Back
Home » ಇತ್ತೀಚಿನ
H-1B ವೀಸಾ ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದ ಟ್ರಂಪ್
Gizbot | 15th Jan, 2019 07:30 PM
 • ಟ್ವೀಟರ್ ನಲ್ಲಿ ಹಂಚಿಕೊಂಡ ಟ್ರಂಪ್:

  ಟ್ವೀಟರ್ ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಟ್ರಂಪ್ "ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ H1-B(sic) ಹೊಂದಿರುವವರಿಗಾಗಿ ಶೀಘ್ರದಲ್ಲೇ ಸರಳವಾಗಿರುವ ಮತ್ತು ನಿಶ್ಚಿತವಾಗಿರುವ ವಾಸ್ತವ್ಯದ ಹಾದಿಯನ್ನು ತೋರಲಿದ್ದು, ಪೌರತ್ವಕ್ಕೆ ಸಂಭಾವ್ಯ ಹಾದಿಯನ್ನು ಅದು ಮಾಡಿಕೊಡಲಿದೆ" ಎಂದು ತಿಳಿಸಿದ್ದಾರೆ. ನಾವು ಯುಎಸ್ ನಲ್ಲಿ ಹೆಚ್ಚು ಪ್ರತಿಭಾವಂತ ಮತ್ತು ನುರಿತ ಜನರಿಗೆ ತಮ್ಮ ಕರಿಯರ್ ರೂಪಿಸಿಕೊಳ್ಳುವ ಅವಕಾಶ ಮಾಡಿಕೊಡಲಿದ್ದೇವೆ ಎಂದು ಕೂಡ ಹೇಳಿದ್ದಾರೆ.


 • ಪೌರತ್ವದ ಸಂಭಾವ್ಯ ಹಾದಿ:

  H1-B ವೀಸಾ ಹೊಂದಿರುವವರಿಗೆ ಪೌರತ್ವದ ಸಂಭಾವ್ಯ ಹಾದಿ ಎಂದು ಹೇಳಿರುವ ಟ್ರಂಪ್ ರ ಮಾತು ಸ್ವಲ್ಪಮಟ್ಟಿಗೆ ಅಸ್ಪಷ್ಟವಾಗಿದೆ. ಯಾಕೆಂದರೆH-1B ವೀಸಾ ಹೊಂದಿರುವವರು ಈಗಾಗಲೇ ಕಾನೂನು ಬದ್ಧ ಶಾಶ್ವತ ರೆಸಿಡೆನ್ಸಿ ಹೊಂದಲು ತಮ್ಮ ಮಾಲೀಕರಿಂದ ಪ್ರಾಯೋಜಿತರಾಗಲು ಅರ್ಹರಾಗಿರುತ್ತಾರೆ ಮತ್ತು ಅದು ಅವರಿಗೆ ಯುಎಸ್ ಪೌರತ್ವವನ್ನು ಪಡೆಯಲು ಅರ್ಹರನ್ನಾಗಿಸುತ್ತದೆ.ಹಾಗಿರುವಾಗ ಟ್ರಂಪ್ ಯಾಕೆ ಹೀಗೆ ಹೇಳಿದ್ದಾರೆ ಎಂಬ ಗೊಂದಲವಿದೆ.


 • ಶ್ವೇತ ಭವನದ ಪ್ರತಿಕ್ರಿಯೆ ಇಲ್ಲ:

  ಈ ಬಗ್ಗೆ ಶ್ವೇತ ಭವನ ಕೂಡಲೇ ಪ್ರತಿಕ್ರಿಯೆ ನೀಡಿಲ್ಲ. ಡಿಸೆಂಬರ್ ನಲ್ಲಿ ಯುಸ್ ಪೌರತ್ವ ಮತ್ತು ವಲಸೆ ಸೇವೆಗಳು ಹೊರಡಿಸಿದ ಹೊಸ ನಿಯಮಾವಳಿ ಪ್ರಸ್ತಾವನೆಗಳ ಬಗ್ಗೆ ಇದುವರೆಗೂ ಯಾವುದೇ ಉತ್ತರ ಸಿಕ್ಕಿಲ್ಲ. ನುರಿತ ಮತ್ತು ವಿದ್ಯಾವಂತ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ವಲಸೆ ನೀತಿಯಲ್ಲಿ ಬದಲಾವಣೆ ತರಲು ರಿಪಬ್ಲಿಕನ್ ಮತ್ತು ಟ್ರಂಪ್ ಆಲೋಚಿಸಿದ್ದಾರೆ ಎಂದು ತಿಳಿದುಬರುತ್ತಿದೆ.


 • ಮೆಕ್ಸಿಕೋ ಬಾರ್ಡರ್ ತಡೆಗೋಡೆಗೆ ವಿರೋಧ:

  ಮೆಕ್ಸಿಕೋ ಬಾರ್ಡರ್ ನಲ್ಲಿ ತಡೆಗೋಡೆ ನಿರ್ಮಿಸಲು 5.6 ಬಿಲಿಯನ್ ವೆಚ್ಚದ ಕಾಮಗಾರಿಯನ್ನು ಟ್ರಂಪ್ ಬಯಸುತ್ತಿದ್ದು ಆ ಮೂಲಕ ಕಾನೂನುಬಾಹಿರ ಒಳನುಸುಳುವಿಕೆಯನ್ನು ತಡೆಯುವ ಉದ್ದೇಶವನ್ನು ಟ್ರಂಪ್ ಹೊಂದಿದ್ದಾರೆ.

  ಆದರೆ ಡೆಮಕ್ರೆಟಿಕ್ ಪಕ್ಷದವರು ಇದನ್ನು ದುಬಾರಿ, ಪರಿಣಾಮಕಾರಿಯಲ್ಲದ ಮತ್ತು ನೀತಿಕರವಲ್ಲದ ಪ್ಲಾನ್ ಇದು ಎಂದು ಹೀಗಳೆಯುತ್ತಿದ್ದಾರೆ. ಈ ವಿವಾದವು ಯುಎಸ್ ಸರ್ಕಾರದ ಭಾಗಶಃ ಸ್ಥಗಿತಕ್ಕೆ ಕಾರಣವಾಗುತ್ತಿದ್ದು 21 ದಿನ ಚರ್ಚೆ ನಡೆಯುತ್ತಿದೆ.

  ಟ್ರಂಪ್ ಈ ರೀತಿಯ ಕಾನೂನುಬಾಹಿರ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ 2017 ರಲ್ಲಿ ಯು.ಎಸ್ ವೀಸಾ ಕಾರ್ಯಕ್ರಮವನ್ನು ಮಿತಿಗೊಳಿಸಿ, ವಿದ್ಯಾವಂತ ಮತ್ತು ನುರಿತ ಕೆಲಸಗಾರರಿಗೆ ಪ್ರಯೋಜನ ನೀಡಬೇಕೆಂದು ಆದೇಶ ನೀಡಿದರು.


 • ತಾತ್ಕಾಲಿಕ ವಿಸಾಕ್ಕೆ ಸ್ಪರ್ಧೆ:

  ಸದ್ಯಕ್ಕೆ ತಾತ್ಕಾಲಿಕ ವಿಸಾಕ್ಕಾಗಿ ಸ್ಪರ್ಧೆ ಬಹಳವಾಗಿದೆ ಮತ್ತು ಬ್ಯಾಚುಲರ್ ಡಿಗ್ರಿ ಆಗಿರುವವರಿಗೆ ಮಾತ್ರವೇ ಲಭ್ಯವಾಗುತ್ತದೆ.2018 ರಲ್ಲಿ ಯುನೈಟೆಡ್ ಸ್ಟೇಟ್ಸ್ ಎಪ್ರಿಲ್ ಮೊದಲ ವಾರದ ಒಳಗೆ 65,000 ಕ್ಕೆ ಬಿಡುಗಡೆಗೊಳಿಸಬಹುದಾಗಿದ್ದ ಈ ಮಿತಿಯು ಹೊಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಪ್ರಕಾರ ಈಗಾಗಲೇ ತಲುಪಿಯಾಗಿದೆ.

  ಯಾವ ಕ್ಷೇತ್ರದಲ್ಲಿ H-1B ವೀಸಾ :

  ಯುಎಸ್ ಕಂಪೆನಿಗಳು ಸಾಮಾನ್ಯವಾಗಿ ಕೆಲವು ವಿಶೇಷ ಕ್ಷೇತ್ರಗಳಲ್ಲಿ H-1B ವೀಸಾವನ್ನು ಕೆಲಸಗಾರರನ್ನು ನೇಮಿಸಿಕೊಳ್ಳುವುದಕ್ಕೆ ಬಳಸುತ್ತದೆ. ಅದರಲ್ಲಿ ಮಾಹಿತಿ ತಂತ್ರಜ್ಞಾನ, ಔಷಧಗಳು,ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ಕ್ಷೇತ್ರಗಳು ಕೂಡ ಸೇರಿವೆ.

  ಮುಂದಿನ ವರ್ಷ ಅಂತ್ಯ:

  ಟ್ರಂಪ್ ಟ್ವೀಟ್ ಬಗ್ಗೆ ಕೇಳಿದಾಗ USCIS ವಕ್ತಾರ ಮೈಕೆಲ್ ಬಾರ್ಸ್ ಅವರು ಈಗಾಗಲೇ H-1B ಪ್ರೊಸೆಸ್ ನ ಬದಲಾವಣೆಗೆ ಪ್ರಪೊಸಲ್ ಬಂದಿದೆ. ಅದು ಮುಂದಿನ ವರ್ಷದ ಅಂತ್ಯದೊಳಗೆ ಫೈನಲ್ ಆಗುತ್ತದೆ ಎಂದು ತಿಳಿಸಿದ್ದಾರೆ.

  16% ನೇಮಕಾತಿ ಲಭ್ಯ:

  16 ಶೇಕಡಾಕ್ಕೆ ಈ H-1B ಬೆನಿಫಿಟ್ ಗಳನ್ನು ಪಡೆಯುವಿಕೆಯನ್ನು ವೃದ್ಧಿಸಲಾಗುತ್ತದೆ ಅಂದರೆ ಸುಮಾರು 5,340 ಹೆಚ್ಚು ಕೆಲಸಗಾರರನ್ನು ನೇಮಿಸಲಾಗುತ್ತದೆ ಆದರೆ ಅವರು ಅಮೇರಿಕಾ ಯುನಿವರ್ಸಿಟಿಯಿಂದ ಡಿಗ್ರಿಯನ್ನು ಪಡೆದಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.ಇದರ ಅಪ್ಲಿಕೇಷನ್ ಪ್ರಕ್ರಿಯೆಯನ್ನು ಸುಲಭಗೊಳಿಸುವುದಕ್ಕಾಗಿ ಹೊಸ ಎಲೆಕ್ಟ್ರಾನಿಕ್ ನೊಂದಣಿ ವ್ಯವಸ್ಥೆಯನ್ನು ಕೂಡ ಅಳವಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಯು.ಎಸ್ ನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಶುಕ್ರವಾರ ತಂತ್ರಜ್ಞಾನ ಅಥವಾ ಔಷಧಗಳು ಸೇರಿದಂತೆ ಮುಂತಾದ ಉದ್ಯೋಗಗಳಲ್ಲಿ ಕೆಲಸ ಮಾಡುವ ಹೆಚ್ಚು ವಿದ್ಯಾವಂತ ವಲಸಿಗರಿಗೆ ನೀಡಲಾಗುವ ತಾತ್ಕಾಲಿಕ ವೀಸಾ ಕಾರ್ಯಕ್ರಮ H-1B ಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಯೋಜಿಸಿದ್ದಾರೆ.

   
 
ಹೆಲ್ತ್