Back
Home » ಆರೋಗ್ಯ
ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ
Boldsky | 12th Jan, 2019 02:30 PM
 • ರಕ್ತ ಮಲಿನವಾಗಿದ್ದರೆ

  ರಕ್ತ ಮಲಿನವಾಗಿದ್ದರೆ ಸೂಕ್ಷ್ಮ ಮತ್ತು ದೇಹದ ಕೇಂದ್ರಕ್ಕೆ ಹೋಲಿಸಿದರೆ ಅಂಚಿನ ಭಾಗದಲ್ಲಿರುವ ತ್ವಚೆಗೆ ಅತಿ ಕಡಿಮೆ ಆರೈಕೆ ದೊರಕುತ್ತದೆ. ಪರಿಣಾಮವಾಗಿ ತ್ವಚೆಯ ಅಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗದೇ ಅಲ್ಲೇ ಉಳಿದು ಸೋಂಕು ಉಂಟಾಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಮೊಡವೆ, ತ್ವಚೆ ಕಳಾರಹಿತವಾಗುವುದು ಹಾಗೂ ಸೂಕ್ಷ್ಮಗೀರುಗಳು ಬೀಳುವುದು ಮೊದಲಾದವು ಎದುರಾಗುತ್ತವೆ. ವಾಸ್ತವವಾಗಿ ರಕ್ತದ ಮಲಿನತೆಯನ್ನು ತ್ವಚೆಯ ಈ ಲಕ್ಷಣಗಳೇ ಪ್ರಥಮವಾಗಿ ಸಾದರಪಡಿಸುತ್ತವೆ ಹಾಗೂ ವೈದ್ಯರೂ ಈ ಲಕ್ಷಣವನ್ನೇ ಪ್ರಥಮವಾಗಿ ಗಮನಿಸುತ್ತಾರೆ.


 • ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ

  ರಕ್ತ ಶುದ್ದೀಕರಣದ ಮೂಲಕ ದೇಹಕ್ಕೆ ಎದುರಾಗಬಹುದಾದ ಹಲವಾರು ರೋಗಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು ಹಾಗೂ ಮಲಿನ ರಕ್ತದಿಂದ ಎದುರಾಗಬಹುದಾಗಿದ್ದ ಇತರ ತೊಂದರೆಗಳನ್ನೂ ಇಲ್ಲವಾಗಿಸಬಹುದು. ಇದರಲ್ಲಿ ಹಲವು ಬಗೆಯ ಅಲರ್ಜಿಗಳು, ತಲೆನೋವು, ವಾಕರಿಕೆ ಇತ್ಯಾದಿಗಳು ಪ್ರಮುಖವಾಗಿವೆ. ನಮ್ಮ ದೇಹದ ಕೆಲವು ಅಂಗಗಳಿಗೆ ರಕ್ತಪೂರೈಕೆ ಸತತವಾಗಿ ಆಗುತ್ತಲೇ ಇರಬೇಕು. ಮೆದುಳು, ಮೂತ್ರಪಿಂಡಗಳು, ಯಕೃತ್, ಶ್ವಾಸಕೋಶ, ದುಗ್ಧಗ್ರಂಥಿ ವ್ಯವಸ್ಥೆ ಮೊದಲಾದವುಗಳಿಗೆ ಹೃದಯ ನರವ್ಯವಸ್ಥೆಯ ಮುಲಕ ಸತತವಾಗಿ ರಕ್ತವನ್ನು ಒದಗಿಸುತ್ತಲೇ ಇರುತ್ತದೆ. ಈ ಎಲ್ಲಾ ಅಂಗಗಳ ಕ್ಷಮತೆ ರಕ್ತದ ಶುದ್ದತೆಯನ್ನು ಅವಲಂಬಿಸಿದೆ.


 • ರಕ್ತ ಶುದ್ದೀಕರಣದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ

  ರಕ್ತ ಶುದ್ದೀಕರಿಸುವ ಮೂಲಕ ಶ್ವಾಸಕೋಶದಿಂದ ಆಮ್ಲಜನಕ ಕೊಂಡೊಯ್ಯುವ ಮತ್ತು ಜೀವಕೋಶಗಳಿಂದ ಪಡೆದ ಇಂಗಾಲದ ಡೈ ಆಕ್ಸೈಡ್ ಅನ್ನು ವಿಸರ್ಜಿಸಲು ಕೊಂಡು ತರುವ ಸಾಮರ್ಥ್ಯವೂ ಗರಿಷ್ಟವಾಗಿರುತ್ತದೆ. ರಕ್ತ ಶುದ್ದೀಕರಣದಿಂದ ನಮ್ಮ ದೇಹದ ದ್ರವದಲ್ಲಿ (ನಮ್ಮ ದೇಹದ ಶೇಖಡಾ ಎಪ್ಪತ್ತು ಭಾಗ ನೀರು) ಪಿ ಎಚ್ ಮಟ್ಟ (ಆಮ್ಲೀಯ-ಕ್ಷಾರೀಯ ಮಟ್ಟ) ಹಾಗೂ ದೇಹದ ತಾಪಮಾನವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಶುದ್ದೀಕರಣಗೊಂಡ ರಕ್ತದಲ್ಲಿ ಉತ್ತಮ ಪ್ರಮಾಣದ ಬಿಳಿ ರಕ್ತಕಣಗಳಿರುತ್ತವೆ ಹಾಗೂ ಗಾಯವಾದಾದ ಇವು ರಕ್ತ ನಷ್ಟಗೊಳ್ಳುವುದನ್ನು ತಡೆಯಲು ನೆರವಾಗುತ್ತವೆ ಹಾಗೂ ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೊಂದಲು ನೆರವಾಗುತ್ತವೆ. ರಕ್ತ ಶುದ್ದೀಕರಣ ವ್ಯವಸ್ಥೆಗೆ ನೆರವು ನೀಡುವ ಕೆಲವು ಪ್ರಮುಖ ಆಹಾರಗಳಿವೆ ಹಾಗೂ ಇವನ್ನು ನಿಯಮಿತವಾಗಿ ಸೇವಿಸುವುದೂ ಅಗತ್ಯವಾಗಿದೆ.


 • ಬ್ರೋಕೋಲಿ

  ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿ ಅತ್ಯುತ್ತಮ ರಕ್ತ ಶುದ್ದೀಕಾರಕ ಆಹಾರವಾಗಿದ್ದು ದೇಹದಿಂದ ರಕ್ತವನ್ನು ಹೊರಹಾಕಲು ನೆರವಾಗುತ್ತದೆ. ಈ ತರಕಾರಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ೩ ಕೊಬ್ಬಿನ ಆಮ್ಲಗಳು, ಕರಗುವ ನಾರು, ಪೊಟ್ಯಾಶಿಯಂ, ಮ್ಯಾಂಗನೀಸ್, ಗಂಧಕ ಮತ್ತು ಗ್ಲುಕೋಸೈನೋಲೇಟ್ಸ್ ಮೊದಲಾದ ಪೋಷಕಾಂಶಗಳಿವೆ. ಬ್ರೋಕೋಲಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟ್ ಗಳನ್ನು ಒದಗಿಸಬಹುದು ಹಾಗೂ ಇದು ರಕ್ತಶುದ್ದೀಕರಣ ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸಲು ನೆರವಾಗುತ್ತದೆ. ಬೇಯಿಸಿ ತಿನ್ನುವ ಆಹಾರದ ಜೊತೆಗೇ ಕೊಂಚ ಪ್ರಮಾಣವನ್ನು ಹಸಿಯಾಗಿ ಸಾಲಾಡ್ ಜೊತೆಗೇ ಸೇರಿಸಿ ತಿನ್ನುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬಹುದು

  Most Read: ಸರಳ ಮನೆಮದ್ದು: 'ರಕ್ತ ಶುದ್ಧೀಕರಿಸುವ' ಅದ್ಭುತ ಜ್ಯೂಸ್


 • ತಾಜಾ ಹಣ್ಣುಗಳು

  ಸೇಬು, ಪ್ಲಮ್, ಮರಸೇಬು, ಪೇರಳೆ ಮೊದಲಾದ ಹಣ್ಣುಗಳನ್ನು ಸಿಪ್ಪೆ ಸಹಿತ ಸೇವಿಸುವ ಮುಲಕ ಇದರಲ್ಲಿರುವ ಪೆಕ್ಟಿನ್ ಎಂಬ ನಾರು ಲಭಿಸುತ್ತದೆ, ಇದು ರಕ್ತ ಶುದ್ದಿಕರಣಕ್ಕೆ ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಕೊಬ್ಬು ಸಂಗ್ರಹವಾಗುವುದನ್ನು ತಡೆಯುವ ಜೊತೆಗೇ ಭಾರವಾದ ಲೋಹಗಳು ಹಾಗೂ ಇತರ ಅಪಾಯಕಾರಿ ರಾಸಾಯನಿಕಗಳನ್ನು ದೇಹದಿಂದ ನಿವಾರಿಸಲೂ ನೆರವಾಗುತ್ತವೆ. ವಿಶೇಷವಾಗಿ ಟೊಮಾಟೋದಲ್ಲಿರುವ ಲೈಕೋಪೀನ್ ಗ್ಲುಟಥಿಯೋನ್ ಎಂಬ ಪೋಷಕಾಂಶ ರಕ್ತದಿಂದ ಕಲ್ಮಶಗಳನ್ನು ಹೊರಹಾಕಲು ಅತ್ಯುತ್ತಮವಾಗಿರುವ ಕಾರಣ ನಿತ್ಯವೂ ಕೊಂಚ ಪ್ರಮಾಣದ ಟೊಮಾಟೋವನ್ನು ಹಸಿಯಾಗಿ ಸೇವಿಸಬೇಕು. ಇದರ ಜೊತೆಗೇ ಬೆರ್ರಿ ಹಣ್ಣುಗಳಾದ ಸ್ಟ್ರಾಬೆರಿ, ಬ್ಲಾಕ್ ಬೆರಿ ಮತ್ತು ಕ್ರ್ಯಾನ್ಬೆರಿ ಮೊದಲಾದ ಹುಳಿಮಿಶ್ರಿತ ಸಿಹಿಹಣ್ಣುಗಳನ್ನೂ ಸೇವಿಸಲು ಮರೆಯದಿರಿ.


 • ಹಸಿರು ಸೊಪ್ಪು ಮತ್ತು ತರಕಾರಿಗಳು

  ಸಾಮಾನ್ಯವಾಗಿ ಸೊಪ್ಪು ತರಕಾರಿಗಳನ್ನು ಹಸಿಯಾಗಿ ಸೇವಿಸುವುದನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಇದು ಪ್ರಾಣಿಗಳ ಆಹಾರ ಎಂಬ ಭಾವನೆ ಬಲವಾಗಿ ನಮ್ಮ ಮನಗಳಲ್ಲಿ ಬೇರೂರಿರುವುದೇ ಇದಕ್ಕೆ ಕಾರಣ. ಆದರೆ ಹಸಿಯಾಗಿ ತಿನ್ನಬಹುದಾದ ಸೊಪ್ಪು, ಎಲೆಗಳಲ್ಲಿ ಹಲವು ಪ್ರಮುಖ ಪೋಷಕಾಂಶಗಳೂ, ಆಂಟಿ ಆಕ್ಸಿಡೆಂಟುಗಳೂ ಇದ್ದು ಇವು ಬೇಯಿಸಿದಾಗ ನಷ್ಟಗೊಳ್ಳುವ ಕಾರಣ ಹಸಿಯಾಗಿ ತಿಂದರೇ ಇದರ ಪ್ರಯೋಜನಗಳನ್ನು ಪಡೆಯಬಹುದು. ಈ ಪೋಷಕಾಂಶಗಳು ಯಕೃತ್ ನಲ್ಲಿರುವ ಕಿಣ್ವಗಳನ್ನು ವೃದ್ದಿಸಲು ನೆರವಾಗುವ ಮೂಲಕ ರಕ್ತಶುದ್ದೀಕರಣಕ್ಕೆ ಅಪಾರವಾದ ಬೆಂಬಲ ನೀಡುತ್ತವೆ. ಹಾಗಾಗಿ ಹಸಿಯಾಗಿ ತಿನ್ನಬಹುದಾದ ಸೊಪ್ಪು ತರಕಾರಿಗಳನ್ನು ಅಲ್ಪ ಪ್ರಮಾಣದಲ್ಲಿಯಾದರೂ ಸರಿ, ನಿತ್ಯವೂ ಸೇವಿಸಬೇಕು.

  Most Read: ಸೀಬೆ ಎಲೆಗಳ ಟೀ ಕುಡಿಯುವುದರಿಂದ ಬರೋಬ್ಬರಿ 15 ಆರೋಗ್ಯ ಪ್ರಯೋಜನಗಳಿವೆ


 • ಬೀಟ್ರೂಟ್

  ಇದರಲ್ಲಿ ಉತ್ತಮ ಪ್ರಮಾಣದ ನೈಟ್ರೇಟುಗಳು ಹಾಗೂ ಬೀಟಾಲೈನ್ ಎಂಬ ಆಂಟಿ ಆಕ್ಸಿಡೆಂಟ್ ಇವೆ, ಇವು ನಮ್ಮ ಯಕೃತ್ ಗೆ ಎದುರಾಗುವ ಉತ್ಕರ್ಷಣಶೀಲ ಘಾಸಿಗೊಳಿಸುವಿಕೆ (oxidative damage) ಮತ್ತು ಉರಿಯೂತವನ್ನು ತಗ್ಗಿಸಲು ನೆರವಾಗುತ್ತವೆ. ಬೀಟ್ರೂಟ್ ಜ್ಯೂಸ್ ಸೇವನೆಯಿಂದ ದೇಹದಲ್ಲಿ ನೈಸರ್ಗಿಕವಾಗಿ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಬೀಟ್ರೂಟ್ ಅನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ಸೇವಿಸುವುದು ಉತ್ತಮ.


 • ಬೆಲ್ಲ

  ಸಕ್ಕರೆಗೆ ಅತ್ಯುತ್ತಮ ಪರ್ಯಾಯವಾಗಿರುವ ಬೆಲ್ಲ ನಮ್ಮ ಭಾರತೀಯ ಅಡುಗೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಗುಜರಾತ್ ನ ಬೆಲ್ಲದ ಅಂಶವಿಲ್ಲದೇ ಯಾವುದೇ ಖಾದ್ಯ ತಯಾರಾಗುವುದಿಲ್ಲ. ಬೆಲ್ಲ ಒಂದು ಅತ್ಯುತ್ತಮವಾದ ರಕ್ತಶುದ್ದೀಕಾರಕವಾಗಿದೆ. ಸಾವಯವ ವಿಧಾನದಲ್ಲಿ ತಯಾರಿಸಲಾದ ಬೆಲ್ಲದಲ್ಲಿರುವ ಕರಗುವ ನಾರು ಜೀರ್ಣವ್ಯವಸ್ಥೆಯನ್ನು ಶುದ್ದೀಕರಿಸಿ ಕಲ್ಮಶಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತದೆ ಹಾಗೂ ಈ ಮೂಲಕ ಮಲಬದ್ದತೆಯಾಗುವುದನ್ನು ತಡೆಯುತ್ತದೆ. ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಇದೆ ಹಾಗೂ ಇದು ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತವೆ. ಅಷ್ಟೇ ಅಲ್ಲ, ಗಾಯಗಳಿಂದ ರಕ್ತ ಸೋರದಂತೆ ಹೆಪ್ಪುಗಟ್ಟಿದ್ದ ರಕ್ತದ ಕಣಗಳನ್ನೂ ಗಾಯ ಮಾಗಿದ ಬಳಿಕ ನಿವಾರಿಸಿ ವಿಸರ್ಜಿಸುವ ಕೆಲಸವನ್ನೂ ಸಮರ್ಥವಾಗಿ ನಿಭಾಯಿಸುತ್ತದೆ, ಈ ಮೂಲಕ ರಕ್ತವನ್ನು ಇನ್ನಷ್ಟು ಶುದ್ದೀಕರಿಸಲು ಸಾಧ್ಯವಾಗುತ್ತದೆ.

  Most Read: ನಾಟಿ ಔಷಧಿಗಳು: ಶೀತ ಹಾಗೂ ಕೆಮ್ಮಿನ ಸಮಸ್ಯೆ ಒಂದೇ ದಿನಗಳಲ್ಲಿ ಮಂಗಮಾಯ!


 • ನೀರು

  ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ನೀರು ಸಹಾ ಅತ್ಯುತ್ತಮ ರಕ್ತಶುದ್ದೀಕಾರಕವಾಗಿದೆ. ಈ ನೈಸರ್ಗಿಕ ದ್ರವ ಮೂತಪಿಂಡ ರಕ್ತದಿಂದ ಶೋಧಿಸಿದ ಕಲ್ಮಶಗಳನ್ನು ತನ್ನಲ್ಲಿ ಕರಗಿಸಿಕೊಂಡು ಮೂತ್ರದ ರೂಪದಲ್ಲಿ ದೇಹದಿಂದ ವಿಸರ್ಜಿಸಲ್ಪಡುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ನೀರು ಅತ್ಯಗತ್ಯವಾಗಿ ಬೇಕಾಗಿದ್ದು ನೀರಿಲ್ಲದೇ ಇದ್ದರೆ ಎಲ್ಲಾ ಅಂಶಗಳ ಕ್ಷಮತೆ ಉಡುಗುತ್ತದೆ. ಈ ಎಲ್ಲಾ ಅಂಗಗಳ ಕಲ್ಮಶಗಳನ್ನೂ ತನ್ನಲ್ಲಿ ಕರಗಿಸಿಕೊಂಡು ಹೊರಚೆಲ್ಲುವ ಜವಾಬ್ದಾರಿ ನೀರಿನದ್ದು. ಆಯುರ್ವೇದದ ಪ್ರಕಾರ, ರಕ್ತಶುದ್ದೀಕರಣಕ್ಕೆ ನೀರನ್ನು ಬಳಸುವ ವಿಧಾನ ಹೀಗಿದೆ: ತಾಮ್ರದ ಪಾತ್ರೆಯಲ್ಲಿ ನೀರನ್ನು ರಾತ್ರಿಯಿಡೀ ಸಂಗ್ರಹಿಸಿ ಮರುದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸಬೇಕು. ತಾಮ್ರದ ಪಾತ್ರೆಯಲ್ಲಿಟ್ಟ ನೀರು ರಕ್ತವನ್ನು ಶುದ್ದೀಕರಿಸಿ ಕಲ್ಮಶವನ್ನು ಪ್ರತ್ಯೇಕಿಸಿ ಬಳಲಿರುವ ನಮ್ಮ ಯಕೃತ್ ಅನ್ನು ತಂಪುಗೊಳಿಸುತ್ತದೆ ಹಾಗೂ ರಕ್ತದಿಂದ ಈ ಕಲ್ಮಶಗಳನ್ನು ನೀರಿನಲ್ಲಿ ಬೆರೆಸಿ ವಿಸರ್ಜಿಸಲು ನೆರವಾಗುತ್ತದೆ.


 • ಅರಿಶಿನ

  ಉರಿಯೂತದ ವಿರುದ್ದ ಹೋರಾಡುವ ಗುಣ ಇರುವ ಅತ್ಯುತ್ತಮ ನೈಸರ್ಗಿಕ ಆಹಾರವೆಂದರೆ ಅರಿಶಿನ. ಅರಿಶಿನ ಯಕೃತ್ ನ ಕ್ಷಮತೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಇದರಲ್ಲಿರುವ ಕುರ್ಕುಮಿನ್ ಎಂಬ ಸಂಯುಕ್ತ ಪದಾರ್ಥ ದೇಹಕ್ಕೆ ಎದುರಾಗುವ ಹಲವಾರು ರೋಗಕಾರಕ ವಸ್ತುಗಳಿಂದ ರಕ್ಷಣೆ ಒದಗಿಸುತ್ತದೆ. ಅರಿಶಿನ ಬೆರೆಸಿದ ಹಾಲನ್ನು ನಿತ್ಯವೂ ಕುಡಿಯುವಂತೆ ಹಲವು ಆಹಾರತಜ್ಞರು ಸಲಹೆ ಮಾಡುತ್ತಾರೆ. ಈ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಂಪುರಕ್ತಕಣಗಳ ಸಂಖ್ಯೆ ವೃದ್ದಿಯಾಗುವ ಜೊತೆಗೇ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಹಾಗೂ ಈ ಮೂಲಕ ಇದೊಂದು ಅತ್ಯುತ್ತಮ ಟಾನಿಕ್ ಸಹಾ ಆಗಿದೆ.


 • ಲಿಂಬೆ

  ಲಿಂಬೆರಸ ಬೆರೆಸಿದ ಉಗುರುಬೆಚ್ಚನೆಯ ನೀರಿನ ಸೇವನೆಯಿಂದ ರಕ್ತದಲ್ಲಿರುವ ಕೊಬ್ಬಿನ ಕಣಗಳು ಒಡೆದು ಮೂತ್ರಪಿಂದಗಳ ಮೇಲಿನ ಭಾರವನ್ನು ತಗ್ಗಿಸಬಹುದು. ಈ ಮೂಲಕ ಲಿಂಬೆಯಲ್ಲಿರುವ ವಿಟಮಿನ್ನುಗಳು ಅಗತ್ಯ ಪೋಷಣೆಯನ್ನು ಒದಗಿಸುವ ಜೊತೆಗೇ ರಕ್ತಶುದ್ದೀಕರಣ ಹಾಗೂ ಒಟ್ಟಾರೆ ಆರೋಗ್ಯ ವೃವಸ್ಥೆಯೂ ಉತ್ತಮಗೊಳ್ಳುತ್ತದೆ. ಈ ಆಹಾರಗಳನ್ನು ನಿತ್ಯದ ಆಹಾರವನ್ನಾಗಿ ಪರಿಗಣಿಸುವ ಮೂಲಕ ರಕ್ತಶುದ್ದೀಕರಣ ವ್ಯವಸ್ಥೆಯನ್ನು ಅತ್ಯುತ್ತಮಗೊಳಿಸಿ ಉತ್ತಮ ಆರೋಗ್ಯದ ಭಾಗ್ಯವನ್ನು ಪಡೆಯಬಹುದು.
ನಮ್ಮ ದೇಹದ ರಕ್ತಕ್ಕೆ ಹಲವಾರು ಜವಾಬ್ದಾರಿಗಳಿವೆ. ಎಲ್ಲಕ್ಕಿಂತ ಮುಖ್ಯ ಕಾರ್ಯವೆಂದರೆ ಶ್ವಾಸಕೋಶದಿಂದ ಆಮ್ಲಜನಕವನ್ನು ಪಡೆದು ದೇಹದ ಪ್ರತಿ ಜೀವಕೋಶಕ್ಕೂ ತಲುಪಿಸುವುದು ಹಾಗೂ ಕಲ್ಮಶಗಳನ್ನು ಹೊತ್ತು ತಂದು ದೇಹದಿಂದ ವಿಸರ್ಜಿಸುವುದು. ಜೊತೆಗೇ ವಿವಿಧ ರಸದೂತಗಳು, ಸಕ್ಕರೆ, ಕೊಬ್ಬು ಮೊದಲಾದವುಗಳನ್ನು ಅವುಗಳು ತಲುಪಬೇಕಾದ ಸ್ಥಳಗಳಿಗೆ ಕೊಂಡೊಯ್ದು ತಲುಪಿಸುವುದು, ರಕ್ತ ನಿರೋಧಕ ಶಕ್ತ್ಗಿಗೆ ಅಗತ್ಯವಾದ ಜೀವಕೋಶಗಳು (ವಿಶೇಷವಾಗಿ ಬಿಳಿ ರಕ್ತಕಣಗಳು) ಹಾಗೂ ಇತರ ಅಂಶಗಳನ್ನು ತಲುಪಿಸುವುದು, ಗಾಯವಾದರೆ ತಕ್ಷಣವೇ ಗೋಡೆಯಂತೆ ಒಂದಕ್ಕೊಂದು ಕಣಗಳು ಅಂಟಿಕೊಂಡು ರಕ್ತ ನಷ್ಟವಾಗುವುದನ್ನು ತಪ್ಪಿಸುಸುವು ಮೊದಲಾದ ಹತ್ತು ಹಲವು ಪ್ರಮುಖ ಕಾರ್ಯಗಳಿವೆ. ಜೀವನ ಪರ್ಯಂತ ರಕ್ತ ಸತತವಾಗಿ ನಮ್ಮ ದೇಹದಲ್ಲಿ ಹರಿಯುತ್ತಲೇ ಇರುತ್ತದೆ.

ನಮ್ಮ ಆಹಾರ, ಉಸಿರಾಟದ ಮೂಲಕ ನಾವು ಸೇವಿಸುವ ಘನ, ದ್ರವ ಮತ್ತು ವಾಯುಗಳಲ್ಲಿಯೂ ವಿಷಕಾರಿ ಅಂಶಗಳಿದ್ದು ಪ್ರಮುಖ ಅಂಗಗಳು ಇವುಗಳನ್ನು ಶೋಧಿಸಿದ ಬಳಿಕ ಈ ತ್ಯಾಜ್ಯಗಳನ್ನು ಸತತವಾಗಿ ದೇಹದಿಂದ ವಿಸರ್ಜಿಸುತ್ತಲೇ ಇರಬೇಕು. ಅಚ್ಚರಿ ಎಂದರೆ ಮಾನಸಿಕ ಒತ್ತಡದಿಂದಲೂ ನಮ್ಮ ರಕ್ತ ಅಶುದ್ಧಿಗೊಳ್ಳುತ್ತದೆ. ಈ ರಕ್ತವನ್ನು ಶುದ್ದೀಕರಿಸುವ ಮೂಲಕ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ, ತ್ವಚೆ ಕಳಕಳಿಸುತ್ತದೆ ಹಾಗೂ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನೈಸರ್ಗಿಕ ಶುದ್ದೀಕರಣ ಕ್ರಿಯೆಯಲ್ಲಿ ನಮ್ಮ ಮೂತ್ರಪಿಂಡಗಳು, ಯಕೃತ್, ಶ್ವಾಸಕೋಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರ್ಯದಲ್ಲಿ ಕೆಲವು ಆಹಾರಗಳು ತಮ್ಮ ಸಹಕಾರವನ್ನು ಒದಗಿಸಿ ಈ ಅಂಗಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಕ್ಷಮತೆ ಹೊಂದಿವೆ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಆದರೆ ಇದಕ್ಕೂ ಮುನ್ನ ನಮ್ಮ ರಕ್ತವನ್ನು ಶುದ್ದೀಕರಿಸುವುದು ಎಷ್ಟು ಅಗತ್ಯ ಎಂದು ನೋಡೋಣ.....

   
 
ಹೆಲ್ತ್