Back
Home » ಆರೋಗ್ಯ
ನಾಟಿ ಔಷಧಿಗಳು: ಶೀತ ಹಾಗೂ ಕೆಮ್ಮಿನ ಸಮಸ್ಯೆ ಒಂದೇ ದಿನಗಳಲ್ಲಿ ಮಂಗಮಾಯ!
Boldsky | 12th Jan, 2019 10:40 AM
 • ಶುಂಠಿ ಬೆರೆಸಿದ ಟೀ

  ಇದು ಕೇವಲ ರುಚಿಕರ ಮಾತ್ರವಲ್ಲ ಕೆಮ್ಮು ಶೀತವನ್ನು ಶೀಘ್ರವಾಗಿ ಇಲ್ಲವಾಗಿಸಲೂ ನೆರವಾಗುತ್ತದೆ. ವಿಶೇಷವಾಗಿ ಶ್ವಾಸನಾಳಗಳಿಂದ ಕಫವನ್ನು ನಿವಾರಿಸುವ ಮೂಲಕ ಸತತವಾಗಿ ಮೂಗಿನಿಂದ ಸೋರುತ್ತಿರುವ ದ್ರವವನ್ನು ನಿಲ್ಲಿಸಲು ನೆರವಾಗುತ್ತದೆ. ಶುಂಠಿತ ಇತರ ಪ್ರಯೋಜನಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಶೀತ ಮತ್ತು ಕೆಮ್ಮಿನಿಂದ ನಿರಾಳತೆ ಒದಗಿಸಿ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುತ್ತದೆ. ಶುಂಠಿ ಚಹಾ ತಯಾರಿಸುವ ವಿಧಾನ
  ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.


 • ಲಿಂಬೆ, ದಾಲ್ಚಿನ್ನಿ ಪುಡಿ ಮತ್ತು ಜೇನಿನ ಮಿಶ್ರಣ

  ಶೀತ-ಕೆಮ್ಮು ನಿವಾರಣೆಗೆ ಲಿಂಬೆ, ದಾಲ್ಚಿನ್ನಿ ಪುಡಿ ಮತ್ತು ಜೇನಿನ ಮಿಶ್ರಣ ಇನ್ನೊಂದು ಅತ್ಯುತ್ತಮವಾದ ಪರಿಹಾರವಾಗಿದೆ. ಈ ಮಿಶ್ರಣ ಒಂದು ಸ್ನಿಗ್ಧ ದ್ರವವಾಗಿದ್ದು ದಿನಕ್ಕೆರಡು ಚಮಚ ಸೇವಿಸುವ ಮೂಲಕ ಶೀತ-ಕೆಮ್ಮು ಶೀಘ್ರವಾಗಿ ನೆರವಾಗುತ್ತದೆ. ಈ ಸಿರಪ್ ತಯಾರಿಸುವುದು ಹೇಗೆ: ಅರ್ಧ ದೊಡ್ಡ ಚಮಚ ಜೇನಿನಲ್ಲಿ ಕೆಲವು ತೊಟ್ಟು ಲಿಂಬೆರಸ ಮತ್ತು ಚಿಟಿಕೆಯಷ್ಟು ದಾಲ್ಚಿನ್ನಿ ಪುಡಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.


 • ಉಗುರುಬೆಚ್ಚನೆಯ ನೀರು

  ಶೀತ ಕೆಮ್ಮು ಇದ್ದ ಸಮಯದಲ್ಲಿ ದಿನದಲ್ಲಿ ಹಲವಾರು ಬಾರಿ ಉಗುರುಬೆಚ್ಚನೆಯ ನೀರನ್ನು ಸೇವಿಸುವ ಮೂಲಕ ಈ ತೊಂದರೆ ಶೀಘ್ರವಾಗಿ ಹತೋಟಿಗೆ ಬರಲು ನೆರವಾಗುತ್ತದೆ. ಉಗುರುಬೆಚ್ಚನೆಯ ನೀರೇ ಏಕೆ ಬಿಸಿನೀರು ಏಕೆ ಬೇಡ ಎಂದರೆ ಬಿಸಿನೀರಿನಲ್ಲಿರುವ ತಾಪಮಾನ ನಮ್ಮ ದೇಹಕ್ಕೆ ಅಗತ್ಯಕ್ಕೂ ಹೆಚ್ಚಿನ ಬಿಸಿಯನ್ನು ಒಗಗಿಸುತ್ತದೆ. ಆದರೆ ಉಗುರುಬೆಚ್ಚನೆಯ ನೀರಿನ ತಾಪಮಾನ ಕಫವನ್ನು ಸಡಿಲಿಸಿ ಉರಿಯೂತವನ್ನು ಶಮನಗೊಳಿಸಲು ನೆರವಾಗುತ್ತದೆ. ಈ ಮೂಲಕ ದೇಹ ಕಳೆದುಕೊಂಡಿದ್ದ ದ್ರವವನ್ನು ಮರುಪಡೆಯುವ ಜೊತೆಗೇ ದೇಹದಲ್ಲಿದ್ದ ಸೋಂಕನ್ನು ನಿವಾರಿಸಲೂ ನೆರವಾಗುತ್ತದೆ.

  Most Read: ಸೀಬೆ ಎಲೆಗಳ ಟೀ ಕುಡಿಯುವುದರಿಂದ ಬರೋಬ್ಬರಿ 15 ಆರೋಗ್ಯ ಪ್ರಯೋಜನಗಳಿವೆ


 • ಅರಿಶಿನ ಬೆರೆಸಿದ ಹಾಲು

  ಅರಿಶಿನ ಇಲ್ಲದ ಯಾವುದೇ ಭಾರತೀಯ ಅಡುಗೆ ಮನೆಯನ್ನು ಕಾಣಲಾರಿರಿ. ಅರಿಶಿನ ಕೇವಲ ರುಚಿಕಾರಕ ಮಾತ್ರವಲ್ಲ ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಔಷಧಿಯೂ ಆಗಿದ್ದು ದೇಹದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನೂ ಒದಗಿಸುತ್ತದೆ. ಅರಿಶಿನವನ್ನು ಬಿಸಿಹಾಲಿನಲ್ಲಿ ಬೆರೆಸಿ ಕುಡಿಯುವ ಮೂಲಕ ಶೀತ ಮತ್ತು ಕೆಮ್ಮು ನಿವಾರಿಸಲು ದೇಹದ ರೋಗ ನಿರೋಧಕ ವ್ಯವಸ್ಥೆಗೆ ಅತ್ಯುತ್ತಮ ಬೆಂಬಲ ದೊರಕುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಅರಿಶಿನ ಬೆರೆಸಿದ ಹಾಲು ಕುಡಿಯುವುದು ಅತ್ಯುತ್ತಮ ವಿಧಾನವಾಗಿದೆ.


 • ಉಪ್ಪು ನೀರಿನ ಗಳಗಳ

  ಶೀತ ಎದುರಾದಾಗ ನಮ್ಮ ಹಿರಿಯರು ಅನುಸರಿಸುತ್ತಿರುವ ಈ ವಿಧಾನ ಸಾವಿರಾರು ವರ್ಷ ಹಳೆಯದಾಗಿದ್ದರೂ ಸಮರ್ಥವಾಗಿದೆ. ಈ ನೀರಿಗೆ ಕೊಂಚ ಅರಿಶಿನ ಪುಡಿ ಬೆರೆಸುವ ಮೂಲಕ ಇದರ ಕ್ಷಮತೆಯನ್ನು ಇನ್ನಷ್ಟು ಉತ್ತಮಗೊಳಿಸಬಹುದು.


 • ಬ್ರಾಂದಿ ಬೆರೆಸಿದ ಜೇನು

  ಬ್ರಾಂದಿ ವಾಸ್ತವವಾಗಿ ದೇಹವನ್ನು ಬೆಚ್ಚಗಾಗಿಸುವ ದ್ರವವಾಗಿದೆ. ಇದೇ ಕಾರಣಕ್ಕೆ ಮಂಜಿನಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಹುಡುಕಲು ಕಳುಹಿಸುವ ನಾಯಿಗಳ ಕುತ್ತಿಗೆಯಲ್ಲಿ ಬ್ರಾಂದಿ ತುಂಬಿದ ಚಿಕ್ಕ ಬಾಟಲಿಯನ್ನು ಕಟ್ಟಿ ಕಳುಹಿಸಲಾಗುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚ ಜೇನಿನಲ್ಲಿ ಕೆಲವು ತೊಟ್ಟು ಬ್ರಾಂದಿಯನ್ನು ಮಿಶ್ರಣ ಮಾಡಿ ಸೇವಿಸುವ ಮೂಲಕ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.


 • ಮಸಾಲೆ ಬೆರೆಸಿದ ಟೀ

  ನಿಮ್ಮ ಟೀ ಯಲ್ಲಿ ಕೊಂಚ ತುಳಸಿ, ಕಾಳುಮೆಣಸು ಮತ್ತು ಶುಂಠಿಯನ್ನು ಬೆರೆಸಿ ತಯಾರಿಸುವ ಮೂಲಕ ಟೀ ಯ ರುಚಿ ಹೆಚ್ಚಿಸುವ ಜೊತೆಗೇ ಆರೋಗ್ಯವೂ ವೃದ್ಧಿಸುತ್ತದೆ. ಶೀತ ಕೆಮ್ಮಿನ ನಿವಾರಣೆಗೆ ಈ ಮೂರೂ ಮಸಾಲೆಗಳು ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮ ಬೆಂಬಲ ಒದಗಿಸುತ್ತವೆ.


 • ಜೇನು, ಲಿಂಬೆರಸ ಮತ್ತು ಉಗುರುಬೆಚ್ಚನೆಯ ನೀರು

  ಜೀರ್ಣಕ್ರಿಯೆ ಮತ್ತು ರಕ್ತಪರಿಚಲನೆ ವ್ಯವಸ್ಥೆಯನ್ನು ವೃದ್ದಿಸಲು ಈ ಮಿಶ್ರಣ ಅತ್ಯುತ್ತಮ ಬೆಂಬಲ ಒದಗಿಸುತ್ತದೆ. ಶೀತ ಮತ್ತು ಕೆಮ್ಮಿನ ನಿವಾರಣೆಗೆ ಈ ನೀರು ಅತ್ಯುತ್ತಮ ಪರಿಹಾರವಾಗಿದೆ. ದಿನವಿಡೀ ಸಾಧ್ಯವಾದಷ್ಟೂ ಪ್ರಮಾಣದಲ್ಲಿ ಈ ನೀರನ್ನು ಕುಡಿಯಬೇಕು.


 • ನೆಲ್ಲಿಕಾಯಿ

  ನೆಲ್ಲಿಕಾಯಿ ಅತ್ಯುತ್ತಮವಾದ ರೋಗನಿರೋಧಕವಾಗಿದ್ದು ಹಲವಾರು ಕಾಯಿಲೆಗಳ ವಿರುದ್ದ ಹೋರಾಡುತ್ತದೆ. ನಿತ್ಯವೂ ಒಂದು ನೆಲ್ಲಿಕಾಯಿಯನ್ನು ಸೇವಿಸುತ್ತಾ ಬರುವ ಮೂಲಕ ಆರೋಗ್ಯ ವೃದ್ದಿಗೊಳ್ಳುವುದು ಮಾತ್ರವಲ್ಲ ಯಕೃತ್ ಮತ್ತು ರೋಗ ನಿರೋಧಕ ವ್ಯವಸ್ಥೆಗಳ ಕ್ಷಮತೆಯೂ ಉತ್ತಮಗೊಳ್ಳುತ್ತದೆ.

  Most Read: ಮುಖ ಸುಂದರವಾಗಿ ಕಾಣಬೇಕೆಂದರೆ, ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಹೀಗೆ ಮಾಡಿ...


 • ಶುಂಠಿ-ತುಳಸಿ ಮಿಶ್ರಣ

  ಕೊಂಚ ಹಸಿಶುಂಠಿಯನ್ನು ತುರಿದು ಇದರ ರಸವನ್ನು ಹಿಂಡಿ ಇದಕ್ಕೆ ಕೆಲವು ತುಳಸಿ ಎಲೆಗಳನ್ನು ಜಜ್ಜಿ ಬೆರೆಸಿ ಕೊಂಚ ಜೇನನ್ನು ಬೆರೆಸಿ ಈ ಮಿಶ್ರಣವನ್ನು ಕುಡಿಯುವ ಮೂಲಕ ಕಠಿಣವಾದ ಕೆಮ್ಮು ಸಹಾ ಶೀಘ್ರವೇ ತಹಬಂದಿಗೆ ಬರುತ್ತದೆ.


 • ಅಗಸೆಬೀಜದಿಂದ ಶೀತ ಕೆಮ್ಮಿನಿಂದ ರಕ್ಷಣೆ

  ಸಾಮಾನ್ಯ ಶೀತ ಕೆಮ್ಮಿಗೆ ಅಗಸೆ ಬೀಜವೂ ಇನ್ನೊಂದು ಪರಿಹಾರವಾಗಿದೆ. ಇದಕ್ಕಾಗಿ ಕೊಂಚ ಅಗಸೆ ಬೀಜಗಳನ್ನು ನೀರಿನಲ್ಲಿ ಕುದಿಸಿ ಈ ನೀರು ಗಾಢವಾದ ಬಳಿಕ ಇದನ್ನು ಸೋಸಿ ಈ ನೀರಿಗೆ ಕೊಂಚ ಲಿಂಬೆರಸ ಮತ್ತು ಜೇನನ್ನು ಬೆರೆಸಿ ಈ ನೀರನ್ನು ಉಗುರುಬೆಚ್ಚನಿರುವಂತೆ ಕುಡಿದರೆ ಶೀತ ಮತ್ತು ಕೆಮ್ಮು ಶೀಘ್ರವೇ ನಿವಾರಣೆಯಾಗುತ್ತದೆ.

  Most Read: ಮುಟ್ಟಿನ ದಿನಗಳಲ್ಲಿ ವಿಶಿಷ್ಟ ತಿಂಡಿ-ತಿನಿಸುಗಳನ್ನು ತಿನ್ನಬೇಕೆನಿಸುತ್ತದೆಯಂತೆ! ಯಾಕೆ ಗೊತ್ತೇ?


 • ಶುಂಠಿ ಮತ್ತು ಉಪ್ಪು

  ಕೊಂಚ ಹಸಿಶುಂಠಿಯನ್ನು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಇದಕ್ಕೆ ಕೊಂಚ ಉಪ್ಪನ್ನು ಸಿಂಪಡಿಸಿ ಈ ತುಂಡುಗಳನ್ನು ನೇರವಾಗಿ ಜಗಿಯುವ ಮೂಲಕ ಭಾರೀ ಕೆರೆತವಿರುವ ಗಂಟಲು, ಕೆಮ್ಮು ಮತ್ತು ಶೀತ ಶೀಘ್ರವಾಗಿ ಗುಣವಾಗುತ್ತದೆ.


 • ಹುರಿದ ಬೆಳ್ಳುಳ್ಳಿ

  ಹಸುವಿನ ತುಪ್ಪದಲ್ಲಿ ಕೊಂಚ ಬೆಳ್ಳುಳ್ಳಿಯ ಎಸಳುಗಳನ್ನು ಹುರಿದು ಬಿಸಿ ಬಿಸಿ ಇದ್ದಂತೆಯೇ ಇದನ್ನು ಜಗಿದು ತಿನ್ನಬೇಕು. ಇದರ ರುಚಿ ಕಹಿಯಾದ್ದರೂ ಸರಿ, ಜಗಿದೇ ಸೇವಿಸುವ ಮೂಲಕ ಶೀತ ಮತ್ತು ಕೆಮ್ಮು ಶೀಘ್ರವಾಗಿ ಕಡಿಮೆಯಾಗುತ್ತದೆ.
ಸಾಮಾನ್ಯ ತೊಂದರೆಗಳಾದ ಶೀತ ಮತ್ತು ಕೆಮ್ಮು ವೈರಸ್ ಗಳ ಧಾಳಿಗೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಕಂಡುಕೊಂಡಿರುವ ಪ್ರತಿರೋಧ ಕ್ರಮವೇ ಹೊರತು ಇವು ವಾಸ್ತವವಾಗಿ ಕಾಯಿಲೆಗಳೇ ಅಲ್ಲ. ಇವುಗಳನ್ನು ನಿವಾರಿಸುವುದು ಎಂದರೆ ಈ ತೊಂದರೆಗೆ ಕಾರಣವಾದ ವೈರಸ್ಸುಗಳನ್ನು ಕೊಂದು ಅಪಾಯವನ್ನು ಹಿಮ್ಮೆಟ್ಟಿಸುವುದೇ ಆಗಿದೆ.

ಈ ಕಾರ್ಯಕ್ಕೆ ಕೆಲವಾರು ನೈಸರ್ಗಿಕ ವಸ್ತುಗಳು ನೆರವಾಗುತ್ತವೆ ಹಾಗೂ ಶೀತ-ಕೆಮ್ಮನ್ನು ಶೀಘ್ರವಾಗಿ ಇಲ್ಲವಾಗಿಸುತ್ತವೆ. ಇವುಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಸುರಕ್ಷಿತವೂ ಹೌದು. ಇಂತಹ ಹದಿನೈದು ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗುತ್ತಿದೆ.. ಮುಂದೆ ಓದಿ

   
 
ಹೆಲ್ತ್