Back
Home » ಆರೋಗ್ಯ
ಪುರುಷರು ಟಾಯ್ಲೆಟ್ ಬಳಸುವಾಗ ಅನುಸರಿಸಬೇಕಾದ ಸರಿಯಾದ ನಿಯಮಗಳು
Boldsky | 11th Jan, 2019 05:01 PM
 • ಬಾಗಿಲನ್ನು ಸದಾ ಮುಚ್ಚಿ

  ನಿಮ್ಮ ಹಾಗೂ ಸುತ್ತ ಮುತ್ತ ಇರುವ ಇತರರ ಖಾಸಗಿತನವನ್ನು ಕಾಪಾಡಿಕೊಳ್ಳಲು ಶೌಚಾಲಯದ ಬಾಗಿಲನ್ನು ಸದಾ ಗಟ್ಟಿಯಾಗಿ ಮುಚ್ಚಬೇಕು. ಅಲ್ಲದೇ ಒಳಗಿನಿಂದ ಚಿಲಕವನ್ನು ಹಾಕಿಕೊಳ್ಳಲು ಮರೆಯಬಾರದು.


 • ಟಾಯ್ಲೆಟ್ ಸೀಟ್ ಬಗ್ಗೆ ಇರುವ ದ್ವಂದ್ವ

  ಈ ಬಗ್ಗೆ ಬಹುತೇಕ ಎಲ್ಲರಿಗೂ ದ್ವಂದ್ವ ಇದ್ದೇ ಇರುತ್ತದೆ, ಅಂದರೆ ಶೌಚಾಲಯ ಬಳಸಿದ ಬಳಿಕ ಟಾಯ್ಲೆಟ್ ಸೀಟ್ ಅನ್ನು ಕೆಳಗಿರಿಸಬೇಕೋ, ಮೇಲೆ ಎತ್ತಿರಿಸಬೇಕೋ ಎಂದು! ಒಂದು ವೇಳೆ ಇದಕ್ಕೂ ಮುನ್ನ ನಿಮಗೆ ಈ ಬಗ್ಗೆ ಗೊತ್ತಿಲ್ಲದಿದ್ದರೆ ಈಗ ಬರೆದಿಡಿ, ಇದು ನಿಮ್ಮ ಹಾಗೂ ಇತರರ ಸ್ವಚ್ಛತೆಗೆ ಅತಿ ಅಗತ್ಯವಾಗಿದೆ. ಈಗ ವೈಜ್ಞಾನಿಕವಾಗಿ ಸಾಬೀತಾಗಿರುವ ಪ್ರಕಾರ ಒಂದು ವೇಳೆ ಶೌಚಕ್ರಿಯೆಯ ಬಳಿಕ ನೀರು ಹಾಯಿಸುವಾಗ ಅಥವಾ ಫ್ಲಶ್ ಮಾಡುವಾಗ ಶೌಚಾಲಯದ ಮುಚ್ಚಳ ಮುಚ್ಚದೇ ಇದ್ದರೆ ಸಿಡಿಯುವ ನೀರಿನ ಸೂಕ್ಷ್ಮ ಕಣಗಳು ಶೌಚಾಲಯದೊಳಗೆಲ್ಲಾ ಗಾಳಿಯಲ್ಲಿ ಹಾರಾಡಿ ಇಲ್ಲಿರುವ ಹಲ್ಲುಜ್ಜುವ ಬ್ರಶ್, ಸ್ನಾನದ ಸೋಪು, ಮೈಯುಜ್ಜುವ ಬ್ರಶ್, ಶೇವಿಂಗ್ ಬ್ರಶ್ ಮೊದಲಾದ ಎಲ್ಲಾ ಸ್ಥಳಗಳಲ್ಲಿ ಕುಳಿತು ಇದರಲ್ಲಿರುವ ಕ್ರಿಮಿಗಳು ಈ ವಸ್ತುಗಳನ್ನು ಬಳಸುವವರಲ್ಲಿ ಸೋಂಕು ತರಿಸಬಹುದು. ಹಾಗಾಗಿ, ಶೌಚಕ್ರಿಯೆ ಮುಗಿದ ಬಳಿಕ ಶುಚಾಲಯದ ಸೀಟ್ ಕವರ್ ಅಥವಾ ಮುಚ್ಚಳವನ್ನು ಮುಚ್ಚಿ ನೀರು ಸಿಡಿಯದಂತೆ ಮಾಡಬೇಕು. ಅಲ್ಲದೇ ಶೌಚಾಲಯದಿಂದ ಹೊರಬರುವಾಗ ಈ ಮುಚ್ಚಳ ಮುಚ್ಚಿಯೇ ಇರಬೇಕು. ಹೀಗೆ ಮಾಡುವ ಮೂಲಕ ನೀವು ಶೌಚಾಲಯದಲ್ಲಿ ಸ್ವಚ್ಛತೆಯನ್ನು ಕಾಪಾಡಿದ್ದೀರಿ ಎಂದು ನಿಮ್ಮ ಮನದನ್ನೆಗೆ ಮನವರಿಕೆ ಮಾಡಿ ಆಕೆಯ ಮನ ಗೆಲ್ಲಬಹುದು!


 • ಅತಿಥಿಗಳು ಬರುವ ಮುನ್ನ ಶೌಚಾಲಯ ಸ್ವಚ್ಛಗೊಳಿಸಿ

  ಒಂದು ವೇಳೆ ನಿಮ್ಮ ಮನೆಗೆ ಅತಿಥಿಗಳು ಬರುವವರಿದ್ದರೆ, ಇದಕ್ಕೂ ಒಳ್ಳೆಯದೆಂದರೆ, ಬರುವ ಸೂಚನೆ ಇಲ್ಲದೇ ಇದ್ದರೂ ಬರುವವರಿದ್ದಾರೆ ಎಂದೇ ಪರಿಗಣಿಸಿ ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿ ತೊಳೆಯುವುದು ಅಗತ್ಯ. ವಿಶೇಷವಾಗಿ ಈ ಅತಿಥಿ ಮಹಿಳೆಯಾಗಿದ್ದರೆ ಶೌಚಾಲಯದ ಸ್ವಚ್ಛತೆಯನ್ನು ಗಮನಿಸುವುದು ಖಂಡಿತಾ! ಸಾಮಾನ್ಯವಾಗಿ ಶೌಚಾಲಯವನ್ನು ತೊಳೆಯುವ ಮಾರ್ಜಕ ದ್ರವಗಳಲ್ಲಿ ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಲಾಗುತ್ತದೆ. ಹಾಗಾಗಿ ಶೌಚಾಲಯವನ್ನು ತೊಳೆಯಲು ರಬ್ಬರ್ ಕೈಗವಸುಗಳನ್ನು ತಪ್ಪದೇ ಬಳಸುವ ಮೂಲಕ ಕೈಗಳು ಸುಡುವುದನ್ನು ತಪ್ಪಿಸಬಹುದು.

  Most Read: ಮುಟ್ಟಿನ ದಿನಗಳಲ್ಲಿ ವಿಶಿಷ್ಟ ತಿಂಡಿ-ತಿನಿಸುಗಳನ್ನು ತಿನ್ನಬೇಕೆನಿಸುತ್ತದೆಯಂತೆ! ಯಾಕೆ ಗೊತ್ತೇ


 • ಶೌಚಾಲಯದಲ್ಲಿ ಶಬ್ದ ಮಾಡಬೇಡಿ

  ಶೌಚಾಲಯದಲ್ಲಿ ನಿಮ್ಮ ಕ್ರಿಯೆ ಆದಷ್ಟೂ ಶಬ್ದರಹಿತವಾಗಿರಬೇಕು. ಏಕೆಂದರೆ ಈ ಸದ್ದುಗಳು ಹೊರಗಿದ್ದವರಿಗೆ ಭಾರೀ ಮುಜುಗರ ತರಿಸುತ್ತವೆ. (ಹಿಂದಿನ ದಿನಗಳಲ್ಲಿ ಶೌಚಾಲಯದ ಸದ್ದು ಮತ್ತು ವಾಸನೆ ಅಪವಿತ್ರ ಎಂದು ಭಾವಿಸಲಾಗುತ್ತಿತ್ತು ಹಾಗೂ ಶೌಚಾಲಯವನ್ನು ಮನೆಯಿಂದ ಆದಷ್ಟೂ ದೂರವಾಗಿ ಒಂಟಿಯಾಗಿ ಕಟ್ಟಲಾಗುತ್ತಿತ್ತು). ನೈಸರ್ಗಿಕ ಕ್ರಿಯೆಯಲ್ಲಿ ಸದ್ದುಗಳು ಅನಿವಾರ್ಯ ಹೌದು, ಆದರೆ ಇತರರಿಗೆ ಮುಜುಗರವಾಗುವುದನ್ನು ತಪ್ಪಿಸಲು ಶಬ್ದ ಕಡಿಮೆ ಮಾಡಲು ಪ್ರಯತ್ನಿಸಿ.


 • ಶೌಚಾಲಯದಲ್ಲಿ ಸುವಾಸನೆ ಸೂಸುವ ಉಪಕರಣವಿರಲಿ

  ಈ ಜಗತ್ತಿಯಲ್ಲಿ ವಾಸನೆಯಿಲ್ಲದ ಶೌಚಾಲಯವೇ ಇಲ್ಲ. ಹಾಗಾಗಿ, ಈ ಪರಿಸರ ಉತ್ತಮವಾಗಿರಲು ಏರ್ ಫ್ರೆಶನರ್ ಅಥವಾ ಗಾಳಿಯಲ್ಲಿ ಸುವಾಸನೆ ಬೀರುವ ಉತ್ಪನ್ನಗಳನ್ನು ಬಳಸುವುದು ಅಗತ್ಯ. ಆದರೆ ಅತಿಯಾದ ಘಾಟು ಇರುವ ಪ್ರಬಲ ಸುವಾಸನೆಗಳ ಅಗತ್ಯವಿಲ್ಲ. ಸೌಮ್ಯ ನೈಸರ್ಗಿಕ ಪರಿಮಳಗಳೇ ಸಾಕು. ಶೌಚಾಲಯದಲ್ಲಿದ್ದಾಗ ಇಲ್ಲಿನ ವಾಸನೆಯ ಕಣಗಳು ನಮ್ಮ ಬಟ್ಟೆಯ ಮೇಲೂ ಕೊಂಚ ಕುಳಿತುಕೊಂಡು ನಾವು ಹೊರಬಂದಾಗ ಇತರರು ಈ ವಾಸನೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಹಾಗಾಗಿ ಈ ಪರಿಮಳ ಆದಷ್ಟೂ ನೈಸರ್ಗಿಕ (ಲಿಂಬೆ, ಮಲ್ಲಿಗೆ ಇತ್ಯಾದಿ)ವಾರಿಗಲಿ. ಇನ್ನೊಂದು ಸಲಹೆ: ಒಂದು ವೇಳೆ ಸುವಾಸನೆ ಸೂಸುವ ಉಪಕರಣ ಖಾಲಿಯಾಗಿ ಬದಲಿ ಇಲ್ಲದಿದ್ದರೆ ಹೀಗೆ ಮಾಡಿ. ಶೌಚಾಲಯ ಬಳಸಿದ ಬಳಿಕ ಹೊರಬರುವ ಮುನ್ನ ಒಳಗಿದ್ದೇ ಒಂದು ಬೆಂಕಿಕಡ್ಡಿಯನ್ನು ಗೀರಿ ಪೂರ್ಣವಾಗಿ ಉರಿಯುವಂತೆ ಮಾಡಿ. ಬಳಿಕ ನಂದಿಸಿ ಹೊರಬನ್ನಿ. ಇದರಿಂದ ಶೌಚಾಲಯದಲ್ಲಿ ಸುವಾಸನೆ ಬಾರದೇ ಹೋದರೂ, ದುರ್ವಾಸನೆ ಮಾತ್ರ ಇಲ್ಲವಾಗುತ್ತದೆ. ಏಕೆಂದರೆ ದುರ್ವಾಸನೆ ಸೂಸುವ ಅನಿಲಗಳು ಬೆಂಕಿಯಲ್ಲಿ ಆಮ್ಲಜನೀಕರಣಗೊಂಡು ತಮ್ಮ ವಾಸನೆಯನ್ನು ಕಳೆದುಕೊಳ್ಳುತ್ತವೆ.


 • ಮೇಲ್ನೋಟಕ್ಕೆ ಕಾಣದ ಕಲೆಗಳನ್ನು ಹುಡುಕಿ

  ಕೆಲವೊಮ್ಮೆ ಕೆಲವು ಕಲೆಗಳು ಮೇಲ್ನೋಟಕ್ಕೆ ಕಾಣದೇ ಸೂಕ್ಷ್ಮವಾಗಿ ಗಮನಿಸುವಾಗ ಮಾತ್ರವೇ ಕಾಣುತ್ತವೆ. ಮಹಿಳೆಯರು ಈ ಕಲೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಉದಾಹರಣೆಗೆ ಹಲ್ಲುಜ್ಜಿದ ಪೇಸ್ಟ್ ವಾಶ್ ಬೇಸಿನ್ ನಲ್ಲಿ ಉಗಿದ ಬಳಿಕ ಪೂರ್ಣವಾಗಿ ನೀರಿನಲ್ಲಿ ಹೊರಹೋಗದೇ ಕೊಂಚ ಭಾಗ ಅಂಟಿಕೊಂಡಿರುತ್ತದೆ. ಇದರ ಬಣ್ಣ ವಾಶ್ ಬೇಸಿನ್ ನ ಬಣ್ಣ ಒಂದೇ ಆಗಿರುವ ಕಾರಣ ಸುಲಭಕ್ಕೆ ಇದು ಕಾಣುವುದಿಲ್ಲ. ಇದೇ ರೀರಿಯಲ್ಲಿ ಶೌಚಾಲಯದ ಕಮೋಡ್ ನ ಅಂಚುಗಳ ಕೆಳಭಾಗ, ಬಗ್ಗಿದಾಗ ಮಾತ್ರವೇ ಕಾಣುತ್ತದೆ. ಹಾಗಾಗಿ, ನೀವು ಶೌಚಾಲಯವನ್ನು ಸ್ವಚ್ಛಗೊಳಿಸುವಾಗ ಸಾಮಾನ್ಯ ನೋಟಕ್ಕೆ ಕಾಣದ ಕಲೆಗಳನ್ನೂ ಹುಡುಕಿ ಸ್ವಚ್ಛಗೊಳಿಸಬೇಕು. ವಾರಕ್ಕೊಮ್ಮೆಯಾದರೂ ಇಡಿಯ ಶೌಚಾಲಯವನ್ನು ಪರಿಪೂರ್ಣವಾಗಿ ತೊಳೆದು ಸ್ವಚ್ಛಗೊಳಿಸುವುದು ಅಗತ್ಯ.


 • ಉಪಯೋಗದ ಬಳಿಕ ಫ್ಲಶ್ ಮಾಡುವುದು ತಪ್ಪಿಸಬಾರದು

  ಶೌಚಾಲಯವನ್ನು ಪ್ರತಿ ಬಾರಿ ಬಳಸಿದ ಬಳಿಕವೂ ಹೊರಬರುವ ಮುನ್ನ ಮುಚ್ಚಳ ಮುಚ್ಚಿ ತಪ್ಪದೇ ನೀರು ಹಾಯಿಸಬೇಕು ಅಥವಾ ಫ್ಲಶ್ ಮಾಡಬೇಕು.

  Most Read: ಪುರುಷರಿಗೆ ಮುಜುಗರ ತರಿಸುವ ಶಿಶ್ನದ ತುರಿಕೆಯ ಸಮಸ್ಯೆಗೆ ಸರಳ ಮನೆಮದ್ದುಗಳು


 • ತೇವಭಾಗಗಳನ್ನು ಕಾಗದದಿಂದ ಒರೆಸಿಯೇ ಹೊರಬನ್ನಿ

  ಶೌಚಾಲಯದ ಬಳಕೆಯ ಬಳಿಕ ಫ್ಲಶ್ ಚಿಲಕವನ್ನು ತಗ್ಗಿಸಿದ ಬಳಿಕ ಮೊದಲಾಗಿ ನಿಮ್ಮ ಕೈಗಳನ್ನು ಸೋಪಿನ ನೀರಿನಿಂದ ಸ್ವಚ್ಛಗೊಳಿಸಿದ ಬಳಿಕ ನಿಮ್ಮ ಕೈಗಳನ್ನು ಟಿಶ್ಯೂ ಕಾಗದದಿಂದ ಒರೆಸಿಕೊಳ್ಳಿ. ಬಳಿಕ ಇನ್ನೊಂದು ಕಾಗದದಿಂದ ಶೌಚಾಲಯದ ಸೀಟ್ ಮೇಲಿನ ಭಾಗವನ್ನು ಒರೆಸಿ ಸ್ವಚ್ಛಗೊಳಿಸಿ ಕಾಗದವನ್ನು ಕಸದ ಬುಟ್ಟಿಯಲ್ಲಿಯೇ ಎಸೆಯಿರಿ, ಕಮೋಡ್ ನಲ್ಲಲ್ಲ. ಏಕೆಂದರೆ ಕಮೋಡ್ ನಲ್ಲಿ ಕಾಗದ ಕರಗುವುದಿಲ್ಲ, ಬದಲಿಗೆ ಮುಂದೆಲ್ಲೋ ಪೈಪ್ ಒಳಗೆ ಮುದ್ದೆಯಾಗಿ ನೀರು ಕಟ್ಟಿಕೊಳ್ಳಲು ಕಾರಣವಾಗುತ್ತದೆ. ಇನ್ನೊಂದು ಚಿಕ್ಕ ಕಾಗದರಿಂದ ಫ್ಲಶ್ ಮಾಡಿದ ಭಾಗ, ಬಾಗಿಲ ಹಿಡಿಕೆ ಹಾಗೂ ಬೆಳಕು ಆರಿಸುವ ಸ್ವಿಚ್ ಇವನ್ನು ನಯವಾಗಿ ಒರೆಸುವ ಮೂಲಕ ನೈರ್ಮಲ್ಯವನ್ನು ಗರಿಷ್ಟವಾಗಿ ಕಾಪಾಡಬಹುದು.
ಮನೆಯ ಶೌಚಾಲಯ ಸ್ವಚ್ಛವಾಗಿದ್ದರೆ ಮನೆಯೂ ಸ್ವಚ್ಛವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದೇ ಕಾರಣಕ್ಕೆ ಸಂಬಂಧ ಬೆಳೆಸಲು ಬಯಸುವ ವ್ಯಕ್ತಿಗಳು ಆ ಮನೆಯಲ್ಲಿ ಅಗತ್ಯವಿಲ್ಲದಿದ್ದರೂ ಶೌಚಾಲಯವನ್ನು ಬಳಸುವ ನೆಪದಲ್ಲಿ ಸ್ವಚ್ಛತೆಯನ್ನು ಗಮನಿಸುವುದಿದೆ. ಒಂದು ವೇಳೆ ನಿಮ್ಮ ಮನೆಗೆ ಆಗಮಿಸಿದ ಪುರುಷ ಅತಿಥಿಗಳು ನಿರ್ಗಮಿಸಿದ ಬಳಿಕ ಶೌಚಾಲಯದ ಪಾಡು ಹೊಲಸಾಗಿದ್ದರೆ? ತಕ್ಷಣವೇ ಎಲ್ಲ ಪುರುಷರ ಬಗ್ಗೆ ಅಸಹ್ಯ ಭಾವನೆಯುಂಟಾಗಬಹುದು.

ಇನ್ನೊಂದು ಸಂದರ್ಭವನ್ನು ಊಹಿಸಿಕೊಳ್ಳಿ, ನೀವು ಓರ್ವ ಯುವತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು ಪ್ರಥಮ ಬಾರಿಗೆ ನಿಮ್ಮ ಮನೆಗೆ ಕರೆತರುತ್ತೀರಿ. ಆದರೆ ಆಕೆ ನಿಮ್ಮ ಶೌಚಾಲಯವನ್ನು ಕಂಡು ಅತಿ ಹೆಚ್ಚು ಅಸಹ್ಯಪಟ್ಟುಕೊಂಡಿದ್ದು ನೀವು ಹೀಗೇನಾ ಶೌಚಾಲಯವನ್ನು ಇರಿಸಿಕೊಳ್ಳುವುದು ಎಂಬ ಆಪಾದನೆ ಹೊರಿಸಬಹುದು. ಸಾಮಾನ್ಯವಾಗಿ ಮಹಿಳೆಯರು ಮನೆಯ ಸ್ವಚ್ಛತೆಗೆ ಹೆಚ್ಚು ಗಮನ ನೀಡುವವರಾಗಿದ್ದು ಯಾವುದೇ ಬಗೆಯ ಕೊಳೆಯನ್ನು ಸಹಿಸರು. ಹಾಗಾಗಿ, ಒಂದು ವೇಳೆ ನಿಮಗರಿಯದೇ ನಿಮ್ಮ ಶೌಚಾಲಯ ಅಗತ್ಯವಿರುವಷ್ಟು ಸ್ವಚ್ಛವಾಗಿಲ್ಲದಿದ್ದರೆ ನೀವು ಈ ತಪ್ಪುಗಳನ್ನು ಮಾಡುತ್ತಿದ್ದಿರಬಹುದು. ಅದರಲ್ಲೂ, ಬೇರೆಡೆ ಶೌಚಾಲಯ ಬಳಸುವಾಗ ಈ ನಿಯಮಗಳನ್ನು ಪಾಲಿಸಲೇಬೇಕು.

   
 
ಹೆಲ್ತ್