Back
Home » ಆರೋಗ್ಯ
ಕಿಡ್ನಿ ಸೊಂಕಿನ ಸಮಸ್ಯೆ ನಿವಾರಣೆಗೆ ಅತ್ಯುತ್ತಮ ಆಹಾರಗಳು ಹಾಗೂ ಜ್ಯೂಸ್‌ಗಳು
Boldsky | 15th Jan, 2019 01:31 PM
 • ದ್ರವ ಮತ್ತು ಹೆಚ್ಚಿನ ದ್ರವ

  ಕಿಡ್ನಿ ಸೋಂಕು ಇದ್ದರೆ ಆಗ ನೀವು ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು. ಯಾಕೆಂದರೆ ದ್ರವಾಂಶದಿಂದಾಗಿ ನಿಮ್ಮ ದೇಹದಲ್ಲಿ ಇರುವಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳು ಮೂತ್ರದ ಮೂಲಕ ಹೊರಹಾಕಲು ನೆರವಾಗುವುದು. ಯೂನಿವರ್ಸಿಟಿ ಆಫ್ ಮೆರಿಲ್ಯಾಂಡ್ ಮೆಡಿಕಲ್ ಸೆಂಟರ್ ಹೇಳುವಂತೆ, ಹೆಚ್ಚು ದ್ರವಾಹಾರ ಸೇವನೆ ಮಾಡಿ ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದರಿಂದ ಸೋಂಕನ್ನು ನಿವಾರಣೆ ಮಾಡಬಹುದು. ನಿಮಗೆ ವಾಂತಿ ಮಾಡುತ್ತಲಿದ್ದರೆ ಆಗ ನೀವು ನೀರು ಅಥವಾ ಇತರ ದ್ರವಾಹಾರ, ಸೂಪ್ ಅಥವಾ ಜ್ಯೂಸ್ ಸೇವನೆ ಮಾಡಿದರೆ ಅದರಿಂದ ದೇಹವು ನಿರ್ಜಲೀಕರಣದಿಂದ ತಪ್ಪುವುದು. ಜ್ಯೂಸ್, ಸ್ಮೂಥಿ ಮತ್ತು ಸೂಪ್ ಗಳು ಕೆಲವೊಂದು ರೀತಿಯ ಪೋಷಕಾಂಶಗಳು ಮತ್ತು ಕ್ಯಾಲರಿಗಳನ್ನು ದೇಹಕ್ಕೆ ಒದಗಿಸುವುದು. ಹಸಿವು ಕಡಿಮೆ ಇರುವಂತಹ ಸಂದರ್ಭದಲ್ಲಿ ಇದು ದೇಹದಲ್ಲಿ ಶಕ್ತಿ ತುಂಬಲು ತುಂಬಾ ನೆರವಾಗುವುದು.


 • ಬೆರ್ರಿಗಳು ಮತ್ತು ಬೆರ್ರಿ ಜ್ಯೂಸ್

  ಬೆರ್ರಿಗಳಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗಳು ಇವೆ ಮತ್ತು ಇದು ದೇಹಕ್ಕೆ ಪ್ರತಿರೋಧ ತೋರಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಇದು ಉರಿಯೂತದಿಂದಲೂ ರಕ್ಷಣೆ ನೀಡುವುದು. ಬೆರ್ರಿಗಳು ನೀರು ಮತ್ತು ಪೊಟಾಶಿಯಂ ಒದಗಿಸುವುದು. ಇದು ದೇಹಕ್ಕೆ ತೇವಾಂಶ ಮತ್ತು ವಿದ್ಯುದ್ವಿಚ್ಛೇದಗಳನ್ನು ನೀಡುವುದು. ವಾಂತಿ ಮಾಡುವಂತಹ ವೇಳೆ ನೀವು ಕಳಕೊಳ್ಳುವಂತಹ ವಿದ್ಯುದ್ವಿಚ್ಛೇದಗಳಾಗಿರುವಂತಹ ಪೊಟಾಶಿಯಂ ಹಣ್ಣುಗಳಲ್ಲಿ ಲಭ್ಯವಿದೆ. ಕ್ಯಾನ್ ಬೆರ್ರಿಗಳು, ನೇರಳೆ ಮತ್ತು ಯೂರೋಪಿಯನ್ ಬೆರ್ರಿಗಳು ತುಂಬಾ ಲಾಭಗಳನ್ನು ನೀಡುವುದು ಎಂದು ಯೂನಿವರ್ಸಿಟಿ ಆಫ್ ಮೆರಿಲ್ಯಾಂಡ್ ಮೆಡಿಕಲ್ ಸೆಂಟ್ ಹೇಳುತ್ತದೆ. ಬೆರ್ರಿಗಳಲ್ಲಿ ಇರುವಂತಹ ನೈಸರ್ಗಿಕ ಅಂಶವಾಗಿರುವ ಟ್ಯಾನ್ನಿನ್ ಈ ಕೊಲಿಯನ್ನು ತಡೆಯುವುದು. ಇ ಕೊಲಿ ಬ್ಯಾಕ್ಟೀರಿಯಾವು ಮೂತ್ರನಾಳದ ಕೋಶಗಳ ಮೇಲೆ ನೆಲೆನಿಂತು ಸೋಂಕಿಗೆ ಕಾರಣವಾಗುವುದು.

  Most Read: ದೇಹದ ಎರಡೂ ಕಿಡ್ನಿಗಳನ್ನು ಸ್ವಚ್ಛಗೊಳಿಸುವ ನೈಸರ್ಗಿಕ ಜ್ಯೂಸ್‌ಗಳು


 • ಇಡೀ ಧಾನ್ಯಗಳು

  ದೇಹದಲ್ಲಿ ಕಾರ್ಬ್ರೋಹೈಡ್ರೇಟ್ಸ್ ಗಳು ಇಲ್ಲದೆ ಇದ್ದರೆ ಆಗ ನಿಮ್ಮ ದೇಹದಲ್ಲಿರುವ ಯಾವುದೇ ಅಂಗವು ಸರಿಯಾಗಿ ಕಾರ್ಯನಿರ್ವಹಿಸದು. ಇದಕ್ಕೆ ಕಿಡ್ನಿಯು ಹೊರತಾಗಿಲ್ಲ. ಕಾರ್ಬ್ಸ್ ನಲ್ಲಿ ಗ್ಲೂಕೋಸ್ ಇದ್ದು, ಇದು ದೇಹಕ್ಕೆ ಶಕ್ತಿ ಒದಗಿಸುವಲ್ಲಿ ಪ್ರಮುಖ ಪಾ್ರ ವಹಿಸುವುದು. ನಿಶ್ಯಕ್ತಿಯ ವಿರುದ್ಧ ಹೋರಾಡಲು, ಪ್ರಮುಖ ಪೋಷಕಾಂಶಗಳಾಗಿರುವಂತಹ ವಿಟಮಿನ್ ಬಿ ಮತ್ತು ಆ್ಯಂಟಿಆಕ್ಸಿಡೆಂಟ್ ಆಗಿರುವ ಸೆಲೆನಿಯಂನ್ನು ಪಡೆಯಲು ಇಡೀ ಧಾನ್ಯಗಳನ್ನು ಸೇವನೆ ಮಾಡಿ. ನಿಮಗೆ ವಾಕರಿಕೆ ಬರುತ್ತಲಿದ್ದರೆ ಆಗ ಮಿತ ರುಚಿ ಹೊಂದಿರುವಂತಹ ಸಾದಾ ಇಡೀ ಧಾನ್ಯದ ಅಥವಾ ಓಟ್ ಮೀಲ್ ಟೋಸ್ಟ್ ಸೇವಿಸಿ. ಇತರ ಪೋಷಕಾಂಶ ನೀಡುವ ಆಹಾರವೆಂದರೆ ಕ್ವಿನೊವಾ, ಕುಚ್ಚಲಕ್ಕಿ ಮತ್ತು ಪಾಪ್ ಕಾರ್ನ್.


 • ಹಾಲಿನ ಉತ್ಪನ್ನಗಳು

  ಎಲ್ಲಾ ಬ್ಯಾಕ್ಟೀರಿಯಾಗಳು ದೇಹಕ್ಕೆ ಕೆಟ್ಟದಲ್ಲ. ಕೆಲವೊಂದು ಹಾಲಿನ ಉತ್ಪನ್ನಗಳಲ್ಲಿ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳು ಇರುವುದು. ಇದನ್ನು ಪ್ರೊಬಯೋಟಿಕ್ ಎಂದು ಕರೆಯಲಾಗುತ್ತದೆ. ಮೊಸರಿನಲ್ಲಿ ಪ್ರೊಬಯೋಟಿಕ್ ಇದೆ. ಇದು ಮೂತ್ರಕೋಶದ ಸೋಂಕಿನಿಂದ ರಕ್ಷಿಸುವುದು ಎಂದು ವೈದ್ಯಕೀಯ ವರದಿಗಳು ಹೇಳಿವೆ. ಇದರಲ್ಲಿ ಹೆಚ್ಚಿನ ಪ್ರೋಟೀನ್ ಕೂಡ ಇರುವ ಕಾರಣದಿಂದಾಗಿ ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು. ಲ್ಯಾಕ್ಟೋಬಾಸಿಲ್ಲಿ ಮತ್ತು ಬೈಫಿಡೋಬ್ಯಾಕ್ಟೀರಿಯಾ ಇದರಲ್ಲಿದೆ. ನೀವು ಮೊಸರನ್ನು ವಿವಿಧ ರೀತಿಯ ಧಾನ್ಯ ಮತ್ತು ಕೆಲವೊಂದು ಬೆರ್ರಿಗಳೊಂದಿಗೆ ಹಾಕಿಕೊಂಡು ಸೇವನೆ ಮಾಡಬಹುದು.
ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಕಿಡ್ನಿಯು ನಮ್ಮ ದೇಹದ ಪ್ರಮುಖ ಅಂಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದರೆ ಮಾತ್ರ ಸಂಪೂರ್ಣ ದೇಹವು ಆರೋಗ್ಯವಾಗಿರಲು ಸಾಧ್ಯ. ಅದೇ ಕಿಡ್ನಿಯು ಕೈಕೊಟ್ಟರೆ ಆಗ ವಿವಿಧ ರೀತಿಯ ಸಮಸ್ಯೆಗಳು ಬರುವುದು. ರಕ್ತವು ಶುದ್ಧೀಕರಣವಾಗದೆ ಯಾಂತ್ರೀಕೃತವಾಗಿ ಡಯಾಲಿಸಿಸ್ ಮೂಲಕ ರಕ್ತವನ್ನು ಶುದ್ಧೀಕರಿಸಬೇಕಾಗುತ್ತದೆ.

ಕಿಡ್ನಿಯಲ್ಲಿ ಸಮಸ್ಯೆಯಿದ್ದರೆ ವ್ಯಕ್ತಿಯ ಪ್ರಾಣಕ್ಕೆ ಹಾನಿಯಾಗುವಂತಹ ಸಂಭವ ಹೆಚ್ಚಾಗಿರುವುದು. ಇದಕ್ಕಾಗಿ ಕಿಡ್ನಿ ಆರೋಗ್ಯ ಕಾಪಾಡುವುದು ಅತೀ ಅಗತ್ಯವಾಗಿರುವುದು. ನಾವು ತಿನ್ನುವಂತಹ ಕೆಲವೊಂದು ಆಹಾರಗಳನ್ನು ಬಳಸಿಕೊಂಡು ಕಿಡ್ನಿ ಆರೋಗ್ಯ ಕಾಪಾಡಬಹುದು. ಕೆಲವೊಂದು ಸೋಂಕುಗಳು ಕಾಣಿಸಿಕೊಳ್ಳುವ ಕಾರಣ ಮೂತ್ರನಾಳದಲ್ಲಿ ಸಮಸ್ಯೆಗಳು ಬರಬಹುದು. ಇದರಿಂದ ಸರಿಯಾದ ಆಹಾರ ಸೇವನೆ ಮಾಡಿ ನಮ್ಮ ದೇಹವನ್ನು ತೇವಾಂಶದಿಂದ ಇಟ್ಟರೆ ಆಗ ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡುವಂತಹ ಶಕ್ತಿಯು ಸಿಗುವುದು. ಮೂತ್ರನಾಳ ಸೋಂಕನ್ನು ಪದೇ ಪದೇ ಕಡೆಗಣಿಸಿದರೆ ಅದರಿಂದ ಮುಂದೆ ಕಿಡ್ನಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಕಿಡ್ನಿ ಆರೋಗ್ಯ ಕಾಪಾಡುವ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

   
 
ಹೆಲ್ತ್