Back
Home » ಇತ್ತೀಚಿನ
ದೈಹಿಕ ಆರೋಗ್ಯಕ್ಕೂ ಹಾನಿಕಾರಕ ಈ 'ಫೇಸ್​​​ಬುಕ್'!..ಸಂಶೋಧನೆಯ ಅಚ್ಚರಿ ವರದಿ!!
Gizbot | 11th Jan, 2019 04:58 PM

ವಿಶ್ವದಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಈಗ ಮಾನವನ ಆರೋಗ್ಯಕ್ಕೂ ಕೂಡ ಹಾನಿಕಾರಕ ಎಂದು ಇತ್ತೀಚಿನ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ. ಫೇಸ್​ಬುಕ್​​​ ಬಳಕೆಯಿಂದಾಗಿ ಅನೇಕರು ಮಾನಸಿಕವಾಗಿ ಮಾತ್ರವಲ್ಲದೆ, ದೈಹಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆಂಬ ವಿಚಾರವನ್ನು ನೂತನ ಸಂಶೋಧನೆ ತಿಳಿಸಿದೆ.

ಇತ್ತೀಚಿಗೆ 'ಸೋಶಿಯಲ್​ ಮೀಡಿಯಾ ಯೂಸ್​ ಅಂಡ್​ ಫರ್ಸೆಪ್ಷನ್ಸ್​ ಆಫ್​ ಫಿಜಿಕಲ್​ ಹೆಲ್ತ್​" ವಿಷಯದ ಕುರಿತು 'ಯುನಿವರ್ಸಿಟಿ ಆಫ್​ ಸರ್ರೆ' ಅಡಿಯಲ್ಲಿ ಡಾ. ಬ್ರಿಡ್​ಗೆಟ್​​​​ ಡಿಬ್ ಹಾಗೂ​ ತಂಡದವರು ಸಂಶೋಧನೆ ನಡೆಸಿ, ಫೇಸ್​ಬುಕ್ ಬಳಕೆದಾರರು ನಿದ್ರಾ ಸಮಸ್ಯೆ, ತೂಕದ ಏರುಪೇರು ಸೇರಿದಂತೆ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಫೇಸ್​ಬುಕ್ ಕೋಟ್ಯಾಂತರ ಬಳಕೆದಾರರನ್ನು ಹೊಂದಿದೆ. ಆದರೆ, ನಾವು ಹೆಚ್ಚು ಫೇಸ್‌ಬುಕ್ ಬಳಕೆ ಮಾಡುವ 165 ಜನರನ್ನು ಸಂಶೋಧನೆಗೆ ಒಳಪಡಿಸಿದ್ದೇವೆ. ಇವರ ಮೇಲೆ ನಡೆಸಿದ ಸಂಶೋಧನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಫೇಸ್​ಬುಕ್​​ ಯಾವರೀತಿ ಪರಿಣಾಮ ಬೀಳುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.

ಅಂತೆಯೇ, ಫೇಸ್​ಬುಕ್​​​ ಬಳಕೆದಾರ ತನ್ನ ಫೇಸ್​ಬುಕ್ ಖಾತೆಯನ್ನು ಮತ್ತೊಬ್ಬ ಫೇಸ್​ಬುಕ್ ಖಾತೆಗೆ ಹೋಲಿಕೆ ಮಾಡುತ್ತಾ ನಿದ್ರಾ ಸಮಸ್ಯೆ, ತೂಕದ ಏರುಪೇರು, ಸ್ನಾಯುವಿನ ಒತ್ತಡ ಸೇರಿದಂತೆ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಸಾಮಾನ್ಯವಾಗಿ ಫೇಸ್‌ಬುಕ್ ಬಳಕೆದಾರರು ಆಪ್‌ ಅನ್ನು ಸ್ಕ್ರೋಲ್​ ಮಾಡುವ ಮೂಲಕ ಬೇರೆಯವರು ಯಾವ ಯಾವ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಪೋಸ್ಟ್​ಗಳಿಗೆ ಲೈಕ್ಸ್​ ಎಷ್ಟಿವೆ ಎಂಬುದರಲ್ಲೇ ಹೆಚ್ಚು ಮಗ್ನರಾಗಿರುತ್ತಾರೆ. ಇಂತಹ ಪ್ರಕ್ರಿಯೆ ಮಾನಸಿಕ ಆರೋಗ್ಯದ ಮೇಲೆ ನೇರಪರಿಣಾಮ ಬೀರಲಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

   
 
ಹೆಲ್ತ್