Back
Home » ಆರೋಗ್ಯ
ಹಳದಿ ಹಲ್ಲುಗಳನ್ನು ಬಿಳಿಯಾಗಿಸುವ ನೈಸರ್ಗಿಕ ಆಹಾರಗಳು
Boldsky | 17th Jan, 2019 07:01 AM
 • ಸೇಬು

  ಸೇಬನ್ನು ತಿನ್ನುವುದರಿಂದ ಹಲ್ಲುಗಳಿಗೆ ಸ್ಕ್ರಬ್ ಮಾಡಿದಂತೆ ಆಗುವುದು. ಸೇಬಿನಲ್ಲಿ ಉನ್ನತ ಪ್ರಮಾಣದಲ್ಲಿ ಮಾಲಿಕ್ ಆಮ್ಲವಿದೆ. ಇದನ್ನು ಹೆಚ್ಚಾಗಿ ಟೂಥ್ ಪೇಸ್ಟ್ ಗಳಲ್ಲಿ ಬಳಸಲಾಗುತ್ತದೆ. ಮಾಲಿಕ್ ಆಮ್ಲವು ಜೊಲ್ಲನ್ನು ಹೆಚ್ಚಿಸುವುದು. ಇದು ಹಲ್ಲುಗಳನ್ನು ಸ್ವಚ್ಛಗೊಳಿಸಿ, ಕಲೆಗಳನ್ನು ನಿವಾರಿಸುವುದು ಎಂದು 2013ರಲ್ಲಿ ಗ್ರೆನಡಾ(ಸ್ಪೇನ್) ಯೂನಿವರ್ಸಿಟಿ ನಡೆಸಿರುವಂತಹ ಅಧ್ಯಯನ ವರದಿಯು ಹೇಳಿದೆ.

  Most Read:2019ರಲ್ಲಿ ಗುರು ಗ್ರಹದ ಪ್ರಯಾಣ-ರಾಶಿಚಕ್ರದ ಮೇಲೆ ಹೇಗೆ ಪ್ರಭಾವ ಬೀರಲಿದೆ? ಇಲ್ಲಿದೆ ಡಿಟೇಲ್ಸ್


 • ಅನಾನಸು

  ಉರಿಯೂತ ಶಮನಕಾರಿ ಮತ್ತು ಸ್ವಚ್ಛಗೊಳಿಸುವ ಗುಣ ಹೊಂದಿರುವಂತಹ ಬ್ರೊಮೆಲಿನ್ ಎನ್ನುವಂತಹ ಅಂಶವು ಅನಾನಸಿನಲ್ಲಿ ನೈಸರ್ಗಿಕವಾಗಿ ಇದೆ. ಟೂಥ್ ಪೇಸ್ಟ್ ನಲ್ಲಿ ಕಲೆ ನಿವಾರಣೆ ಮಾಡಲು ಹೆಚ್ಚಾಗಿ ಬ್ರೊಮೆಲಿನ್ ನ್ನು ಬಳಸಲಾಗುತ್ತದೆ ಎಂದು ಇಂಟರ್ ನ್ಯಾಶನಲ್ ಜರ್ನಲ್ ಆಫ್ ಡೆಂಟಲ್ ಹೈಜಿನ್ ನಡೆಸಿರುವಂತಹ ಅಧ್ಯಯನವು ಹೇಳಿದೆ.


 • ಬ್ರಾಕೋಲಿ

  ಬ್ರಾಕೋಲಿಯಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದೆ ಮತ್ತು ನಾರಿನಾಂಶವನ್ನು ಅಧಿಕವಾಗಿ ಸೇವನೆ ಮಾಡುವುದರಿಂದ ದೇಹ ಹಾಗು ಬಾಯಿಯಲ್ಲಿರುವ ಉರಿಯೂತವು ಕಡಿಮೆಯಾಗುವುದು. ಹಸಿ ಬ್ರಾಕೋಲಿ ಸೇವನೆ ಮಾಡಿದರೆ ಅದರಿಂದ ಹಲ್ಲುಗಳು ಸ್ವಚ್ಛವಾಗುವುದು ಮತ್ತು ಕಾಂತಿ ಸಿಗುವುದು ಎಂದು ಯುರೋಪಿಯನ್ ಜರ್ನಲ್ ಆಫ್ ಡೆಂಟಿಸ್ಟ್ರಿ ಅಧ್ಯಯನವು ಹೇಳಿದೆ. ಬ್ರಾಕೋಲಿಯಲ್ಲಿ ಇರುವಂತಹ ಕಬ್ಬಿನಾಂಶವು ಹಲ್ಲುಗಳಿಗೆ ಗೋಡೆಯಂತಹ ರಕ್ಷಣೆ ನಿರ್ಮಿಸಿ, ಬ್ಯಾಕ್ಟೀರಿಯಾವು ಉತ್ಪತ್ತಿ ಮಾಡುವಂತಹ ದಂತಕವಚ ನಾಶ ಮಾಡುವ ರಾಸಾಯನಿಕವನ್ನು ತಡೆಯುವುದು. ಇದರಿಂದ ಕಲೆ ಹಾಗೂ ದಂತಕುಳಿಯಿಂದ ರಕ್ಷಣೆ ಸಿಗುವುದು.


 • ಒಣ ದ್ರಾಕ್ಷಿ

  ಅಂಟು ಸಿಹಿಯನ್ನು ಹೊಂದಿರುವಂತಹ ದ್ರಾಕ್ಷಿಯು ನಿಮ್ಮ ಹಲ್ಲುಗಳಿಗೆ ಒಳ್ಳೆಯದಲ್ಲವೆಂದು ನೀವು ಭಾವಿಸಿರಬಹುದು. ಆದರೆ ಇದು ತುಂಬಾ ರಕ್ಷಣಾತ್ಮಕವಾಗಿರುವುದು. ಹೊಟ್ಟು ಏಕದಳವನ್ನು ಒಣದ್ರಾಕ್ಷಿಯ ಜತೆಗೆ ಸೇವಿಸಿದರೆ ಅದರಿಂದ ಬಾಯಿಯು ವೇಗವಾಗಿ ಶುಚಿಯಾಗುವುದು . ದ್ರಾಕ್ಷಿ ಜಗಿಯುವುದರಿಂದ ಜೊಲ್ಲು ಉತ್ಪತ್ತಿಯಾಗುವುದು. ಇದರಿಂದ ದಂತದ ಪದರ, ಕಲೆ ಮತ್ತು ದಂತಕುಳಿ ನಿವಾರಿಸುವುದು. ಬೇರೆ ಆಹಾರ ಮತ್ತು ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ನಿರ್ಮಿಸುವಂತಹ ಆಮ್ಲೀಯ ಪರಿಸ್ಥಿತಿಯನ್ನು ಇದು ತಪ್ಪಿಸುವುದು.

  Most Read: ಪವರ್‌ಫುಲ್ ಮನೆಔಷಧಿಗಳು - ಹತ್ತೇ ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ


 • ಚೀಸ್

  ಚೀಸ್ ನ್ನು ಹೆಚ್ಚಿನವರು ಇಷ್ಟಪಡುವರು. ಇನ್ನು ಮುಂದೆ ನೀವು ಚೀಸ್ ತಿನ್ನುವಾಗ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಇದರಲ್ಲಿರುವ ಖನಿಜಾಂಶಗಳಾಗಿರುವಂತಹ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಪ್ರೋಟೀನ್ ಗಳು ದಂತಕವಚವನ್ನು ಬಲಿಷ್ಠವಾಗಿ ಇಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಅಮೆರಿಕನ್ ಅಕಾಡಿ ಆಫ್ ಕಾಸ್ಮೆಟಿಕ್ ಡೆಂಟಿಸ್ಟ್ರಿ ಪ್ರಕಾರ ಚೀಸ್ ನಲ್ಲಿರುವಂತಹ ಲ್ಯಾಕ್ಟಿಕ್ ಆಮ್ಲವು ದಂತಕುಳಿಯಿಂದ ರಕ್ಷಣೆ ನೀಡುವುದು. ಗಟ್ಟಿಯಾಗಿರುವಂತಹ ಚೀಸ್ ಜೊಲ್ಲನ್ನು ಉತ್ತೇಜಿಸಿ, ಹಲ್ಲುಗಳನ್ನು ಶುದ್ಧವಾಗಿಡುವುದು.


 • ನೀರು

  ದಿನವಿಡಿ ನೀರು ಕುಡಿಯುತ್ತಲಿದ್ದರೆ ಆಗ ಬಾಯಿಯಲ್ಲಿ ಜೊಲ್ಲಿನ ಉತ್ಪತ್ತಿಯು ಹೆಚ್ಚಾಗುವುದು. ಇದರಿಂದಾಗಿ ಹಲ್ಲುಗಳು ಬಿಳಿಯಾಗಿರುವುದು. ಊಟದ ವೇಳೆ ಮತ್ತು ಊಟದ ಬಳಿಕ ನೀವು ನೀರನ್ನು ಸೇವಿಸಿದರೆ ಆಗ ಬಾಯಿಯಲ್ಲಿ ಇರುವಂತಹ ಆಹಾರದ ತುಂಡುಗಳು ಮತ್ತು ಹಲ್ಲುಗಳಲ್ಲಿ ನಿರ್ಮಾಣವಾಗಿರುವ ಪದರವು ದೂರವಾಗುವುದು.


 • ಸ್ಟ್ರಾಬೆರಿ

  ಸ್ಟ್ರಾಬೆರಿಯಂತೆ ಸೇಬಿನಲ್ಲಿ ಕೂಡ ಮಾಲಿಕ್ ಆಮ್ಲವಿದೆ ಮತ್ತು ಇದರೊಂದಿಗೆ ಎಲಿಜಿಟ್ಯಾನಿನ್ಸ್, ಆ್ಯಂಟಿಆಕ್ಸಿಡೆಂಟ್ ಗಳು ಇರುವ ಕಾರಣದಿಂದಾಗಿ ಇದು ಕಲೆ ಸೆಳೆಯುವಂತಹ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಇದರೊಂದಿಗೆ ಬಾಯಿಯಲ್ಲಿ ಉರಿಯೂತವು ಕಡಿಮೆಯಾಗುವುದು. ಸ್ಟ್ರಾಬೆರಿಯಲ್ಲಿ ಇರುವಂತಹ ವಿಟಮಿನ್ ಸಿ ವಸಡಿನ ಉರಿಯೂತ ಮತ್ತು ದಂತ ಕಾಯಿಲೆಯಿಂದ ರಕ್ಷಿಸುವುದು.
ಹಲ್ಲುಗಳು ಬಿಳಿ ಹಾಗೂ ಮುತ್ತುಗಳಂತೆ ಹೊಳೆಯುತ್ತಾ ಇದ್ದರೆ ಆಗ ಸೌಂದರ್ಯವು ಇಮ್ಮಡಿಯಾಗುವುದು. ಹಲ್ಲುಗಳು ಶುಚಿಯಾಗಿರದೆ, ಬಂಗಾರದ ಬಣ್ಣಕ್ಕೆ ತಿರುಗಿದ್ದರೆ ಆಗ ಅದರಿಂದ ಸೌಂದರ್ಯಕ್ಕೆ ಹಿನ್ನಡೆ. ಹಲ್ಲುಗಳು ಬಿಳಿಯಾಗಿರಬೇಕು ಎಂದು ಪ್ರತಿಯೊಬ್ಬರು ಬಯಸುವರು. ಹಲ್ಲುಗಳು ಗಟ್ಟಿಯಾಗಿ ಬಿಳಿಯಾಗಿದ್ದರೆ ಆಗ ನೋಡಲು ಕೂಡ ಆಕರ್ಷಕವಾಗಿರುವುದು. ಹಲ್ಲುಗಳನ್ನು ಹೊಳೆಯುವಂತೆ ಮಾಡಲು ನಾವು ಇನ್ನಿಲ್ಲಂದಂತೆ ಪ್ರಯತ್ನ ಮಾಡುತ್ತೇವೆ. ದಿನದಲ್ಲಿ ಒಂದು ಸಲ ಹಲ್ಲುಜ್ಜುವ ಬದಲು ಎರಡು ಸಲ ಹಲ್ಲುಜ್ಜುತ್ತೇವೆ.

ಹೇಗಾದರೂ ಮಾಡಿ ಹಲ್ಲುಗಳು ಮುತ್ತಿನಂತೆ ಹೊಳೆಯಬೇಕು ಎನ್ನುವುದು ನಮ್ಮ ಬಯಕೆ. ಇದಕ್ಕಾಗಿಯೇ ಹಲವಾರು ರೀತಿಯ ಉತ್ಪನ್ನಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಿಂದ ಹಲ್ಲುಗಳು ಬಿಳಿಯಾದರೂ ಕೆಲವು ಸಮಯದ ಬಳಿಕ ಮತ್ತೆ ಅದು ತನ್ನ ಹಿಂದಿನ ರೂಪಕ್ಕೆ ಬರುವುದು ಖಚಿತ. ಹೀಗಾಗಿ ಹಲ್ಲುಗಳನ್ನು ಬಿಳಿ ಮಾಡಲು ಕೆಲವೊಂದು ಆಹಾರ ಸೇವನೆಯಿಂದಲೂ ಸಾಧ್ಯವಿದೆ. ಹಲ್ಲುಗಳನ್ನು ನೈಸರ್ಗಿಕವಾಗಿ ಬಿಳಿ ಮಾಡುವಂತಹ ಏಳು ಆಹಾರಗಳು ಯಾವುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಲು ತಯಾರಾಗಿ.

   
 
ಹೆಲ್ತ್