Back
Home » ಆರೋಗ್ಯ
ಬರೀ ನಾಲ್ಕು ವಾರದಲ್ಲಿ, ಲಿವರ್‌ನ್ನು ಶುದ್ಧೀಕರಿಸುವ ಪವರ್ 'ಬೀಟ್‌ರೂಟ್ ಜ್ಯೂಸ್‌‌'ನಲ್ಲಿದೆ!
Boldsky | 15th Jan, 2019 10:57 AM
 • ಯಕೃತ್ ಶುದ್ದೀಕರಣಕ್ಕೆ ಐದು ಬೀಟ್ರೂಟ್ ಆಧಾರಿತ ಪೇಯಗಳು:

  *1. ಬೀಟ್ರೂಟ್ ಯಕೃತ್ ಸ್ವಚ್ಛಾತಾ ಪಾನೀಯ
  *1 ದೊಡ್ಡ ಗಾತ್ರದ ಬೀಟ್ರೂಟ್
  *1 ಹಸಿರು ಸೇಬು
  *3 ಕ್ಯಾರೆಟ್ ಗಳು
  *4 ದಂಟು ಸೆಲೆರಿ ಸೊಪ್ಪು
  *½ ಲಿಂಬೆ, ಸಿಪ್ಪೆ ಸಹಿತ

  Most Read: ದೇಹದ ಎರಡೂ ಕಿಡ್ನಿಗಳನ್ನು ಸ್ವಚ್ಛಗೊಳಿಸುವ ನೈಸರ್ಗಿಕ ಜ್ಯೂಸ್‌ಗಳು


 • ಲಿಂಬೆ-ಬೀಟ್ರೂಟ್ ಪಾನೀಯ

  ಲಿಂಬೆಯಲ್ಲಿರುವ ಅಧಿಕ ಪ್ರಮಾಣದ ಬಯೋಫ್ಲೇವನಾಯ್ಡುಗಳಿಂದಾಗಿ ಇವನ್ನು ಹಲವಾರು ಸ್ವಚ್ಛತಾ ಪಾನೀಯಗಳಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಯಾವುದೇ ಪಾನೀಯದ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಲಿಂಬೆ-ಬೀಟ್ರೂಟ್ ಪಾನೀಯಕ್ಕಾಗಿ ಕೆಳಗೆ ವಿವರಿಸಿದ ಎಲ್ಲವನ್ನು ಜ್ಯೂಸರ್ ನಲ್ಲಿ ಹಾಕಿ ಗೊಟಾಯಿಸಿ:
  *1 ದೊಡ್ಡ ಗಾತ್ರದ ಬೀಟ್ರೂಟ್
  *1 ಚಕ್ಕೋತ
  *1 ಕಿತ್ತಳೆ
  *1 ದೊಡ್ಡ ಅಥವಾ ಎರಡು ಚಿಕ್ಕ ಲಿಂಬೆ
  *1 ಇಂಚಿನಷ್ಟು ಹಸಿಶುಂಠಿ


 • ಮಸಾಲೆಯುಕ್ತ ಕೆಂಪು ಬೀಟ್ರೂಟ್ ಪಾನೀಯ

  ಈ ಪಾನೀಯ ಕೊಂಚ ಕಮಟು ರುಚಿಯನ್ನು ಹೊಂದಿದ್ದು ಎಲ್ಲರಿಗೂ ಇಷ್ಟವಾಗದೇ ಹೋಗಬಹುದು. ಆದರೆ ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಗರಿಷ್ಟವಾಗಿರುವ ಕಾರಣ ರುಚಿಯನ್ನು ಕಡೆಗಣಿಸಿ ಸೇವಿಸಿದರೆ ಹೆಚ್ಚಿನ ಪ್ರಯೋಜನವಿದೆ. ಈ ಪಾನೀಯ ತಯಾರಿಸಲು ಅಗತ್ಯವಾಗಿರುವುದೆಂದರೆ:
  *2 ದೊಡ್ಡ ಗಾತ್ರದ ಬೀಟ್ರೂಟ್
  *2 ಅಥವಾ 3 ಕೆಂಪು ಅಥವಾ ಹಳದಿ ದೊಣ್ಣೆಮೆಣಸು
  *1 ಜಾಲೆಪಾನೋ ಮೆಣಸು (jalapeno pepper)
  *1 ಲಿಂಬೆ

  Most Read: ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ


 • ನೇರಳೆ ಶುಂಠಿ ಮತ್ತು ಬೀಟ್ರೂಟ್ ಪಾನೀಯ

  ನೇರಳೆ ಶುಂಠಿ (purple beetroot) ಪಾನೀಯ ಮದ್ಯಾಹ್ನದ ಸಮಯ ಸೇವಿಸಲು ಅತ್ಯುತ್ತಮವಾಗಿದೆ. ಈ ಪಾನೀಯ ತಯಾರಿಸಲು ಅಗತ್ಯವಾಗಿರುವುದೆಂದರೆ:
  *1 ದೊಡ್ಡ ಗಾತ್ರದ ಬೀಟ್ರೂಟ್
  *¼ ಭಾಗ ಕೆಂಪು ಎಲೆಕೋಸು
  *1 ಸೌತೆ
  *4 ದಂಟು ಸೆಲೆರಿ ಎಲೆಗಳು
  *1 ಲಿಂಬೆ
  *1 ಇಂಚು ಹಸಿ ನೇರಳೆ ಶುಂಠಿ


 • ಗಡ್ಡೆಗಳು ಮತ್ತು ಬೀಟ್ರೂಟ್ ಪಾನೀಯ

  ಈ ವಿಧಾನದಲ್ಲಿ ಶುಂಠಿ ಮತ್ತು ಅರಿಸಿನದ ಸಹಿತ ಕೆಲವು ಬಗೆಯ ಗಡ್ಡೆಗಳನ್ನು ಬಳಸಲಾಗಿದೆ. ಹಸಿ ಅರಿಶಿನದ ಕೊಂಬು ಭಾರತೀಯ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸಕಾಗುತ್ತದೆ ಹಾಗೂ ಇದರ ಸೇವನೆಯಿಂದ ಹಲವಾರು ಬಗೆಯ ಪ್ರಯೋಜನಗಳಿವೆ. ಗಡ್ಡೆಗಳು ಮತ್ತು ಬೀಟ್ರೂಟ್ ಪಾನೀಯಕ್ಕಾಗಿ ಕೆಳಗೆ ವಿವರಿಸಿದ ಎಲ್ಲವನ್ನು ಜ್ಯೂಸರ್ ನಲ್ಲಿ ಹಾಕಿ ಗೊಟಾಯಿಸಿ:
  *1 ದೊಡ್ಡ ಬೀಟ್ರೂಟ್
  *1 ಜಿಕಾಮಾ ಗಡ್ಡೆ (jicama ಅಥವಾ Pachyrhizus erosus)
  *3 ಕ್ಯಾರೆಟ್ ಗಳು
  *1 ಇಂಚು ಹಸಿ ಅರಿಶಿನದ ಕೊಂಬು
  *1 ಇಂಚು ಹಸಿ ಶುಂಠಿ

  Most Read: ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ


 • ಈ ವಿಧಾನವನ್ನು ಸತತ ನಾಲ್ಕು ವಾರ ಅನುಸರಿಸಿ

  ಈ ವಿಧಾನವನ್ನು ಪ್ರಾರಂಭಿಸುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅಗತ್ಯವಾಗಿದೆ. ಈ ಅವಧಿಯಲ್ಲಿ ನಿಮ್ಮ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಈ ವಿಧಾನ ಅನುಸರಿಸುವ ಸಮಯದಲ್ಲಿ ನಿಮಗೆ ಸುಸ್ತು ಎನಿಸಿದರೆ ತಕ್ಷಣವೇ ಈ ವಿಧಾನವನ್ನು ನಿಲ್ಲಿಸಿ ನಿಮ್ಮ ನಿತ್ಯದ ಆಹಾರವನ್ನು ಸೇವಿಸಲು ಪ್ರಾರಂಭಿಸಬೇಕು. ಅಲ್ಲದೇ ಒಂದು ವೇಳೆ ನಿಮಗೆ ಬೇರೆ ಯಾವುದಾದರೂ ಅಡ್ಡಪರಿಣಾಮಗಳು ಎದುರಾದರೆ, ಉದಾಹರಣೆಗೆ ತಲೆ ತಿರುಗುವಿಕೆ, ವಾಕರಿಕೆ, ತಲೆನೋವು ಇತ್ಯಾದಿ ಎದುರಾದರೂ ಈ ವಿಧಾನವನ್ನು ನಿಲ್ಲಿಸಬೇಕು.


 • ಯಕೃತ್ ಪೂರ್ಣವಾಗಿ ಶುದ್ದೀಕರಣಗೊಳ್ಳಲು ಕೆಲವಾರು ವಾರಗಳೇ ಬೇಕಾಗುತ್ತವೆ

  ಸಾಮಾನ್ಯವಾಗಿ ಯಕೃತ್ ಪೂರ್ಣವಾಗಿ ಶುದ್ದೀಕರಣಗೊಳ್ಳಲು ಕೆಲವಾರು ವಾರಗಳೇ ಬೇಕಾಗುತ್ತವೆ. ಮೇಲೆ ವಿವರಿಸಿದ ಐದು ವಿಧಾನಗಳಲ್ಲಿ ಒಂದೊಂದು ವಿಧಾನವನ್ನು ಒಂದೊಂದು ಬಾರಿ, ಅಂದರೆ ವಾರದಲ್ಲಿ ಕನಿಷ್ಟ ಮೂರು ದಿನ (ದಿನ ಬಿಟ್ಟು ದಿನ ಆದರೆ ಒಳ್ಳೆಯದು, ಸಾಧ್ಯವಿಲ್ಲದಿದ್ದರೆ ಮೂರು ಸತತ ದಿನಗಳು), ದಿನದ ಅವಧಿಯಲ್ಲಿ ಸುಮಾರು ಎರಡರಿಂದ ಮೂರು ದೊಡ್ಡ ಲೋಟದಷ್ಟು ಈ ಪಾನೀಯವನ್ನು ಕುಡಿದು ಖಾಲಿ ಮಾಡಬೇಕು. ಮೇಲೆ ವಿವರಿಸಿದ ಪ್ರಮಾಣಗಳು ಒಂದು ಲೋಟ ಪಾನೀಯ ತಯಾರಿಸಲು ಸಾಕಾಗುತ್ತದೆ. ಆ ಪ್ರಕಾರ ಎರಡರಿಂದ ಮೂರು ಲೋಟ ಪಾನೀಯ ತಯಾರಿಸಲು ಈ ಸಾಮಗ್ರಿಗಳನ್ನೂ ಹೆಚ್ಚಿಸಬೇಕು. ಎರಡು ಮೂರು ದಿನಕ್ಕಾಗುವಷ್ಟು ಪ್ರಮಾಣವನ್ನು ಒಮ್ಮೆಲೇ ತಯಾರಿಸಿ ಆ ವಾರವಿಡೀ ಸೇವಿಸಬಹುದು. ಮುಂದಿನ ವಾರ ಬೇರೆಯೇ ವಿಧಾನವನ್ನು ಅನುಸರಿಸಿ, ಹೀಗೆ ನಾಲ್ಕು ವಾರಗಳಿಂದ ಐದು ವಾರಗಳವರೆಗೆ ನಾಲ್ಕರಿಂದ ಐದೂ ವಿಧಾನಗಳನ್ನು ಅನುಸರಿಸಬೇಕು. ಈ ವಿಧಾನವನ್ನು ಪ್ರತಿ ಮೂರರಿಂದ ಆರು ತಿಂಗಳ ಅವಧಿಯಲ್ಲಿ ಪುನರಾವರ್ತಿಸುವ ಮೂಲಕ ಯಕೃತ್ ಅತ್ಯುತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.

  Most Read: ತೂಕ ಇಳಿಸಬೇಕೇ? ಹಾಗಾದರೆ ಈ 14 ದಿನಗಳ ಲಿಂಬೆ-ನೀರಿನ ಚಾಲೆಂಜ್ ಸ್ವೀಕರಿಸಿ!


 • ತಾಜಾ ಹಣ್ಣು ತರಕಾರಿಗಳು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ

  ಈ ಅವಧಿಯಲ್ಲಿ ಯಕೃತ್ ಗೆ ಹೆಚ್ಚಿನ ಒತ್ತಡ ಹೇರದ, ಸಾಮಾನ್ಯ ಆಹಾರಗಳನ್ನೇ ಸೇವಿಸಬೇಕು. ಹೆಚ್ಚು ಹೆಚ್ಚು ತಾಜಾ ಹಣ್ಣು ತರಕಾರಿಗಳು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಿದಾಗಲೇ ಯಕೃತ್ ನಿಂದ ಕಲ್ಮಶಗಳು ನಿವಾರಣೆಗೊಳ್ಳಲು ಸಾಧ್ಯವಾಗುತ್ತದೆ.


 • ಸತತ ನಾಲ್ಕು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿ

  ಸತತ ನಾಲ್ಕು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿದ ಬಳಿಕ, ನಿಮ್ಮ ದೇಹದಲ್ಲಿ ಚೈತನ್ಯ, ಶಕ್ತಿ ಹಾಗೂ ಜಾಗರೂಕತೆ ಹೆಚ್ಚುವುದನ್ನು ಗಮನಿಸಬಹುದು. ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ, ಈ ವಿಧಾನದಿಂದ ಆರೋಗ್ಯಕರ ಮಿತಿಗಳಿಗೆ ಇಳಿಯಲು ಈ ವಿಧಾನ ನೆರವಾಗುತ್ತದೆ. ಅಲ್ಲದೇ ಸಂಧಿವಾತ, ಮೈ ಕೈ ನೋವು ಮೊದಲಾದ ಇತರ ತೊಂದರೆಗಳೂ ಮಾಯವಾಗಿರುವುದನ್ನು ಗಮನಿಸಬಹುದು.
ನಮ್ಮ ಯಕೃತ್ ಅಥವಾ ಲಿವರ್ ಅನ್ನು ಶುದ್ಧೀಕರಿಸಿ ಇಲ್ಲಿ ಕಾಲಕ್ರಮೇಣ ಸಂಗ್ರಹವಾಗಿದ್ದ ಎಲ್ಲಾ ಕಲ್ಮಶಗಳನ್ನು ನಿವಾರಿಸುವುದೇ ಈ ವಿಧಾನದ ಉದ್ದೇಶವಾಗಿದೆ. ರುಚಿ ಎಂದು ಸೇವಿಸಿದ್ದ ಹಲವಾರು ಸಿದ್ಧ, ಸಂಸ್ಕರಿಸಿದ ಅನಾರೋಗ್ಯಕರ ಆಹಾರಗಳ ಸೇವನೆಯಿಂದ ಈ ಕಲ್ಮಶಗಳು ಇಲ್ಲಿ ಉಳಿದುಕೊಂಡಿವೆ. ಇವನ್ನು ನಿವಾರಿಸಲು ಬೀಟ್ರೂಟ್ ಆಧಾರಿತ ಈ ಐದು ಪೇಯಗಳನ್ನು ಸೇವಿಸುವ ಮೂಲಕ ಯಕೃತ್ ಕಲ್ಮಶರಹಿತವಾಗುವ ಜೊತೆಗೇ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಈ ಪೇಯಗಳಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಗುಣದೊಂದಿಗೇ ಜೀರ್ಣವ್ಯವಸ್ಥೆಯಲ್ಲಿರುವ ತೊಂದರೆಗಳನ್ನು ನಿವಾರಿಸುವ ಕ್ಷಮತೆಯೂ ಇದೆ. ವಿಶೇಷವಾಗಿ ಯಕೃತ್ ನ ಸ್ವಚ್ಛತೆಯ ಮೂಲಕ ಇಲ್ಲಿ ಸಂಗ್ರಹಗೊಂಡಿದ್ದ ಕೊಬ್ಬು (atty liver) ಪಿತ್ತಗಲ್ಲು (gall stones) ಉಂಟಾಗುವುದನ್ನು ತಡೆಯುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಜೊತೆಗೇ ಹಲವಾರು ಅಲರ್ಜಿಗಳಿಂದ ರಕ್ಷಣೆಯನ್ನೂ ಒದಗಿಸುತ್ತದೆ. ಕೆಲವು ವ್ಯಕ್ತಿಗಳು ಈ ವಿಧಾನದಿಂದ ಯಕೃತ್ ಅನ್ನು ಸ್ವಚ್ಛಗೊಳಿಸಿದ ಬಳಿಕ ತಮ್ಮ ದೇಹದ ರಕ್ತದ ಸಕ್ಕರೆಯ ಮಟ್ಟ ಸಮತೋಲನಕ್ಕೆ ಬಂದಿರುವುದನ್ನೂ ಸುಸ್ತಾಗುತ್ತಿದ್ದುದು ಈಗ ಆಗುತ್ತಿಲ್ಲವೆಂದೂ ಹಾಗೂ ದೇಹದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿಕ್ಕ ಪುಟ್ಟ ನೋವುಗಳು ಇಲ್ಲವಾಗಿರುವುದನ್ನೂ ವರದಿ ಮಾಡಿದ್ದಾರೆ.

ಯಕೃತ್ ಅನ್ನು ಸ್ವಚ್ಛಗೊಳಿಸುವ ಕೆಲವಾರು ವಿಧಾನಗಳಲ್ಲಿ ಕೆಲವು ಬಗೆಯ ಜ್ಯೂಸ್ ಗಳನ್ನು ಸತತವಾಗಿ ಕೆಲವು ದಿನಗಳವರೆಗೆ ಕುಡಿಯುವುದಾಗಿದೆ. ಆದರೆ ಒಂದೇ ಬಗೆಯ ಜ್ಯೂಸ್ ಕುಡಿಯುವ ಬದಲು ಕೊಂಚ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು ಹಾಗೂ ದೇಹಕ್ಕೆ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳನ್ನೂ ಖನಿಜಗಳನ್ನೂ ಒದಗಿಸಬಹುದು. ಈ ಕ್ಷಮತೆಯುಳ್ಳ ಕೆಲವು ವಿಧಾನಗಳನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಇವುಗಳಲ್ಲಿ ನಿತ್ಯವೂ ಭಿನ್ನವಾಗಿರುವುದನ್ನು ಪ್ರಯತ್ನಿಸಿ.

ಆದರೆ ಈ ವಿಧಾನವನ್ನು ಪ್ರಯತ್ನಿಸುವ ಮುನ್ನ ಬೀಟ್ರೂಟ್ ಬಗ್ಗೆ ಕೆಲವು ಸುರಕ್ಷತಾ ಕ್ರಮಗಳನ್ನು ಪಾಲಿಸುವುದೂ ಅಗತ್ಯವಾಗಿದೆ. ಒಂದು ವೇಳೆ ನಿಮಗೆ ಮಲಬದ್ದತೆಯ ತೊಂದರೆ ಇದ್ದರೆ (ಅಥವಾ ಕನಿಷ್ಟ ದಿನಕ್ಕೊಂದು ಬಾರಿಯಾದರೂ ಮಲವಿಸರ್ಜನೆಯಾಗದೇ ಇದ್ದರೆ) ಈ ವಿಧಾನವನ್ನು ಅನುಸರಿಸುವ ಬದಲು ಸಂಪೂರ್ಣ ಜೀರ್ಣಕ್ರಿಯೆಯ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸುವ ಬಳಿಕವೂ ಯಕೃತ್ ನ ಸ್ವಚ್ಛತಾ ಕ್ರಮಕ್ಕೆ ಮುಂದಾಗಬೇಕು. ಜೀರ್ಣಕ್ರಿಯೆಯ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಯಕೃತ್ ಶುದ್ದೀಕರಣ ಸುಲಭ, ಇನ್ನಷ್ಟು ಪರಿಣಾಮಕಾರಿ ಹಾಗೂ ಅಳಿದುಳಿದ ಕಲ್ಮಶಗಳನ್ನು ಮತ್ತೊಮ್ಮೆ ಯಕೃತ್ ಹೀರಿಕೊಳ್ಳದಂತೆ ತಡೆಯಬಹುದು.

   
 
ಹೆಲ್ತ್