Back
Home » ಇತ್ತೀಚಿನ
ಮತ್ತೆ ಬದಲಾಯ್ತು ಕೇಬಲ್ ನಿಯಮ!..ಇನ್ಮುಂದೆ ಕೇಬಲ್ ಬಿಲ್ 137 ರೂ. ದಾಟಲ್ಲ!..ಏಕೆ ಗೊತ್ತಾ?
Gizbot | 15th Jan, 2019 05:26 PM
 • ಟ್ರಾಯ್‌ ನಿಯಮಕ್ಕೆ ಪರಿಷ್ಕರಣೆ

  ಇತ್ತೀಚಿಗಷ್ಟೇ ನೂತನ ಕೇಬಲ್ ನಿಯಮವನ್ನು ಜಾರಿಗೊಳಿಸಿದ್ದ ಟ್ರಾಯ್‌ ಈಗ ಆ ನಿಯಮವನ್ನು ಪರಿಷ್ಕರಣೆ ಮಾಡಿದೆ. ಹಳೆ ನಿಯಮದಲ್ಲಿ ಮಾಸಿಕ ಟಿವಿ ವೀಕ್ಷಣೆ ಬಿಲ್‌ ಜಾಸ್ತಿಯಾಗುವ ಆತಂಕ ವೀಕ್ಷಕರಿಗೆ ಎದುರಾದ್ದರಿಂದ ಟಿವಿ ವಾಹಿನಿ ಸಂಸ್ಥೆಗಳು, ಕೇಬಲ್‌ ಹಾಗೂ ಡಿಟಿಎಚ್‌ ಕಂಪನಿಗಳ ಜೊತೆ ಮಾತುಕತೆ ನಡೆಸಿದ ಟ್ರಾಯ್‌ ನಿಯಮಕ್ಕೆ ಪರಿಷ್ಕರಣೆ ಮಾಡಿದೆ.


 • ಈಗ ಪಾವತಿ ಸಹಿತ ಚಾನೆಲ್‌ ಆಯ್ಕೆ!

  ಈ ಮೊದಲಿದ್ದಂತೆ 100 ಉಚಿತ ಚಾನೆಲ್‌ಗ‌ಳನ್ನು 130 ರೂ. ದರದಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶದ ಬದಲಾಗಿ ಈಗ ಪಾವತಿ ಸಹಿತ ಚಾನೆಲ್‌ ಆಯ್ಕೆಯನ್ನು ನೀಡಲಾಗಿದೆ. 100 ಉಚಿತ ಅಥವಾ ಪಾವತಿ ಸಹಿತ ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಟಿವಿ ವೀಕ್ಷಕರಿಗೆ ಟ್ರಾಯ್‌ ನೀಡಿದೆ. ಇದಕ್ಕೆ ಜಿಎಸ್‌ಟಿ ಸಹಿತ 153 ರೂ. ಪಾವತಿ ಮಾಡಬೇಕಾಗುತ್ತದೆ.


 • ಏನಿದು ಹೊಸ ನಿಯಮ?

  ಇನ್ಮುಂದೆ ಜಿಎಸ್‌ಟಿ ಸೇರಿದಂತೆ ಮಾಸಿಕ 153.40 ರೂ.ಗೆ ಜನರು 100 ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ 100 ಚಾನೆಲ್‌ಗ‌ಳಲ್ಲಿ ಪಾವತಿ ಚಾನೆಲ್‌ಗ‌ಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನೆಲ್‌ಗ‌ಳ ದರವು 130 ರೂ. ಅನ್ನು ಮೀರುವಂತಿಲ್ಲ. ಅಂದರೆ 13 ರೂ. ಬೆಲೆಯ 10 ಚಾನೆಲ್‌ಗ‌ಳನ್ನಷ್ಟೇ ಗ್ರಾಹಕರು ಇಲ್ಲಿ ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದು.


 • ಹೆಚ್‌ಡಿ ಚಾನೆಲ್‌ಗೆ ಹೆಚ್ಚುವರಿ ಪಾವತಿ

  ಹೆಚ್‌ಡಿ ಚಾನೆಲ್‌ಗ‌ಳ ಬಗ್ಗೆ ಟ್ರಾಯ್‌ ತನ್ನ ಪ್ರಕಟಣೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಹೆಚ್‌ಡಿ ಚಾನೆಲ್‌ಗೆ ಹೆಚ್ಚುವರಿ ಪಾವತಿ ಮಾಡಬೇಕಿರುತ್ತದೆ. ಮೂಲದ ಪ್ರಕಾರ ಒಂದು ಎಚ್‌ಡಿ ಚಾನೆಲ್‌ ಅನ್ನು ಎರಡು ಎಸ್‌ಡಿ ಚಾನೆಲ್‌ ಎಂದು ಸಂಖ್ಯೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಇಲ್ಲಿ 130 ರೂ. ಒಳಗೆ ಹೆಚ್‌ಡಿ ಚಾನೆಲ್‌ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ.


 • ದರವು 19 ರೂ. ಮೀರುವಂತಿಲ್ಲ!

  ಪಾವತಿ ಚಾನೆಲ್‌ಗ‌ಳನ್ನು ಪಡೆಯಲು ಪ್ರತಿ ಚಾನೆಲ್‌ಗೆ ಹೆಚ್ಚುವರಿ ಹಣ ತೆರಬೇಕಾಗಿತ್ತು. ಪಾವತಿ ಚಾನೆಲ್‌ಗೆ 25 ಪೈಸೆಯಿಂದ 24 ರೂ.ವರೆಗೂ ದರವಿತ್ತು. ಆದರೆ, ಟ್ರಾಯ್‌ ಕೈಗೊಂಡ ಈಗಿನ ಇನ್ನೊಂದು ಪ್ರಮುಖ ನಿರ್ಧಾರವೆಂದರೆ ಯಾವುದೇ ಚಾನೆಲ್‌ಗೆ ದರವು 19 ರೂ. ಅನ್ನು ಮೀರುವಂತಿಲ್ಲ. ಈ ಹಿಂದೆ 24 ರೂ.ಗಳವರೆಗೂ ಚಾನೆಲ್‌ಗೆ ದರ ನಿಗದಿಪಡಿಸಲಾಗಿತ್ತು.


 • ಗ್ರಾಹಕರು ಫುಲ್ ಖುಷ್!

  ನೂತನ ನಿಯಮದಲ್ಲಿ ಕನ್ನಡದ ಚಾನಲ್ ವೀಕ್ಷಕರಿಗೆ ಭಾರೀ ಲಾಭವಿದೆ. ಸದ್ಯ ಕನ್ನಡದ ಹೆಚ್ಡಿ ಚಾನೆಲ್‌ಗ‌ಳನ್ನು ಹೊರತುಪಡಿಸಿ ಎಲ್ಲ ಪಾವತಿ ಚಾನೆಲ್‌ಗ‌ಳನ್ನು ಲೆಕ್ಕ ಹಾಕಿದರೆ ಒಟ್ಟು ಕೇವಲ 137 ರೂ. ಆಗಲಿದ್ದು, 15 ಚಾನೆಲ್‌ಗ‌ಳು ಲಭ್ಯವಾಗಲಿವೆ. ಉಳಿದ 85 ಉಚಿತ ಚಾನೆಲ್‌ಗ‌ಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.


 • ಇನ್ಮುಂದೆ ಕೇಬಲ್ ಬಿಲ್ 137 ರೂ. ದಾಟಲ್ಲ!

  ಕನ್ನಡದ ಹೆಚ್ಡಿ ಚಾನೆಲ್‌ಗ‌ಳನ್ನು ಹೊರತುಪಡಿಸಿ ಎಲ್ಲ ಪಾವತಿ ಚಾನೆಲ್‌ಗ‌ಳನ್ನು ಲೆಕ್ಕ ಹಾಕಿದರೆ ಒಟ್ಟು ಕೇವಲ 137 ರೂ. ಆಗಲಿದ್ದು, 15 ಚಾನೆಲ್‌ಗ‌ಳು ಲಭ್ಯವಾಗಲಿವೆ. ಉಳಿದಂತೆ ಎಲ್ಲಾ ನ್ಯೂಸ್ ಚಾನಲ್‌ಗಳು ಉಚಿತವಾಗಿ ಸಿಗುತ್ತಿವೆ. ಇವುಗಳ ಜೊತೆಗೆ ಗ್ರಾಹಕರಿಗೆ 85 ಉಚಿತ ಚಾನೆಲ್‌ಗ‌ಳು ಸಿಗುತ್ತಿರುವುದರಿಂದ, ಇನ್ಮುಂದೆ ನಿಮ್ಮ ಕೇಬಲ್ ಬಿಲ್ 137 ರೂ. ದಾಟಲ್ಲ!
ಕೇಬಲ್ ಮತ್ತು ಡಿಟಿಹೆಚ್ ಟಿವಿ ನಿಯಮಗಳಲ್ಲಿ ಭಾರೀ ಬದಲಾವಣೆಯನ್ನು ತರುತ್ತಿರುವ ಟ್ರಾಯ್ ಇದೀಗ ಮತ್ತೊಮ್ಮೆ ಕೇಬಲ್ ನಿಯಮಗಳನ್ನು ಬದಲಾಯಿಸಿ ನಿರ್ಧಾರ ಕೈಗೊಂಡಿದೆ. ಟಿವಿ ಚಾನೆಲ್‌ಗ‌ಳ ಆಯ್ಕೆ ವಿಚಾರದಲ್ಲಿ ಕೆಲವು ದಿನಗಳಿಂದ ಇದ್ದ ಗೊಂದಲ ಈಗ ನಿವಾರಣೆಯ ಹಂತ ತಲುಪಿದ್ದು, ಟ್ರಾಯ್‌ನ ಹೊಸ ನಿರ್ಧಾರ ಟಿವಿ ವೀಕ್ಷಕರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದೆ.

ಸದ್ಯದ ನಿಯಮದ ಪ್ರಕಾರ 100 ಉಚಿತ ಚಾನೆಲ್‌ಗ‌ಳನ್ನು 130 ರೂ. ದರದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅದರ ನಂತರದಲ್ಲಿ ಪಾವತಿ ಚಾನೆಲ್‌ಗ‌ಳನ್ನು ಪಡೆಯಲು ಪ್ರತಿ ಚಾನೆಲ್‌ಗೆ ಹೆಚ್ಚುವರಿ ಹಣ ತೆರಬೇಕಾಗಿತ್ತು. ಆದರೆ, ಈಗ ಈ ನಿಯಮ ಸಂಪೂರ್ಣ ಬದಲಾಗಿದೆ. ಹಾಗಾದರೆ, ಬದಲಾದ ಕೇಬಲ್ ನಿಯಮ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್