Back
Home » ಆರೋಗ್ಯ
ಇಂತಹ ಆಹಾರಗಳನ್ನು ಚಳಿಗಾಲದಲ್ಲಿ ತಪ್ಪದೇ ಮಿಸ್ ಮಾಡದೇ ಸೇವಿಸಿ
Boldsky | 8th Jan, 2019 10:07 AM
 • ಗಡ್ಡೆಗಳು

  ಚಳಿಗಾಲದಲ್ಲಿ ಸಾಮಾನ್ಯವಾಗಿ ಕೆಲವಾರು ಸಸ್ಯಗಳು ಉತ್ಪನ್ನವನ್ನು ನೀಡುವುದಿಲ್ಲ. ಆದರೆ ನೆಲದಡಿಯಲ್ಲಿ ಬೆಳೆಯುವ ಗಡ್ಡೆಗಳು ಉಳಿದ ಸಮಯದಂತೆ ಚಳಿಗಾದಲ್ಲಿಯೂ ಚೆನ್ನಾಗಿಯೇ ಬೆಳೆಯುತ್ತವೆ. ಬೀಟ್ರೂಟ್, ಕ್ಯಾರೆಟ್, ಆಲೂಗಡ್ಡೆ, ಮೂಲಂಗಿ ಮೊದಲಾದವು ಚಳಿಗಾಲದಲ್ಲಿ ತಾಜಾ ರೂಪದಲ್ಲಿ ಸಿಗುತ್ತವೆ. ಈ ಗಡ್ಡೆಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ವೃದ್ಧಿಸಬಹುದು. ಹುರಿದ ಕ್ಯಾರೆಟ್ ಸೇವನೆಯಿಂದ ಉತ್ತಮ ಪ್ರಮಾಣದ ಬೀಟಾ ಕ್ಯಾರೋಟೀನ್ ದೊರಕುತ್ತದೆ. ಬೇಯಿಸಿದ ಮೂಲಂಗಿಯ ಸೇವನೆಯಿಂದ ವಿಟಮಿನ್ ಎ ಮತ್ತು ಸಿ ಉತ್ತಮ ಪ್ರಮಾಣದಲ್ಲಿ ಲಭಿಸುತ್ತದೆ.


 • ಓಟ್ಸ್ ರವೆ

  ಈ ಆಹಾರ ಕೇವಲ ಲಗುಬಗೆಯ ಉಪಾಹಾರಕ್ಕೂ ಮಿಗಿಲಾದ ಪೌಷ್ಟಿಕ ಆಹಾರವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಚಳಿಗಾಲದ ಅಗತ್ಯತೆಯನ್ನು ಪೂರೈಸುವ ಜೊತೆಗೇ ಉತ್ತಮ ಪ್ರಮಾಣದ ಸತು ಸಹಾ ದೊರಕುತ್ತದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮಗೊಳಿಸಲು ಸತು ಅಗತ್ಯವಾಗಿ ಬೇಕು. ಅಲ್ಲದೇ ಇದರಲ್ಲಿರುವ ಕರಗುವ ನಾರು ಹೃದಯದ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಸಿದ್ದ ರೂಪದಲ್ಲಿ ಸಿಗುವ ಈ ರವೆ ಕೊಂಚ ದುಬಾರಿಯಾಗಿರುವ ಕಾರಣ ಸಾಂಪ್ರಾದಾಯಿಕ ಓಟ್ಸ್ ಗಳನೇ ಸೇವಿಸಿ.
  Most Read: ಪ್ರತಿನಿತ್ಯ ಓಟ್ಸ್ ಸೇವಿಸಿ, ಆರೋಗ್ಯಕ್ಕೆ ಬಹಳ ಒಳ್ಳೆಯದು


 • ತರಕಾರಿಯ ಸೂಪ್

  ಚಳಿಗಾಲದಲ್ಲಿ ಸೂಪ್ ಅತ್ಯುತ್ತಮವಾದ ಆಹಾರವಾಗಿದೆ. ಸಾಮಾನ್ಯವಾಗಿ ಸೂಪ್ ಎಂದಾಕ್ಷಣ ಇದನ್ನು ಚಿಕನ್, ಬೀಫ್ ಅಥವಾ ಕ್ರೀಂ ಬೆರೆತ ಸೂಪ್ ಎಂದೇ ಪರಿಗಣಿಸಲಾಗುತ್ತದೆ. ಆದರೆ ವಿವಿಧ ತರಕಾರಿಗಳನ್ನು ಚೆನ್ನಾಗಿ ಕುದಿಸಿ ತಯಾರಿಸಿದ ಸೂಪ್ ಜೊತೆಗೇ ಇಡಿಯ ಧಾನ್ಯಗಳನ್ನೂ ಬೆರೆಸಿದರೆ ಈ ಸೂಪ್ ಇನ್ನಷ್ಟು ರುಚಿಕರ ಹಾಗೂ ಪೌಷ್ಟಿಕವಾಗುವುದರಲ್ಲಿ ಅನುಮಾನವೇ ಇಲ್ಲ.


 • ಟೂನಾ ಮೀನು

  ಚಳಿಗಾಲದಲ್ಲಿ ಸಾಂಪ್ರಾದಾಯಿಕ ಆಹಾರಗಳನ್ನು ಸೇವಿಸಿದಾಗ ಅನಗತ್ಯ ಸಕ್ಕರೆ ಮತ್ತು ಭಾರೀ ಪ್ರಮಾಣದ ಕೊಬ್ಬು ದೇಹವನ್ನು ಸೇರುತ್ತದೆ. ಇದಕ್ಕೆ ಅಚ್ಚರಿಯ ಒಂದು ಪರ್ಯಾಯವಾಗಿ ನೀವು ಸುಶಿಯನ್ನೇಕೆ ಪ್ರಯತ್ನಿಸಬಾರದು? ಸುಶಿ ಅಂದರೆ ಆಹಾರಗಳ ಸುರುಳೆ ಎಂದು ಹೇಳಬಹುದು. ಟ್ಯೂನಾ ಅಥವಾ ಸಾಲ್ಮನ್ ಮೀನಿನ ಸುಶಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಲಭಿಸುತ್ತದೆ. ಚಳಿಗಾಲದಲ್ಲಿ ಬಿಸಿಲು ಕಡಿಮೆ ಬೀಳುವ ಕಾರಣ ದೇಹದ ಮೂಳೆಗಳನ್ನು ದೃಢಗೊಳಿಸುವ ಪೋಷಕಾಂಶಗಳು ಇತರ ಸಮಯಕ್ಕಿಂತಲೂ ಈಗ ಹೆಚ್ಚು ಅವಶ್ಯವಾಗಿವೆ. ಬಿಸಿಲು ಕಡಿಮೆಯಾದರೆ ವಿಟಮಿನ್ ಡಿ ಕೊರತೆಯನ್ನೂ ದೇಹ ಎದುರಿಸುತ್ತದೆ ಹಾಗೂ ಈ ಮೂಲಕ ಮೂಳೆಗಳು ಶಿಥಿಲವಾಗುವ ಮತ್ತು ಹೃದ್ರೋಗಗಳ ತೊಂದರೆಗಳೂ ಎದುರಾಗುತ್ತವೆ.


 • ಬ್ರೋಕೋಲಿ ಮತ್ತು ಹೂಕೋಸು

  ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಕುಂದುವ ಕಾರಣ ಹಾಗೂ ಗಾಳಿಯಲ್ಲಿ ಇತರ ಸಮಯಕ್ಕಿಂತ ಹೆಚ್ಚೇ ವೈರಸ್ಸುಗಳು ತೇಲುವ ಕಾರಣ ಈ ಸಮಯದಲ್ಲಿ ಫ್ಲೂ ಮೊದಲಾದ ತೊಂದರೆಗಳು ಸಾಮಾನ್ಯವಾಗುತ್ತವೆ. ಈ ಶಕ್ತಿಯನ್ನು ಉತ್ತಮಗೊಳಿಸಲು ಈ ಕೋಸುಗಳು ಉತ್ತಮ ಆಯ್ಕೆಯಾಗಿವೆ. ಇವುಗಳಲ್ಲಿ ವಿಟಮಿನ್ ಸಿ ವಿಫುಲವಾಗಿದ್ದು ಶೀತ, ಫ್ಲೂ ಮೊದಲಾದ ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಒಂದು ವೇಳೆ ತಾಜಾ ತರಕಾರಿಗಳು ಲಭ್ಯವಿಲ್ಲದೇ ಇದ್ದಲ್ಲಿ ಶೀತಲೀಕರಿಸಿದ ಹೂಕೋಸು ಮತ್ತು ಬ್ರೋಕೋಲಿಗಳನ್ನೂ ಬಳಸಬಹುದು.
ಚಳಿಗಾಲ ಬಂತೆಂದರೆ ಕೆಲವು ಖರ್ಚುಗಳು ಅರಿವಿಲ್ಲದೇ ಬರುತ್ತವೆ. ಚಳಿಗಾಲದ ಬಟ್ಟೆಗಳ ಜೊತೆಗೇ ಕೋಣೆಯನ್ನು ಬಿಸಿಯಾಗಿಸಲು ಬಳಸುವ ಹೀಟರ್ ನಿಂದಾಗಿ ವಿದ್ಯುತ್ ವೆಚ್ಚ ಬೇರೆ! ಇದೇ ರೀತಿಯಾಗಿ ನಮ್ಮ ದೇಹವೂ ಚಲಿಗಾಲದಲ್ಲಿ ಕೆಲವಾರು ಬದಲಾವಣೆಗೊಳಪಡುತ್ತದೆ. ವಿಶೇಷವಾಗಿ ಚಳಿಯನ್ನು ಎದುರಿಸಲು ದೇಹದ ತಾಪಮಾನವನ್ನೂ ಏರಿಸಲು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಬೇಕಾಗುತ್ತದೆ ಹಾಗೂ ನಮಗೆ ಈ ಸಮಯದಲ್ಲಿ ಕೆಲವು ವಿಶೇಷ ಆಹಾರಗಳನ್ನೂ ಸೇವಿಸಲು ಮನಸ್ಸಾಗುತ್ತದೆ.

ಕೊರೆಯುವ ಚಳಿಯಲ್ಲಿ ಬೆಳಗ್ಗೆದ್ದು ವ್ಯಾಯಾಮ ಮಾಡಲು ಯಾರಿಗಾದರೂ ಮನಸ್ಸಾಗುತ್ತದೆ? ಬೆಚ್ಚನೆ ಹೊದ್ದು ತಡವಾಗಿ ಏಳುವುದನ್ನೇ ಎಲ್ಲರೂ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ವ್ಯಾಯಾಮ ಆಟೋಟಗಳಿಗೆ ರಜೆ ಬೀಳುವ ಜೊತೆಗೇ ಅನಾರೋಗ್ಯಕರ ಆಹಾರದತ್ತ ಒಲವು ತೋರುವುದು ಸಹಾ ಕೆಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಬೇಸಿಗೆ ಬಂತೆಂದರೆ ಐಸ್ ಕ್ರೀಂ ತಿನ್ನುವುದು ಇಷ್ಟವಾದರೂ ಇದನ್ನು ಹೆಚ್ಚಾಗಿ ತಿನ್ನಬಾರದು, ಅಂತೆಯೇ ಚಳಿಗಾಲದಲ್ಲಿಯೂ ಮನಸ್ಸಾದ ಎಲ್ಲಾ ಆಹಾರಗಳನ್ನು, ಉದಾಹರಣೆಗೆ ಬಿಸಿ ಚಾಕಲೇಟ್ ಅಥವಾ ಕುಕ್ಕೀಸ್ ತಿನ್ನುವ ಬದಲು ಆರೋಗ್ಯವನ್ನು ಉತ್ತಮಗೊಳಿಸುವ ಆಹಾರಗಳನ್ನು ಸೇವಿಸುವುದೇ ಉತ್ತಮ.

ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರಗಳನ್ನು ಸೇವಿಸುವ ಮೂಲಕ ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವುದರ ಮೂಲಕ ಆರೋಗ್ಯವೂ ಉತ್ತಮವಾಗಿರುತ್ತದೆ. ಬನ್ನಿ, ಈ ಗುಣವುಳ್ಳ ಐದು ಪ್ರಮುಖ ಆಹಾರಗಳು ಯಾವುವು ಎಂಬುದನ್ನು ನೋಡೋಣ....

   
 
ಹೆಲ್ತ್