Back
Home » ಇತ್ತೀಚಿನ
ಒಪ್ಪೊ ಪರಿಚಯಿಸಲಿದೆ 10x ಆಪ್ಟಿಕಲ್ ಝೂಮ್ ಕ್ಯಾಮೆರಾ ಸ್ಮಾರ್ಟ್‌ಫೋನ್!
Gizbot | 15th Jan, 2019 12:49 PM
 • ಏನೀದು 10x ಹೈಬ್ರಿಡ್ ಝೂಮ್?

  ಏನಿದು 10x ಹೈಬ್ರಿಡ್ ಝೂಮ್ ಎಂದು ನೋಡುವುದಾರೇ ಇದರಲ್ಲಿ ಎರಡು ಕ್ಯಾಮರಾ ಲೆನ್ಸ್‌ಗಳನ್ನು ನೀಡಲಾಗಿರುತ್ತದೆ. ಇವು ಎರಡು ಟೆಲೀಫೋಟೋ ಲೆನ್ಸ್‌ಗಳನ್ನು ಹೊಂದಿರುತ್ತವೆ. ಜ್ಹೂಮ್ ಮಾಡುವಾಗ ಈ ಟೆಲೀಫೋಟೋ ಲೆನ್ಸ್ ತೆರೆದುಕೊಳ್ಳುತ್ತವೆ. ಸ್ಮಾರ್ಟ್‌ಫೋನಿನಲ್ಲಿ ಟೆಲೀಫೋಟೋ ಲೆನ್ಸ್‌ಗಳ ಅನ್ನು ಅಡ್ಡಲಾಗಿ ಅಳವಡಿಸಲಾಗಿರುತ್ತದೆ. ದೂರದ ಫೋಟೋ ಸೆರೆಹಿಡಿಯುವಾಗ ಚಿತ್ರಗಳು ಅಲುಗಾಡದೇ ಸ್ಥಿರವಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಈ ಟೆಕ್ನಾಲಜಿಯಲ್ಲಿ ಇರಲಿದೆ.


 • ಡಿಸ್‌ಪ್ಲೇ ಮತ್ತು ರಚನೆ

  ನಿರೀಕ್ಷಿತ ಒಪ್ಪೊ ಎಫ್19 ಸ್ಮಾರ್ಟ್‌ಫೋನ್ ಔಟ್‌ಲುಕ್ ನೋಡಲು ಸಖತ್ ಗ್ಯ್ರಾಂಡ್ ಆಗಿರಲಿದೆ ಎಂದು ಹೇಳಲಾಗಿದೆ. 19:5:9 ಅನುಪಾತದೊಂದಿಗೆ 6.4 ಇಂಚಿನ ಫುಲ್ ಹೆಚ್‌ಡಿ ಅಲಮೋಡ್ ಸ್ಕ್ರೀನ್ ಹೊಂದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಡಿಸ್‌ಪ್ಲೇ ಅತ್ಯುತ್ತಮ ಪಿಕ್ಸಲ್‌ಗಳ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.


 • ತಂತ್ರಾಂಶಗಳು

  ಒಪ್ಪೊ ಎಫ್19 ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 675 ಅಥವಾ ಮೀಡಿಯಾಟೆಕ್ ಹಿಲಿಯೋ P90 ಪ್ರೊಸೆಸರ್ ಹೊಂದಿರುವ ಸಾಧ್ಯತೆಗಳಿವೆ. ಈ ಉತ್ತಮ ಪ್ರೊಸೆಸರ್‌ಗಳ ಸಹಾಯದಿಂದ ಸ್ಮಾರ್ಟ್‌ಫೋನಿನಲ್ಲಿ ಕಾರ್ಯಕ್ಷಮತೆ ಹೆಚ್ಚಲಿದೆ. ಇದರೊಂದಿಗೆ 8GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಫೋನ್ ಹೊಂದಿರಲಿದೆ .


 • ಬ್ಯಾಟರಿ ಕ್ಷಮತೆ

  ತನ್ನ ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯವನ್ನು ನೀಡುತ್ತಾ ಬಂದಿರುವ ಒಪ್ಪೊ ಸಂಸ್ಥೆ ಎಫ್19 ಸ್ಮಾರ್ಟ್‌ಫೋನಿನಲ್ಲೂ ಕೂಡಾ 3700mAh ಸಾಮರ್ಥ್ಯದ ಬ್ಯಾಟರಿ ನೀಡಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ VOOC ಫ್ಯ್ಲಾಶ್ ಚಾರ್ಜಿಂಗ್ ತಂತ್ರಜ್ಞಾನದ ಫಾಸ್ಟ್ ಚಾರ್ಜರ್ ನೀಡಲಾಗುವ ಸಾಧ್ಯತೆಗಳಿವೆ.


 • ಬೆಲೆ ಮತ್ತು ಬಿಡುಗಡೆ?

  ಒಪ್ಪೊ ಎಫ್‌19 ಸ್ಮಾರ್ಟ್‌ಫೋನ್ ಈ ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಲಾಂಚ್‌ ಆಗುವುದು ಎಂದು ನಿರೀಕ್ಷಿಸಲಾಗಿದೆ. ಇನ್ನೂ ಈ ಸ್ಮಾರ್ಟ್‌ಫೋನ್‌ನ ಬೆಲೆಯ ಸುಮಾರು 40,000ರೂಪಾಯಿಗಳಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ಒಪ್ಪೊ ಸಂಸ್ಥೆ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮರಾ ಫೀಚರ್ ನೀಡುತ್ತಲೆ ಬಂದಿದೆ. ಇದೀಗ ಒಪ್ಪೊ ಸಂಸ್ಥೆಯು ಕ್ಯಾಮರಾ ಟೆಕ್ನಾಲಜಿಯಲ್ಲಿ ಹೊಸದೊಂದು ಪ್ರಯತ್ನವನ್ನು ಮಾಡುವುದಕ್ಕೆ ಮುಂದಾಗಿದ್ದು, ಮುಂಬರಲಿರುವ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ಆದ 'ಓಪೋ F19' ಫೋನಿನಲ್ಲಿ ಈ ಹೊಸ 10x ಹೈಬ್ರಿಡ್ ಆಪ್ಟಿಕಲ್ ಝೂಮ್ ಫೀಚರ್‌ನೀಡುವ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸಲಾಗುವ ಸಾಧ್ಯತೆಗಳಿವೆ.

ಚೀನಾ ಮೂಲದ ಈ ಒಪ್ಪೊ ಸಂಸ್ಥೆ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಕ್ಯಾಮರಾಗಳಲ್ಲಿ ಈಗಾಗಲೇ 5x ಆಪ್ಟಿಕಲ್ ಝೂಮ್ ಫೀಚರ್‌ ಅನ್ನು ನೀಡುತ್ತಾ ಬಂದಿದ್ದು, ಇದೀಗ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ '10x ಹೈಬ್ರಿಡ್ ಆಪ್ಟಿಕಲ್ ಝೂಮ್' ಇರುವ ನೂತನ ತಂತ್ರಜ್ಞಾನವನ್ನು ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ. ಇದು ಸ್ಮಾರ್ಟ್‌ಫೋನ್ ಕ್ಯಾಮರಾದಲ್ಲಿ ಹೊಸ ಬದಲಾವಣೆ ನಾಂದಿ ಆಗಬಹುದು ಎಂದು ಹೇಳಲಾಗುತ್ತಿದೆ. ಹಾಗಾದರೇ ಏನೀರಬಹುದು ಈ ನ್ಯೂ ಕ್ಯಾಮರಾ ಟೆಕ್ನಾಲಜಿ ಎಂಬುದನ್ನು ನೋಡೋಣ ಬನ್ನಿ.

   
 
ಹೆಲ್ತ್