾಳವಾಗಿಸಿಕೊಂಡು ತೆರಿಗೆ ಇಲಾಖೆಯ ಮೆಸೇಜ್ ನಂತೆಯೇ ಫೇಕ್ ಮೆಸೇಜ್ ಸೃಷ್ಟಿಸಿದ್ದಾರೆ ಮತ್ತು ಅದನ್ನು ಜನರಿಗೆ ಕಳುಹಿಸುತ್ತಿದ್ದಾರೆ.


 • ಫೇಕ್ ಲಿಂಕ್ ಕಳುಹಿಸಿ ಹಣ ಕಳ್ಳತನ ಮಾಡುವ ಜಾಲ:

  ಯಾವಾಗ ಫೋನ್ ನಂಬರ್ ಮತ್ತು ವ್ಯಕ್ತಿಯ ಹೆಸರು ಹೊಂದಾಣಿಕೆ ಆಗುತ್ತದೆಯೋ ಆಗ ಸಹಜವಾಗಿ ಆ ವ್ಯಕ್ತಿ ಇದು ತನಗೆ ತೆರಿಗೆ ಇಲಾಖೆಯಿಂದಲೇ ಬಂದಿರುವ ಮೆಸೇಜ್ ಎಂದು ಅದರಲ್ಲಿರುವ ಲಿಂಕ್ ನ್ನು ಕ್ಲಿಕ್ಕಿಸುತ್ತಾರೆ.


 • ಮೆಸೇಜ್ ಹೇಗೆ ಇರುತ್ತದೆ ಎಂಬುದನ್ನು ಗಮನಿಸಿ.

  ಮೆಸೇಜ್ ನಲ್ಲಿ -- "ಡಿಯರ್ ಪ್ರದೀಪ್ ಕೆ ( ಇ-ಫಿಲ್ಲಿಂಗ್ ವೆಬ್ ಸೈಟ್ ನಲ್ಲಿ ಲಿಂಕ್ ಆಗಿರುವ ಹೆಸರು ಮತ್ತು ಫೋನ್ ನಂಬರ್) ತೆರಿಗೆ ಇಲಾಖೆಯು ಈ ಕೆಳಗೆ ತಿಳಿಸಿರುವ ಲಿಂಕ್ ನ್ನು ಕ್ಲಿಕ್ಕಿಸಿ ನಿಮ್ಮ ಮಿತಿಮೀರಿದ ತೆರಿಗೆ ಮರುಪಾವತಿ ಮೊತ್ತ ರುಪಾಯಿ 29,754 ನ್ನು ಪಾವತಿಸಲು ಔಪಚಾರಿಕ ವಿನಂತಿಯನ್ನು ಸಲ್ಲಿಸಲು ಸೂಚಿಸಿರುತ್ತದೆ". ಇದರ ಕೆಳಗೆ ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ವೆಬ್ ಸೈಟ್ ನ ಫೇಕ್ ಲಿಂಕ್ ನ್ನು ಕಳುಹಿಸಲಾಗಿರುತ್ತದೆ.


 • ತೆರಿಗೆ ಇಲಾಖೆ ಲಾಗಿನ್ ವಿವರ ಕೇಳುವುದಿಲ್ಲ:

  ಇದೊಂದು ನಿಮ್ಮ ಎಸ್ ಬಿಐ ಇಂಟರ್ನೆಟ್ ಬ್ಯಾಂಕಿಂಗ್ ನ ಲಾಗಿನ್ ವಿವರಗಳನ್ನು ತಿಳಿದುಕೊಳ್ಳಲು ಕಳ್ಳರು ಮಾಡುವ ಪ್ರೀಪ್ಲಾನ್ಡ್ ಫಿಶಿಂಗ್ ಪ್ರಯತ್ನವಾಗಿದೆ.ನಿಮಗೆ ಚೆನ್ನಾಗಿ ತಿಳಿದಿರಲು ತೆರಿಗೆ ಇಲಾಖೆಯು ಯಾವುದೇ ಕಾರಣಕ್ಕೂ ಸಾರ್ವಜನಿಕರ ಬಳಿ ನಿಮ್ಮ ಬ್ಯಾಂಕಿಂಗ್ ಲಾಗಿನ್ ವಿವರಗಳನ್ನು ಎಂದಿಗೂ ಕೇಳುವುದಿಲ್ಲ.


 • ಸಿಮ್ ಸ್ವ್ಯಾಪ್ ಮೂಲಕವೂ ಹಣ ದರೋಡೆ:

  ಈ ರೀತಿಯ ಫಿಶಿಂಗ್ ಪ್ರಯತ್ನವನ್ನು ಹೊರತು ಪಡಿಸಿ ಭಾರತದಲ್ಲಿ ನಡೆಯುತ್ತಿರುವ ಮತ್ತೊಂದು ಪ್ರಸಿದ್ಧ ಸ್ಕ್ಯಾಮ್ ಎಂದರೆ ಅದು ಸಿಮ್ ಕಾರ್ಡ್ ಸ್ವ್ಯಾಪಿಂಗ್. ಸಿಮ್ ಸ್ವ್ಯಾಪ್ ಅಥವಾ ಸರಳವಾಗಿ ಸಿಮ್ ಎಕ್ಸ್ ಚೇಂಜ್ ಎನ್ನುವುದು ನಿಮ್ಮ ಫೋನ್ ನಂಬರ್ ಗೆ ಹೊಸ ಸಿಮ್ ಕಾರ್ಡ್ ನ್ನು ರಿಜಿಸ್ಟ್ರರ್ ಮಾಡುವುದಾಗಿದೆ. ಒಮ್ಮೆ ಇದು ಮುಗಿದ ನಂತರ ನಿಮ್ಮ ಸಿಮ್ ಕಾರ್ಡ್ ಇನ್ ವ್ಯಾಲಿಡ್ ಆಗುತ್ತದೆ ಮತ್ತು ನಿಮ್ಮ ಫೋನ್ ಸಿಗ್ನಲ್ ಗಳನ್ನು ರಿಸೀವ್ ಮಾಡುವುದು ನಿಲ್ಲುತ್ತದೆ. ನಂತರ ಅಪರಾಧಿಗಳು ನಿಮ್ಮ ಫೋನ್ ನಂಬರ್ ನ್ನು ಹೊಸ ಸಿಮ್ ನಲ್ಲಿ ಪಡೆದುಕೊಳ್ಳುತ್ತಾರೆ ಮತ್ತು ಇದು ಸಾಧಿಸಿದ ನಂತರ ಅವರು ಒಂದು ಓಟಿಪಿಯನ್ನು ಹೊಸ ಸಿಮ್ ಕಾರ್ಡ್ ನಲ್ಲಿ ಪಡೆಯುತ್ತಾರೆ. ನಂತರ ಅವರು ಹೊಸ ಸಿಮ್ ನಲ್ಲಿ ನಿಮ್ಮ ನಂಬರ್ ನ್ನು ಆಕ್ಟಿವೇಟ್ ಮಾಡಿ ಏನು ಬೇಕಾದರೂ ಮಾಡುತ್ತಾರೆ. ನಿಮ್ಮ ಬ್ಯಾಂಕ್ ಅಕೌಂಟ್ ಹ್ಯಾಕಿಂಗ್ ಮತ್ತು ಓಟಿಪಿ ಪಡೆದು ಆನ್ ಲೈನ್ ಶಾಪಿಂಗ್ ಇತ್ಯಾದಿ ಹಣ ಹೊಡೆಯುವ ದಂಧೆಗೆ ಮುಂದಾಗುತ್ತಾರೆ.


 • ನೋಯ್ಡಾದಲ್ಲಿ 6.8 ಲಕ್ಷ ಹಣ ಆನ್ ಲೈನ್ ನಲ್ಲಿ ಕಳ್ಳತನ:

  ಇತ್ತೀಚೆಗೆ ನೋಯ್ಡಾದ ವ್ಯಕ್ತಿಯೊಬ್ಬರು ಹೀಗೆ 6.8 ಲಕ್ಷವನ್ನು ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ಸಿಮ್ ಸ್ವ್ಯಾಪ್ ನಿಂದ ನಡೆದ ಯುಪಿಐ ಬ್ಯಾಂಕಿಂಗ್ ನಿಂದಾಗಿ ಕಳೆದುಕೊಂಡಿದ್ದಾರೆ.


 • ಸ್ಮಾರ್ಟ್ ಫೋನ್ ಇಲ್ಲದ ವ್ಯಕ್ತಿ ಹಣ ಕಳೆದುಕೊಂಡದ್ದು:

  ಕುತೂಹಲಕಾರಿ ವಿಚಾರವೇನೆಂದರೆ ಈ ರೀತಿ ಹಣ ಕಳೆದುಕೊಂಡ ವ್ಯಕ್ತಿಯ ಬಳಿ ಸ್ಮಾರ್ಟ್ ಫೋನ್ ಕೂಡ ಇರಲಿಲ್ಲ. ಎಸ್ ಬಿಐ ಸೇವಿಂಗ್ ಖಾತೆಯಿಂದ ಯುಪಿಐ ಆಪ್ ಮೂಲಕ 6.8 ಲಕ್ಷ ರುಪಾಯಿಯನ್ನು ಕಳೆದ ಎರಡು ತಿಂಗಳಿನಿಂದ ಕಳ್ಳರು ವರ್ಗಾಯಿಸಿಕೊಂಡಿದ್ದಾರೆ. ಯಾವಾಗ ಆ ವ್ಯಕ್ತಿಯು ಎಟಿಎಂಗೆ ತೆರಳಿ ಹಣ ತೆಗೆಯಲು ಮುಂದಾಗಿದ್ದಾರೋ ಆಗ ಅವರಿಗೆ ತಮ್ಮ ಖಾತೆಯಲ್ಲಿ ಹಣ ಇಲ್ಲದೇ ಇರುವುದು ತಿಳಿದುಬಂದಿದೆ ಮತ್ತು ವಿಚಾರಿಸಿದಾಗ ಮೋಸವಾಗಿರುವುದು ಪತ್ತೆಯಾಗಿದೆ. ಯಾವುದಕ್ಕೂ ನೀವು ಹುಷಾರಾಗಿರಿ!
ಪೋಲೀಸರು ಚಾಪೆ ಕೆಳಗೆ ನುಸುಳಿದರೆ ಕಳ್ಳರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಹೌದು ಇತ್ತೀಚೆಗೆ ಕಳ್ಳತನದ ರೂಪುರೇಷೆ ಬದಲಾಗುತ್ತದೆ. ಪೇಪರ್ ಲೆಸ್ ಟ್ರಾನ್ಸ್ಯಾಕ್ಷನ್ ಗಳು ಹೆಚ್ಚುತ್ತಿರುವ ಈ ಸಂದರ್ಬದಲ್ಲಿ ಕಳ್ಳರು ಕೂಡ ಕೈಚಳಕ ತೋರಿಸುವ ರೀತಿ ಬದಲಾಗಿದೆ. ಈಗೆಲ್ಲ ಪಿಕ್ ಪಾಕೆಟ್ ಕಳ್ಳರು, ಮನೆ ದರೋಡೆ ಮಾಡುವ ಕಳ್ಳರಿಗಿಂತ ಹೆಚ್ಚು ಆನ್ ಲೈನ್ ಕಳ್ಳರು ಅಧಿಕಗೊಳ್ಳುತ್ತಿದ್ದಾರೆ. ಹೌದು ಆನ್ ಲೈನ್ ನಲ್ಲಿ ಹಣ ದರೋಡೆ ಮಾಡುವುದಕ್ಕೆ ವಿಭಿನ್ನ ಮಾರ್ಗಗಳನ್ನು ಕಳ್ಳರು ಕಂಡುಕೊಳ್ಳುತ್ತಿದ್ದಾರೆ. ಅದರಲ್ಲೂ ತೆರಿಗೆ ಇಲಾಖೆಯನ್ನೇ ನೆಪವಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ.

   
 
ಹೆಲ್ತ್