Back
Home » ಇತ್ತೀಚಿನ
ಆಪಲ್ ಮತ್ತು ಒನ್‌ಪ್ಲಸ್‌ಗೆ ಭಯಹುಟ್ಟಿಸಿರುವ ಈ ಫೋನ್‌ಗೆ ಚೀನಾದವರು ಫಿದಾ!..ಏಕೆ ಗೊತ್ತಾ?
Gizbot | 15th Dec, 2018 12:40 PM
 • ಮುಂದಿನ ಪೀಳಿಗೆಯ AI- ಕಿರಿನ್ 980 ಪ್ರೊಸೆಸರ್

  'ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನಿನಲ್ಲಿ ಪ್ರಪಂಚದ ಮೊದಲ 7 ಎನ್ಎಮ್ ತಂತ್ರಜ್ಞಾನದ ಅತ್ಯಂತ ಮುಂದುವರಿದ ಹಿಸಿಲಿಕಾನ್ ಕಿರಿನ್ 980 ಸಿಪಿಯುವನ್ನು ಅಳವಡಿಸಿಸಲಾಗಿದೆ. ಇದು ಪ್ರಪಂಚದ ಮೊದಲ ಡ್ಯೂಯಲ್-ಕೋರ್ ಎನ್‌ಪಿಯು ಪ್ರೊಸೆಸರ್ ಕೂಡ ಆಗಿದ್ದು, ಬಹು ನಿರೀಕ್ಷಿತ ಕೃತಕ ಬುದ್ದಿಮತ್ತೆ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ರಿಯಲ್‌ ಟೈಮ್ ದೃಶ್ಯ ಗುರುತಿಸುವಿಕೆ, ವೀಡಿಯೊ ಮೋಡ್‌ನಲ್ಲಿಯೂ ಕೃತಕ ಬುದ್ದಿಮತ್ತೆ ಬಳಕೆ ಬದಲಾಗಲಿದೆ. AI- ಮೀಸಲಾದ ಮಾಲಿ- G76 MP10 GPU ಉತ್ತಮ-ದರ್ಜೆಯ ಗ್ರಾಫಿಕ್ಸ್ ಅನ್ನು ಶಕ್ತಗೊಳಿಸುವುದನ್ನು ಪಕ್ಕಾ ಎನ್ನಬಹುದು. ಇನ್ನು 6.5 ಶತಕೋಟಿ ಟ್ರಾನ್ಸಿಸ್ಟರ್ಗಳನ್ನು ಹೊಂದಿರುವ CPU 20% ವೇಗದ ವರ್ಧಕ ಮತ್ತು 40% ಹೆಚ್ಚು ವಿದ್ಯುತ್ ಸಾಮರ್ಥ್ಯವನ್ನು ಒದಗಿಸುತ್ತದೆ.


 • 6GB ಮತ್ತು 8GB RAM ನಡುವೆ ಆಯ್ಕೆ

  ಹಿಸಿಲಿಕಾನ್ ಕಿರಿನ್ 980 ಸಿಪಿಯುವನ್ನು ಹೊಂದಿರುವ 'ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನಿನಲ್ಲಿ ದಿನನಿತ್ಯದ ಬಳಕೆಯಲ್ಲಿ ವಿಳಂಬವಿಲ್ಲದ ಕಾರ್ಯನಿರ್ವಹಣೆಗಾಗಿ 6GB ಮತ್ತು 8GB RAM ಅನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಈ ಸ್ಮಾರ್ಟ್‌ಪೋನ್ ಇತ್ತೀಚಿನ ಆಂಡ್ರಾಯ್ಡ್ 9.0 (ಆಂಡ್ರಾಯ್ಡ್ ಪೈ) ಮೂಲಕ ಕಾರ್ಯನಿರ್ವಹಣೆ ನಿಡಲಿದೆ. ಇನ್ನು ವಿಶ್ವದ ಮೊದಲ ಡ್ಯುಯಲ್ ಆವರ್ತನ ಜಿಪಿಎಸ್, ಡ್ಯುಯಲ್ ಸಿಮ್ ಡ್ಯುಯಲ್ ವೊಲ್ಟ್ ನೆಟ್ವರ್ಕ್ ಮತ್ತು ಅತ್ಯಾಧುನಿಕ ನೆಟ್ವರ್ಕಿಂಗ್ ಮಾಡ್ಯೂಲ್‌ಗಳನ್ನು ಅಳವಡಿಸಿಕೊಂಡಿರುವುದರಿಂದ 'ಹಾನರ್ ಮ್ಯಾಜಿಕ್ 2' ಸಂಪೂರ್ಣವಾಗಿ ಭವಿಷ್ಯದ ಸ್ಮಾರ್ಟ್‌ಫೋನ್ ಆಗಿದೆ.


 • ವಿಶ್ವದ ಮೊದಲ 100% ಸ್ಕ್ರೀನ್-ಟು-ಬಾಡಿ ಫೋನ್!

  ಸಂಪೂರ್ಣ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್ ನನಗೆ ಬೇಕಿತ್ತು ಎಂದು ಎಂದಾದರೂ ಅಂದುಕೊಂಡಿದ್ದೀರಾ?. ಹಾಗಾದರೆ, ವಿಶ್ವದಲ್ಲೇ ಇದೇ ಮೊದಲ ಬಾರಿಗೆ 100% ಸ್ಕ್ರೀನ್-ಟು-ಬಾಡಿ ಸಾಮರ್ಥ್ಯದ ಮೊದಲ ಸ್ಮಾರ್ಟ್‌ಫೋನ್ ಆಗಿ 'ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೌದು, ಇಲ್ಲಿಯವರೆಗೂ ಗರಿಷ್ಟ ಸ್ಕ್ರೀನ್ ಅನುಪಾತವನ್ನು ಹೊಂದಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸಿ 100% ಸ್ಕೀನ್ ಹೊತ್ತು 'ಹಾನರ್ ಮ್ಯಾಜಿಕ್ 2' ಕಾಣಿಸಿಕೊಂಡಿದೆ. 'ವಿಶ್ವದ ಮೊದಲ ಮ್ಯಾಜಿಕ್-ಸ್ಲೈಡ್ ಫುಲ್ವಿವ್ಯೂ ಡಿಸ್ಪ್ಲೇ' ಇದರ ಪ್ರಮುಖ ವಿಶೇಷತೆಯಾಗಿದ್ದು, ಆಪ್ಟಿಕಲ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ.


 • ಕೃತಕ ಬುದ್ದಿಮತ್ತೆ ಆಧಾರಿತ 6 ಕ್ಯಾಮೆರಾಗಳು!

  ಬೆಸಿಕ್ ಡಿಸ್‌ಎಲ್‌ಆರ್ ಕ್ಯಾಮೆರಾವನ್ನು ಮೀರಿಸುವ ಸ್ಮಾರ್ಟ್‌ಫೋನ್‌ಗಳನ್ನು ನೀವು ಈಗಾಗಲೇ ಬಳಸುತ್ತಿದ್ದೀರಾ. ಆದರೆ, 'ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನ್ ಕ್ಯಾಮೆರಾಗಳ ಬಗ್ಗೆ ಕೇಳಿದರೆ ನಿಮಗೆ ಹುಚ್ಚಿಡಿಯಬಹುದು. ಏಕೆಂದರೆ, ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನ್ ಒಟ್ಟು ಆರು ಕ್ಯಾಮೆರಾಗಳನ್ನು ಹೊಂದಿದೆ. 24MP ಮೊನೊಕ್ರೋಮ್, 16MP ಆರ್‌ಜಿಬಿ ಮತ್ತು 16MP ಅಲ್ಟ್ರಾ ವೈಡ್ ಆಂಗಲ್ ಸಾಮರ್ಥ್ಯದ ಮೂರು ಹಿಂಬದಿಯ ಕ್ಯಾಮೆರಾಗಳು ಹಾಗೂ ಮುಂಬಾಗದಲ್ಲಿ 16MP ಟ್ರಿಪಲ್-ಲೆನ್ಸ್ ಕ್ಯಾಮೆರಾ ಮಾಡ್ಯೂಲ್‌ನಮೂರು-ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. 3D ಮುಖದ ಗುರುತಿಸುವಿಕೆ ಮತ್ತು ಬೆಳಕಿನ ವೈಶಿಷ್ಟ್ಯಗಳು ಹಾಗೂ ಬೊಕೆ ಪರಿಣಾಮಗಳನ್ನು ನೀಡುವ ಸೆಲ್ಫೀ ಕ್ಯಾಮೆರಾ ಸೆಟಪ್ ಮ್ಯಾಜಿಕ್-ಸ್ಲೈಡ್ ರೂಪದಲ್ಲಿ ಕಾಣಿಸಿಕೊಂಡಿವೆ.


 • YOYO, ಪವರ್‌ಫುಲ್ ವರ್ಚುವಲ್ ಅಸಿಸ್ಟೆಂಟ್!

  'ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನಿನಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾದ ಯೋಯೋ, ಪವರ್‌ಫುಲ್ ವರ್ಚುವಲ್ ( ವಾಸ್ತವ ಸಹಾಯಕ) ಅಸಿಸ್ಟೆಂಟ್ ಅನ್ನು ಪರಿಚಯಿಸುತ್ತಿದೆ. ಇದು ಕಂಪ್ಯೂಟರ್ ದೃಷ್ಟಿ, ನೈಸರ್ಗಿಕ ಭಾಷಾ ಸಂಸ್ಕರಣೆ, ಯಂತ್ರ ಕಲಿಕಾ ಸಾಮರ್ಥ್ಯಗಳಂತಹ ವಿಶೇಷತೆಗಳೊಂದಿಗೆ ಸ್ಮಾರ್ಟ್‌ಫೋನ್ ಬಳಕೆದಾರರ ಅನುಭವವನ್ನು ಬದಲಾಯಿಸುವಂತಹ ವಾಸ್ತವ ಸಹಾಯಕನಾಗಿರಲಿದೆ. ಇದು 'ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನ್ ಅನ್ನು ಸ್ಮಾರ್ಟೆಸ್ಟ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಮೊಬೈಲ್ ಕಂಪೆನಿ ಹೇಳಿಕೊಂಡಿದೆ. ಈ YOYO, ಪವರ್‌ಫುಲ್ ವರ್ಚುವಲ್ ಅಸಿಸ್ಟೆಂಟ್ ಅನ್ನು ನಾವು ಕೂ ಇನ್ನು ಪರೀಕ್ಷಿಸಿಲ್ಲ.


 • 40W ಸೂಪರ್‌ಚಾರ್ಜ್ ತಂತ್ರಜ್ಞಾನ

  ಹುವಾವೆ ಒಡೆತನದ ಇತ್ತೀಚಿನ ಮೇಟ್ 20 ಪ್ರೊ ಮತ್ತು ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನ್‌ಗಳೆರಡೂ 40W ಸೂಪರ್‌ಚಾರ್ಜ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. 3,500 mAh ಸಾಮರ್ಥ್ಯದ ಬ್ಯಾಟರಿಯು ಶೂನ್ಯದಿಂದ 70 ರಷ್ಟು ಚಾರ್ಜ್ ಮರುಪೂರ್ಣತೆಯನ್ನು ಕೇವಲ 30 ನಿಮಿಷಗಳಲ್ಲಿ ಪಡೆಯುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ವಿದ್ಯುತ್-ದಕ್ಷತೆಯ ಕಿರಿನ್ 980 ಪ್ರೊಸೆಸರ್, EMUI 9.0 ಆಧಾರಿತ ಆಂಡ್ರಾಯ್ಡ್ ಪೈ ಜೊತೆಗೆ 40W ಸೂಪರ್‌ಚಾರ್ಜ್ ತಂತ್ರಜ್ಞಾನ ಸೇರಿಕೊಂಡು ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗಳಿಗೆ ಅಂತ್ಯವನ್ನು ಹಾಡಿವೆ ಎಂದು ಹೇಳಬಹುದು.
ಮೊನ್ನೆ ಮೊನ್ನೆಯಷ್ಟೇ ಚೀನಾದ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹಾನರ್ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಒಂದು ಧೂಳೆಬ್ಬಿಸುತ್ತಿದೆ. ಆಪಲ್, ಒನ್‌ಪ್ಲಸ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನು ಹಿಂದಿಕ್ಕುವಂತಹ ಭವಿಷ್ಯದ ಫೀಚರ್ಸ್ ಹೊಂದಿರುವ ಹಾನರ್ 'ಮ್ಯಾಜಿಕ್ 2' ಸ್ಮಾರ್ಟ್‌ಫೋನ್‌ಗೆ ಚೀನಾದ ಜನ ಫಿದಾ ಆಗಿದ್ದಾರೆ ಎಂದು ಹೇಳಲಾಗಿದೆ.

ಹೊಸದಾಗಿ ಮೊಬೈಲ್ ಮಾರುಕಟ್ಟೆಗೆ ಕಾಲಿಡುವ ಸ್ಮಾರ್ಟ್‌ಫೋನ್ ಹೇಗಿರಬಹುದು ಎಂಬ ನಮ್ಮ ಕಲ್ಪನೆಯನ್ನು ಮೀರಿ, ಅತ್ಯುತ್ತಮ ಬಜೆಟ್ ಬೆಲೆಯಲ್ಲಿ ಮೊಬೈಲ್ ಮಾರುಕಟ್ಟೆಯೇ ದಂಗಾಗುವಂತಹ ಭವಿಷ್ಯದ ಹಾನರ್ 'ಮ್ಯಾಜಿಕ್ 2' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಜೊತೆಗೆ ಆಪಲ್ ಮತ್ತು ಒನ್‌ಪ್ಲಸ್‌ನಂತಹ ಜನಪ್ರಿಯ ಕಂಪೆನಿಗಳಿಗೆ ಭಯವನ್ನು ಹುಟ್ಟಿಸಿದೆ.

6 ಕ್ಯಾಮೆರಾಗಳ ಅದ್ಬುತ ವಿನ್ಯಾಸ ಹಾಗೂ ಭವಿಷ್ಯದ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ವಿಶ್ವದ ಮೊಬೈಲ್ ಪ್ರಿಯರ ಕಣ್ಮನ ಸೆಳೆಯುತ್ತಿದೆ. ಹಾಗಾದರೆ, ಚೀನಾದಲ್ಲಿ ಬಿಡುಗಡೆಯಾಗಿ ಆಪಲ್ ಮತ್ತು ಒನ್‌ಪ್ಲಸ್‌ ಕಂಪೆನಿಗಳ ಬುಡಕ್ಕೆ ಕೈ ಹಾಕಿರುವ ಹಾನರ್ ಮ್ಯಾಜಿಕ್ 2' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

 
ಹೆಲ್ತ್