Back
Home » ಆರೋಗ್ಯ
ಪುರುಷರಿಗೆ ಮುಜುಗರ ತರಿಸುವ ಶಿಶ್ನದ ತುರಿಕೆಯ ಸಮಸ್ಯೆಗೆ ಸರಳ ಮನೆಮದ್ದುಗಳು
Boldsky | 10th Jan, 2019 10:27 AM
 • ಈರುಳ್ಳಿ

  ಈರುಳ್ಳಿಯಲ್ಲಿರುವ ಶಿಲೀಂಧ್ರನಿವಾರಕ, ಉರಿಯೂತ ನಿವಾರಕ ಹಾಗೂ ಪ್ರತಿಜೀವಕ ಗುಣಗಳು ಸೂಕ್ಷ್ಮಭಾಗದಲ್ಲಿರುವ ಶಿಲೀಂಧ್ರಗಳನ್ನು ಕೊಂದು ಶೀಘ್ರದಲ್ಲಿ ತುರಿಕೆಯಿಂದ ಉಪಶಮನ ನೀಡುತ್ತದೆ. ಇದಕ್ಕಾಗಿ ಒಂದು ಈರುಳ್ಳಿಯನ್ನು ನುಣ್ಣಗೆ ಅರೆದು ತುರಿಕೆ ಇರುವ ಭಾಗಕ್ಕೆ ತೆಳುವಾಗಿ ಹಚ್ಚಿಕೊಳ್ಳಬೇಕು. ಬಳಿಕ ಸುಮಾರು ಮೂವತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು.


 • ಉಪ್ಪುನೀರಿನ ಸ್ನಾನ

  ನೀವು ಸ್ನಾನ ಮಾಡುವ ತೊಟ್ಟೆಯಲ್ಲಿ ಎರಡು ಮುಷ್ಟಿಯಷ್ಟು ಉಪ್ಪನ್ನು ಹಾಕಿ. ಇದಕ್ಕೆ ಬೇರಾವುದೇ ಸೋಪು, ಎಣ್ಣೆ ಅಥವಾ ಮಾರ್ಜಕಗಳನ್ನು ಬೆರೆಸದಿರಿ. ಈ ನೀರಿನಲ್ಲಿ ಜನನಾಂಗ ಮುಳುಗುವಂತೆ ಕೊಂಚ ಹೊತ್ತು ತೊಟ್ಟಿಯಲ್ಲಿರಿ. ತೊಟ್ಟಿ ಇಲ್ಲದಿದ್ದರೆ ಈ ನೀರಿನಿಂದ ಸಾಕಷ್ಟು ಹೊತ್ತು ತುರಿಕೆಯಿರುವ ಭಾಗವನ್ನು ಸ್ವಚ್ಛಗೊಳಿಸಿ.

  Most Read: ಇಂತಹ ಅಪಾಯಕಾರಿ ಸೆಕ್ಸ್ ಲಕ್ಷಣಗಳನ್ನು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ


 • ಜೇನು

  ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ. ಜೇನನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ ಎಂದೂ ಹಾಳಾಗದ ಆಹಾರ ಎಂದು ಪವಿತ್ರ ಕುರಾನಿನಲ್ಲಿ ತಿಳಿಸಿರುವ ಜೇನು ನಿಜಕ್ಕೂ ಒಂದು ಅದ್ಭುತವಾದ ಆಹಾರವಾಗಿದೆ. ಜೇನಿನಲ್ಲಿಯೂ ಪ್ರತಿಜೀವಕ, ಶಿಲೀಂಧ್ರನಿವಾರಕ ಗುಣಗಳಿವೆ. ಈ ಗುಣಗಳನ್ನು ತುರಿಕೆ ನಿವಾರಿಸಲು ಬಳಸಬಹುದು.


 • ಆಲ್ಕೋಹಾಲ್!

  ಮದ್ಯವನ್ನು ಸಹಾ ತುರಿಕೆಯ ನಿವಾರಣೆಗೆ ಬಳಸಬಹುದು. ಏಕೆಂದರೆ ತುರಿಕೆಗೆ ಕಾರಣವಾದ ಶಿಲೀಂಧ್ರಗಳು ಮದ್ಯದ ವಾತಾವರಣದಲ್ಲಿ ಬದುಕಲಾರವು. ಅಲ್ಲದೇ ಈ ಭಾಗವನ್ನು ಒಣದಾಗಿರಿಸಲೂ ಮದ್ಯ ನೆರವಾಗುತ್ತದೆ. ಇದಕ್ಕಾಗಿ ಅಪ್ಪಟ ಆಲ್ಕೋಹಾಲ್ ನಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ತುರಿಕೆ ಇರುವ ಭಾಗಕ್ಕೆ ಸವರಿಕೊಳ್ಳಬೇಕು. ಈ ಭಾಗವನ್ನು ತೊಳೆಯುವ ಅಗತ್ಯವಿಲ್ಲ, ಏಕೆಂದರೆ ಅಲ್ಕೋಹಾಲ್ ಶೀಘ್ರವಾಗಿ ಆರುತ್ತದೆ ಹಾಗೂ ತೆಳುವಾದ ಪದರದ ರೂಪದಲ್ಲಿ ಇನ್ನಷ್ಟು ತುರಿಕೆಯಾಗುವುದನ್ನು ತಡೆಯುತ್ತದೆ.


 • ಸೇಬಿನ ಶಿರ್ಕಾ (Apple Cider Vinegar)

  ತುರಿಕೆ ಎದುರಾಗಿರುವ ಭಾಗದಲ್ಲಿ ನೀರು ಬೆರೆಸಿದ ಸೇಬಿನ ಶಿರ್ಕಾವನ್ನು ಹಚ್ಚಿಕೊಳ್ಳುವ ಮೂಲಕ ತುರಿಕೆಯನ್ನು ನಿಲ್ಲಿಸಬಹುದು. ಸೇಬಿನ ಶಿರ್ಕಾದಲ್ಲಿ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂಧ್ರನಿವಾರಕ ಗುಣಗಳಿವೆ. ಇದಕ್ಕಾಗಿ ಎರಡು ದೊಡ್ಡಚಮಚ ಸೇಬಿನ ಶಿರ್ಕಾವನ್ನು ಎರಡು ಕಪ್ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಈ ನೀರಿನಿಂದ ತುರಿಕೆ ಇರುವ ಭಾಗವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬಳಿಕ ಇದನ್ನು ಒರೆಸದೇ ಹಾಗೇ ಒಣಗಲು ಬಿಡಬೇಕು. ಅಗತ್ಯವಾಗಿ ಪಾಲಿಸಬೇಕಾದ ಸ್ವಚ್ಛತಾಕ್ರಮಗಳು


 • ಒಳ ಉಡುಪುಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು

  ಈ ವಿಷಯವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು, ತೇವವಿರುವಾಗಲೇ ಈ ತುರಿಕೆಯೂ ಗರಿಷ್ಟವಾಗಿರುತ್ತದೆ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಬೆವರಿನಿಂದ ದೇಹದ ಒಳ ಉಡುಪುಗಳ ಭಾಗದಲ್ಲಿ ಹೆಚ್ಚೇ ಬೆವರು ಸಂಗ್ರಹಗೊಳ್ಳುತ್ತದೆ ಹಾಗೂ ಸಂಧುಭಾಗದಲ್ಲಿ ಹೆಚ್ಚು ಹೆಚ್ಚಾಗಿ ತೇವಮಯವಾಗುತ್ತದೆ. "ತೇವ ಹೆಚ್ಚಿರುವ ಮತ್ತು ಕತ್ತಲಿರುವ ಭಾಗದಲ್ಲಿಯೇ ಅತಿ ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುತ್ತವೆ. ಇವು ಶೀಘ್ರವೇ ವೃದ್ಧಿಯಾಗಿ ಕಮಟು ವಾಸನೆ, ತುರಿಕೆ ಹಾಗೂ ತೇವವಿರುವ ಭಾಗದಲ್ಲಿ ಎದುರಾಗುವ ಸೋಂಕುಗಳಿಗೆ ಕಾರಣವಾಗುತ್ತವೆ " ಎಂದು ಸ್ಟಾನ್ಫೋರ್ಡ್ ಸ್ಕೂಲ್ ಅಫ್ ಮೆಡಿಸಿನ್ ಸಂಸ್ಥೆಯ ಮೂತ್ರಶಾಸ್ತ್ರಜ್ಞರು ತಿಳಿಸಿದ್ದಾರೆ. ಒಂದು ವೇಳೆ ಜನನಾಂಗದ ಭಾಗದಲ್ಲಿ ತೇವವಿದ್ದು ಭಾರೀ ತುರಿಕೆ ಇದ್ದರೆ ಇದಕ್ಕೆ ತಕ್ಷಣದ ಪರಿಹಾರವೆಂದರೆ ಸಡಿಲವಾದ ಒಳ ಉಡುಪುಗಳನ್ನು ಅಥವಾ ಹತ್ತಿಯ ಚಡ್ಡಿಗಳನ್ನು ಧರಿಸಬೇಕು. ಈ ಉಡುಪುಗಳಲ್ಲಿ ಗಾಳಿಯಾಡಲು ಹೆಚ್ಚಿನ ಸ್ಥಳಾವಕಾಶವಿರುತ್ತದೆ. ಅಲ್ಲದೇ ಪ್ರತಿದಿನವೂ ಒಗೆದು ಇಸ್ತ್ರಿಮಾಡಿದ ಒಳ ಉಡುಪುಗಳನ್ನೇ ತೊಡಬೇಕು.

  Most Read: ಯಾವತ್ತೂ ಒಳ ಚಡ್ಡಿಯನ್ನು ಪ್ರತ್ಯೇಕವಾಗಿ ಒಗೆಯಬೇಕಂತೆ! ಯಾಕೆ ಗೊತ್ತೇ?


 • ನಿಮ್ಮ ನೆಚ್ಚಿನ ಕಾಂಡೋಮ್ ಮತ್ತು ಜಾರುಕದ್ರವ

  ಇತ್ತೀಚೆಗೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ವೈದ್ಯಕೀಯ ಪರೀಕ್ಷೆಯಾಗದೇ ಹೊರತು ಲೈಂಗಿಕ ಸಂಪರ್ಕ ಸುರಕ್ಷಿತವಾಗಿರಲು ಕಾಂಡಂ ಬಳಸುವುದು ಎಷ್ಟು ಅಗತ್ಯ ಎಂದು ನಿಮಗೆ ಗೊತ್ತಿದೆ. ಅಲ್ಲದೇ ಜಾರುಕದ್ರವ ಬಳಸುವ ಎಚ್ಚರಿಕೆಯ ಬಗ್ಗೆಯೂ ನಿಮಗೆ ತಿಳಿದಿದೆ. ಆದರೆ ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮಸಂವೇದಿಯಾಗಿದ್ದರೆ ಈ ಬಗೆಯ ಉತ್ಪನ್ನಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಕಾಂಡಂ ಅಥವಾ ಜಾರುಕದ್ರವಗಳಲ್ಲಿ ವೀರ್ಯಾಣುಗಳನ್ನು ಕೊಲ್ಲುವ ಸಾಮರ್ಥ್ಯವಿರುವ ಕೆಲವು ದ್ರವಗಳನ್ನು ಬೆರೆಸಲಾಗಿರುತ್ತದೆ ಹಾಗೂ ಈ ರಾಸಾಯನಿಕಗಳು ತ್ವಚೆಯ ಮೇಲೂ ಪ್ರಭಾವ ಬೀರುವ ಮೂಲಕ ತುರಿಕೆ ಮತ್ತು ಸೋಂಕು ಉಂಟು ಮಾಡಬಹುದು ಎಂದು ತಜ್ಷರು ವಿವರಿಸುತ್ತಾರೆ. ಒಂದು ವೇಳೆ ನೀವು ಲ್ಯಾಟೆಕ್ಸ್ ನಿಂದ ತಯಾರಾದ ಕಾಂಡಂ ಉಪಯೋಗಿಸುತ್ತಿರುವಿರಾದರೆ ಹಾಗೂ ನಿಮಗೆ ಲ್ಯಾಟೆಕ್ಸ್ ಅಲರ್ಜಿ ಇದ್ದರೆ ಈ ಮೂಲಕವೂ ಕಾಂಡಂ ಧರಿಸಿದ ಭಾಗದಲ್ಲಿ ಕೆಂಪು ದದ್ದುಗಳು ಹಾಗೂ ಭಾರೀ ತುರಿಕೆ ಎದುರಾಗುತ್ತದೆ.


 • ನಿಮ್ಮ ನೆಚ್ಚಿನ ಸೋಪು

  ತಾವು ಬಳಸುವ ಸೋಪಿನಲ್ಲಿಯೂ ಪ್ರತಿಯೊಬ್ಬರಿಗೂ ತಮ್ಮದೇ ಆದ ಆಯ್ಕೆಗಳಿರುತ್ತವೆ. ಒಂದು ವೇಳೆ ನೀವು ಸುಗಂಧಭರಿತ ಸೋಪು ಉಪಯೋಗಿಸುತ್ತಿದ್ದರೆ ಇದರಲ್ಲಿರುವ ಕೆಲವು ರಾಸಾಯನಿಕಗಳು ಸುಗಂಧದ ಸೆರಗಿನ ಅಡಿಯಲ್ಲಿ ಮನೆಹಾಳು ಕೆಲಸ ಮಾಡುತ್ತಿರಬಹುದು. "ಸೋಪಿನಲ್ಲಿರುವ ಕೆಲವು ಸುಗಂಧ ನೀಡುವ ರಾಸಾಯನಿಕಗಳು ತ್ವಚೆಗೆ ತುರಿಕೆಯುಂಟು ಮಾಡಬಹುದು. ವಿಶೇಷವಾಗಿ ಜನನಾಂಗದ ಭಾಗದಲ್ಲಿ ಈ ತುರಿಕೆ ಹೆಚ್ಚಾಗಿರುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಒಂದು ವೇಳೆ ಸೋಪಿನ ಬಳಕೆಯ ಬಳಿಕ ಶಿಶ್ನ ಅಥವಾ ಬೇರಾವುದೇ ಭಾಗದಲ್ಲಿ ತುರಿಕೆ ಎದುರಾಗಿರುವುದು ಖಚಿತವಾದರೆ ತಕ್ಷಣವೇ ಈ ಸೋಪಿನ ಬಳಕೆಯನ್ನು ನಿಲ್ಲಿಸಿ ಸೌಮ್ಯ, ಸುಗಂಧರಹಿತ ಹಾಗೂ ಉತ್ತಮ ಗುಣಮಟ್ಟದ ಸೋಪನ್ನು ಬಳಸಲು ಪ್ರಾರಂಭಿಸಿದರೆ ಈ ತೊಂದರೆ ಶೀಘ್ರವೇ ನಿವಾರಣೆಯಾಗುತ್ತದೆ.
ಪುರುಷರಿಗೆ ಒಂದು ವೇಳೆ ಜನನಾಂಗದಲ್ಲಿ ತುರಿಕೆ ಎದುರಾದರೆ ನಾಲ್ಕು ಜನರೆದುರು ಭಾರೀ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಹಾಗೂ ತುರಿಸಿಕೊಳ್ಳದೇ ಇರದೇ ಚಡಪಡಿಕೆಯೂ ಉಂಟಾಗುತ್ತದೆ. ದೇಹದ ಇತರ ಭಾಗದಲ್ಲಿ, ಉದಾಹರಣೆಗೆ ಕಾಲುಬೆರಳುಗಳ ಸಂಧಿಯಲ್ಲಿ ತುರಿಕೆ ಎದುರಾಗಲು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ಸೋಂಕು ಎದುರಾಗುವಂತೆಯೇ ಶಿಶ್ನದ ಭಾಗದಲ್ಲಿಯೂ ತುರಿಕೆ ಎದುರಾಗಲು ಇವೇ ಕಾರಣವಾಗಿವೆ. ಆದರೆ ಇತರ ಭಾಗಕ್ಕಿಂತ ಈ ಭಾಗದಲ್ಲಿ ತುರಿಕೆಗೆ ಚಿಕಿತ್ಸೆ ನೀಡುವುದು ಕೊಂಚ ಕಷ್ಟಕರವಾಗಿದೆ.

ಏಕೆಂದರೆ ಇಲ್ಲಿ ಹೆಚ್ಚಿನ ಸಮಯ ಕತ್ತಲು ಮತ್ತು ಗಾಳಿಯಾಡದ ವಾತಾವರಣವಿತುತದೆ. ಇಂತಹ ವಾತಾವರಣದಲ್ಲಿ ಸೂಕ್ಷ್ಮಜೀವಿಗಳು ಶೀಘ್ರವಾಗಿ ವೃದ್ಧಿಯಾಗುತ್ತವೆ. ಇದೇ ಕಾರಣಕ್ಕೆ ಶಿಶ್ನದ ಭಾಗದಲ್ಲಿ ಎದುರಾದ ತುರಿಕೆ ಶೀಘ್ರವೇ ಅಕ್ಕ ಪಕ್ಕದ ಭಾಗಗಳಿಗೂ ಹರಡುತ್ತದೆ. ತೊಡೆಯ ಸಂಧಿ, ತೊಡೆಗಳ ಒಳಭಾಗ, ಜನನಾಂಗದ ಮೇಲಿನ ಕಿಬ್ಬೊಟ್ಟೆ ಮೊದಲಾದ ಭಾಗಗಳಿಗೂ ಹರಡುತ್ತದೆ.

ಕೆಲವೊಮ್ಮೆ, ಈ ತುರಿಕೆ ಗಂಭೀರವಾದ ಕಾಯಿಲೆ ಆವರಿಸಿರುವ ಸೂಚನೆಯೂ ಆಗಿರಬಹುದು. ಉದಾಹರಣೆಗೆ ಲೈಂಗಿಕವಾಗಿ ಹರಡುವ ರೋಗಗಳು ಅಥವಾ ಈ ಭಾಗದಲ್ಲಿರುವ ರೋಮಗಳಲ್ಲಿ ಹೇನು ಮತ್ತು ಸೀರುಗಳು ಉಂಟಾಗಿರುವುದು. ಜೊತೆಗೇ, ಸತತವಾಗಿ ಈ ಭಾಗದಲ್ಲಿ ತುರಿಸಿಕೊಳ್ಳುವುದರಿಂದ ಈ ಸೋಂಕು ಸುಲಭವಾಗಿ ಇನ್ನಷ್ಟು ವಿಸ್ತಾರವಾಗಿ ಹರಡಲು ಸಾಧ್ಯವಾಗುತ್ತದೆ ಹಾಗೂ ಚಿಕಿತ್ಸೆ ಇನ್ನಷ್ಟು ಕಷ್ಟಕರವಾಗಬಹುದು. ಬನ್ನಿ, ಇದಕ್ಕೆ ಕೆಲವು ಸುಲಭ ಮನೆಮದ್ದುಗಳನ್ನು ನೋಡೋಣ...

 
ಹೆಲ್ತ್