Back
Home » ಇತ್ತೀಚಿನ
ಪ್ರತಿ ತಿಂಗಳು ಕೇವಲ 153 ರೂ.ಕೇಬಲ್‌ ಬಿಲ್ ಬರುವಂತೆ ಮಾಡಿಕೊಳ್ಳಿ!..ಹೇಗೆ ಗೊತ್ತಾ?!
Gizbot | 16th Jan, 2019 05:26 PM
  • ಮೊದಲು ನಿಯಮ ಏನು ಎಂಬುದನ್ನು ತಿಳಿಯಿರಿ!

    ಇನ್ಮುಂದೆ ಪ್ರತಿ ತಿಂಗಳು ಕೇಬಲ್‌ ಅಥವಾ ಡಿಟಿಎಚ್ ಬಿಲ್‌ ಮೊತ್ತ 153 ರೂ.ಗೆ ಮಿತಿಗೊಳ್ಳಲಿದೆ. ಅದೂ ಜಿಎಸ್‌ಟಿ ಸೇರಿಕೊಂಡು ಎಂಬುದನ್ನು ತಿಳಿದಿರಿ. ಇದೇ ಹಣದಲ್ಲಿ ನೀವು 100 ಉಚಿತ ಅಥವಾ ಪಾವತಿ ಚಾನಲ್‌ಗಳನ್ನು ಪಡೆಯಬಹುದು. ಪ್ರತಿ ತಿಂಗಳು ನೀವು 153 ರೂಪಾಯಿಗಳನ್ನು ಕಡ್ಡಾಯವಾಗಿ ಕೇಬಲ್‌ ಅಥವಾ ಡಿಟಿಎಚ್ ಸೇವಾದಾರರಿಗೆ ಪಾವತಿಸಲೇಬೇಕು. ಈ ಹಣದಲ್ಲೇ ನೀವು ನಿಮ್ಮ ಯಾವುದೇ ಆಯ್ಕೆಯ ಟಿವಿ ಚಾನಲ್‌ಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.


  • ಆಯ್ಕೆ ಮಾಡಿಕೊಳ್ಳುವಾಗ ಇದನ್ನು ತಿಳಿಯಿರಿ!

    ಮಾಸಿಕ 153 ರೂ.ಗೆ ನೀವು 100 ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ 100 ಚಾನೆಲ್‌ಗ‌ಳಲ್ಲಿ ಪಾವತಿ ಚಾನೆಲ್‌ಗ‌ಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನೆಲ್‌ಗ‌ಳ ದರವು 130 ರೂ. ಅನ್ನು ಮೀರುವಂತಿಲ್ಲ. ಅಂದರೆ 13 ರೂ. ಬೆಲೆಯ 10 ಪಾವತಿ ಚಾನೆಲ್‌ಗ‌ಳನ್ನು ಗ್ರಾಹಕರು ಉಚಿತವಾಗಿ ಆಯ್ಕೆ ಮಾಡಿಕೊಂಡರೆ, ಇನ್ನುಳಿದ 90 ಉಚಿತವಾಗಿ ಲಭ್ಯವಿರುವ ಚಾನಲ್‌ಗಳು ಮಾತ್ರ ನಿಮಗೆ ಉಚಿತವಾಗಿ ಸಿಗುತ್ತವೆ. ಆ ನಂತರ ಪಾವತಿ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚು ಹಣ ತೆರಬೇಕು.


  • ಉದಾಹರಣೆ ಹೀಗಿದೆ!

    ಸದ್ಯ ಕನ್ನಡದ ಎಲ್ಲ 15 ಚಾನೆಲ್‌ಗ‌ಳು ಪಾವತಿ ಚಾನೆಲ್‌ಗ‌ಳನ್ನು ಲೆಕ್ಕ ಹಾಕಿದರೆ ಒಟ್ಟು ಕೇವಲ 137 ರೂ. ಆಗಲಿದೆ. 15 ಚಾನೆಲ್‌ಗ‌ಳು ಲಭ್ಯವಾಗಲಿವೆ. ಉಳಿದ 85 ಉಚಿತ ಚಾನೆಲ್‌ಗ‌ಳನ್ನು ಗ್ರಾಹಕರು ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ನ್ಯೂಸ್ ಚಾನಲ್‌ಗಳು ಉಚಿತವಾಗಿ ಸಿಗುತ್ತಿರುವುದರಿಂದ 85 ಉಚಿತ ಚಾನೆಲ್‌ಗ‌ಳ ಜೊತೆ ಇವುಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಇದನ್ನು ನೀವು ಕೇಬಲ್ ಸೇವಾದಾರನಿಗೆ ತಿಳಿಸಿ ಆಯ್ದುಕೊಂಡರೆ ನಿಮ್ಮ ಕೇಬಲ್ ಬಿಲ್ ಮಾಸಿಕ 153 ರೂ. ಮೀರುವುದಿಲ್ಲ.


  • ಬಿಡಿಬಿಡಿಯಾಗಿ ಆಯ್ಕೆ ಮಾಡಿಕೊಳ್ಳಿ!

    ನಾನು ಪಾವತಿಸಬೇಕಾದ ಉದಯ ಟಿವಿ, ಉದಯ ಮೂವಿಸ್, ಕಲರ್ಸ್ ಕನ್ನಡ, ಜ್ಹೀಟಿವಿ ಮಾತ್ರ ನೋಡುತ್ತೇನೆ ಎಂದರೆ ಇವು ನಾಲ್ಕನ್ನು ಆಯ್ಕೆ ಮಾಡಿಕೊಳ್ಳಿ. ಕ್ರೀಡೆಯ ಎರಡು ಚಾನಲ್‌ಗಳು ಹಾಗೂ ನಿಮ್ಮ ಆಯ್ಕೆಯ ಇನ್ನುತರ ವರ್ಗದ ಯಾವುದೇ ಪಾವತಿ ಚಾಲನ್‌ಗಳನ್ನು ಆಯ್ದುಕೊಳ್ಳಿ. ಹೀಗೆ ನಿಮ್ಮ ಹಣ 130 ರೂ. ವರೆಗೂ ತಲುಪುವವರೆಗೂ ಮಾತ್ರ ಆಯ್ಕೆ ಇರಲಿ. ಇದಾದ ನಂತರ ನಿಮ್ಮ ಉಚಿತ ಆಯ್ಕೆ ನಿಲ್ಲುತ್ತದೆ. 130 ರೂ. ಆದ ನಂತರವೂ ನೀವು ಹಣ ಪಾವತಿ ಚಾನಲ್ ಬೇಕು ಎಂದಾದರೆ ನೀವು ಅದಕ್ಕೆ ಪಾವತಿ ಮಾಡಬೇಕಿದೆ.


  • ಗುಂಪು ಗುಚ್ಛವನ್ನು ನೀವೇ ತಯಾರಿಸಿ!

    ಮೊದಲೆಲ್ಲಾ ಸೌತ್‌ ಪ್ಯಾಕ್‌, ಕನ್ನಡ ಅಥವಾ ಇನ್ನು ಯಾವುದೇ ಭಾಷೆ ಮುಖ್ಯವಾಗಿ ಒಳಗೊಂಡ ಚಾನೆಲ್‌ಗ‌ಳ ಗುಚ್ಛವನ್ನು ನೀವು ಆಯ್ದುಕೊಳ್ಳಬೇಕಾಗಿತ್ತು. ಆದರೆ, ಹೊಸ ಪಾವತಿ ವ್ಯವಸ್ಥೆಯಲ್ಲಿ ಈ ರೀತಿಯ ಚಾನೆಲ್‌ಗ‌ಳ ಗುಚ್ಛಗಳನ್ನು ನೀವೇ ತಯಾರಿಸಿಕೊಳ್ಳಬಹುದು. ಈ ಗುಚ್ಛವನ್ನು 130 ರೂ. ಒಳಗೆ ತಯಾರಿಸುವ ಕಲೆ ನಿಮಗಿದ್ದರೆ ನಿಮ್ಮ ಪ್ರತಿ ತಿಂಗಳು ಕೇಬಲ್ ಬಿಲ್ ಮಾಸಿಕ 153 ರೂ. ಆಗದಂತೆ ನೋಡಿಕೊಳ್ಳಬಹುದು. ಇದಕ್ಕೆ ಪ್ರತ್ಯೇಕವಾಗಿ ಹಣವನ್ನು ಪೋಲು ಮಾಡಬೇಕಾದ ಅವಶ್ಯಕತೆ ನಿಮಗಿರುವುದಿಲ್ಲ.


  • ಸೆಟ್‌ ಟಾಪ್‌ ಬಾಕ್ಸ್‌ ಖರೀದಿಸಲೇಬೇಕಿಲ್ಲ!

    ಹೊಸ ನಿಯಮಗಳ ಪ್ರಕಾರ ಡಿಟಿಎಚ್ ಸಂಪರ್ಕ ಹೊಂದಿರುವ ಗ್ರಾಹಕರು ಸೆಟ್‌ ಟಾಪ್‌ ಬಾಕ್ಸ್‌ ಅನ್ನು ಖರೀದಿಯೇ ಮಾಡಬೇಕು ಎಂದೇನಿಲ್ಲ. ಅದನ್ನು ತಮ್ಮ ಡಿಟಿಎಟ್ ಸೇವಾದಾರರ ಮೂಲಕ ಅಥವಾ ಕೇಬಲ್‌ನವರ ಮೂಲಕ ಬಾಡಿಗೆಗೂ ಪಡೆಯಬಹುದು. ಟ್ರಾಯ್‌ನ ಹೊಸ ಸೇವೆಯ ಬಗ್ಗೆ ಕೆಲ ಸ್ಥಳಗಳಲ್ಲಿ ಗೊಂದಲ ಕೂಡ ಉಂಟಾಗಿದೆ. ಈ ಅದಕ್ಕೆ ಟ್ರಾಯ್‌ ಕೂಡ ಸ್ಪಷ್ಟನೆ ನೀಡಿದ್ದು, ಹೊಸ ಮಾದರಿಯ ದರ ವ್ಯವಸ್ಥೆ ಜಾರಿಯ ಬಗ್ಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಆದೇಶದ ಪ್ರತಿ ನಿಜವಾದದ್ದೇ ಎಂದೂ ತಿಳಿಸಿದೆ.


  • ಈ ನಿಯಮವನ್ನು ತಂದಿದ್ದು ಏಕೆ?

    ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವೇ ನೀಡಿದ ಮಾಹಿತಿ ಪ್ರಕಾರ 100ಕ್ಕಿಂತ ಹೆಚ್ಚು ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯೇ. ಒಟ್ಟಾರೆ ಮಾರುಕಟ್ಟೆ ವ್ಯವಸ್ಥೆಯ ಶೇ.10-15 ಇರಬಹುದು. ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ ಇಂಡಿಯಾ (ಬಿಎಆರ್‌ಸಿ) ಪ್ರಕಾರ ಕೂಡ ದೇಶದ ಜನರು 40ಕ್ಕಿಂತ ಹೆಚ್ಚು ಚಾನೆಲ್‌ಗ‌ಳನ್ನು ಬದಲಿಸುವುದೂ ಇಲ್ಲ ಎಂದು ಹೇಳುತ್ತದೆ. ಹಾಗಾಗಿ, ಈ ನೂತನ ನಿಯಮವನ್ನು ಗ್ರಾಹಕರ ಹಿತರಕ್ಷಣೆಗಾಗಿ ತರಲಾಗಿದೆ.




ಕೇಬಲ್‌ ಮತ್ತು ಡಿಟಿಎಚ್ ದರ ನಿಯಂತ್ರಣಕ್ಕೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತರುತ್ತಿರುವ ನಿಯಮಗಳ ಬಗ್ಗೆ ಸಾರ್ವಜನಿಕರ ಗೊಂದಲ ಎಂದರೆ ಅದನ್ನೇಗೆ ನಾವು ಅಳವಡಿಸಿಕೊಳ್ಳಬೇಕು ಎಂಬುದು. ಏಕೆಂದರೆ, ಕೇಬಲ್‌ ಮತ್ತು ಡಿಟಿಎಚ್ ದರ ನಿಯಂತ್ರಿಸಿ ಅದನ್ನು ಏಕರೂಪಗೊಳಿಸುವ ನಿಯಮ ಫೆ.1ರಿಂದ ಜಾರಿಗೆ ಬರಲಿದೆಯಾದರೂ, ಅದರ ಲಾಭವನ್ನು ಪಡೆಯುವುದು ಹೇಗೆ ಎಂಬುದು ಈಗಲೂ ಹಲವರಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

ಫೆ.1ರ ಬಳಿಕ ಕೇಬಲ್‌ ಅಥವಾ ಡಿಟಿಹೆಚ್ ಬಿಲ್‌ಗ‌ಳಲ್ಲಿ ಗ್ರಾಹಕರು ಆಯ್ಕೆ ಮಾಡಿಕೊಂಡಿರುವ ಚಾನೆಲ್‌ಗ‌ಳ ಪಟ್ಟಿಯ ಪೈಕಿ ಹೆಚ್ಚುವರಿಯಾಗಿ ಖರೀದಿಸಿರುವ ಚಾನೆಲ್‌ ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕದ ವಿವರಗಳು ಇರುತ್ತವೆ. ಡಿಟಿಹೆಚ್‌ನಲ್ಲಿ ಗ್ರಾಹಕರೇ ನೇರವಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ಯವಿದೆ. ಆದರೆ, ಕೇಬಲ್ ಸೇವೆಯಲ್ಲಿ ಗ್ರಾಹಕರು ಕೇಬಲ್ ಸೇವಾದಾರನಿಗೆ ಹಣವನ್ನು ಪಾವತಿಸಬೇಕಾಗಿರುವುದರಿಂದ ಇದು ಸ್ವಲ್ಪ ಗೊಂದಲ ಮೂಡಿಸಿದೆ.

ಜ.31ರ ಒಳಗೆ ಮನೆಯ ಮುಖ್ಯಸ್ಥ ಅಥವಾ ಗ್ರಾಹಕ ಯಾವ ಚಾನೆಲ್‌ ಬೇಕು ಎಂಬುದನ್ನು ನಿರ್ಧರಿಸಬೇಕು. ಇದಕ್ಕಾಗಿ ಕೇಬಲ್ ಸೇವಾದಾರನ ಬಳಿ ನಾವು ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಈಗಾಗಲೇ ನೀವು ಯಾವ ಚಾನಲ್‌ಗಳು ಬೇಕು ಎಂಬುದನ್ನು ನಿರ್ಧರಿಸಿದ್ದರೆ ಫೆ.1 ರಿಂದ ಜಾರಿಯಾಗಲಿರುವ ನಿಯಮದ ಬಗ್ಗೆ ಯಾರೂ ಗೊಂದಲ ಎದುರಿಸಬೇಕಾದ ಅಗತ್ಯವಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ನೂತನ ಕೇಬಲ್ ನಿಯಮದ ಲಾಭವನ್ನು ಗ್ರಾಹಕರು ಪಡೆಯುವುದು ಹೇಗೆ ಎಂಬುದನ್ನು ಓದಿ ತಿಳಿಯೋಣ.

   
 
ಹೆಲ್ತ್